ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ರಕ್ತದೊತ್ತಡವನ್ನು ನಿಯಂತ್ರಿಸಲು ಈ ಆಹಾರ ಕ್ರಮ ಅಳವಡಿಸಿ

Blood Pressure: ಅಧಿಕ ರಕ್ತದೊತ್ತಡ ದೀರ್ಘಾವಧಿಯ ಆರೋಗ್ಯ ಸಮಸ್ಯೆಯಾಗಿದ್ದು ಇದು ನಾನಾ ಕಾಯಿಲೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನಾವು ಸೇವಿಸುವ ಆಹಾರದ ಕಡೆಯೂ ಗಮನಹರಿಸಬೇಕು. ವಿಶೇಷವಾಗಿ ಪೊಟ್ಯಾಸಿಯಮ್ ಭರಿತ ಆಹಾರವನ್ನು ಸೇವಿಸಬೇಕು. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಕ್ತದೊತ್ತಡ ತಡೆಯಲು ಇಲ್ಲಿದೆ ಪರಿಹಾರ ಕ್ರಮ

Potassium-Rich Summer Foods

Profile Pushpa Kumari Jun 28, 2025 6:00 AM

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಟ್ಟ ಆಹಾರ ಪದ್ಧತಿ ಹಾಗೂ ಅನಗತ್ಯ ಜೀವನ ಶೈಲಿಯಿಂದಾಗಿ ಹೆಚ್ಚಿನವರು ಗಂಭೀರ ಕಾಯಿಲೆಗಳನ್ನು ಎದುರಿಸುವಂತಾಗಿದೆ. ಅದರಲ್ಲೂ ರಕ್ತದೊತ್ತಡದ (Blood Pressure) ಸಮಸ್ಯೆ ಇಂದು ಸಾಮಾನ್ಯ ಎಂಬಂತಾಗಿದೆ. ಅಧಿಕ ರಕ್ತದೊತ್ತಡವು ದೀರ್ಘಾವಧಿಯ ಆರೋಗ್ಯ ಸಮಸ್ಯೆಯಾಗಿದ್ದು, ಇದು ನಾನಾ ಕಾಯಿಲೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನಾವು ಸೇವಿಸುವ ಆಹಾರದ ಕಡೆಯೂ ಗಮನಹರಿಸಬೇಕು. ವಿಶೇಷವಾಗಿ ಪೊಟ್ಯಾಸಿಯಮ್ ಭರಿತ ಆಹಾರವನ್ನು ಸೇವಿಸಬೇಕು. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬಾಳೆಹಣ್ಣು

ಮೊದಲೇ ಹೇಳಿದಂತೆ ಪೊಟ್ಯಾಸಿಯಮ್ ಭರಿತ ಆಹಾರವು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿ ತಂತ್ರ ಎಂದು ತಜ್ಞರು ಸಲಹೆ ನೀಡಿದ್ದಾರೆ. ಪೊಟ್ಯಾಶಿಯಂನ ಉತ್ತಮ ಮೂಲವಾದ ಬಾಳೆಹಣ್ಣಿನಲ್ಲಿ ವಿಟಮಿನ್ ಬಿ 6, ವಿಟಮಿನ್ ಸಿ ಮತ್ತು ಮೆಗ್ನೀಶಿಯಂ ಕೂಡ ಇದೆ. ಇವು ನಿಮ್ಮ ರಕ್ತದೊತ್ತಡ ನಿಯಂತ್ರಣ ಮಾಡಲು ಹೆಚ್ಚು ಸಹಕಾರಿ. ಬಾಳೆಹಣ್ಣುಗಳನ್ನು ಸ್ಮೂಥಿಗಳು, ಹಣ್ಣಿನ ಸಲಾಡ್‌ಗಳಲ್ಲಿ ಮಿಶ್ರಣ ಮಾಡುವ ಮೂಲಕ ಸೇವಿಸಿ‌.

ಕಲ್ಲಂಗಡಿ

ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್‌ ಹೆಚ್ಚಾಗಿದ್ದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕಲ್ಲಂಗಡಿ ರಸದಲ್ಲಿ ಅರ್ಜಿನೈನ್ ಎಂಬ ಅಮೈನೊ ಆಮ್ಲವಿದೆ. ಇದು ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ತಿಂಡಿಗೆ ಕಲ್ಲಂಗಡಿಯನ್ನು ಸೇವಿಸಿ ಅಥವಾ ಹಣ್ಣಿನ ಸಲಾಡ್‌ಗೆ ಮಿಶ್ರಣ ಮಾಡಿ ಸವಿಯಿರಿ.

ತೆಂಗಿನ ನೀರು

ತೆಂಗಿನ ನೀರು ನೈಸರ್ಗಿಕ ಎಲೆಕ್ಟ್ರೋಲೈಟ್ ಭರಿತ ಪಾನೀಯ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ಇವೆ. ನಿಮ್ಮನ್ನು ಹೈಡ್ರೀಕರಿಸಲು ಮತ್ತು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಪಾಲಕ್

ಪಾಲಕ್ ಸೊಪ್ಪನ್ನು ವಿವಿಧ ಭಾರತೀಯ ಪಾಕವಿಧಾನಗಳಲ್ಲಿ ಬಳಸುತ್ತಾರೆ. ಇದರಲ್ಲಿ ಪೊಟ್ಯಾಸಿಯಮ್ ಮತ್ತು ಇತರ ಪ್ರಮುಖ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಸಲಾಡ್‌, ದಾಲ್, ಪಾಲಕ್ ಪನೀರ್‌ಗೆ ಸೇರಿಸಿ ಅಥವಾ ಸ್ಮೂಥಿಯನ್ನು ತಯಾರಿಸಿ ಸೇವಿಸಬಹುದು.

ಮಾವು

ಹಣ್ಣುಗಳ ರಾಜ ಮಾವಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಈ ರುಚಿಕರವಾದ ಹಣ್ಣು ಆರೋಗ್ಯಕ್ಕೂ ಉತ್ತಮ. ಅಲ್ಲದೆ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ:Health Tips: ದೇಹದ ತೂಕ ಇಳಿಸಲು ಚಿಂತೆ ಬೇಡ; ಈ ಐದು ಪಾನೀಯ ನಿತ್ಯ ಸೇವಿಸಿದರೆ ಸಾಕು

ಸೌತೆಕಾಯಿ

ಪೊಟ್ಯಾಸಿಯಮ್‌ನಿಂದ ಸಮೃದ್ಧವಾಗಿರುವ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಹೈಡ್ರೇಟಿಂಗ್ ತರಕಾರಿ ಸೌತೆಕಾಯಿ. ಇದು ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಸೌತೆಕಾಯಿಯನ್ನು ಸಲಾಡ್ ಮಾಡಿ ಅಥವಾ ಸ್ವಲ್ಪ ಉಪ್ಪು ಮತ್ತು ನಿಂಬೆ ರಸದೊಂದಿಗೆ ತಿನ್ನಬಹುದು.

ಟೊಮ್ಯಾಟೊ

ಟೊಮ್ಯಾಟೊ ಅನೇಕ ಭಾರತೀಯ ಪಾಕವಿಧಾನಗಳಲ್ಲಿ ಸಾಮಾನ್ಯ ತರಕಾರಿಯಾಗಿದ್ದು‌, ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಅವುಗಳನ್ನು ಸಲಾಡ್‌, ಕರಿ, ಚಟ್ನಿ ಮತ್ತು ಸಾಸ್‌ಗಳಲ್ಲಿ ಬಳಸಲು ಸೂಕ್ತ. ಒಂದು ಲೋಟ ಟೊಮ್ಯಾಟೊ ರಸವನ್ನು ಕುಡಿಯಬಹುದು ಅತವಾ ನಿಮ್ಮ ಊಟದಲ್ಲಿ ತಾಜಾ ಟೊಮ್ಯಾಟೊ ಸೇರಿಸುವುದು ಉತ್ತಮ. ಇದು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತಪ್ಪಿಸಬೇಕಾದ ಆಹಾರಗಳು

ಸಂಸ್ಕರಿಸಿದ ಆಹಾರಗಳು: ಸಂಸ್ಕರಿಸಿದ ಆಹಾರಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ಯಾಕ್ ಮಾಡಿದ ತಿಂಡಿಗಳು ಮತ್ತು ಕರಿದ ಆಹಾರವನ್ನು ತಪ್ಪಿಸಿ.

ಉಪ್ಪಿನಕಾಯಿ: ಉಪ್ಪಿನಕಾಯಿ ಭಾರತೀಯ ಪಾಕ ಪದ್ಧತಿಯ ಪ್ರಮುಖ ಆಹಾರವಾದರೂ ಅವುಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಉಪ್ಪಿನಕಾಯಿ ತಿನ್ನುವುದನ್ನು ಸೀಮಿತಗೊಳಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಕರಿದ ಆಹಾರಗಳು: ಸಮೋಸಾ ಮತ್ತು ಪಕೋಡಾಗಳಂತಹ ಕರಿದ ಆಹಾರ ರುಚಿಕರವಾಗಿರುತ್ತವೆ. ಆದರೆ ಇದರಲ್ಲಿನ ಹೆಚ್ಚಿನ ಕೊಬ್ಬು ಮತ್ತು ಸೋಡಿಯಂ ಮಟ್ಟಗಳಿಂದಾಗಿ ರಕ್ತದೊತ್ತಡವನ್ನು ಹೆಚ್ಚಾಗುತ್ತದೆ.