ಭಾರತದಲ್ಲಿ ಇರುವ ರಚನಾತ್ಮಕ ಹೃದ್ರೋಗ: ಸುಧಾರಿತ ಕವಾಟ ಚಿಕಿತ್ಸೆಗಳನ್ನು ಅಳವಡಿಸಿಕೊಂಡು ಅಂತರ ನಿವಾರಿಸುವುದು
ರಚನಾತ್ಮಕ ಹೃದಯ ಕಾಯಿಲೆಗಳು ಹೃದಯದ ಕವಾಟಗಳು, ಗೋಡೆಗಳು ಮತ್ತು/ಅಥವಾ ಸ್ನಾಯು ವಿನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಉಲ್ಲೇಖಿಸುತ್ತವೆ. ಈ ಹೃದಯ ಸಮಸ್ಯೆಗಳು ವಿಶ್ವಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮವನ್ನು ಬೀರುತ್ತವೆ ಮತ್ತು ಆ ಸಂಖ್ಯೆಯು ಜನಸಂಖ್ಯೆಯು ಬೆಳೆಯುವ ರೀತಿಯಲ್ಲಿಯೇ ಬೆಳೆಯುವ ನಿರೀಕ್ಷೆಯಿದೆ.

-

ಭಾರತದಲ್ಲಿ ಹೃದಯಕ್ಕೆ ಸಂಬಂಧಿಸಿದ ಆರೋಗ್ಯದ ಬಗ್ಗೆ ಹಾಗೂ ಆರಂಭಿಕ ರೋಗನಿರ್ಣಯದ ಮಹತ್ವ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳಿಗೆ ದೊರಕುವ ಪ್ರವೇಶದ ಬಗ್ಗೆ ಜಾಗೃತಿ ಮೂಡಿಸು ವುದು ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ರಚನಾತ್ಮಕ ಹೃದಯ ಕಾಯಿಲೆಗಳು, ವಿಶೇಷವಾಗಿ ಹೃದಯ ಕವಾಟಗಳ ಮೇಲೆ ಪರಿಣಾಮ ಬೀರುವವು ಒಟ್ಟಾರೆ ಹೃದಯರಕ್ತನಾಳದ ಕಾಯಿಲೆ ವರ್ಣಪಟಲದ ಒಂದು ಪ್ರಮುಖ ಭಾಗವಾಗಿದೆ.
ರಚನಾತ್ಮಕ ಹೃದಯ ಕಾಯಿಲೆಗಳು ಹೃದಯದ ಕವಾಟಗಳು, ಗೋಡೆಗಳು ಮತ್ತು/ಅಥವಾ ಸ್ನಾಯುವಿನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಉಲ್ಲೇಖಿಸುತ್ತವೆ. ಈ ಹೃದಯ ಸಮಸ್ಯೆಗಳು ವಿಶ್ವಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮವನ್ನು ಬೀರುತ್ತವೆ ಮತ್ತು ಆ ಸಂಖ್ಯೆಯು ಜನಸಂಖ್ಯೆಯು ಬೆಳೆಯುವ ರೀತಿಯಲ್ಲಿಯೇ ಬೆಳೆಯುವ ನಿರೀಕ್ಷೆಯಿದೆ. ಅನೇಕ ರಚನಾತ್ಮಕ ಹೃದಯ ಕಾಯಿಲೆಗಳಲ್ಲಿ ಒಂದು ಮಿಟ್ರಲ್ ರೆಜರ್ಗಿಟೇಶನ್ (ಎಮ್ಆರ್) - ಮಿಟ್ರಲ್ ಕವಾಟ ದೊಂದಿಗಿನ ಸಮಸ್ಯೆ, ಇದು ಹೃದಯದ ಎರಡು ಕೋಣೆಗಳ ನಡುವೆ ರಕ್ತದ ಹರಿವನ್ನು ನಿಯಂತ್ರಿ ಸಲು ಸಹಾಯ ಮಾಡುತ್ತದೆ. ಈ ಕವಾಟವು ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ, ರಕ್ತವು ಹಿಂದಕ್ಕೆ ಹೋಗಿ ಸೋರಿಕೆಯಾಗುತ್ತದೆ.
ಇದನ್ನೂ ಓದಿ: Health Tips: ಆಹಾರಕ್ಕೂ ಅಂಟಿವೆಯಲ್ಲ ಮಿಥ್ಯೆಗಳು!
ಹಾಗಾಗಿ ಹೃದಯವು ಸಾಮಾನ್ಯವಾಗಿ ಕಾರ್ಯ ಮಾಡುವುದಕ್ಕಿಂತ ಹೆಚ್ಚು ಶ್ರಮವನ್ನು ಪಡಬೇಕಾಗುತ್ತದೆ. ರಾಷ್ಟ್ರವ್ಯಾಪಿಯಾಗಿ ಭಾರತದಲ್ಲಿ ಎಮ್ ಆರ್ ಮೂಲಕ ಸಂಭವಿಸುವ ಪ್ರಮಾಣದ ಅಂಕಿ ಸಂಖ್ಯೆ ಲಭ್ಯವಿಲ್ಲದಿದ್ದರೂ, ಅಧಿಕೃತ ರೋಗ ದಾಖಲಾತಿಗಳ ಕೊರತೆಯಿಂದಾಗಿ, ಆಸ್ಪತ್ರೆಯ ದತ್ತಾಂಶ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳು ಈ ಸ್ಥಿತಿಯ ಮಹತ್ವದ ಮತ್ತು ಸಂಕೀರ್ಣವಾದ ಹೊರೆಯನ್ನು ತೋರಿಸುತ್ತವೆ ಹಾಗೂ ಸಾಂಪ್ರದಾಯಿಕ ಸಂಧಿವಾತ ಹೃದಯ ಕಾಯಿಲೆ ಮತ್ತು ಆಧುನಿಕ ಹೃದಯರಕ್ತನಾಳದ ಅಪಾಯಕಾರಿ ಅಂಶಗಳ ಮುಖೇನ ವ್ಯಾಖ್ಯಾನಿಸಲಾಗುತ್ತದೆ.
ಸಾಮಾನ್ಯವಾಗಿ ಎರಡು ವಿಧದ ಮಿಟ್ರಲ್ ವಾಲ್ವ್ ರಿಗರ್ಜಿಟೇಶನ್ ಅನ್ನು ವ್ಯಾಖ್ಯಾನಿಸಬಹುದು - ಕ್ಷೀಣಗೊಳ್ಳುವ ಮತ್ತು ಕ್ರಿಯಾತ್ಮಕ ಎಂದು. ಕ್ಷೀಣಗೊಳ್ಳುವ ಮಿಟ್ರಲ್ ರಿಗರ್ಜಿಟೇಶನ್ ಅಥವಾ ಡಿಎಮ್‌ಆರ್ ಸಂಬಂಧದಲ್ಲಿ, ಕವಾಟವು ಹಾನಿಗೊಳಗಾಗುತ್ತದೆ - ವಯಸ್ಸಾದ ಸೋಂಕುಗಳು ಅಥವಾ ಇತರ ಪರಿಸ್ಥಿತಿಗಳಿಂದಾಗಿ. ಚಿಕಿತ್ಸೆಯು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ದುರಸ್ತಿ ಅಥವಾ ಕವಾಟದ ಬದಲಿಯನ್ನು ಒಳಗೊಂಡಿರುತ್ತದೆ. ಕ್ರಿಯಾತ್ಮಕ ಮಿಟ್ರಲ್ ರಿಗರ್ಜಿಟೇಶನ್ (ಎಫ್‌ಎಂ ಆರ್), ಸಂಬಂಧದಲ್ಲಿ ಹೃದಯವು ವಿಸ್ತರಿಸಲ್ಪಡುತ್ತದೆ, ಕವಾಟವನ್ನು ಪ್ರತ್ಯೇಕವಾಗಿ ಎಳೆಯುತ್ತದೆ ಹಾಗಾಗಿ ಅದು ಸರಿಯಾದ ರೀತಿಯಲ್ಲಿ ಮುಚ್ಚಿಕೊಳ್ಳಲು ಸಾಧ್ಯವಾಗುವುದಿಲ್ಲಾ. ಇವು ಸಾಮಾನ್ಯ ವಾಗಿ ಹೃದಯ ವೈಫಲ್ಯ ಅಥವಾ ಹೃದಯಾಘಾತದಿಂದ ಉಂಟಾಗುತ್ತದೆ.
ಎರಡೂ ಬಗೆಯ ಮಿಟ್ರಲ್ ರಿಗರ್ಜಿಟೇಶನ್ ಉಸಿರಾಟದ ತೊಂದರೆ, ಆಯಾಸ ಮತ್ತು ಹೃದಯ ಬಡಿತಗಳಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ, ಇದು ರೋಗಿಯ ಜೀವನದ ಗುಣಮಟ್ಟದ ಮೇಲೆ ಪರಿಣಾಮವನ್ನು ಬೀರುತ್ತದೆ. ಸಮಗ್ರ ರೀತಿಯ ರಾಷ್ಟ್ರೀಯ ದತ್ತಾಂಶವು ಸೀಮಿತವಾಗಿ ದ್ದರೂ ಸಹ, ಪ್ರಾದೇಶಿಕ ಮತ್ತು ಜಾಗತಿಕ ಅಂದಾಜುಗಳು ಏಷ್ಯಾದ ಸುಮಾರು 11.6 ಮಿಲಿಯನ್ ಸಾಮಾನ್ಯ ಜನಸಂಖ್ಯೆಯ ಮೇಲೆ ಮಧ್ಯಮದಿಂದ ತೀವ್ರವಾದ ಎಮ್ಆರ್ ಪರಿಣಾಮವನ್ನು ಬೀರುತ್ತಲಿದೆ ಎನ್ನುವುದನ್ನು ಸೂಚಿಸುತ್ತದೆ.
ಇದರ ಪರಿಣಾಮವು ವಯಸ್ಸಾದವಾರಲ್ಲಿ ತೀವ್ರವಾಗಿ ಏರುತ್ತಲಿದೆ. ಭಾರತದಲ್ಲಿ, ವಯಸ್ಸಾದ ಜನಸಂಖ್ಯೆಯು ಮತ್ತು ಹೃದಯರಕ್ತನಾಳದ ಅಪಾಯಕಾರಿ ಅಂಶಗಳು ಹೆಚ್ಚಾಗುತ್ತಿದ್ದು, ಎಮ್ ಆರ್ ಹೊರೆಯು ಗಣನೀಯ ಪ್ರಮಾಣದಲ್ಲಿದೆ ಎಂದು ಗುರುತಿಸಲ್ಪಟ್ಟಿದೆ. ಸಾಮಾನ್ಯವಾಗಿ ಇದು ವಯಸ್ಸಾಗಿರುವವರಲ್ಲಿ ವಿಶೇಷವಾಗಿ ಕಾಣಬರುತ್ತದೆ, ಇದು 75[1] ವರ್ಷ[2]ಕ್ಕಿಂತ ಮೇಲ್ಪಟ್ಟ ಹತ್ತು ಜನರಲ್ಲಿ ಒಬ್ಬರ ಮೇಲೆ ಪರಿಣಾಮವನ್ನು ಬೀರುತ್ತದೆ.
ಹೆಚ್ಚಿನ ಅಪಾಯದ ರೋಗಿಗಳಿಗಾಗಿ ಇರುವ ಹೊಸ ಮಾರ್ಗ
ಸಾಂಪ್ರದಾಯಿಕವಾಗಿ, ಮಿಟ್ರಲ್ ಕವಾಟವನ್ನು ಸರಿಪಡಿಸಲು ಅಥವಾ ಬದಲಿಸಲು ತೆರೆದ ಹೃದಯ ಶಸ್ತ್ರಚಿಕಿತ್ಸೆ ಎಮ್ ಆರ್ ಸಂಬಂಧ ಪ್ರಮಾಣಿತ ಚಿಕಿತ್ಸೆಯಾಗಿದೆ. ಆದಾಗ್ಯೂ, ಎಲ್ಲಾ ರೋಗಿಗಳು ಅಂತಹ ಪ್ರಮುಖ, ಆಕ್ರಮಣಕಾರಿ ಶಸ್ತ್ರಚಿಕಿತ್ಸೆಯನ್ನು, ವಿಶೇಷವಾಗಿ ವಯಸ್ಸಾದ ವ್ಯಕ್ತಿಗಳು ಅಥವಾ ಸುಧಾರಿತ ಹೃದಯ ವೈಫಲ್ಯ ಹೊಂದಿರುವವರು ಮತ್ತು ಇತರ ಸಂಕೀರ್ಣ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವವರು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಔಷಧಿ ಕೂಡ, ವಿಶೇಷವಾಗಿ ಕ್ರಿಯಾತ್ಮಕ ಎಮ್ ಆರ್, ಸಾಕಾಗುವುದಿಲ್ಲ.
ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ಆಗದ ಅಥವಾ ಔಷಧಿಗಳನ್ನು ಮೀರಿ ಬೆಂಬಲ ಅಗತ್ಯವಿರುವ ರೋಗಿಗಳಿಗೆ, ಟ್ರಾನ್ಸ್‌ಕ್ಯಾಥೆಟರ್ ಎಡ್ಜ್-ಟು-ಎಡ್ಜ್ ರಿಪೇರಿ (ಟಿಇಇಆರ್) ಸ್ಥಾಪಿತ, ಕನಿಷ್ಠ ಆಕ್ರಮಣಕಾರಿ ಚಿಕಿತ್ಸೆಯ ಆಯ್ಕೆಯಾಗಿರುತ್ತದೆ. ಎದೆಯನ್ನು ತೆರೆಯುವ ಬದಲು ಅಥವಾ ಹೃದಯವನ್ನು ನಿಲ್ಲಿಸುವ ಬದಲು, ವೈದ್ಯರು ಹೆಲ್ತ್‌ಕೇರ್ ಕಂಪನಿ ಅಬಾಟ್ ಅಭಿವೃದ್ಧಿಪಡಿಸಿದ ಮಿಟ್ರಾಕ್ಲಿಪ್ ಕಾರ್ಯವಿಧಾನವನ್ನು ಮಾಡಬಹುದು - ಮಿಟ್ರಲ್ ಕವಾಟವನ್ನು ಸರಿಪಡಿಸಲು ಕಾಲಿನ ರಕ್ತನಾಳದ ಮೂಲಕ ವಿತರಿಸಲಾದ ಸಣ್ಣ ಕ್ಲಿಪ್ ಅನ್ನು ಬಳಸುತ್ತಾರೆ. ಈ ಟ್ರಾನ್ಸ್ ಕ್ಯಾಥೀಟರ್ ದ್ರಾವಣದ ಸಹಾಯದೊಂದಿಗೆ ಮಿಟ್ರಲ್ ವಾಲ್ವ್, ಕ್ಲಿಪ್‌ನ ಎರಡೂ ಬದಿಯಲ್ಲಿ ತೆರೆಯಲು ಮತ್ತು ಮುಚ್ಚಲು ಸಾಧ್ಯವಾಗುತ್ತದೆ, ಹಾಗೂ ಹೃದಯವು ಹೆಚ್ಚು ಪರಿಣಾಮಕಾರಿಯಾಗಿ ಪಂಪ್ ಮಾಡಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಈ ವಿಧಾನವು ಮಿಟ್ರಲ್ ರಿಗರ್ಜಿಟೇಶನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ರೋಗಿಯು ಸುಧಾರಿತ ಫಲಿತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಭಾರತದಲ್ಲಿ ಅಬಾಟ್ ಅವರ ರಚನಾತ್ಮಕ ಹೃದಯ ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಕಂಟ್ರಿ ಮ್ಯಾನೇಜರ್ ಆದ ನೀರಜ್ ಸಿಂಗ್ ಈ ತಂತ್ರಜ್ಞಾನದ ಕುರಿತು ತಮ್ಮ ಆಲೋಚನೆಗಳನ್ನು ಕೆಳಗಿನಂತೆ ಹಂಚಿಕೊಂಡರು: “ಭಾರತದಲ್ಲಿ ರಚನಾತ್ಮಕ ಹೃದಯ ಆರೈಕೆಯ ನಿಟ್ಟಿನಲ್ಲಿ, ಟ್ರಾನ್ಸ್‌ಕ್ಯಾತೀಟರ್ ಮಿಟ್ರಲ್ ವಾಲ್ವ್ ರಿಪೇರಿಯನ್ನು ಅಳವಡಿಸಿಕೊಳ್ಳುವುದರ ಸಂಬಂಧ ನಾವು ಹೇಗೆ ಅದನ್ನು ಸಮೀಪಿಸುತ್ತೇವೆ ಎನ್ನುವುದರಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ಗುರುತಿಸುತ್ತದೆ.
ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಹೆಚ್ಚು ಅಪಾಯವನ್ನು ಹೊಂದಬಹುದಾದ ರೋಗಿಗಳಿಗೆ, ಈ ಕನಿಷ್ಠ ಆಕ್ರಮಣಕಾರಿ ಚಿಕಿತ್ಸೆಯು ಹೊಸದಾದ ಮಾರ್ಗಾವನ್ನು ತೆರೆಯುತ್ತದೆ- ಹೃದಯ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವ, ಲಕ್ಷಣಗಳನ್ನು ಸುಧಾರಿಸುವ ಹಾಗೂ ಜೀವನಶೈಲಿಯನ್ನು ಸುಧಾರಿಸುವುದು. ಭಾರತದಲ್ಲಿ ಮಿಟ್ರಾಕ್ಲಿಪ್ ಅನ್ನು ಪ್ರಾರಂಭಿಸಿದ ದಿನದಿಂದ ಈ ವರೆಗೂ ನೂರಾರು ಜನರನ್ನು ಸುಧಾರಿತ ಹೃದಯ ಆರೋಗ್ಯದ ಕಡೆಗೆ ಕೊಂಡೊಯ್ಡಿದ್ದೇವೆ. ಜಾಗತಿಕವಾಗಿ, ಕಳೆದ 20 + ವರ್ಷಗಳಲ್ಲಿ, ಸುಮಾರು 250,000 ಕ್ಕೂ ಹೆಚ್ಚು ಕಾರ್ಯವಿಧಾನಗಳನ್ನು ನಿರ್ವಹಿಸಲಾಗಿದೆ. ಈ ಸಂಖ್ಯೆಯು ಕೇವಲ ಅಂಕಿ ಅಂಶ ಮಾತ್ರವಲ್ಲ - ಅದು ಸುಧಾರಿತ ಹೃದಯ ಆರೈಕೆಯ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಆ ನಿಟ್ಟಿನಲ್ಲಿ ನಾವು ಕೈಗೊಳ್ಳುತ್ತಿರುವ ಆವಿಷ್ಕಾರ, ಋಜುವಾತು ಆಧಾರಿತ ಪರಿಹಾರಗಳು ಅವು ತಲುಪಬೇಕಾದವರಿಗೆ ತಲುಪುವಂತೆ ಮಾಡುವಲ್ಲಿ ನಮ್ಮ ಮುಂದುವರೆದ ಬಾಧ್ಯತೆಯನ್ನು ತೋರಿಸುತ್ತದೆ.
ಫಲಿತಾಂಶಗಳನ್ನು ಸುಧಾರಿಸುವುದು ಹಾಗೂ ಪ್ರವೇಶವನ್ನು ವಿಸ್ತರಿಸುವುದು
ರಚನಾತ್ಮಕ ಹೃದ್ರೋಗದಿಂದಾಗಿ ಹೆಚ್ಚುತ್ತಿರುವ ಹೊರೆ, ವಿಶೇಷವಾಗಿ ಅದರ ವಯಸ್ಸಾದ ಜನಸಂಖ್ಯೆಯನ್ನು ಪರಿಗಣಿಸಿದಲ್ಲಿ, ಭಾರತವು ಸಮಸ್ಯೆಯನ್ನು ಎದುರಿಸುತ್ತಿರುವಾಗ, ಆ ರೀತಿಯ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯು ಭರವಸೆಯನ್ನು ನೀಡುತ್ತದೆ. ರೋಗನಿರ್ಣಯ ಮತ್ತು ಪ್ರವೇಶಿಸಬಹುದಾದ ಚಿಕಿತ್ಸೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ಈ ಆವಿಷ್ಕಾರಗಳು ಕ್ಲಿನಿಕಲ್ ಫಲಿತಾಂಶಗಳನ್ನು ಪರಿವರ್ತಿಸುವುದಲ್ಲದೆ, ಒಂದು ಕಾಲದಲ್ಲಿ ಸೀಮಿತ ಆಯ್ಕೆಗಳನ್ನು ಹೊಂದಿದ್ದಂತಹ ರೋಗಿಗಳಿಗೆ ಘನತೆ ಮತ್ತು ಜೀವನದ ಗುಣಮಟ್ಟವನ್ನು ಪಡೆಯುವುದನ್ನು ಪುನಃಸ್ಥಾಪಿಸುತ್ತವೆ. ಜಾಗೃತಿಯನ್ನು ವಿಸ್ತರಿಸುವುದು ಹಾಗೂ ಆರಂಭಿಕ ಪತ್ತೆಹಚ್ಚುವಿಕೆಯನ್ನು ಬಲಪಡಿಸುವುದರಲ್ಲಿ ಮುಂದಿನ ಮಾರ್ಗವು ಮುಂಚೂಣಿಯಲ್ಲಿದೆ - ಆರೋಗ್ಯಕರ ಹೃದಯ ಮತ್ತು ಪೂರ್ಣ ಜೀವನವನ್ನು ಆಯ್ಕೆ ಮಾಡಲು ಹೆಚ್ಚಿನ ಜನರಿಗೆ ಅಧಿಕಾರವನ್ನು ನೀಡುತ್ತದೆ.
ಹಕ್ಕುತ್ಯಾಗ: ಈ ದಾಖಲೆಯಲ್ಲಿರುವ ಮಾಹಿತಿಯು ರೋಗಿಗಳ ಶಿಕ್ಷಣಕ್ಕಾಗಿ ಮಾತ್ರವೇ ಆಗಿರುತ್ತದೆ ಹಾಗೂ ವೈದ್ಯರ ಸಲಹೆ ಅಥವಾ ಅಬಾಟ್ ಅವರಿಂದ ಬಂದಿರಬಹುದಾದ ಶಿಫಾರಸುಗಳಿಗೆ ಬದಲಿಯಾಗಿ ಎಂದು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ
[1] ಎನ್‌ಕೊಮೊ ವಿಟಿ, ಗಾರ್ಡಿನ್ ಜೆಎಂ, ಸ್ಕೆಲ್ಟನ್ ಟಿಎನ್, ಗಾಟ್‌ಡೀನರ್ ಜೆಎಸ್, ಸ್ಕಾಟ್ ಸಿಜಿ, ಎನ್ರಿಕ್ವೆಜ್-ಸರಾನೊ ಎಂ. ಕವಾಟದ ಹೃದಯ ಕಾಯಿಲೆಗಳ ಹೊರೆ: ಜನಸಂಖ್ಯಾ ಆಧಾರಿತ ಅಧ್ಯಯನ. ಲ್ಯಾನ್ಸೆಟ್. 2006;368(9540):1005-1011.