Health Tips: ಪ್ರತಿ ರಾತ್ರಿ ಬೆತ್ತಲೆಯಾಗಿ ಮಲಗುವುದರಿಂದ ದೇಹಕ್ಕಾಗುವ ಪ್ರಯೋಜನವೇನು?
ನೀವು ರಾತ್ರಿ ಮಲಗುವಾಗ ಬಟ್ಟೆ ಧರಿಸಿದರೆ ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ನಿದ್ರೆಗೆ ಅಡ್ಡಿಪಡಿಸಬಹುದು. ಹಾಗಾಗಿ ರಾತ್ರಿ ಚೆನ್ನಾಗಿ ನಿದ್ರೆ ಬರಲು ಬಟ್ಟೆ ತೆಗೆದು ಬೆತ್ತಲಾಗಿ ಮಲಗಿ. ಇದು ಅಸಾಂಪ್ರದಾಯಿಕವೆಂದು ತೋರುತ್ತದೆ. ಆದರೆ ಬೆತ್ತಲೆಯಾಗಿ ಮಲಗುವುದರಿಂದ ದೇಹಕ್ಕೆ ಅನೇಕ ಪ್ರಯೋಜನವಿದೆ. ಹಾಗಾದರೆ ಬೆತ್ತಲೆಯಲ್ಲಿ ಮಲಗುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.


ನಮ್ಮಲ್ಲಿ ಹೆಚ್ಚಿನವರು ರಾತ್ರಿ ಮೈತುಂಬಾ ಬಟ್ಟೆಯನ್ನು ಧರಿಸಿ ಮಲಗುತ್ತಾರೆ. ಅದರಲ್ಲೂ ಚಳಿ ಇದ್ದಾಗಲಂತೂ ಕೇಳಲೇಬೇಡಿ. ಮುಖವನ್ನು ಬಿಡದೇ ಇಡೀ ದೇಹವನ್ನೇ ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರೆ. ಆದರೆ ಯಾವುದೇ ಬಟ್ಟೆ ಧರಿಸದೆ ಬೆತ್ತಲಾಗಿ ಮಲಗಬೇಕಂತೆ (Sleeping). ಇದು ಅಸಾಂಪ್ರದಾಯಿಕವೆಂದು ತೋರುತ್ತದೆ. ಆದರೆ ಬೆತ್ತಲೆಯಾಗಿ ಮಲಗುವುದರಿಂದ ದೇಹಕ್ಕೆ ಅನೇಕ ಪ್ರಯೋಜನವಿದೆ ಎನ್ನುತ್ತಾರೆ ತಜ್ಞರು. ಹಾಗಾದರೆ ಬೆತ್ತಲೆಯಲ್ಲಿ ಮಲಗುವುದರಿಂದ ಆರೋಗ್ಯಕ್ಕೆ (Health Tips) ಏನೆಲ್ಲ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.
ಉತ್ತಮ ನಿದ್ರೆ ಸಹಕಾರಿ
ದೇಹದ ಉಷ್ಣತೆ ಕಡಿಮೆ ಇದ್ದಾಗದೇಹಕ್ಕೆ ನಿದ್ರೆ ಚೆನ್ನಾಗಿ ಬರುತ್ತದೆ. ರಾತ್ರಿ ನಿದ್ರೆ ಮಾಡುವಾಗ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಆದರೆ ನೀವು ರಾತ್ರಿ ಮಲಗುವಾಗ ಬಟ್ಟೆ ಧರಿಸಿದರೆ ಇದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ನಿದ್ರೆಗೆ ಅಡ್ಡಿಪಡಿಸಬಹುದು. ಹಾಗಾಗಿ ರಾತ್ರಿ ಚೆನ್ನಾಗಿ ನಿದ್ರೆ ಬರಲು ಬಟ್ಟೆ ತೆಗೆದು ಬೆತ್ತಲಾಗಿ ಮಲಗಿ.
ಚರ್ಮದ ಆರೋಗ್ಯಕ್ಕೆ ಉತ್ತಮ
ನೀವು ಬಟ್ಟೆ ಧರಿಸದೆ ಮಲಗಿದಾಗ, ಅನೇಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರದಂತೆ ತಡೆಯಬಹುದು. ಯಾಕೆಂದರೆ ಇದು ನಿಮ್ಮ ಚರ್ಮ ಉಸಿರಾಢಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಸೋಂಕಿನಂತಹ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ರಕ್ತದೊತ್ತಡವನ್ನು ಸುಧಾರಿಸುತ್ತದೆ
ಬಟ್ಟೆ ಇಲ್ಲದೆ ಮಲಗುವುದರಿಂದ ರಕ್ತ ಪರಿಚಲನೆ ಸರಿಯಾಗಿರುತ್ತದೆ. ಮತ್ತು ಇದು ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ, ಬಟ್ಟೆ ಇಲ್ಲದೆ ಮಲಗುವುದರಿಂದ ಆಕ್ಸಿಟೋಸಿನ್ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಮತ್ತು ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ.
ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಳ
ಬೆತ್ತಲೆಯಾಗಿ ಮಲಗುವುದರಿಂದ ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಪುರುಷರ ವೃಷಣಕೋಶ ಸರಿಯಾಗಿ ಕಾರ್ಯನಿರ್ವಹಿಸಲು ತಂಪಾದ ವಾತಾವರಣ ಬೇಕು. ಬಿಗಿಯಾದ ಒಳ ಉಡುಪುಗಳು ತಾಪಮಾನವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಬೆತ್ತಲೆಯಾಗಿ ಮಲಗುವುದು ಪುರುಷರ ಸಂತಾನೋತ್ಪತ್ತಿ ಆರೋಗ್ಯಕ್ಕೂ ಒಳ್ಳೆಯದು ಎಂದು ನಂಬಲಾಗಿದೆ.
ಮಹಿಳೆಯರಲ್ಲಿ ಯೀಸ್ಟ್ ಸೋಂಕು ಕಡಿಮೆಯಾಗುತ್ತದೆ
ಕೆಲವರಿಗೆ, ವಿಶೇಷವಾಗಿ ಮಹಿಳೆಯರಿಗೆ, ಬೆತ್ತಲೆಯಾಗಿ ಮಲಗುವುದರಿಂದ ಜನನಾಂಗದ ಪ್ರದೇಶದಲ್ಲಿ ತೇವಾಂಶವನ್ನು ಕಡಿಮೆ ಮಾಡುವ ಮೂಲಕ ಮತ್ತು ಗಾಳಿಯ ಹರಿವನ್ನು ಉತ್ತೇಜಿಸುವ ಮೂಲಕ ಯೀಸ್ಟ್ ಸೋಂಕನ್ನು ತಡೆಗಟ್ಟಬಹುದು.
ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ
ಬೆತ್ತಲೆಯಾಗಿ ಮಲಗುವುದರಿಂದ ದೇಹದಲ್ಲಿರುವ ಬ್ರೌನ್ ಫ್ಯಾಟ್ ಸಕ್ರಿಯಗೊಳಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ಇದು ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.
ಈ ಸುದ್ದಿಯನ್ನೂ ಓದಿ:Health Tips: ರಕ್ತದೊತ್ತಡವನ್ನು ನಿಯಂತ್ರಿಸಲು ಈ ಆಹಾರ ಕ್ರಮ ಅಳವಡಿಸಿ
ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ
ಬೆತ್ತಲೆಯಾಗಿ ನಿದ್ದೆ ಮಾಡುವಾಗ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಸಾಧಿಸುವುದರಿಂದ, ಬಾಂಧವ್ಯ ಮತ್ತು ವಿಶ್ರಾಂತಿಗೆ ಸಂಬಂಧಿಸಿದ ಹಾರ್ಮೋನ್ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದು ದಂಪತಿಯ ನಡುವಿನ ಅನ್ಯೋನ್ಯತೆಯನ್ನು ಬಲಪಡಿಸುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.