ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಭಾರತದ 14 ಸದಸ್ಯರ ತಂಡಕ್ಕೆ ಚಾನು ಸಾರಥ್ಯ

World Weightlifting Championships: 2024 ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಿಂದ್ಯಾರಾಣಿ, ನಿರುಪಮಾ ಮತ್ತು ಮೆಹಕ್ ಬೆಳ್ಳಿ ಪದಕ ಗೆದ್ದರೆ, ಹರ್ಜಿಂದರ್ ಮತ್ತು ವಂಶಿತಾ ಕಂಚಿನ ಪದಕ ಗೆದ್ದರು. ಭಾರತದ ಪ್ರಮುಖ ಪುರುಷರ ಲಿಫ್ಟರ್ ಲವ್‌ಪ್ರೀತ್ ಸಿಂಗ್ ಕಂಚು ಗೆದ್ದರು.

ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಭಾರತದ 14 ಸ್ಫರ್ಧಿಗಳು ಕಣಕ್ಕೆ

-

Abhilash BC Abhilash BC Oct 2, 2025 12:28 PM

ನವದೆಹಲಿ: ನಾರ್ವೆಯಲ್ಲಿ ನಡೆಯುತ್ತಿರುವ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ(World Weightlifting Championships 2025) ಭಾರತ 14 ಸದಸ್ಯರ ತಂಡವನ್ನು ಕಣಕ್ಕಿಳಿಸಲಿದ್ದು, ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು(Mirabai Chanu) ತಂಡವನ್ನು ಮುನ್ನಡೆಸಲಿದ್ದಾರೆ. ತಂಡದಲ್ಲಿ ಏಳು ಪುರುಷರು ಮತ್ತು ಏಳು ಮಹಿಳೆಯರು. ಸೇರಿದ್ದಾರೆ. ಪ್ರಮುಖರಾಗಿ ಮೀರಾಬಾಯಿ ಚಾನು, ಬಿಂದ್ಯಾರಾಣಿ ದೇವಿ, ಹರ್ಜಿಂದರ್ ಕೌರ್ ಮತ್ತು ಲವ್‌ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ.

31 ವರ್ಷದ ಚಾನು, 2024 ರ ಪ್ಯಾರಿಸ್ ನಂತರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕದೊಂದಿಗೆ ಮರಳಿದರು. ಚಾನು 2017ರಲ್ಲಿ ಚಿನ್ನ, ಮತ್ತು 2022ರಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಹೀಗಾಗಿ ಈ ಬಾರಿಯೂ ಅವರ ಮೇಲೆ ಪದಕ ಬರವಸೆ ಇರಿಸಲಾಗಿದೆ.

2024 ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಿಂದ್ಯಾರಾಣಿ, ನಿರುಪಮಾ ಮತ್ತು ಮೆಹಕ್ ಬೆಳ್ಳಿ ಪದಕ ಗೆದ್ದರೆ, ಹರ್ಜಿಂದರ್ ಮತ್ತು ವಂಶಿತಾ ಕಂಚಿನ ಪದಕ ಗೆದ್ದರು. ಭಾರತದ ಪ್ರಮುಖ ಪುರುಷರ ಲಿಫ್ಟರ್ ಲವ್‌ಪ್ರೀತ್ ಸಿಂಗ್ ಕಂಚು ಗೆದ್ದರು.

ಮಹಿಳೆಯ ತಂಡ: ಮೀರಾಬಾಯಿ ಚಾನು (48 ಕೆಜಿ), ಕೊಯೆಲ್ ಬಾರ್ (53 ಕೆಜಿ), ಬಿಂದ್ಯಾರಾಣಿ ದೇವಿ (58 ಕೆಜಿ), ನಿರುಪಮಾ ದೇವಿ (63 ಕೆಜಿ), ಹರ್ಜಿಂದರ್ ಕೌರ್ (69 ಕೆಜಿ), ವಂಶಿತಾ ವರ್ಮಾ (86 ಕೆಜಿ), ಮೆಹಕ್ ಶರ್ಮಾ (86 ಕೆಜಿ+)

ಪುರುಷರ ತಂಡ: ರಿಷಿಕಾಂತ ಸಿಂಗ್ (60 ಕೆಜಿ), ಮುತ್ತುಪಾಂಡಿ ರಾಜಾ (65 ಕೆಜಿ), ಅಜಿತ್ ನಾರಾಯಣ (71 ಕೆಜಿ), ಅಜಯ ಬಾಬು ವಲ್ಲೂರಿ (79 ಕೆಜಿ), ಅಭಿಷೇಕ್ ನಿಪಾನೆ (88 ಕೆಜಿ), ದಿಲ್ಬಾಗ್ ಸಿಂಗ್ (94 ಕೆಜಿ), ಲವ್ಪ್ರೀತ್ ಸಿಂಗ್ (110 ಕೆಜಿ+).