ನಡೆದು ಸಾಗಬಹುದಿತ್ತು ಶ್ರೀಲಂಕೆಗೆ !

ನಡೆದು ಸಾಗಬಹುದಿತ್ತು ಶ್ರೀಲಂಕೆಗೆ !

image-afcc85e9-cb20-430c-97a5-97b63ce308f7.jpg
Profile Vishwavani News September 23, 2021
image-82dbc2f1-5e63-4620-ab21-db3d91c1814a.jpg
image-d5c7c354-74f8-45f4-b8de-afff2ad8fbec.jpg
ಡಾ. ಜಯಂತಿ ಮನೋಹರ್ ಕಾಲುನಡಿಗೆಯ ದಾರಿಯಾಗಿ ಉಪಯೋಗದಲ್ಲಿತ್ತು ಎಂದು ಹೇಳುತ್ತಾ, ಆನಂತರ ಸಂಚಾರಕ್ಕಾಗಿ ಈ ಸೇತುವೆಯ ಉಪಯೋಗ ನಿಂತುಹೋಯಿತು ಎಂದು ಸ್ಪಷ್ಟವಾಗಿ ನಮೂದಿಸಿದ್ದಾನೆ. ಕಳೆದ ವಾರ ಪ್ರಕಟಗೊಂಡ ಲೇಖನದ ಎರಡನೆಯ ಮತ್ತು ಕೊನೆಯ ಭಾಗ ಇಲ್ಲಿದೆ. ಕಾವ್ಯೇತಿಹಾಸ, ಶಾಸನ, ನಾಣ್ಯಗಳು, ಭೂಪಟಗಳು, ಪ್ರವಾಸ ಕಥನಗಳು ಕೊಡುವ ಮಾಹಿತಿಗಳು ಇತಿಹಾಸದು ದ್ದಕ್ಕೂ, ಈ ಸೇತುವೆಯ ಹಾಗೂ ಐತಿಹಾಸಿಕ ವ್ಯಕ್ತಿಯಾಗಿ ರಾಮನ ಉಲ್ಲೇಖಗಳು ಹಲವಾರು ರೀತಿಯಲ್ಲಿ ಹಲವಾರು ಸ್ಥಳಗಳಲ್ಲಿ ಕಂಡುಬರುತ್ತವೆ. ಹೀಗೆ ಅವ್ಯಾಹತವಾಗಿ ಕಾಣುವ ಉಲ್ಲೇಖಗಳಿಂದಾಗಿ, ರಾಮನ ಐತಿಹಾಸಿಕ ಸತ್ಯ, ಸೇತುವೆಯ ಅಸ್ತಿತ್ವ ಹಾಗೂ ಈ ಸೇತುವೆ ಬಹು ಕಾಲದಿಂದಲೂ ಜನರ ಉಪಯೋಗದಲ್ಲಿ ಇದ್ದ ವಾಸ್ತವ ಸಂಗತಿಗಳಿಗೆ ಪ್ರಮಾಣ ಒದಗಿಸುತ್ತವೆ. ರಾಮ ಸೇತು - ನಳ ಸೇತು - ಆಡಮ್ಸ್ ಬ್ರಿಡ್ಜ್ ‘ರಾಮಸೇತು’ವಿನ ಉಲ್ಲೇಖಗಳು ನಮ್ಮ ಕಾವ್ಯೇತಿಹಾಸಗಳಲ್ಲಿ ಹಾಗೂ ವಿವಿಧ ಕಾಲಘಟ್ಟಗಳಲ್ಲಿ ದಾಖಲಾಗಿರುವ ಶಾಸನಗಳು, ನಾಣ್ಯಗಳು, ಭೂಪಟಗಳು, ಗೆಜಟಿಯರ್, ವಿಶ್ವಕೋಶ ಹಾಗೂ ಪ್ರವಾಸ ಕಥನಗಳಲ್ಲಿ ಕಾಣುತ್ತವೆ. ಸುಮಾರು 7100 ವರ್ಷಗಳಷ್ಟು ಹಿಂದಿ ನಿಂದಲೂ ಇದ್ದ ಈ ಸೇತುವೆಯ ಮೂಲಕ (ಲ್ಯಾಂಡ್ ಬ್ರಿಜ್) ಕಾಲು ನಡಿಗೆಯಲ್ಲಿ ಒಂದು ದಡದಿಂದ ಇನ್ನೊಂದು ದಡವನ್ನು ಸೇರುತ್ತಿದ್ದ ಜನರು ಇದನ್ನು ‘ಸೇತುಬಂಧ’ ಎಂದೂ ಕರೆದರು. ಬ್ರಿಟಿಷರಿಂದ ‘ಆಡಮ್ಸ್ ಬ್ರಿಡ್ಜ್’ ಎಂಬ ಹೆಸರಲ್ಲಿ ಜನಪ್ರಿಯವಾದ ಇದನ್ನು ಅವರಿಗಿಂತ ಮೊದಲು ‘ಆಧಾಮ್’ನೊಂದಿಗೆ ಸೇರಿಸಿದವರು ಶ್ರೀಲಂಕೆಯ ಇಸ್ಲಾಮ್ ಮತಸ್ಥರು. ಅವರ ಪ್ರಥಮ ಧಾರ್ಮಿಕ ಗುರುವಾದ ‘ಆಧಾಮ್’ ಭಾರತದಿಂದ ಲಂಕೆಗೆ ಕಾಲುನಡಿಗೆಯಲ್ಲಿ ಹಾದು ಹೋಗಿದ್ದ ನೆಂಬ ನಂಬಿಕೆಯಿಂದಾಗಿ ಈ ಸೇತುವೆಯೊಂದಿಗೆ ಅವರಿಗೆ ಪವಿತ್ರ ಸಂಬಂಧವಿದೆ. ಯೂರೋಪಿಯನ್ನರು ಶ್ರೀಲಂಕೆಯನ್ನು ಜಯಿಸಿದಾಗ, ‘ಆಧಾಮ್’ ಎನ್ನುವ ಹೆಸರನ್ನು ತಮ್ಮ ಧಾರ್ಮಿಕ ನಂಬಿಕೆಯಂತೆ ಆದಿ ಮಾನವನಾದ ‘ಆಡಮ್’ನಿಗೆ ಜೋಡಿಸಿದರು. ಹಾಗಾಗಿ ಇದು ಸುಲಭವಾಗಿ, ‘ಆಡಮ್ಸ್ ಬ್ರಿಡ್ಜ್’ ಎನ್ನುವ ಹೆಸರಿನಿಂದ ಜನಪ್ರಿಯವಾಯಿತು. ತಮಿಳುನಾಡಿನ ತಂಜಾವೂರಿನಲ್ಲಿರುವ ಪ್ರಮುಖ ಗ್ರಂಥಾಲಯ, ಸರಸ್ವತಿ ಮಹಲ್ ಗ್ರಂಥಾಲಯದಲ್ಲಿ, ಕಲೋನಿಯಲ್ ಕಾಲದ (1803) ಮಾಹಿತಿ, ‘ಮೊಹಮ್ಮಡನರು, ಈ ಸೇತುವೆಯನ್ನು ದಾಟಿ ಸಿಲೋನಿಗೆ ಹೋದ ಆದಮ್ ಹೆಸರಿ ನಲ್ಲಿ ಈ ಸೇತುವೆಯನ್ನು ಕರೆಯುತ್ತಾರೆ’ ಎಂದು ಹೇಳುತ್ತದೆ. ಆಸೇತು ಹಿಮಾಚಲ ರಾಮಾಯಣದ ಮುಂದಿನ ಕಾಲಘಟ್ಟದಲ್ಲಿ ರಚಿತವಾಗಿರುವ ಮತ್ತೊಂದು ಐತಿಹಾಸಿಕ ಮಹಾಕಾವ್ಯವಾದ ಮಹಾಭಾರತದಲ್ಲಿ, ನಳಸೇತುವೆಯನ್ನು ಸುರಕ್ಷಿತ ಸ್ಮಾರಕ ಎಂದು ಕಾಣುತ್ತದೆ. ‘ಭೂಮಿಯ ಮೇಲೆ ನಳಸೇತು ಎಂದು ಇಂದಿಗೂ ಪ್ರಸಿದ್ಧವಾದ ಸೇತುವೆ ರಾಮನ ಆಜ್ಞೆಯಂತೆ ಗಿರಿಸನ್ನಿಭದಲ್ಲಿ ಸುರಕ್ಷಿತವಾಗಿದೆ.’ - ಮಹಾಭಾರತ: 3.267.45. ಮಹಾಭಾರತದ ಮತ್ತೊಂದು ಭಾಗದಲ್ಲಿ, ಪಾಂಡವರು ತಮ್ಮ ವನವಾಸದಲ್ಲಿ ಮಹರ್ಷಿ ಮಾರ್ಕಂಡೇಯರ ಆಶ್ರಮಕ್ಕೆ ಹೋಗು ತ್ತಾರೆ. ಅಲ್ಲಿ, ಮಹರ್ಷಿಗಳು ಅವರಿಗೆ ಅವರ ದೇಶದ ಅನೇಕ ವೃತ್ತಾಂತಗಳನ್ನು ಹೇಳುತ್ತಾರೆ. ಅದರಲ್ಲಿ ನಳಸೇತುವಿನ ಕಥಾನಕವೂ ಸೇರಿದೆ. ಇದರೊಂದಿಗೆ ಅನೇಕ ಕಾವ್ಯೇತಿಹಾಸಿಕ ಕೃತಿಗಳಲ್ಲಿ ಕಾಣುವ ರಾಮಸೇತುವಿನ ಉಲ್ಲೇಖಗಳೊಂದಿಗೆ ‘ಆಸೇತು ಹಿಮಾಚಲಂ’ ಎಂದು ಉತ್ತರ - ದಕ್ಷಿಣ ಎಲ್ಲೆಗಳನ್ನು ಸೂಚಿಸುವ ಮಾತು ಪ್ರಸಿದ್ಧವಾದುದು. ಬಿರುಗಾಳಿಯಿಂದ ಕಾಲ್ದಾರಿ ನಾಶ ಸುಮಾರು 7100 ವರ್ಷಗಳಹಿಂದೆ ನಿರ್ಮಾಣವಾದ ಈ ರಾಮಸೇತು ಅಂದಿನಿಂದ 6400 ವರ್ಷಗಳವರೆಗೆ ಸುಸ್ಥಿತಿಯಲ್ಲಿತ್ತು ಎನ್ನುವುದು ಹಾಗೂ ಪ್ರ.ಶ.1480 ರಲ್ಲಿ ಬೀಸಿದ ಬೃಹತ್ ಬಿರುಗಾಳಿಯಿಂದಾಗಿ ಅಥವಾ ಸುನಾಮಿಯಂತಹ ಪ್ರಕೃತಿವಿಕೋಪದಿಂದಾಗಿ, ಇದರ ಕೆಲವು ಭಾಗಗಳು ಸಮುದ್ರದಲ್ಲಿ ಮುಳುಗಿಹೋದವು ಎನ್ನುವುದಕ್ಕೆ ಹಲವಾರು ಐತಿಹಾಸಿಕ ಪ್ರಮಾಣಗಳು ದೊರಕುತ್ತವೆ. ಹಾಗಾಗಿ, ಮುರಿದು ಹೋದ ಸ್ಥಿತಿಯಲ್ಲಿ ಉಳಿದ ಸೇತುವೆ ಉಪಯೋಗ ವಿಲ್ಲ ದಂತಾಯಿತು. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ, ಸಿ.ಡಿ. ಮಾಕ್ ಲೀನ್ ಸಿದ್ಧಪಡಿಸಿದ್ದ ಕೈಪಿಡಿ (ಪ್ರ.ಶ.1480) ಯಲ್ಲಿ ಭಯಂಕರ ಬಿರುಗಾಳಿಯಿಂದಾಗಿ ನಾಶವಾಗುವವರೆಗೆ ಈ ಸೇತುವೆ, ಶ್ರೀಲಂಕೆಗೆ ಹೋಗಲು ಕಾಲುನಡಿಗೆಯ ದಾರಿಯಾಗಿ ಉಪಯೋಗದಲ್ಲಿತ್ತು ಎಂದು ಹೇಳುತ್ತಾ, ಆನಂತರ ಸಂಚಾರಕ್ಕಾಗಿ ಈ ಸೇತುವೆಯ ಉಪ ಯೋಗ ನಿಂತುಹೋಯಿತು ಎಂದು ಸ್ಪಷ್ಟವಾಗಿ ನಮೂದಿಸಿದ್ದಾನೆ. ಅವರು ಬಂಗಾಲದಲ್ಲಿ ಸ್ಥಾಪಿಸಿದ್ದ ಏಶಿಯಾಟಿಕ್ ಸೊಸೈಟಿಯ (1799) ಸಂಶೋಧನಾ ಉಲ್ಲೇಖನವೊಂದು, ‘ಜನರು ಇದನ್ನು ಸೇತುವೆ ಎನ್ನುತ್ತಾರೆ; ಇದರ ಮೇಲೆ ಮರ ಬೆಳೆದಿರುವಂತೆ ಕಾಣುತ್ತದೆ. ಇದರ ಮೇಲೆ ಜನರು ಓಡಾಡಿದ್ದೂ ಕಾಣುತ್ತದೆ’ ಎನ್ನುತ್ತದೆ. ಹಾಗೆಯೇ ಈ ಸೇತುಬಂಧ ಎನ್ನುವ ಸೇತುವೆಯು ಮೂರು ಭಾಗಗಳಾಗಿ ಮುರಿದಿದೆ ಎನ್ನುವುದೂ ಅಲ್ಲಿ ದಾಖಲಾಗಿದೆ. ಬ್ರಿಟಿಷರಿಂದ ಸಿದ್ಧವಾದ ‘ಇಂಪೀರಿಯಲ್ ಗೆಜೆಟ್’ ನಲ್ಲಿರುವ ಆಡಮ್ಸ್ ಬ್ರಿಡ್ಜ್‌ನ ವಿವರದಲ್ಲಿ, ಆ ಸಮಯಕ್ಕಾಗಲೇ ಮುರಿದು ಹೋಗಿದ್ದ ಸೇತುವೆಯ ಮೇಲೆ ಸಿಲೋನ್‌ವರೆಗೂ ರೈಲು ಮಾರ್ಗವನ್ನು ಹಾಕುವ ಬ್ರಿಟಿಷರ ಯೋಜನೆಯ ಬಗ್ಗೆ ಮಾಹಿತಿ ಸಿಗುತ್ತದೆ. ಶಾಸನಗಳು ನಾಣ್ಯಗಳು ಪ್ರವಾಸ ಕಥನಗಳು ತಂಜಾವೂರಿನಲ್ಲಿ ಪ್ರ.ಶ.1018-1048 ರವರೆಗೆ ರಾಜ್ಯಭಾರ ಮಾಡಿದ ಒಂದನೇ ರಾಜೇಂದ್ರ ಚೋಳ ತನ್ನ ಸಾಧನೆಗಳನ್ನು ದಾಖಲಿಸುವಲ್ಲಿ ‘ರಾಮ ಸಮುದ್ರದ ಮೇಲೆ ಕಟ್ಟಿದ ಸೇತುವೆ’ಯನ್ನು ಉಲ್ಲೇಖಿಸಿದ್ದಾನೆ (‘ತಿರುವಲಂಗಡು ತಾಮ್ರಫಲಕ’ 80 ನೇ ಶ್ಲೋಕ). ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ರಾಜ ಕೃಷ್ಣದೇವರಾಯನ ಶಾಸನವೊಂದು, ಅವನ ಕೀರ್ತಿಯು ‘ಮೇರು ಪರ್ವತದಿಂದ ರಾಮಸೇತುವಿನವರೆಗೂ ವಿಸ್ತರಿಸಿದೆ’ ಎಂದು ಹೇಳುತ್ತದೆ (ಎಪಿಗ್ರಾಫಿಯ ಇಂಡಿಕ ಸಂಪುಟ 1, 1892, ಪುಟ 363-366). ದಕ್ಷಿಣ ಭಾರತದ ಹಾಗೂ ಶ್ರೀಲಂಕೆಯ ನಾಣ್ಯಗಳು ಈ ಸೇತುವೆಯನ್ನು ಒಂದು ಹೆಗ್ಗುರುತಾಗಿ ಹಾಗೂ ಜನಪ್ರಿಯ ಚಿಹ್ನೆಯಾಗಿ ಪದೇ ಪದೇ ಉಲ್ಲೇಖಿಸುತ್ತವೆ. ರಾಮಸೇತುವಿರುವ ರಾಮನಾಥಪುರಂನ ರಾಜರೆಲ್ಲರನ್ನೂ ಸೇತುಪತಿ ಅಂದರೆ ‘ಸೇತುರಕ್ಷಕ’ರೆಂದು ನಮ್ಮ ಪರಂಪರೆ ಗುರುತಿಸುತ್ತದೆ. ಈ ರಾಜರೆಲ್ಲರೂ ಒಂದು ಪಾರ್ಶ್ವದಲ್ಲಿ ಸೇತು ಎಂದು ನಮೂದಿಸಿರುವ ನಾಣ್ಯಗಳನ್ನು ನಿಯಮಿತವಾಗಿ ಟಂಕಿಸುತ್ತಿದ್ದರು. ಅನೇಕ ರಾಜರು ವಿವಿಧ ಕಾಲಘಟ್ಟಗಳಲ್ಲಿ ಟಂಕಿಸಿರುವ ನಾಣ್ಯಗಳಲ್ಲಿ ಅವರು ಸಾಧಿಸಿದ ವಿಜಯಗಳು ಹಾಗೂ ಅವರ ವರ್ಚಸ್ಸನ್ನು ಬಣ್ಣಿಸುವ ಬರಹಗಳು ತಮಿಳು, ಕನ್ನಡ, ಗ್ರಂಥಲಿಪಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಕಾಣಿಸುತ್ತವೆ. ಕಳೆದ ಸಾವಿರ ವರ್ಷಗಳಿಂದಲೂ ಸೇತುವನ್ನು ಕಂಡ ಹಾಗೂ ಸೇತುವೆಯ ಮೂಲಕ ಒಂದು ದಡದಿಂದ ಇನ್ನೊಂದಕ್ಕೆ ಹೋದ ಹಲವಾರು ಪ್ರವಾಸಿಗಳು ಅದರ ವಿವರವಾದ ದಾಖಲೆ ಮಾಡಿದ್ದಾರೆ. ಸೇತುವೆಯ ಪ್ರಾಚೀನತೆ, ಉಗಮ, ನಿರ್ಮಾಣ ಹಾಗೂ ಅದರ ಉಪಯೋಗಗಳನ್ನು ಕುರಿತಾದ ವಿವರ ಅವರ ಕಥನಗಳಲ್ಲಿ ದೊರೆಯುತ್ತದೆ. ಅಲ್-ಬರೂನಿ (ಪ್ರ.ಶ. 1030), ಮಾರ್ಕೋ ಪೋಲೋ (1271 ಪ್ರ.ಶ.), ಲುಡೋವಿಕೋ ಡಿ ವರ್ತೇಮ (1470 ಪ್ರ.ಶ.), ಕ್ಲೆಮೆಂಟ್ಸ್ ರಾಬರ್ಟ್ (1862 ಪ್ರ.ಶ.) ಮುಂತಾದ ಪ್ರವಾಸಿಗಳು ತಮ್ಮ ಬರಹಗಳಲ್ಲಿ ರಾಮ ಸೇತುವಿನ ಉಲ್ಲೇಖ ಮಾಡಿದ್ದಾರೆ. ವಿಶೇಷವಾಗಿ, ಚೀನಾ, ಆಗ್ನೇಯ ಏಶಿಯಾಗಳಲ್ಲಿ ಹೆಚ್ಚು ಪ್ರವಾಸ ಮಾಡಿ, ಕೊನೆಯಲ್ಲಿ ರಾಮಸೇತುವನ್ನು ದಾಟಿ, ಮಲಬಾರ್ ಕರಾವಳಿಯನ್ನು ತಲುಪಿದ್ದನ್ನು ತನ್ನ ಪ್ರವಾಸಕಥನದಲ್ಲಿ ವರ್ಣಿಸಿರುವ ಮಾರ್ಕೋ ಪೋಲೋವಿನ ಬರಹ ಈ ದಿಸೆಯಲ್ಲಿ ಪ್ರಮುಖ ದಾಖಲೆಯಾಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವ ವಿವರಗಳು ಈಗ ರಾಮಸೇತುವಿನ ತಾಣದಲ್ಲಿ ಕಾಣಬಹುದೇ ? ರಾಮಸೇತುವಿನ ತಾಣದಲ್ಲಿ ವಾನರರು ಅಂದು ಹಾಕಿದ ಮರಗಳ ಹಾಗೂ ಬಂಡೆಗಳ ಭಾಗಗಳು ಕಾಣುವ ಸಾಧ್ಯತೆ ಇದೆಯೇ ಎನ್ನುವುದು ಈಗ ನಮ್ಮ ಮುಂದೆ ಇರುವ ಪ್ರಶ್ನೆ. ಅಲ್ಲಿರುವ ಮರಳ ದಿಬ್ಬಗಳ ವಿವಿಧ ಪದರಗಳನ್ನು ತೆಗೆದು, ವೈಜ್ಞಾನಿಕವಾಗಿ ಪರಿಶೋಧನೆ ನಡೆಸಿದಲ್ಲಿ ಈ ಕೆಳಕಂಡ ಸಂಗತಿಗಳು ಗೋಚರಿಸುವುದೇ ಎಂದು ನೋಡಬೇಕಾಗುತ್ತದೆ. ? ಸಮುದ್ರತಳದಲ್ಲಿರುವ ಸ್ವಾಭಾವಿಕ ಕೋಡುಗಲ್ಲುಗಳು ? ಸ್ವಾಭಾವಿಕ ಕೋಡುಗಲ್ಲುಗಳ ಮೇಲೆ ರಾಮಾಯಣದಲ್ಲಿ ವರ್ಣಿಸಿರುವಂತಹ ಮರದ ದಿಮ್ಮಿಗಳ ಉಳಿದಿರುವ ಭಾಗಗಳು ? ಮರದ ದಿಮ್ಮಿಗಳ ಮೇಲೆ ಹಾಕಿರುವ ದೊಡ್ಡ ಬಂಡೆಗಳು ? ದೊಡ್ಡ ಬಂಡೆಗಳ ಮೇಲಿನ ಚಿಕ್ಕ ಕಲ್ಲುಗಳು ? ಚಿಕ್ಕ ಕಲ್ಲುಗಳ ಮೇಲಿನ ಮರಳು ಒಂದೊಮ್ಮೆ ಈ ಎಲ್ಲಾ ಸಂಗತಿಗಳು ಅಲ್ಲಿ ಕಂಡಲ್ಲಿ ಅದರಿಂದಾಗಿ, ರಾಮಾಯಣ ಗ್ರಂಥದ ಮಾಹಿತಿಗಳು ಅಲ್ಲಿನ ರಚನೆಯ ಸ್ಥಿತಿಗತಿಗಳೊಂದಿಗೆ ತಾಳೆಯಾಗುವು ದೆಂದು ಪ್ರಮಾಣಿತವಾಗುತ್ತದೆ. ಈ ಸೇತುವೆಯ ನಿರ್ಮಾಣದಲ್ಲಿ ಬಳಕೆಯಾಗಿರುವ ಹವಳವೂ ಈ ಶೋಧದಲ್ಲಿ ಪ್ರಮುಖವಾಗುತ್ತದೆ. ಈ ವಿಚಾರದಲ್ಲಿ, ರಾಮ ಸೇತುವಿನ ವ್ಯಾಪಕವಾದ ಭೂಗರ್ಭ ಸಂಶೋಧನೆ ನಡೆಸಿರುವ ಭೂಗರ್ಭಶಾಸ್ತ್ರಜ್ಞರಾದ ಡಾ.ಎಸ್.ಬದ್ರಿನಾರಾಯಣ್ ಹೇಳುವ ಈ ಮಾತು ಮನನೀಯ. ‘ಭೂಗರ್ಭಶಾಸ್ತ್ರ ಹಾಗೂ ಭೂ-ಭೌತಶಾಸ್ತ್ರಗಳ ದೃಷ್ಟಿಯಿಂದ ಮಾಡಿರುವ ರಾಮಸೇತುವಿನ ಅಧ್ಯಯನವು, ಅಲ್ಲಿರುವ ಹವಳದ ಪದರದ ಕೆಳಗೆ ಸಡಿಲ ಸಮುದ್ರ ಮರಳು ಇರುವುದನ್ನೂ ಹಾಗೂ ಅಲ್ಲಿ ಬಂಡೆಯಲ್ಲಿ ಕಾಣುವ ಹವಳದ ಪದರವು ಯಾರಿಂದಲೋ ಅಲ್ಲಿಗೆ ತಂದು ಹಾಕಿರುವುದೇ ಹೊರತು, ತನ್ನಿಂದ ತಾನೇ ಸ್ವಾಭಾವಿಕವಾಗಿ ಅಲ್ಲಿ ಸೃಷ್ಟಿಯಾಗಿರುವುದಲ್ಲ ಎನ್ನುವ ವಾಸ್ತವ ಸಂಗತಿಯನ್ನು ತೋರಿಸುತ್ತದೆ. ಹಾಗಾಗಿ, ರಾಮಸೇತುವೆಯು ಪುರಾತನ ಕಾಲದಲ್ಲಿ ಆಗಿರುವ ಮಾನವ ನಿರ್ಮಿತ ರಚನೆ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ.’ ಈ ದಿಸೆಯಲ್ಲಿ, ಬಾಲ್‌ ಡೇಯಿಸ್ ರವರ ‘ದಿ ಮಾಸಸ್ ಆಫ್ ರಾಕ್’, ಬೆಕರ್ ಅವರ ‘ದಿ ರೋಸ್ ಆಫ್ ಕ್ಲಿಪ್’ ಹಾಗೂ ‘ದಿ ಗ್ರೇಟ್ ಡಾಮ್ ಮಾಡ್ರನ್ ಚಾರ್ಟ್ಸ್’ ಡಾ.ಹರಿ ಮತ್ತು ಹೇಮಾರ ‘ಹಿಸ್ಟಾರಿಕಲ್ ರಾಮ’ ಮುಂತಾದ ಕೃತಿಗಳನ್ನು ಹೆಸರಿಸಬಹುದು. ಇದರೊಂದಿಗೆ ಈಗಷ್ಟೇ ದೊರಕಿರುವ ಡಿಸ್ಕವರಿ ಚಾನೆಲ್‌ನಿಂದ ನಡೆದಿರುವ ವೈಜ್ಞಾನಿಕ ಶೋಧ ಮಹತ್ವವಾದುದು. ಈ ದಿಸೆಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯದಡಿಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಈ ಸೇತುವೆಯ ಜಲಾಂತರ್ಗತ ಶೋಧವನ್ನು ಕೈಗೊಂಡಿರುವುದು ಸಂತಸದ ಸಂಗತಿ. ಇದರ -ಲವಾಗಿ, ಈ ಭೂಮಿಯ ಮೇಲೆ ರಾಜ್ಯವಾಳಿದ ಚಕ್ರವರ್ತಿ ರಾಮನಿಂದ ನಿರ್ಮಿತವಾದ 7000 ವರ್ಷಗಳಷ್ಟು ಪುರಾತನ ಈ ಸೇತುವೆ ಪ್ರಪಂಚದ ಅತ್ಯಂತ ಪ್ರಾಚೀನ ಸ್ಮಾರಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಪೂರಕ ಮಾಹಿತಿಗಳು ವಾಯುಪುರಾಣದನ್ವಯ ಯುಗಚಕ್ರ 32.58-64 ನಮ್ಮ ಪಾರಂಪರಿಕ ನಂಬಿಕೆಯಂತೆ, ರಾಮಾವತಾರ ಆದದ್ದು ತ್ರೇತಾಯುಗದಲ್ಲಿ. ಇದು ಜನಪ್ರಿಯ ನಂಬಿಕೆ ಯಂತೆ 432,000 ಗಳ ಯುಗಚಕ್ರ ಕಾಣುತ್ತದೆ. ಇದರೊಂದಿಗೆ, 10000 ವರ್ಷಗಳ ಯುಗಚಕ್ರ ಹೊಂದಿರುವ ವಾಯುಪುರಾಣದ ಮಾಹಿತಿಯು ಇಲ್ಲಿದೆ. ಕೃತಯುಗ 4000 ವರ್ಷಗಳು ತ್ರೇತಾಯುಗ 3000 ವರ್ಷಗಳು ದ್ವಾಪರಯುಗ 2000 ವರ್ಷಗಳು ಕಲಿಯುಗ 1000 ವರ್ಷಗಳು ಮೇಲಿನ ಪಟ್ಟಿಯಲ್ಲಿ ತೋರಿಸಿರುವಂತೆ, 12000 ವರ್ಷಗಳ ಪೂರ್ಣ ಚಕ್ರವನ್ನು ತೆಗೆದುಕೊಂಡು, ಇದು ನಿರ್ದಿಷ್ಟವಾದ ಸಂಽಕಾಲಗಳನ್ನೂ ಸೂಚಿಸುತ್ತ. ವಾಯುಪುರಾಣದಲ್ಲಿ, ತ್ರೇತಾಯುಗ ಹಾಗೂ ದ್ವಾಪರಯುಗಗಳ ಅಂತಿಮ ಘಟ್ಟಗಳ ನಡುವೆ ಗತಿಸಿದ 2000 ವರ್ಷಗಳ ಮಾಹಿತಿಯೂ ಸಿಗುತ್ತದೆ. ತ್ರೇತಾಯುಗದ ಕೊನೆಯಲ್ಲಿ ರಾಮ ಜನಿಸಿದ ಎನ್ನುವ ನಂಬಿಕೆಯು ಸಾಮಾನ್ಯವಾಗಿ ಕಾಣುತ್ತದೆ. ದ್ವಾಪರಯುಗದ ಕೊನೆ ಹಾಗೂ ಕಲಿಯುಗದ ಆರಂಭಗಳು ಪೂರ್ವ ಪ್ರ.ಶ.3102 ಎಂದು ಪರಿಗಣಿಸಿದಾಗ, ರಾಮ ಹಾಗೂ ರಾಮಾಯಣಗಳ ಕಾಲವನ್ನು ಪೂ.ಪ್ರ. ಶ.5114 ಅಥವಾ 7000 ವರ್ಷಗಳ ಹಿಂದೆ ಎಂಬ ನಿರ್ಣಯವು ವಾಯುಪುರಾಣದ ಅಳತೆಯಂತೆ ಅದು, ತ್ರೇತಾಯುಗದ ಸಮಯ ಎಂಬುದಕ್ಕೂ ಸರಿಹೊಂದುತ್ತದೆ. ಅಷ್ಟೇ ಅಲ್ಲದೆ, ಇದು ಈ ಲೇಖನದಲ್ಲಿ ನೋಡಿರುವ ಹಲವು ಕ್ಷೇತ್ರಗಳಲ್ಲಿ ದೃಢೀಕರಿಸಿರುವ ಮಾಹಿತಿಗಳೊಂದಿಗೆ ತಾಳೆಯಾಗುತ್ತದೆ. ವಿಶಿಷ್ಟ ಅನುಪಾತ ರಾಮಸೇತುವೆಯ ಒಟ್ಟು ಉದ್ದ 100 ಯೋಜನೆಗಳು ಹಾಗೂ ಅಗಲ 10 ಯೋಜನೆಗಳು ಎಂದು ರಾಮಾಯಣ ಹೇಳುತ್ತದೆ. ಅದರ ಅನುಪಾತ 10:1 ಆಗುತ್ತದೆ. ಈಗ, ಭಾರತದ ಧನುಷ್ಕೋಟಿಯಿಂದ ಶ್ರೀಲಂಕೆಯ ತಲೈಮನ್ನಾರ್‌ವರೆಗೆ ಇರುವ ಆಡಮ್ ಸೇತು ಸುಮಾರು 35 ಕಿ.ಮೀ.ಉದ್ದ ಹಾಗೂ 3.5 ಕಿ.ಮೀ ಅಗಲವಾಗಿರುವುದು ಕಾಣುತ್ತದೆ. ಇಲ್ಲಿಯೂ ರಾಮಾಯಣದ ವರ್ಣನೆಯಂತೆಯೇ 10:1 ರ ಅನುಪಾತ ಕಾಣುತ್ತದೆ. ಈ ಅದ್ಭುತವಾದ ಸಾಮ್ಯತೆಯು, ರಾಮಾ ಯಣದಲ್ಲಿ ವರ್ಣಿಸಿರುವುದು ಈ ಸೇತುವೆಯನ್ನೇ ಎನ್ನುವುದಕ್ಕೆ ಪ್ರಮುಖ ಅಂಶವಾಗುತ್ತದೆ. (ಚಿತ್ರ ಕೃಪೆ : ಚಿತ್ರಾ ಗುಣರತ್ನ, ಕ್ಯಾಂಡಿ ಶ್ರೀಲಂಕಾ)
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ