ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

19th Annual Celebration: ಶ್ರೀ ಶನೇಶ್ವರಸ್ವಾಮಿ 19 ನೇ ವರ್ಷದ ವಾರ್ಷಿಕೋತ್ಸವ

ಸೆ.5 ರಂದು ಬ್ರಾಹ್ಮೀ ಮುಹೂರ್ತದಲ್ಲಿ ಮಹಾಗಂಗಪೂಜೆ, ಮಹಾಗಣಪತಿ ಪೂಜೆ ನಡೆದು ನಂತರ ಶ್ರೀ ಶನೇಶ್ವರಸ್ವಾಮಿ ಅವರಿಗೆ ಭಕ್ತರಿಂದಲೇ ಮಹಾ ತೈಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾರುದ್ರ ಪಠಣ, ಅಷ್ಟೋತ್ತರ ನಾಮಾವಳಿ, ಮಹಾಮಂಗಳಾರತಿ ಹಾಗೂ ವಿಶೇಷ ತಿಲಾರತಿ ನಡೆದು ಮಧ್ಯಾಹ್ನ ದಾಸೋಹ ಕಾರ್ಯ ನಡೆಯಲಿದೆ.

ಗುಬ್ಬಿ: ಪಟ್ಟಣದ ರೈಲ್ವೆ ನಿಲ್ದಾಣ ಬಳಿಯ ಶ್ರೀ ಭಗವಾನ್ ಶನೇಶ್ವರಸ್ವಾಮಿ ದೇವಾಲಯದಲ್ಲಿ 19 ನೇ ವರ್ಷದ ವಾರ್ಷಿಕೋತ್ಸವ ಸೆ.5 ಶನಿವಾರ ಅದ್ದೂರಿಯಾಗಿ ನಡೆಯಲಿದೆ ಎಂದು ಪ್ರಧಾನ ಅರ್ಚಕ ರವಿಕುಮಾರ್ ತಿಳಿಸಿದ್ದಾರೆ.

ಸೆ.5 ರಂದು ಬ್ರಾಹ್ಮೀ ಮುಹೂರ್ತದಲ್ಲಿ ಮಹಾಗಂಗಪೂಜೆ, ಮಹಾಗಣಪತಿ ಪೂಜೆ ನಡೆದು ನಂತರ ಶ್ರೀ ಶನೇಶ್ವರಸ್ವಾಮಿ ಅವರಿಗೆ ಭಕ್ತರಿಂದಲೇ ಮಹಾ ತೈಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾರುದ್ರ ಪಠಣ, ಅಷ್ಟೋತ್ತರ ನಾಮಾವಳಿ, ಮಹಾಮಂಗಳಾರತಿ ಹಾಗೂ ವಿಶೇಷ ತಿಲಾರತಿ ನಡೆದು ಮಧ್ಯಾಹ್ನ ದಾಸೋಹ ಕಾರ್ಯ ನಡೆಯಲಿದೆ.

ಇದನ್ನೂ ಓದಿ: Gubbi news: ತ್ರಿವಿಧ ದಾಸೋಹ ತತ್ವ ಶರಣರ ಆಸ್ತಿ : ಎಂ.ಜಿ.ಸಿದ್ದರಾಮಯ್ಯ

ಪೂಜಾ ಕಾರ್ಯ ಹಾಗೂ ದಾಸೋಹ ಕಾರ್ಯವನ್ನು ದಾನಿಗಳಾದ ಜಿ.ಹೊಸಹಳ್ಳಿ ಗ್ರಾಮದ ಶ್ರೀ ಮಲ್ಲೇಶ್ವರ ಟ್ರೇಡರ್ಸ್ ಮಾಲೀಕರು ಹಾಗೂ ಕುಟುಂಬ ನಡೆಸಿಕೊಡಲಿದ್ದಾರೆ. ಸೆ.7 ಸೋಮವಾರ ಮಧ್ಯಾಹ್ನ 2 ಗಂಟೆಗೆ ಶ್ರೀ ಶನೇಶ್ವರಸ್ವಾಮಿ ಅವರ ಭವ್ಯ ಮೆರವಣಿಗೆ ಪಟ್ಟಣದ ರಾಜಬೀದಿಯಲ್ಲಿ ನಡೆಯಲಿದೆ. ಎಲ್ಲಾ ಧಾರ್ಮಿಕ ಕಾರ್ಯವನ್ನು ಆಗಮಿಕ ಶ್ರೀ ಸಿದ್ಧರಾಮಶಾಸ್ತ್ರಿ ತೋಟಸಾಗರ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.