Egg Health Benefits: ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ?
Egg for Health: ರುಚಿ, ಲಭ್ಯತೆ ಮತ್ತು ಅನುಕೂಲದ ಜೊತೆಗೆ ಮೊಟ್ಟೆ ತಿನ್ನುವುದಕ್ಕೆ ಇರುವಂಥ ಮುಖ್ಯ ಕಾರಣಗಳಲ್ಲಿ ಇನ್ನೊಂದೆಂದರೆ, ಅದರಲ್ಲಿರುವ ಪೋಷಕಾಂಶಗಳು. ಸಣ್ಣ ಮಕ್ಕಳಿಂದ ಹಿಡಿದು ವೃದ್ಧ ರವರೆಗೆ ಯಾರೇ ತಿಂದರೂ ಜೀರ್ಣ ವಾಗುವಂಥ ಈ ತಿನಿಸು, ತಯಾರಿಕೆಗೂ ಸುಲಭವೇ. ಹಾಗಾದರೆ ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ? ಇದನ್ನು ಹಸಿಯಾಗಿ ಉಪಯೋಗಿಸಿದರೆ ಹೆಚ್ಚು ಲಾಭವೋ ಅಥವಾ ಬೇಯಿಸಿದ್ದು ಅನುಕೂಲವೋ?

-

ಬೆಂಗಳೂರು: ಕೆಲವು ಆಹಾರಗಳು ವಿಶ್ವದೆಲ್ಲೆಡೆ ಮಾನ್ಯತೆ ಪಡೆದಿರುತ್ತವೆ. ಇದಕ್ಕೆ ಕಾರಣಗಳು ಹಲ ವಾರು ಇರಬಹುದು. ಅವುಗಳ ರುಚಿ, ಲಭ್ಯತೆ, ಪೋಷಕಾಂಶಗಳು, ಹಲವಾರು ವಸ್ತು ಗಳೊಂದಿಗೆ ಅದು ಹೊಂದಿಕೊಳ್ಳುವ ರೀತಿ- ಇಂಥವೆಲ್ಲ ಅದರ ಬಳಕೆಯನ್ನು ಹೆಚ್ಚಿಸುತ್ತವೆ. ಉದಾಹರಣೆಗೆ, ಮೊಟ್ಟೆ (Egg for Health) ಪ್ರಿಯರನ್ನೇ ಗಮನಿಸಿ. ಇವರು ವಿಶ್ವದೆಲ್ಲೆಡೆ ಇದ್ದಾರೆ. ಬೆಳಗಿನ ತಿಂಡಿ ಯಿಂದ ಹಿಡಿದು, ಸುಮ್ಮನೆ ಬಾಯಾಡಲು, ಬ್ರಂಚ್‌ಗೆ, ಮಧ್ಯಾಹ್ನದೂಟ, ರಾತ್ರಿಯ ಲಘು ಊಟಕ್ಕೆ, ಭರ್ಜರಿಯಾದ ಡೆಸೆರ್ಟ್‌ಗೆ- ಹೀಗೆ ಎಂಥಾ ಅಡುಗೆಗೇ ಆದರೂ ಹೊಂದಿಕೊಳ್ಳುವಂಥದ್ದು ಇದು. ರುಚಿ, ಲಭ್ಯತೆ ಮತ್ತು ಅನುಕೂಲದ ಜೊತೆಗೆ ಮೊಟ್ಟೆ ತಿನ್ನುವುದಕ್ಕೆ ಇರುವಂಥ ಮುಖ್ಯ ಕಾರಣ ಗಳಲ್ಲಿ ಇನ್ನೊಂದೆಂದರೆ, ಅದರಲ್ಲಿರುವ ಪೋಷಕಾಂಶಗಳು. ಸಣ್ಣ ಮಕ್ಕಳಿಂದ ಹಿಡಿದು ವೃದ್ಧ ರವರೆಗೆ ಯಾರೇ ತಿಂದರೂ ಜೀರ್ಣ ವಾಗುವಂಥ ಈ ತಿನಿಸು, ತಯಾರಿಕೆಗೂ ಸುಲಭವೇ. ಹಾಗಾದರೆ ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ? ಇದನ್ನು ಹಸಿಯಾಗಿ ಉಪಯೋಗಿಸಿದರೆ ಹೆಚ್ಚು ಲಾಭವೋ ಅಥವಾ ಬೇಯಿಸಿದ್ದು ಅನುಕೂಲವೋ?
ಪ್ರೊಟೀನ್ ಏಕೆ ಬೇಕು?
ಕೇವಲ ಮೊಟ್ಟೆಯಲ್ಲಿರುವ ಪ್ರೊಟೀನ್ ಎಂದಲ್ಲ, ಸಾಮಾನ್ಯವಾಗಿ ಕೇಳು ವುದಾದರೆ ಪ್ರೊಟೀನ್ ನಮಗೇಕೆ ಬೇಕು? ದೇಹ ನಡೆಸುವಂಥ ಪ್ರತಿಯೊಂದು ಸಂಕೀರ್ಣ ಜೈವಿಕ ಚಟುವಟಿಕೆಗಳಿಗೆ ನಮಗೆ ಪ್ರೊಟೀನ್ ಅಗತ್ಯ. ಸ್ನಾಯುಗಳನ್ನು ಬೆಳೆಸುವುದರಿಂದ ಹಿಡಿದು, ಕೋಶ ಗಳ ಬೆಳವಣಿಗೆ, ದುರಸ್ತಿ, ಪ್ರತಿರೋಧಕ ಶಕ್ತಿಯ ವೃದ್ಧಿಗೂ ನಮಗೆ ಪ್ರೊಟೀನ್ ಅಗತ್ಯವಿದೆ. ಹಲವು ರೀತಿಯ ರಾಸಾಯನಿಕ ಚಟುವಟಿಕೆಗಳು ನಡೆಯುವುದಕ್ಕೆ ನಮಗಿದು ಅಗತ್ಯ. ಹೃದಯವನ್ನು ಕ್ಷೇಮವಾಗಿರಿಸಿ, ಮೂಳೆಗಳನ್ನು ಬಲಗೊಳಿಸಿ, ತೂಕ ಇಳಿಸುವುದಕ್ಕೂ ಪ್ರೊಟೀನ್ ಇಲ್ಲದೆ ನಡೆ ಯುವುದಿಲ್ಲ. ಹಾಗಾಗಿ ಮೊಟ್ಟೆ ಪ್ರಿಯರು ನೀವಾಗಿದ್ದರೆ, ಒಂದು ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ, ಇದನ್ನು ಯಾವ ಸ್ವರೂಪದಲ್ಲಿ ಸೇವಿಸಿದರೆ ಹೆಚ್ಚು ಅನುಕೂಲ ಎಂಬುದನ್ನು ತಿಳಿಯುವುದು ಮುಖ್ಯವಾಗುತ್ತದೆ.
ಒಂದೇ ಒಂದು ಮೊಟ್ಟೆ… ಇಲ್ಲ, ಒಂದರಿಂದ ಹೊಟ್ಟೆ ತುಂಬುವುದಿಲ್ಲ! ಆದರೆ ಉತ್ತಮ ಪ್ರಮಾ ಣದ ಪೋಷಕ ಸತ್ವಗಳು ದೇಹಕ್ಕೆ ದೊರೆಯುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ, ಮೊಟ್ಟೆ ಯಲ್ಲಿರುವ ಪ್ರೊಟೀನ್ ಅಂಶವು ಸುಲಭವಾಗಿ ಜೀರ್ಣವಾಗಿ ದೇಹಕ್ಕೆ ದಕ್ಕುವಂಥದ್ದು. ಹಾಗಾಗಿ ಸಾಧಾರಣವಾಗಿ ಎಲ್ಲ ವಯೋಮಾನದವರಿಗೂ ಇದು ಹೊಂದುವಂಥದ್ದು. ಸಣ್ಣದು, ಮಧ್ಯಮ ಗಾತ್ರದ್ದು, ದೊಡ್ಡದು, ಅತಿ ದೊಡ್ಡದು- ಹೀಗೆ ಹಲವು ರೀತಿಯ ಮೊಟ್ಟೆಗಳು ಲಭ್ಯವಿರುವಾಗ ಯಾವುದರಲ್ಲಿ ಎಷ್ಟು ಪ್ರೊಟೀನ್ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?
ಇಲ್ಲಿದೆ ಲೆಕ್ಕಾಚಾರ
ಸಣ್ಣ ಗಾತ್ರದ, ಅಂದರೆ 36ಗ್ರಾಂ ತೂಕದ ಮೊಟ್ಟೆಯಲ್ಲಿ 4.9 ಗ್ರಾಂಗಳಷ್ಟು ಪ್ರೊಟೀನ್ ದೊರೆಯುತ್ತದೆ. 44 ಗ್ರಾಂ ತೂಕದ ಮೊಟ್ಟೆಯಲ್ಲಿ ಸುಮಾರು 5.5 ಗ್ರಾಂ ಪ್ರೊಟೀನ್, 50 ಗ್ರಾಂ ತೂಕದ ಮೊಟ್ಟೆಯಲ್ಲಿ 6.3 ಗ್ರಾಂ ಸುಮಾರಿಗೆ ಪ್ರೊಟೀನ್, 56 ಗ್ರಾಂ ತೂಕದ ದೊಡ್ಡ ಮೊಟ್ಟೆ ಯಲ್ಲಿ ಅಂದಾಜು 7ಗ್ರಾಂ ಪ್ರೊಟೀನ್, 63 ಗ್ರಾಂ ತೂಕದ ಅತಿ ದೊಡ್ಡ ಮೊಟ್ಟೆಗಳಲ್ಲಿ ಅಜಮಾಸು 7.9 ಗ್ರಾಂಗಳಷ್ಟು ಪ್ರೊಟೀನ್ ದೊರೆಯುತ್ತದೆ. ಇದನ್ನು ನೋಡಿದಾಗ, ತಿನ್ನುವ ಮೊಟ್ಟೆಯ ತೂಕದ ಅಂದಾಜಿಗೆ ಎಷ್ಟು ಪ್ರೊಟೀನ್ ನಮಗೆ ದೊರೆಯುತ್ತದೆ ಎಂಬುದನ್ನು ಲೆಕ್ಕ ಹಾಕುವುದು ಕಷ್ಟವಾಗುವುದಿಲ್ಲ.
ಬೇಯಿಸಿದ್ದೊ ಅಲ್ಲವೋ
ಯಾವುದರಲ್ಲಿ ಹೆಚ್ಚು ಪ್ರೊಟೀನ್ ಇರುತ್ತದೆ- ಹಸಿ ಮೊಟ್ಟೆಯಲ್ಲೊ, ಬೇಯಿಸಿದ್ದರಲ್ಲೋ? ಇವೆರಡ ರಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಹಸಿಯಾಗಿದ್ದಾಗ ಇರುವಷ್ಟೇ ಪ್ರೊಟೀನ್ ಬೇಯಿಸಿದ ಮೊಟ್ಟೆಯಿಂದಲೂ ದೊರೆಯುತ್ತದೆ; ಅದೇನು ಕಡಿಮೆಯಾಗುವುದಿಲ್ಲ. ಹಾಗಾಗಿ ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಸೂಕ್ತ.
ಇದನ್ನು ಓದಿ:Health Tips: ಮಳೆಗಾಲದಲ್ಲಿ ಚರ್ಮದ ಸಮಸ್ಯೆ: ನಿಭಾಯಿಸುವುದು ಹೇಗೆ?
ಬಿಳಿ-ಹಳದಿ
ಮೊಟ್ಟೆಯೊಳಗಿನ ಎರಡು ಪ್ರಮುಖ ಭಾಗಗಳಿವು. ಮೊಟ್ಟೆಯಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಮತ್ತು ಕೊಬ್ಬಿನಂಶ ದೊರೆಯುವುದು ಹಳದಿ ಭಾಗದಲ್ಲಾದರೆ, ಬಿಳಿ ಭಾಗವು ಪ್ರೊಟೀನ್ ಗುಢಾಣದಂತಿದೆ. ಕೆಲವು ಅಧ್ಯಯನಗಳ ಪ್ರಕಾರ, ಮೊಟ್ಟೆಯ ಬಿಳಿ ಭಾಗದಲ್ಲಿ ಹತ್ತಿಪ್ಪತ್ತು ರೀತಿಯವಲ್ಲ, ನೂರಾರು ಬಗೆಯ ಪ್ರೊಟೀನ್‌ಗಳು ಅಡಕವಾಗಿವೆ. ಅದರಲ್ಲೂ ದೇಹಕ್ಕೆ ಬೇಕಾದ ಎಲ್ಲಾ 9 ಅಮೈನೊ ಆಮ್ಲಗಳು ಇದರಲ್ಲಿರುವುದರಿಂದ, ಇದರ ಪೌಷ್ಟಿಕಾಂಶದ ಮಹತ್ವ ಕೂಡ ಹೆಚ್ಚಿನದ್ದು.