ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BRBNMPL Recruitment 2025: ರಿಸರ್ವ್‌ ಬ್ಯಾಂಕ್‌ ನೋಟ್‌ ಮುದ್ರಣ ಪ್ರೈವೇಟ್‌ ಲಿಮಿಟೆಡ್‌ನಲ್ಲಿದೆ 88 ಹುದ್ದೆ; ಐಟಿಐ ಪಾಸಾದವರು ಅಪ್ಲೈ ಮಾಡಿ

Job Guide: ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟ್‌ ಮುದ್ರಣ ಪ್ರೈವೇಟ್‌ ಲಿಮಿಟೆಡ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಡೆಪ್ಯುಟಿ ಮ್ಯಾನೇಜರ್‌, ಪ್ರೋಸೆಸ್‌ ಅಸಿಸ್ಟಂಟ್‌ ಸೇರಿ ಒಟ್ಟು 88 ಹುದ್ದೆ ಖಾಲಿ ಇದ್ದು, ಐಟಿಐ, ಡಿಪ್ಲೋಮ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಆಗಸ್ಟ್‌ 31.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಮೈಸೂರು ಮತ್ತು ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿ ಪ್ರೆಸ್‌ ಹೊಂದಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟ್‌ ಮುದ್ರಣ ಪ್ರೈವೇಟ್‌ ಲಿಮಿಟೆಡ್‌ (Bharatiya Reserve Bank Note Mudran Private Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BRBNMPL Recruitment 2025). ಡೆಪ್ಯುಟಿ ಮ್ಯಾನೇಜರ್‌, ಪ್ರೋಸೆಸ್‌ ಅಸಿಸ್ಟಂಟ್‌ ಸೇರಿ ಒಟ್ಟು 88 ಹುದ್ದೆ ಖಾಲಿ ಇದ್ದು, ಐಟಿಐ, ಡಿಪ್ಲೋಮ ಪಾಸಾದವರು ಅರ್ಜಿ ಸಲ್ಲಿಸಬಹುದು (Job Guide). ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಆಗಸ್ಟ್‌ 31.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಡೆಪ್ಯುಟಿ ಮ್ಯಾನೇಜರ್‌ (ಪ್ರಿಂಟಿಂಗ್ ಎಂಜಿನಿಯರಿಂಗ್‌) - 10 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ. ಅಥವಾ ಬಿ.ಟೆಕ್‌, ಪಿಜಿ ಡಿಪ್ಲೋಮಾ, ಸ್ನಾತಕೋತ್ತರ ಪದವಿ

ಡೆಪ್ಯುಟಿ ಮ್ಯಾನೇಜರ್‌ (ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌)-‌ 3 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ. ಅಥವಾ ಬಿ.ಟೆಕ್‌, ಪಿಜಿ ಡಿಪ್ಲೋಮಾ, ಸ್ನಾತಕೋತ್ತರ ಪದವಿ

ಡೆಪ್ಯುಟಿ ಮ್ಯಾನೇಜರ್‌ (ಕಂಪ್ಯೂಟರ್‌ ಸೈನ್ಸ್‌)-2 ಹುದ್ದೆ, ವಿದ್ಯಾರ್ಹತೆ:

ಡೆಪ್ಯುಟಿ ಮ್ಯಾನೇಜರ್‌ (ಜನರಲ್‌ ಅಡ್ಮಿನಿಷ್ಟ್ರೇಶನ್‌)- 2 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ. ಅಥವಾ ಬಿ.ಟೆಕ್‌, ಪಿಜಿ ಡಿಪ್ಲೋಮಾ, ಸ್ನಾತಕೋತ್ತರ ಪದವಿ

ಪ್ರೋಸೆಸ್‌ ಅಸಿಸ್ಟಂಟ್‌ ಗ್ರೇಡ್‌-I (ಟ್ರೈನಿ) - 64 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮ, ಐಟಿಐ

ವಯೋಮಿತಿ

ಡೆಪ್ಯುಟಿ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 31 ವರ್ಷ ಹಾಗೂ ಪ್ರೋಸೆಸ್‌ ಅಸಿಸ್ಟಂಟ್‌ ಗ್ರೇಡ್‌-I (ಟ್ರೈನಿ)- ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಪ್ರೋಸೆಸ್‌ ಅಸಿಸ್ಟಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 400 ರೂ. ಮೂಲಕ ಸಲ್ಲಿಸಬೇಕು. ಡೆಪ್ಯುಟಿ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 600 ರೂ. ಸಲ್ಲಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಹಿಳಾ/ಮಾಜಿ ಸೈನಿಕ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ.

ಈ ಸುದ್ದಿಯನ್ನೂ ಓದಿ: CSA Recruitment 2025: ದೇಶಾದ್ಯಂತ ಬರೋಬ್ಬರಿ 10,277 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS; ಪದವಿ ಪೂರೈಸಿದವರು ಅಪ್ಲೈ ಮಾಡಿ

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಲಿಖಿತ ಪರೀಕ್ಷೆ, ಸ್ಕಿಲ್‌ ಟೆಸ್ಟ್‌ (ಅಸಿಸ್ಟಂಟ್‌ ಹುದ್ದೆ), ಸಂದರ್ಶನ (ಮ್ಯಾನೇಜರ್‌ ಹುದ್ದೆ) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ಅಸಿಸ್ಟಂಟ್‌ ಹುದ್ದೆಗೆ 24,000 ರೂ. - 24,500 ರೂ. ಮತ್ತು ಮ್ಯಾನೇಜರ್‌ ಹುದ್ದೆಗೆ 56,100 ರೂ. - 88,638 ರೂ. ಮಾಸಿಕ ವೇತನ ದೊರೆಯಲಿದೆ.

BRBNMPL Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (
    https://ibpsonline.ibps.in/brrnmplmay25/)
  • ಹೆಸರು ನೋಂದಾಯಿಸಿ.
  • ಎಚ್ಚರಿಕೆಯಿಂದ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿರುವವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: brbnmpl.co.inಗೆ ಭೇಟಿ ನೀಡಿ.