ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Children's Skin: ಬದಲಾಗುವ ಋತುಮಾನ: ಪುಟಾಣಿಗಳ ಚರ್ಮದ ಆರೈಕೆ ಹೇಗೆ?

Children's Skin: ಚಳಿಗಾಲದ ಶುಷ್ಕ ಮತ್ತು ಕೊರೆಯುವ ವಾತಾವರಣ ಇನ್ನೂ ಬಂದಿಲ್ಲ. ಇಂಥ ದಿನಗಳಲ್ಲಿ ಎಲ್ಲರ ಚರ್ಮಗಳೂ ಒಂದಿಷ್ಟು ಕಿರಿಕಿರಿಗಳನ್ನು ಅನುಭವಿಸುತ್ತವೆ. ನಮಗೇನೋ ಬೇಕಾದ ಉಪಶಮನಗಳನ್ನು ಮಾಡಿಕೊಳ್ಳುವ ಸಾಮರ್ಥ್ಯವಿದೆ. ಆದರೆ ಪುಟ್ಟ ಮಕ್ಕಳಿಗೆ ಇಂಥ ದಿನಗಳು ಹೆಚ್ಚಿನ ಸಮಸ್ಯೆಗಳನ್ನು ತರಬಲ್ಲವು. ಇಂಥ ಹೊತ್ತಿನಲ್ಲಿ ಎಳೆ ಮಕ್ಕಳ ಚರ್ಮದ ಆರೈಕೆಯಲ್ಲಿ ಹೆತ್ತವರು ವಹಿಸ ಬೇಕಾದ ಜಾಗ್ರತೆಗಳೇನು?

ನವದೆಹಲಿ: ಮಳೆಗಾಲ ಕಳೆದು ಚಳಿಗಾಲ ಬರುವ ನಡುವಿನ ಈ ದಿನಗಳು ಸಂಕ್ರಮಣದ ಕಾಲ ವಿದ್ದಂತೆ. ಅತ್ತ ಮಳೆಗಾಲದ ಥಂಡಿ ಮತ್ತು ಒದ್ದೆ ವಾತಾವರಣ ಇರುವುದಿಲ್ಲ; ಇತ್ತ ಚಳಿಗಾಲದ ಶುಷ್ಕ ಮತ್ತು ಕೊರೆಯುವ ವಾತಾವರಣ ಇನ್ನೂ ಬಂದಿಲ್ಲ. ಇಂಥ ದಿನಗಳಲ್ಲಿ ಎಲ್ಲರ ಚರ್ಮಗಳೂ ಒಂದಿಷ್ಟು ಕಿರಿಕಿರಿಗಳನ್ನು ಅನುಭವಿಸುತ್ತವೆ. ನಮಗೇನೋ ಬೇಕಾದ ಉಪಶಮನಗಳನ್ನು ಮಾಡಿ ಕೊಳ್ಳುವ ಸಾಮರ್ಥ್ಯವಿದೆ. ಆದರೆ ಪುಟ್ಟ ಮಕ್ಕಳಿಗೆ ಇಂಥ ದಿನಗಳು ಹೆಚ್ಚಿನ ಸಮಸ್ಯೆಗಳನ್ನು ತರಬಲ್ಲವು. ಇಂಥ ಹೊತ್ತಿನಲ್ಲಿ ಎಳೆ ಮಕ್ಕಳ ಚರ್ಮದ ಆರೈಕೆಯಲ್ಲಿ (Children's Skin) ಹೆತ್ತವರು ವಹಿಸಬೇಕಾದ ಜಾಗ್ರತೆಗಳೇನು?

ಹೀಗೇಕಾಗುತ್ತದೆ?: ನಮಗಿಂತ ಮಕ್ಕಳ ಚರ್ಮ ಹೆಚ್ಚು ಸೂಕ್ಷ್ಮ ವೇಕೆ ಎನ್ನುವುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಚರ್ಮದ ಪದರಗಳಲ್ಲಿ ರಕ್ಷಣೆಗೆ ಇರಬೇಕಾದ ತಡೆಗೋಡೆಗಳು ಎಳೆಯ ಮಕ್ಕಳಲ್ಲಿ ಇನ್ನೂ ಬೆಳವಣಿಗೆ ಹೊಂದಿರುವುದಿಲ್ಲ. ಹಾಗಾಗಿ ವಾತಾವರಣದ ಬದಲಾವಣೆ ಗಳಿಗೆ ಎಳೆಗೂಸುಗಳ ಚರ್ಮ ಬೇಗನೇ ಸ್ಪಂದಿಸುತ್ತದೆ. ಅಂದರೆ, ಮಳೆಗಾಲದ ವಾತಾವರಣದಲ್ಲಿ ಅಧಿಕವಾಗಿರುವ ತೇವಕ್ಕೆ ಮಕ್ಕಳ ಚರ್ಮದ ಮೇಲೆ ಫಂಗಸ್‌ ಸೋಂಕು ಬರುವ ಸಾಧ್ಯತೆ ನಮ ಗಿಂತಲೂ ಅಧಿಕ. ಹಾಗೆಯೇ, ಚಳಿಗಾಲದ ಶುಷ್ಕತೆಯಲ್ಲಿ ತ್ವಚೆ ಒಣಗಿ ಕಿರಿಕಿರಿ ಆಗುವ ಸಂಭವವೂ ಹೆಚ್ಚು.

ತೇವಾಂಶ ಬೇಕು: ಮಳೆಗಾಲದಲ್ಲಿ ಹೆಚ್ಚು ತೇವಾಂಶ ಬೇಕಾ ಗುವುದಿಲ್ಲ ಎನ್ನುವ ಕಾರಣಕ್ಕೆ ಲಘುವಾದ ಮಾಯಿಶ್ಚರೈಸರ್‌ ಬಳಸುವ ಅಭ್ಯಾಸ ಸಾಮಾನ್ಯ. ಆದರೀಗ ವಾತಾವರಣದ ತೇವಾಂಶ ಕಡಿಮೆಯಾಗಿ, ಒಣಹವೆ ಹೆಚ್ಚುತ್ತಿದೆ. ಹಾಗಾಗಿ ಹೆಚ್ಚಿನ ತೇವಾಂಶವನ್ನು ಚರ್ಮಕ್ಕೆ ನೀಡಬೇಕಾದ ಅಗತ್ಯವಿದೆ. ಅದನ್ನು ಮಾಡದಿದ್ದರೆ, ಚರ್ಮ ತರಿತರಿಯಾಗಿ, ನವೆಯುಂಟಾಗಿ, ಗುಳ್ಳೆಗಳು ಕಾಣ ಬಹುದು. ಕೆಂಪಾಗಿ ಉರಿ ಸಹ ಹೆಚ್ಚಬಹುದು. ಈ ತೊಂದರೆಯನ್ನು ಮಕ್ಕಳಿಗೆ ಹೇಳಿಕೊಳ್ಳಲಾಗದೆ ಕಿರಿಕಿರಿ ಮಾಡಬಹುದು. ಹಾಗಾಗಿ ಹೆಚ್ಚಿನ ಸಾಮರ್ಥ್ಯದ ಮಾಯಿಶ್ಚರೈಸರ್‌ ಬಳಕೆ ಇನ್ನು ಮೇಲೆ ಅಗತ್ಯ.

ಕ್ಲೆನ್ಸಿಂಗ್:‌ ಮಳೆಯ ದಿನಗಳಲ್ಲಿ ಚರ್ಮದ ಮೇಲೆ ಜಮೆಯಾಗುವ ಹೆಚ್ಚುವರಿ ತೇವಾಂಶವನ್ನು, ಕೊಳೆ, ಬೆವರನ್ನು ತೊಳೆಯಲು ಉಪಯೋಗಿಸಿದ ಕ್ಲೆನ್ಸರ್‌ ಈಗ ಬೇಕಾಗುವುದಿಲ್ಲ. ಈಗ ಚರ್ಮಕ್ಕೆ ತೇವಾಂಶ ಮಾತ್ರವಲ್ಲ, ಬೆವರಿನ ಪ್ರಮಾಣವೂ ಕಡಿಮೆ ಆಗಬಹುದು. ಹಾಗಾಗಿ ಲಘುವಾದ, ಮೃದುವಾದ ಕ್ಲೆನ್ಸರ್‌ ಸಾಕಾಗುತ್ತದೆ. ಇದಕ್ಕಾಗಿ ಕಡಲೆಹಿಟ್ಟು, ಅಲೋವೇರಾ, ಗುಲಾಬಿ ಜಲ ಮುಂತಾದ ಅಂಶಗಳು ಇರುವಂಥ ಕ್ಲೆನ್ಸರ್‌ ಬಳಸುವುದು ಮಗುವಿನ ತ್ವಚೆಗೆ ಒಳ್ಳೆಯದು. ಒಣ ಚರ್ಮ ಇರುವಂಥ ಪುಟಾಣಿಗಳಿಗೆ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯಂಥ ಅಂಶಗಳು ಇರುವ ಉತ್ಪನ್ನಗಳು ಸೂಕ್ತ. ಇದರಿಂದ ಚರ್ಮದ ನೈಸರ್ಗಿಕ ತೈಲದಂಶ ಸೋರಿ ಹೋಗದಂತೆ ಕಾಪಾಡಬಹುದು.

ಇದನ್ನೂ ಓದಿ:Health Tips: ಸೀದು ಕೆಂಪಾದ ಆಹಾರ ಸೇವನೆಗೆ ಯೋಗ್ಯವೇ?

ಕ್ರೀಮ್‌ಗಳು: ಪುಟ್ಟ ಮಕ್ಕಳಿಗೆ ದಿನಕ್ಕೆರಡು ಬಾರಿ ಮಾಯಿಶ್ಚರೈಸರ್‌ ಲೇಪಿಸುವ ಅಭ್ಯಾಸವನ್ನು ಮರೆಯುವಂತಿಲ್ಲ. ಇದರಿಂದ ಅವರ ಚರ್ಮದ ತಡೆಗೋಡೆ ಸರಿಯಾಗಿ ಬೆಳವಣಿಗೆ ಹೊಂದು ವುದಕ್ಕೂ ಸಹಾಯ ದೊರೆಯುತ್ತದೆ. ಇದಕ್ಕಾಗಿ ನೈಸರ್ಗಿಕವಾದ ಬಾದಾಮಿ ತೈಲ, ಆಲಿವ್‌ ಎಣ್ಣೆಯಂಥ ಅಂಶಗಳಿರುವ ಉತ್ಪನ್ನಗಳು ಒಳ್ಳೆಯ ಫಲಿತಾಂಶ ನೀಡಬಲ್ಲವು. ಮಕ್ಕಳಿಗೆ ಸ್ನಾನ ಮಾಡಿಸಿದ ಕೂಡಲೇ ಈ ಕ್ರೀಮ್‌ ಅಥವಾ ಲೋಶನ್‌ಗಳನ್ನು ಲೇಪಿಸುವುದು ಹೆಚ್ಚಿನ ಪರಿಣಾಮ ನೀಡುತ್ತದೆ. ದೀರ್ಘ ಕಾಲದವರೆಗೆ ತ್ವಚೆ ತೇವವಾಗಿ ಇರುವಂತೆ ಕಾಪಾಡುತ್ತದೆ.

ವಸ್ತ್ರಗಳು: ತೀರಾ ದಪ್ಪಗಿನ ಅಥವಾ ಉಣ್ಣೆಯ ವಸ್ತ್ರಗಳು ಕಠೋರ ಚಳಿಯಲ್ಲಿ ಮಾತ್ರವೇ ಸೂಕ್ತ. ಹಾಗಿಲ್ಲದಿದ್ದರೆ ಮಂದವಾದ ಹತ್ತಿಯ ವಸ್ತ್ರಗಳು ಮಕ್ಕಳಿಗೆ ಆರಾಮ ನೀಡುತ್ತವೆ. ಹೆಚ್ಚುವರಿ ಬೆವರನ್ನು ಹೀರಿಕೊಂಡು, ಗುಳ್ಳೆಗಳಾಗದಂತೆ ತಡೆಯಲು ನೆರವಾಗುತ್ತವೆ. ತಲೆಯಿಂದ ಶಾಖ ಹೊರಹೋಗದಂತೆ ಕಾಪಾಡಲು, ಪುಟಾಣಿಗಳು ತಲೆಗೆ ಪುಟ್ಟದೊಂದು ಬೆಚ್ಚಗಿನ ಟೋಪಿ ಹಾಕಬಹುದು. ಸಿಂಥೆಟಿಕ್‌ ವಸ್ತ್ರಗಳು ಚರ್ಮದ ಕಿರಿಕಿರಿಯನ್ನು ದ್ವಿಗುಣಗೊಳಿಸುವುದರಿಂದ ಗಾಳಿಯಾಡುವಂಥ ಹತ್ತಿಯ ವಸ್ತ್ರಗಳೇ ಸೂಕ್ತ.