ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prevent Digestion: ಜೀರ್ಣಕ್ರಿಯೆಗೆ ಸಹಕಾರಿಯಾಗುವ ಈ ಪಾನೀಯಗಳನ್ನು ಸೇವಿಸಿ

ತಜ್ಞರೊಬ್ಬರು ಹೊಟ್ಟೆ ಉಬ್ಬರವನ್ನು ತಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ನಾಲ್ಕು ರೀತಿಯ ಚಹಾಗಳನ್ನು ಶಿಫಾರಸು ಮಾಡಿದ್ದಾರೆ. ಈ ಚಹಾಗಳು ಬೆಳಗಿನ ಉಪಹಾರದ ನಂತರ ಉಂಟಾಗುವ ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ.

ಜೀರ್ಣಕ್ರಿಯೆಗೆ ಸಹಕಾರಿ ಈ ಪಾನೀಯಗಳು

Prevent Digestion -

Profile Pushpa Kumari Oct 7, 2025 8:00 AM

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿದೆ‌. ಅದರಲ್ಲೂ ಅನೇಕ ಮಂದಿ ಊಟದ ನಂತರ ಅಜೀರ್ಣ, ಹೊಟ್ಟೆ ಉಬ್ಬರದಂತಹ (Prevent Digestion) ತೊಂದರೆ ಎದುರಿಸುತ್ತಾರೆ. ಇಂತಹ ಸಮಸ್ಯೆ ಉಂಟಾದಾಗ, ಮೆಡಿಕಲ್‌ನಿಂದ ಮಾತ್ರೆ ತಂದು ನುಂಗುವುದು, ನೀರಿಗೆ ಮಿಕ್ಸ್ ಮಾಡುವ ಪೌಡರ್ ತಂದು ಕುಡಿಯುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಇದರಿಂದ ಆರೋಗ್ಯ (Health) ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸಲು ಹಾಗೂ ಜೀರ್ಣಕಾರಿ ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸರಿಯಾದ ಆಹಾರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ತಜ್ಞರೊಬ್ಬರು ಹೊಟ್ಟೆ ಉಬ್ಬರವನ್ನು ತಡೆಯಲು ಮತ್ತು ಜೀರ್ಣ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ನಾಲ್ಕು ರೀತಿಯ ಚಹಾಗಳನ್ನು ಶಿಫಾರಸು ಮಾಡಿದ್ದಾರೆ. ಈ ಚಹಾಗಳು (Tea) ಬೆಳಗಿನ ಉಪಾಹಾರದ ನಂತರ ಉಂಟಾಗುವ ಅಜೀರ್ಣ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಹೊಟ್ಟೆ ಉಬ್ಬರ ತಡೆಯಲು ಸಹಾಯಕವಾಗುವ ಚಹಾಗಳು

ಗ್ರೀನ್ ಟೀ (Green Tea): ಇದು ಉತ್ಕರ್ಷಣ ನಿರೋಧಕಗಳು (Antioxidants) ಮತ್ತು ಕ್ಯಾಟೆಚಿನ್‌ಗಳನ್ನು (Catechins) ಹೆಚ್ಚಾಗಿ ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಲಿದ್ದು, ಬೆಳಗ್ಗೆ ಸೇವನೆ ಉತ್ತಮ ಆಯ್ಕೆ. ಗ್ರೀನ್ ಟೀ ಕರುಳಿನ ಆರೋಗ್ಯವನ್ನು ಉತ್ತೇಜಿಸುವುದರ ಜತೆಗೆ ಮೆದುಳಿನ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ ಮತ್ತು ಕೆಲವು ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಚ್ಚಾ ಚಹಾ (Matcha): ಇತ್ತೀಚಿನ ದಿನಗಳಲ್ಲಿ ಗ್ರೀನ್​ ಟೀಯೊಂದಿಗೆ ಮಚ್ಚಾ ಟೀ (Matcha tea) ಕೂಡ ಹೆಚ್ಚು ಜನಪ್ರಿಯ. ಇದು ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ ಮತ್ತು ವಿಶೇಷವಾಗಿ ಇಜಿಇಜಿ (EGCG) ಅಂಶದಲ್ಲಿ ಸಮೃದ್ಧವಾಗಿದೆ. ಈ ಪಾನೀಯವು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದ ಚಯಾಪಚಯವನ್ನು ಹೆಚ್ಚಿಸಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ:Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್‌ ದೊರೆಯುತ್ತದೆ?

ಬ್ಲಾಕ್ ಟೀ (Black Tea): ಬ್ಲಾಕ್ ಟೀಯನ್ನು ಭಾರತದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಜನರು ಸೇವಿಸುತ್ತಾರೆ. ಇದು ಬಹಳಷ್ಟು ಪಾಲಿಫಿನಾಲ್‌ಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಬ್ಲಾಕ್ ಟೀ ಟ್ಯಾನಿನ್‌ಗಳನ್ನು ಹೊಂದಿದ್ದು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವ ಮೂಲಕ ಹೃದಯ ಮತ್ತು ಮೆದುಳಿನ ಆರೋಗ್ಯ ಉತ್ತಮಗೊಳ್ಳುವ ಜತೆಗೆ ಆಹ್ಲಾದಕರ ಭಾವನೆ ಉಂಟಾಗುತ್ತದೆ.

ಪುದೀನಾ ಟೀ (Peppermint Tea): ಪುದೀನಾವು ಒಂದು ಆಯರ್ವೇದಿಕ್ ಗುಣಗಳನ್ನು ಹೊಂದಿರುವ ಗಿಡಮೂಲಿಕೆ. ಜೀರ್ಣಕಾರಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು ಇದು ಜೀರ್ಣಾಂಗವ್ಯೂಹದ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ನಿವಾರಣೆ ಮಾಡುತ್ತದೆ. ಈ ಚಹಾಗಳನ್ನು ನಿಮ್ಮ ಬೆಳಗಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಟ್ಟು ಕೊಳ್ಳಲು ಸಹಾಯ ಮಾಡುತ್ತದೆ.