ಬೆಂಗಳೂರು: ನಗರದ ಕನ್ನಿಂಗ್‌ಹ್ಯಾಮ್‌ರಸ್ತೆಯ ಫೋರ್ಟಿಸ್ ಆಸ್ಪತ್ರೆಯು, ಗಂಭೀರ ಸ್ವರೂಪದ ಎರಡು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 72 ವರ್ಷದ ಮಹಿಳೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಮೂಲಕ ಮಹತ್ವದ ಶಸ್ತ್ರಚಿಕಿತ್ಸಾ ಮೈಲಿಗಲ್ಲು ಸಾಧಿಸಿದೆ.
ಮೂತ್ರಪಿಂಡದ ಕ್ಯಾನ್ಸರ್ ಮತ್ತು ಗರ್ಭಕೋಶದ ಹಿಗ್ಗುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಮೂತ್ರಶಾಸ್ತ್ರ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ತಂಡವು ಶೀಘ್ರವಾಗಿ ಗುಣವಾಗುವ ಮತ್ತು ಸುಲಭ ಶಸ್ತ್ರಚಿಕಿತ್ಸೆಯ ವಿಶಿಷ್ಟ ವಿಧಾನವನ್ನು ಯಶಸ್ವಿಯಾಗಿ ನೆರವೇರಿಸಿದೆ.
ರೋಗಿಯು ಆರು ತಿಂಗಳಿಗಿಂತ ಹೆಚ್ಚು ಕಾಲ ಯೋನಿ ಕ್ಯಾನ್ಸರ್‌ನಿಂದ (vaginal mass) ಬಳಲು ತ್ತಿದ್ದರು. ಜೊತೆಗೆ ಮೂತ್ರಕೋಶ ಖಾಲಿ ಮಾಡುವಲ್ಲಿ ತೊಂದರೆ, ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಮೂತ್ರ ಅವಸರದ ವಿಸರ್ಜನೆಯ ಸಮಸ್ಯೆಯು ಮಹಿಳೆಯನ್ನು ತೀವ್ರವಾಗಿ ಬಾಧಿಸುತ್ತಿತ್ತು. ಕಾಯಿಲೆ ತಪಾಸಣೆಯ ಸಂದರ್ಭದಲ್ಲಿ ಗರ್ಭಾಶಯದ ಹಿಗ್ಗುವಿಕೆಯು 4ನೇ ಹಂತದಲ್ಲಿ (ಹೊಟ್ಟೆ ಮತ್ತು ತೊಡೆಗಳ ನಡುವಣ ಭಾಗದ (ಸೊಂಟ) ದುರ್ಬಲ ಸ್ನಾಯುಗಳು ಮತ್ತು ಸಂಯೋಜಕ ಅಂಗಾಂಶಗಳಿಂದಾಗಿ ಮೂತ್ರಕೋಶವು ಯೋನಿ ಕಾಲುವೆಯೊಳಗೆ ಕುಸಿಯುವ ಸ್ಥಿತಿಯಾಗಿದೆ) ಇರುವುದು ಕಂಡು ಬಂದಿತ್ತು. ಮಹಿಳೆಯ ಎಡ ಮೂತ್ರಪಿಂಡದಲ್ಲಿ 6 ರಿಂದ 7 ಸೆಂ.ಮೀ. ಉದ್ದದ ದೊಡ್ಡ ಗೆಡ್ಡೆಯೂ ಆಕಸ್ಮಿಕವಾಗಿ ಪತ್ತೆಯಾಗಿತ್ತು. ಇದು ಮೂತ್ರಪಿಂಡದ ಕ್ಯಾನ್ಸರ್ (ಆರ್‌ಸಿಸಿ) ಎಂದು ಶಂಕಿಸಲಾಗಿತ್ತು.
ಇದನ್ನೂ ಓದಿ: Bangalore News: ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಭಾಗಿ
ಗೆಡ್ಡೆಯ ದೊಡ್ಡ ಗಾತ್ರದ ಕಾರಣ, ಮೂತ್ರಪಿಂಡದ ಭಾಗವನ್ನು ಸಂರಕ್ಷಿಸುವ ಭಾಗಶಃ ಶಸ್ತ್ರ ಚಿಕಿತ್ಸೆಯ ಮೂಲಕ ಮೂತ್ರಪಿಂಡ ತೆಗೆದುಹಾಕುವುದು (ನೆಫ್ರೆಕ್ಟಮಿ) ಸಾಧ್ಯ ಇರಲಿಲ್ಲ. ಶಸ್ತ್ರ ಚಿಕಿತ್ಸೆ ನಡೆಸಿದ್ದರೆ ತುಂಬಾ ಕಡಿಮೆ ಪ್ರಮಾಣದಲ್ಲಿ ಆರೋಗ್ಯಕರ ಮೂತ್ರಪಿಂಡದ ಅಂಗಾಂಶ ಉಳಿಯುತ್ತಿತ್ತು. ಆದ್ದರಿಂದ, ವೈದ್ಯಕೀಯ ತಂಡವು ಮೂತ್ರಪಿಂಡವನ್ನು ಸಂಪೂರ್ಣವಾಗಿ ತೆಗೆದು ಹಾಕುವ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ಇದರಲ್ಲಿ ಸಂಪೂರ್ಣವಾಗಿ ಕ್ಯಾನ್ಸರ್ ತೆರವು ಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಗೆಡ್ಡೆಯೊಂದಿಗೆ ಮೂತ್ರಪಿಂಡವನ್ನು ಸಂಪೂರ್ಣ ವಾಗಿ ತೆಗೆದು ಹಾಕಲಾಗುತ್ತದೆ.
ಶಸ್ತ್ರಚಿಕಿತ್ಸಾ ತಂಡವು ಒಂದೇ ಶಸ್ತ್ರಚಿಕಿತ್ಸಾ ಅವಧಿಯಲ್ಲಿ ಹಲವಾರು ಶಸ್ತ್ರಚಿಕಿತ್ಸಾ ವಿಧಾನ ಗಳನ್ನು ಯಶಸ್ವಿಯಾಗಿ ನಿರ್ವಹಿಸಿತು. ಇವುಗಳಲ್ಲಿ ಬಾಧಿತ ಮೂತ್ರಪಿಂಡ ಮತ್ತು ಗೆಡ್ಡೆಯನ್ನು ತೆಗೆದುಹಾಕಲು ರೋಬೊಟಿಕ್ ಲೆಫ್ಟ್ ರ‍್ಯಾಡಿಕಲ್ ನೆಫ್ರೆಕ್ಟಮಿ, ಗರ್ಭಾಶಯದ ಹಿಗ್ಗುವಿಕೆಗೆ ಚಿಕಿತ್ಸೆ ನೀಡಲು ಯೋನಿ ಮೂಲಕ ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆ, ಅಂಡಾಶಯಗಳು ಮತ್ತು ಫಾಲೋಪಿಯನ್ ಟ್ಯೂಬ್‌ಗಳನ್ನು ತೆಗೆದುಹಾಕಲು ಲ್ಯಾಪ್ರೊಸ್ಕೋಪಿಕ್ ಬೈಲೇಟರಲ್ ಸ್ಯಾಲ್ಪಿಂಗೊ-ಊಫೊರೆಕ್ಟಮಿ ಮತ್ತು ಹೊಟ್ಟೆ ಮತ್ತು ತೊಡೆಗಳ ನಡುವಣ ಭಾಗದ (ಸೊಂಟ) ಸ್ನಾಯುಗಳನ್ನು ಬಲಪಡಿಸಲು ಮತ್ತು ಪುನಃಸ್ಥಾಪಿಸಲು ದುರಸ್ತಿ ಚಿಕಿತ್ಸೆ ಸೇರಿವೆ.
ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಮೂತ್ರಕ್ಯಾನ್ಸರ್, ಮೂತ್ರ ಸ್ತ್ರೀರೋಗಶಾಸ್ತ್ರ, ಆಂಡ್ರಾಲಜಿ, ಮೂತ್ರಪಿಂಡ ಕಸಿ ಮತ್ತು ರೋಬೊಟಿಕ್ ಸರ್ಜರಿ ನಿರ್ದೇಶಕ ಡಾ.ಶಕೀರ್ ತಬ್ರೆಜ್ ಮಾತನಾಡಿ, "ದೊಡ್ಡ ಮೂತ್ರ ಪಿಂಡದ ಕ್ಯಾನ್ಸರ್‌ಗಳಿಗೆ ಮೂತ್ರಪಿಂಡವನ್ನು ಸಂಪೂರ್ಣವಾಗಿ ತೆಗೆದು ಹಾಕುವ ಶಸ್ತ್ರಚಿಕಿತ್ಸೆಯು ಮಾನದಂಡದ ಆರೈಕೆ ಯಾಗಿದೆ. ಆದರೆ ಕ್ಯಾನ್ಸರ್ ಮಾದರಿ ಹೊರತೆಗೆಯಲು ಸಾಮಾನ್ಯವಾಗಿ ದೊಡ್ಡ ಕಿಬ್ಬೊಟ್ಟೆಯ ಛೇದನದ ಅಗತ್ಯವಿರುತ್ತದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಸ್ತ್ರೀರೋಗಶಾಸ್ತ್ರ ಪರಿಣತ ತಂಡದ ಸಹಯೋಗದೊಂದಿಗೆ, ಗರ್ಭಾಶಯವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದ ನಂತರ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮೂತ್ರಪಿಂಡದ ಮಾದರಿಯನ್ನು ಯೋನಿಯ ಮೂಲಕ ಹೊರತೆಗೆಯಲಾಯಿತು. ಇದರರ್ಥ ದೊಡ್ಡ ಕಿಬ್ಬೊಟ್ಟೆಯ ಗಾಯದ ಬದಲಿಗೆ, ರೋಗಿಗೆ ಕೇವಲ ಮೂರು ಸಣ್ಣ ರೋಬೋಟಿಕ್ ಗಾಯಗಳು (ಪ್ರತಿಯೊಂದೂ 1 ಸೆಂ.ಮೀ ಗಿಂತ ಕಡಿಮೆ) ಉಳಿದಿವೆ. ಈ ವಿಧಾನವು ನೋವನ್ನು ಕಡಿಮೆ ಮಾಡಿತು. ಚೇತರಿಕೆಯ ಸಮಯ ವನ್ನು ಕಡಿಮೆ ಮಾಡಿತು ಮತ್ತು ಸಂಪೂರ್ಣ ಕ್ಯಾನ್ಸರ್ ತೆರವುಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳುವಾಗ ಮರುದಿನವೇ ಮಹಿಳೆಯು ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ರೋಬೊಟಿಕ್ ಶಸ್ತ್ರ ಚಿಕಿತ್ಸೆ ಮತ್ತು ಬಹುತಜ್ಞರ ತಂಡದ ಕೆಲಸವು ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದನ್ನು ಇದು ಎತ್ತಿ ತೋರಿಸುತ್ತದೆ" ಎಂದು ಹೇಳಿದ್ದಾರೆ.
ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮೂತ್ರ ಹಾಗೂ ಸ್ತ್ರೀರೋಗ ತಜ್ಞ, ಸ್ತ್ರೀಕ್ಯಾನ್ಸರ್ ತಜ್ಞ, ರೋಬೊಟಿಕ್ ಸರ್ಜರಿಯ ಹಿರಿಯ ಸಲಹೆಗಾರ್ತಿ ಡಾ. ರುಬಿನಾ ಶಾನವಾಜ್ ಮಾತನಾಡಿ, "ವಯಸ್ಸಾದ ರೋಗಿಯು ಒಂದೇ ಸಮಯದಲ್ಲಿ ಕಂಡು ಬರುವ ವಿಭಿನ್ನ ಆರೋಗ್ಯ ಸಮಸ್ಯೆಗಳಾದ ಗರ್ಭಾಶಯದ ಹಿಗ್ಗುವಿಕೆಯ ಹಂತ 4 ಮತ್ತು ಮೂತ್ರ ಪಿಂಡದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಗರ್ಭಕೋಶದ ಹಿಗ್ಗುವಿಕೆಯು ಅವರ ಜೀವನದ ಗುಣಮಟ್ಟದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿತ್ತು. ಆದರೆ, ಮೂತ್ರಪಿಂಡದ ಗೆಡ್ಡೆಯು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಸೃಷ್ಟಿಸಿತ್ತು. ರೋಬೊಟಿಕ್ ಮತ್ತು ಯೋನಿ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಸಂಯೋಜಿಸುವ ಮೂಲಕ, ನಾವು ಎರಡೂ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಲಾಯಿತು. ಅವರಿಗೆ ಒಂದಕ್ಕಿಂತ ಶಸ್ತ್ರಚಿಕಿತ್ಸೆಗಳು, ಪುನರಾವರ್ತಿತ ಅರಿವಳಿಕೆ ಮತ್ತು ದೀರ್ಘಕಾಲದ ಚೇತರಿಕೆಯ ಅಗತ್ಯವನ್ನು ತಪ್ಪಿಸಲಾಯಿತು. ಮೂತ್ರಪಿಂಡದ ಕ್ಯಾನ್ಸರ್ ಸಾಮಾನ್ಯ ವಾಗಿ ಅದರ ಆರಂಭಿಕ ಹಂತಗಳಲ್ಲಿ ಲಕ್ಷಣಗಳನ್ನೇ ತೋರಿಸುವುದಿಲ್ಲ. ರೋಗವು ಉಲ್ಬಣಗೊಳ್ಳು ವವರೆಗೆ ಲಕ್ಷಣಗಳು ವಿರಳವಾಗಿ ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ, ದಿನನಿತ್ಯದ ಆರೋಗ್ಯ ತಪಾಸಣೆಯ ಸಮಯದಲ್ಲಿ ಗೆಡ್ಡೆಯನ್ನು ಆಕಸ್ಮಿಕವಾಗಿ ಪತ್ತೆ ಹಚ್ಚ ಲಾಯಿತು. ಇದು ಕಾಯಿಲೆ ಬರದಂತೆ ತಡೆಗಟ್ಟುವ ತಪಾಸಣೆಗಳ ಮಹತ್ವ ಮತ್ತು ಗುಣಪಡಿಸುವ ಫಲಿತಾಂಶಗಳನ್ನು ಸಾಧಿಸುವಲ್ಲಿ ಸಕಾಲಿಕ ಚಿಕಿತ್ಸೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ" ಎಂದು ಹೇಳಿದ್ದಾರೆ.
ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಸೌಲಭ್ಯ ನಿರ್ದೇಶಕ ಚಂದ್ರಶೇಖರ್ ಆರ್. ಅವರು ಮಾತನಾಡಿ, "ಈ ಪ್ರಕರಣವು ಅಪರೂಪದ ಮತ್ತು ಸಂಕೀರ್ಣ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಪರಿಣತಿ ಯನ್ನು ಪ್ರತಿಬಿಂಬಿಸುತ್ತದೆ. ಗಾಯದ ಗುರುತುಗಳಿಲ್ಲದ, ಕಡಿಮೆ ನೋವಿನ ಸುಲಭದ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್ ರೋಗಿಯನ್ನು ಗುಣಪಡಿಸುವುದಲ್ಲದೆ, ಅವರು ದೈನಂದಿನ ಜೀವನಕ್ಕೆ ತ್ವರಿತವಾಗಿ ಮರಳಲು ಅನುವು ಮಾಡಿಕೊಡುತ್ತದೆ. ರೋಗಿ-ಕೇಂದ್ರಿತ ಅತ್ಯಾಧುನಿಕ ಚಿಕಿತ್ಸೆ ನೀಡಲು ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.