| ಡಾ. ಅಪೂರ್ವ ಎಂ.ಎಸ್.
ಮಧುಮೇಹವು (Diabetes) ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯ ಕೊರತೆ ಅಥವಾ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುವ ದೀರ್ಘಕಾಲೀನ ಚಯಾಪಚಯ ಸಂಬಂಧಿತ ಕಾಯಿಲೆಯಾಗಿದೆ. ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಸುಸ್ತು ಹಾಗೂ ಸಾಮಾನ್ಯ ದೌರ್ಬಲ್ಯ ಇದರ ಪ್ರಮುಖ ಲಕ್ಷಣಗಳಾಗಿವೆ. ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು, ದೀರ್ಘಕಾಲೀನ ತೊಂದರೆಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
44 ವರ್ಷದ ಪುರುಷ ರೋಗಿಯೊಬ್ಬರು ಸಾಮಾನ್ಯ ದೌರ್ಬಲ್ಯ, ಅತಿಯಾದ ಬಾಯಾರಿಕೆ ಹಾಗೂ ಪದೇ ಪದೇ ಮೂತ್ರ ವಿಸರ್ಜನೆಯ ತೊಂದರೆಗಳಿಂದ ಬಳಲುತ್ತಾ ಹೊರರೋಗಿ ವಿಭಾಗಕ್ಕೆ (OPD) ಭೇಟಿ ನೀಡಿದರು. ಅವರಿಗೆ ಅಧಿಕ ರಕ್ತದೊತ್ತಡದ ಹಿನ್ನೆಲೆಯಿದ್ದು, ಅದಕ್ಕಾಗಿ ಔಷಧಗಳನ್ನು ಸೇವಿಸುತ್ತಿದ್ದರು. ಅಲ್ಲದೆ, ಕಳೆದ 15 ವರ್ಷಗಳಿಂದ ಮದ್ಯಪಾನ ಮಾಡುವ ಅಭ್ಯಾಸವನ್ನೂ ಹೊಂದಿದ್ದರು.
ಅಂತಃಸ್ರಾವಶಾಸ್ತ್ರ ತಜ್ಞರಿಂದ (Endocrinologist) ಅವರಿಗೆ ಟೈಪ್-2 ಮಧುಮೇಹ ಇರುವುದು ದೃಢಪಟ್ಟಿದ್ದು, ಆರಂಭದಲ್ಲಿ ಚರ್ಮದಡಿಯ ಇನ್ಸುಲಿನ್ ಚುಚ್ಚುಮದ್ದು ಹಾಗೂ ಬಾಯಿಯ ಮೂಲಕ ಸೇವಿಸುವ ಮಧುಮೇಹ ನಿಯಂತ್ರಣದ ಔಷಧಗಳನ್ನು ನೀಡಲಾಗಿತ್ತು. ಆರಂಭಿಕ ರಕ್ತ ಪರೀಕ್ಷೆಯಲ್ಲಿ ಮೂರು ತಿಂಗಳ ಸರಾಸರಿ ರಕ್ತದ ಸಕ್ಕರೆಯನ್ನು ಸೂಚಿಸುವ HbA1c ಪ್ರಮಾಣ ಶೇ. 11ರಷ್ಟಿತ್ತು. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಸಮರ್ಪಕವಾಗಿ ನಿಯಂತ್ರಣದಲ್ಲಿಲ್ಲದಿರುವುದನ್ನು ಸೂಚಿಸಿತ್ತು.
ರೋಗಿಗೆ ಆಯುರ್ವೇದ ಚಿಕಿತ್ಸೆಯೊಂದಿಗೆ ಆಧುನಿಕ ಮಧುಮೇಹ ನಿಯಂತ್ರಣದ ಔಷಧಗಳನ್ನು ಸಂಯೋಜಿಸಿದ ಸಮಗ್ರ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಯಿತು. ಚಿಕಿತ್ಸೆಯ ಅವಧಿಯಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಆಧುನಿಕ ಮಧುಮೇಹ ನಿಯಂತ್ರಣದ ಔಷಧಗಳನ್ನು ಸ್ಥಗಿತಗೊಳಿಸಲಾಯಿತು. ನಂತರವೂ ನಿಯಮಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಮೇಲ್ವಿಚಾರಣೆಯನ್ನು ಮುಂದುವರಿಸಲಾಯಿತು.
ಮಾತೃತ್ವದ ಕನಸಿಗೆ ಹೊಸ ಆಶಾಕಿರಣ: ಬಂಜೆತನಕ್ಕೆ ಆಯುರ್ವೇದದ ಸಮಗ್ರ ಚಿಕಿತ್ಸಾ ವಿಧಾನ
ನಂತರದ ಪರೀಕ್ಷೆಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿತು. HbA1c ಪ್ರಮಾಣ ಶೇ. 7.07ಕ್ಕೆ ಇಳಿಕೆಯಾಗಿತ್ತು, ಚಿಕಿತ್ಸೆ ಪ್ರಾರಂಭಿಸಿದ 4 ತಿಂಗಳ ನಂತರ ನಡೆಸಿದ ಮುಂದಿನ ತಪಾಸಣೆಯಲ್ಲಿ HbA1c ಶೇ. 4.09ಕ್ಕೆ ಇಳಿಕೆಯಾಗಿರುವುದು ಕಂಡುಬಂದಿತು. ಇದು ರಕ್ತದಲ್ಲಿನ ಸಕ್ಕರೆಯ ನಿಯಂತ್ರಣದಲ್ಲಿ ಮತ್ತಷ್ಟು ಸುಧಾರಣೆಯನ್ನು ಸೂಚಿಸುತ್ತದೆ.
ಈ ವೈದ್ಯಕೀಯ ಪ್ರಕರಣವು ಟೈಪ್-2 ಮಧುಮೇಹದ ನಿರ್ವಹಣೆಯಲ್ಲಿ ಸಮಗ್ರ ಚಿಕಿತ್ಸಾ ವಿಧಾನದ ಭಾಗವಾಗಿ ಆಯುರ್ವೇದವು ವಹಿಸಬಹುದಾದ ಪಾತ್ರವನ್ನು ಎತ್ತಿ ತೋರಿಸುತ್ತದೆ, ಚಿಕಿತ್ಸೆಯ ಅವಧಿಯಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ ಕಂಡುಬಂದ ಸುಧಾರಣೆಯು ಅಶಾದಾಯಕವಾಗಿದೆ.
ಮಧುಮೇಹದ ಸಮರ್ಪಕ ನಿರ್ವಹಣೆಗೆ ನಿಯಮಿತ ವೈದ್ಯಕೀಯ ತಪಾಸಣೆ, ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಮೇಲ್ವಿಚಾರಣೆ, ಸೂಕ್ತ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಈ ಪ್ರಕರಣವು ಒತ್ತಿಹೇಳುತ್ತದೆ. ಮಧುಮೇಹ ನಿರ್ವಹಣೆಯಲ್ಲಿ ಆಯುರ್ವೇದ ಚಿಕಿತ್ಸೆಯು ಪರಿಣಾಮಕಾರಿ.