ಮನೋಕಾಮನ ದೇಗುಲ

ಮನೋಕಾಮನ ದೇಗುಲ

image-37634b17-b667-4cbd-8fb8-c14f985ca69d.jpg
Profile Vishwavani News December 15, 2022
image-101984eb-c07a-46b3-990a-f636af62a868.jpg
image-cbccb6ff-50bb-41ca-8f22-b00f319e45fe.jpg
ಮಣ್ಣೆ ಮೋಹನ್ ನೇಪಾಳದಲ್ಲಿರುವ ಈ ದೇವಾಲಯವು ಸಮುದ್ರ ಮಟ್ಟದಿಂದ 4300 ಅಡಿ ಎತ್ತರದ ಪರ್ವತದ ಮೇಲಿದೆ. ಇದು ಎರಡು ಅಂತಸ್ತಿನ ದೇವಾಲಯವಾಗಿದೆ ಮತ್ತು ಪಗೋಡಾ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಶಕ್ತಿಪೀಠವೆಂದು ಪರಿಗಣಿಸ ಲಾಗಿದೆ. ಮನೋಕಾಮನ ಅಥವಾ ಮನಕಾಮನ ದೇವಾಲಯ ಎಂದರೆ ಈ ಆಲಯ ದಲ್ಲಿ ನಮ್ಮ ಮನಸ್ಸಿನ ಕಾಮನೆಗಳು ಈಡೇರುತ್ತವೆ ಎಂದರ್ಥ. ಅಂದರೆ ಇದು ಭಕ್ತರ ಇಚ್ಛೆಗಳನ್ನು ಪೂರೈಸುವ ದೇವಾಲಯ. ಮನವು ಹೃದಯ ಮತ್ತು ಕಾಮನವು ಇಚ್ಛೆಯನ್ನು ಸಂಕೇತಿಸುತ್ತದೆ. ನೇಪಾಳದ ರಾಜಧಾನಿ ಕಾಠ್ಮಂಡುವಿನ ಪಶ್ಚಿಮಕ್ಕೆ ೧೦೬ ಕಿ.ಮೀ. ದೂರದಲ್ಲಿ ಮತ್ತು ಪೊಖರಾದ ಪಶ್ಚಿಮದಿಂದ ೯೪ ಕಿ.ಮೀ. ದೂರದಲ್ಲಿ ಗೂರ್ಖಾ ಜಿಯಲ್ಲಿ ಈ ದೇವಾಲಯವಿದೆ. ಮನಕಾಮನವು ಪಾರ್ವತಿಯ ಅವತಾರವಾದ ಭಗವತಿ ದೇವಿಗೆ ಸಮರ್ಪಿತ ವಾಗಿದೆ. ದೇವಾಲಯವು ಸಮುದ್ರ ಮಟ್ಟದಿಂದ ೪,೩೦೦ ಅಡಿ ಎತ್ತರದ ಪರ್ವತದ ಮೇಲಿದೆ. ಇದು ಎರಡು ಅಂತಸ್ತಿನ ದೇವಾ ಲಯ ವಾಗಿದೆ ಮತ್ತು ಪಗೋಡಾ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಶಕ್ತಿಪೀಠ ವೆಂದು ಪರಿಗಣಿಸಲಾಗಿದೆ. ಹಿಂದೂ ಪುರಾಣ ಗಳ ಪ್ರಕಾರ ವಿಶ್ವವು ಪಂಚಭೂತ ಗಳನ್ನು ಒಳಗೊಂಡಿದೆ. ಅದರ ಆಧಾರದ ಮೇಲೆ, ದೇವಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ವಿಶೇಷವಾಗಿ ಕೆಂಪು ಬಣ್ಣವನ್ನು ಸೌಭಾಗ್ಯ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ದೇವಿಗೆ ಕೆಂಪು ಬಣ್ಣದಲ್ಲಿ ಎಲ್ಲವನ್ನೂ ಅರ್ಪಿಸಲಾಗುತ್ತದೆ. ಹಿಂದಿನ ಕಾಲದಲ್ಲಿ, ಈ ದೇವಾ ಲಯಕ್ಕೆ ಬರುವವರು ಪರ್ವತವನ್ನು ಕಾಲ್ನಡಿಗೆಯಲ್ಲಿ ಹತ್ತಿ ಸಾಗಬೇಕಿತ್ತು. ಈಗ ಕೇಬಲ್ ಕಾರ್ ವ್ಯವಸ್ಥೆ ಮಾಡಲಾಗಿದೆ. ೨.೮ ಕಿ.ಮೀ. ದೂರವನ್ನು ೧೦ ನಿಮಿಷದಲ್ಲಿ ತಲುಪಬಹುದು. ಹಗಲಿನ ವೇಳೆಯಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ಕಾರ್ಯ ನಿರ್ವಹಿಸುತ್ತದೆ. ನೇಪಾಳ ದೊರೆ ದೀಪೇಂದ್ರ ಬೀರ್ ಬಿಕ್ರಮ್ ಶಾ ದೇವ್ ಅವರು ೨೪ ನವೆಂಬರ್ ೧೯೯೮ ರಂದು ಕೇಬಲ್ ಕಾರನ್ನು ಉದ್ಘಾಟಿಸಿದರು. ಗಂಟೆಗೆ ೬೦೦ ವ್ಯಕ್ತಿಗಳನ್ನು ಕೇಬಲ್ ಕಾರುಗಳು ಸಾಗಿಸುತ್ತವೆ. ಪ್ರತಿ ವಾಹನಕ್ಕೆ ೬ ಜನ ಪ್ರಯಾಣಿಕರಿರುತ್ತಾರೆ. ದರ್ಶನ (ಸೆಪ್ಟೆಂಬರ್-ಅಕ್ಟೋಬರ್) ಮತ್ತು ನಾಗಪಂಚಮಿ (ಜುಲೈ-ಆಗಸ್ಟ್) ಸಮಯದಲ್ಲಿ ಭಕ್ತರು ಭಗವತಿ ದೇವಿಗೆ ಪ್ರಾರ್ಥನೆ ಸಲ್ಲಿಸಲು ಸಾಲುಗಟ್ಟಿ ಬರುತ್ತಾರೆ. ಐದರಿಂದ ಹತ್ತು ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲುತ್ತಾರೆ. ದೇವಸ್ಥಾನದಲ್ಲಿ ಪ್ರಾಣಿ ಬಲಿ ಕೊಡುವ ಸಂಪ್ರದಾಯವಿದೆ. ಕೆಲವು ಯಾತ್ರಾರ್ಥಿಗಳು ದೇವಾಲಯದ ಹಿಂದಿನ ಮಂಟಪದಲ್ಲಿ ಮೇಕೆಗಳು ಅಥವಾ ಪಾರಿವಾಳಗಳನ್ನು ಬಲಿ ನೀಡುತ್ತಾರೆ. ಪ್ರಾಣಿ ಪಕ್ಷಿ ಬಲಿಯನ್ನು ಜಿಲ್ಲಾಡಳಿತ ನಿಷೇಧಿಸಿದೆ. ಇತಿಹಾಸ ಮನಕಮನ ದೇವಾಲಯವನ್ನು, ೧೭ನೇ ಶತಮಾನದಲ್ಲಿ ಗೋರ್ಖಾದ ಇಬ್ಬರು ರಾಜ ರಾದ ರಾಮ್ ಶಾ ಮತ್ತು ಪೃಥ್ವಿಪತಿ ಷಾ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ೧೭೬೪ - ೧೭೬೫ ರಲ್ಲಿ, ನೇಪಾಳದ ದೊರೆ ಪೃಥ್ವಿ ನಾರಾಯಣ್ ಷಾ ಅವರು ಮನಕಾಮನ ದೇವಿಯನ್ನು ಪೂಜಿಸಲು ವಜ್ರಾಚಾರ್ಯ ಪುರೋಹಿತರನ್ನು ನೇಮಿಸಿ,ಕಂಚಿನ ಗಂಟೆಯನ್ನು ದಾನ ಮಾಡಿದನು, ೧೮೦೨-೧೮೦೩ರಲ್ಲಿ, ಮುಖ್ಯ ದ್ವಾರಕ್ಕೆ ಚಿನ್ನದ ಲೇಪನ ಮಾಡಿಸಿದರು. ನಂತರ ಸುರೇಂದ್ರ ಬಿಕ್ರಮ್ ಷಾ ಅವರ ಆಳ್ವಿಕೆಯಲ್ಲಿ ಮೇಲ್ಛಾವಣಿಯನ್ನು ಸುಕ್ಕುಗಟ್ಟಿದ ತಾಮ್ರದ ಹಾಳೆಗಳಿಂದ ನಿರ್ಮಿಸಲಾಯಿತು. ರಾಜ ಮಹೇಂದ್ರನು ಮೇಲ್ಛಾವಣಿಯನ್ನು ಬದಲಾಯಿಸಿ ತಾಮ್ರದ ಛಾವಣಿಯನ್ನಾಗಿ ಮಾರ್ಪಡಿಸಿದನು. ನಂತರದ ದಿನಗಳಲ್ಲಿ ಮೇಲ್ಛಾವಣಿಯಲ್ಲಿ ಸಪ್ತ ಮಾತೃಕೆಯರ ಚಿತ್ರಗಳನ್ನು ಕೆತ್ತಲಾಗಿದೆ. ದಂತಕಥೆ ಗೂರ್ಖಾ ರಾಜ ರಾಮ್ ಶಾ ರಾಣಿ ದೈವಿಕ ಶಕ್ತಿಯನ್ನು ಹೊಂದಿದ್ದಳು. ಅವರ ಭಕ್ತ ಲಖನ್ ಥಾಪಾ ಅವರನ್ನು ಹೊರತುಪಡಿಸಿ ಯಾರಿಗೂ ಅವರ ಬಗ್ಗೆ ಏನೂ ತಿಳಿದಿರಲಿಲ್ಲ. ಆದಾಗ್ಯೂ, ಒಮ್ಮೆ ರಾಜನು ರಾಣಿಯನ್ನು ಮನಕಾಮನಾ ದೇವಿಯ ರೂಪದಲ್ಲಿ ನೋಡಿದನು, ಥಾಪಾ ಸಿಂಹದಂತೆ. ಸ್ವಲ್ಪ ಸಮಯದ ನಂತರ, ರಾಜನು ನಿಗೂಢವಾಗಿ ಮರಣಹೊಂದಿದನು ಮತ್ತು ರಾಣಿಯು ಸತಿ ಪದ್ಧತಿಯಂತೆ ಗಂಡನ ಚಿತೆಗೆ ಹಾರಿದಳು. ಸಾಯುವ ಮೊದಲು,ಅವಳು ಮತ್ತೆ ಕಾಣಿಸಿಕೊಳ್ಳುವುದಾಗಿ ಥಾಪಾಗೆ ಹೇಳಿದಳು. ಆರು ತಿಂಗಳ ನಂತರ, ಒಬ್ಬ ರೈತ ತನ್ನ ಹೊಲಗಳನ್ನು ಉಳುಮೆ ಮಾಡುವಾಗ ರಕ್ತ ಮತ್ತು ಹಾಲು ಹರಿಯುತ್ತಿದ್ದ ಕಲ್ಲನ್ನು ಸೀಳಿದನು. ಈ ಘಟನೆಯ ವರದಿಯನ್ನು ಕೇಳಿದ ಲಖನ್ ಥಾಪಾ ಅವರು ತಕ್ಷಣವೇ ಹಿಂದೂ ತಾಂತ್ರಿಕ ಆಚರಣೆಗಳನ್ನು ಮಾಡಲು ಪ್ರಾರಂಭಿಸಿದರು. ನಂತರ ಅವರು ಅದೇ ಸ್ಥಳದಲ್ಲಿ ಒಂದು ದೇಗುಲವನ್ನು ನಿರ್ಮಿಸಿದರು, ಮನಕಾಮನ ದೇವಿಯು, ರಾಮ್ ಷಾನ ಹೆಂಡತಿ ಚಂಪಾವತಿ ಎಂದು ಭಾವಿಸಲಾಗಿದೆ. ಭೂಕಂಪದಿಂದ ಹಾನಿ ೧೯೩೪ರ ನೇಪಾಳ-ಭಾರತ ಭೂಕಂಪ ಮತ್ತು ೧೯೮೮ರ ನೇಪಾಳ ಭೂಕಂಪದ ನಂತರ ಮನಕಾಮನ ದೇವಾಲಯವು ನೈಋತ್ಯದ ಕಡೆಗೆ ಆರು ಇಂಚುಗಳಷ್ಟು ವಾಲಿತು. ಏಪ್ರಿಲ್ ೨೦೧೫ ರಲ್ಲಿನ ನೇಪಾಳದ ಭೂಕಂಪವು ದೇವಾಲಯಕ್ಕೆ ಸಾಕಷ್ಟು ಹಾನಿ ಮಾಡಿತು. ಜೂನ್ ೨೦೧೫ ರಲ್ಲಿ ಪುನರ್ನಿರ್ಮಾಣವು ಆರಂಭಗೊಂಡು ಸೆಪ್ಟೆಂಬರ್ ೨೦೧೮ ರಲ್ಲಿ ಪೂರ್ಣಗೊಂಡಿತು. ಛಾವಣಿ, ಬಾಗಿಲು, ಮತ್ತು ಕಿಟಕಿಗಳನ್ನು ೧೪ ಕಿಲೋಗ್ರಾಂಗಳಷ್ಟು ಚಿನ್ನದಿಂದ ಲೇಪಿತಗೊಳಿಸಲಾಗಿದೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ