ಬೆಂಗಳೂರು, ನ.18: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಹಿಂಬಾಕಿ ಹುದ್ದೆ ಸೇರಿ ಒಟ್ಟು 224 ಹುದ್ದೆಗಳಿಗೆ ನೇರ ನೇಮಕಾತಿ (BWSSB Recruitment 2025) ಮಾಡುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಜಲಮಂಡಳಿಯ ಹುದ್ದೆಗಳ (Job News) ನೇಮಕಾತಿಗೆ ಅರ್ಹತೆ ಪಡೆಯಲು ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕು. ಈ ಬಗ್ಗೆ ನ.15ರಂದು ಕೆಇಎ (KEA) ಅಧಿಸೂಚನೆ ಹೊರಡಿಸಿದೆ.
ನೇಮಕಾತಿ ವಿವರ
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ನವೆಂಬರ್ 17
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 25
ಶುಲ್ಕ ಪಾವತಿಗೆ ಕೊನೆಯ ದಿನಾಂಕ: ನವೆಂಬರ್ 26
ಬೆಂಗಳೂರು ಜಲಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳು
| ಹುದ್ದೆಯ ವಿವರ | ವೇತನ ಶ್ರೇಣಿ | ಕಲ್ಯಾಣ ಕರ್ನಾಟಕ ವೃಂದ | ಉಳಿಕೆ ಮೂಲ ವೃಂದ |
|---|---|---|---|
| 1. ಸಹಾಯಕ ಅಭಿಯಂತರರು(ಸಿವಿಲ್) (ಗ್ರೂಪ್-ಬಿ) | 53250-115460 ರೂ. | 05 | 13 |
| 2. ಸಹಾಯಕ ಅಭಿಯಂತರರು(ಎಲೆಕ್ಟ್ರಿಕಲ್) (ಗ್ರೂಪ್ -ಬಿ) | 53250-115460 ರೂ. | 01 | 04 |
| 3. ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) (ಗ್ರೂಪ್ -ಬಿ) | 53250-115460 ರೂ. | 01 | 02 |
| 4. ಸಹಾಯಕ ಅಭಿಯಂತರರು(ಕಂಪ್ಯೂಟರ್ ಸೈನ್ಸ್) (ಗ್ರೂಪ್-ಬಿ) | 53250-115460 ರೂ. | - | 01 |
| 5. ಕಿರಿಯ ಅಭಿಯಂತರರು (ಸಿವಿಲ್) (ಗ್ರೂಪ್-ಸಿ) | 39170-99410 ರೂ. | 03 | 20 |
| 6. ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್) (ಗ್ರೂಪ್-ಸಿ) | 39170-99410 ರೂ. | 02 | 20+01 (ಹಿಂಬಾಕಿ) |
| 7. ಕಿರಿಯ ಅಭಿಯಂತರರು (ಮೆಕ್ಯಾನಿಕಲ್) (ಗ್ರೂಪ್-ಸಿ) | 39170-99410 ರೂ.- | 01 | 10 |
| 8. ಸಹಾಯಕ (ಗ್ರೂಪ್ -ಸಿ) | 34510-94410 ರೂ. | 3+2 (ಹಿಂಬಾಕಿ) | 03 (ಹಿಂಬಾಕಿ) |
| 9. ಕಿರಿಯ ಸಹಾಯಕ (ಗ್ರೂಪ್-ಸಿ) | 27750-86910 ರೂ. | 13+2 (ಹಿಂಬಾಕಿ) | 50 |
| 10. ಮಾಪನ ಓದುಗ (ಗ್ರೂಪ್-ಸಿ) | 27750-86910 ರೂ. | 21+5 (ಹಿಂಬಾಕಿ) | 37 (ಹಿಂಬಾಕಿ) |
| 11. ಎರಡನೇ ದರ್ಜೆ ಉಗ್ರಾಣ ಪಾಲಕ | 27750-86910 ರೂ. | - | 4 (ಹಿಂಬಾಕಿ) |
| ಒಟ್ಟು ಹುದ್ದೆಗಳ ಸಂಖ್ಯೆ-224 | 50+9 (ಹಿಂಬಾಕಿ) | 120+45 (ಹಿಂಬಾಕಿ) |
ಶೈಕ್ಷಣಿಕ ವಿದ್ಯಾರ್ಹತೆ:
- ಸಹಾಯಕ ಅಭಿಯಂತರರು(ಸಿವಿಲ್) (ಗ್ರೂಪ್-ಬಿ): ಸಿವಿಲ್ ಎಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ, ಕಂಪ್ಯೂಟರ್ ಬೇಸಿಕ್ಸ್ (6 ತಿಂಗಳ ಕೋರ್ಸ್)
- ಸಹಾಯಕ ಅಭಿಯಂತರರು(ಎಲೆಕ್ಟ್ರಿಕಲ್) (ಗ್ರೂಪ್-ಬಿ): ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ, ಕಂಪ್ಯೂಟರ್ ಬೇಸಿಕ್ಸ್ (6 ತಿಂಗಳ ಕೋರ್ಸ್)
- ಸಹಾಯಕ ಅಭಿಯಂತರರು (ಗ್ರೂಪ್-ಬಿ) (ಮೆಕ್ಯಾನಿಕಲ್): ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಥವಾ ತತ್ಸಮಾನ ವಿದ್ಯಾರ್ಹತೆ, ಕಂಪ್ಯೂಟರ್ ಬೇಸಿಕ್ಸ್ (6 ತಿಂಗಳ ಕೋರ್ಸ್)
- ಸಹಾಯಕ ಅಭಿಯಂತರರು(ಕಂಪ್ಯೂಟರ್ ಸೈನ್ಸ್) (ಗ್ರೂಪ್ -ಬಿ): ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ, ಕಂಪ್ಯೂಟರ್ ಬೇಸಿಕ್ಸ್ (6 ತಿಂಗಳ ಕೋರ್ಸ್)
- ಕಿರಿಯ ಅಭಿಯಂತರರು(ಸಿವಿಲ್) (ಗ್ರೂಪ್-ಸಿ): 3 ವರ್ಷಗಳ ಡಿಪ್ಲೊಮಾ ಸಿವಿಲ್ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿ ಅಥವಾ ತತ್ಸಮಾನ ವಿದ್ಯಾರ್ಹತೆ. ಕಂಪ್ಯೂಟರ್ ಬೇಸಿಕ್ಸ್ (6 ತಿಂಗಳ ಕೋರ್ಸ್)
- ಕಿರಿಯ ಅಭಿಯಂತರರು(ಎಲೆಕ್ಟಿಕಲ್) (ಗ್ರೂಪ್-ಸಿ): 3 ವರ್ಷಗಳ ಡಿಪ್ಲೊಮಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿ, ಕಂಪ್ಯೂಟರ್ ಬೇಸಿಕ್ಸ್ (6 ತಿಂಗಳ ಕೋರ್ಸ್)
- ಕಿರಿಯ ಅಭಿಯಂತರರು(ಮೆಕ್ಯಾನಿಕಲ್) (ಗ್ರೂಪ್ -ಸಿ): 3 ವರ್ಷಗಳ ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿ, ಕಂಪ್ಯೂಟರ್ ಬೇಸಿಕ್ಸ್ (6 ತಿಂಗಳ ಕೋರ್ಸ್)
- ಸಹಾಯಕ (ಗ್ರೂಪ್-ಸಿ): ಯಾವುದೇ ಪದವಿ, ಕಂಪ್ಯೂಟರ್ ಬೇಸಿಕ್ಸ್ (1 ವರ್ಷದ ಕೋರ್ಸ್)
- ಕಿರಿಯ ಸಹಾಯಕ (ಗ್ರೂಪ್-ಸಿ): ದ್ವಿತೀಯ ಪಿಯುಸಿ, ಕಂಪ್ಯೂಟರ್ ಬೇಸಿಕ್ಸ್ (1 ವರ್ಷದ ಕೋರ್ಸ್)
- ಮಾಪನ ಓದುಗ (ಗ್ರೂಪ್-ಸಿ): ದ್ವಿತೀಯ ಪಿಯುಸಿ, ಕಂಪ್ಯೂಟರ್ ಬೇಸಿಕ್ಸ್ (6 ತಿಂಗಳ ಕೋರ್ಸ್)
- ಎರಡನೇ ದರ್ಜೆ ಉಗ್ರಾಣಪಾಲಕ (ಗ್ರೂಪ್-ಸಿ): ದ್ವಿತೀಯ ಪಿಯುಸಿ ಜತೆ ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಕೋರ್ಸ್. ಕಂಪ್ಯೂಟರ್ ಬೇಸಿಕ್ಸ್ (1 ವರ್ಷದ ಕೋರ್ಸ್)
ಸೂಚನೆ:
- ಅಭ್ಯರ್ಥಿಗಳು ಹುದ್ದೆಗೆ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಗಳಲ್ಲಿ ಒಟ್ಟಾರೆ ಕನಿಷ್ಠ ಶೇ. 50 ಅಂಕಗಳಿಸಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
- ತಾಂತ್ರಿಕ ಹುದ್ದೆಗಳಿಗೆ ಸಂಬಂಧಿಸಿ ಕಂಪ್ಯೂಟರ್ ಸಾಕ್ಷರತೆಗಾಗಿ ಎಂಜಿನಿಯರಿಂಗ್ / ಡಿಪ್ಲೊಮಾದಲ್ಲಿ ಗಣಕಯಂತ್ರ ವ್ಯಾಸಂಗ ವಿದ್ಯಾರ್ಹತೆಯಲ್ಲಿನ ಒಂದು ವಿಷಯವಾಗಿ ಅಭ್ಯಸಿಸಿರುವುದನ್ನು ಗಣಕಯಂತ್ರ ವ್ಯಾಸಂಗವಾಗಿ ಹಾಗೂ ಇತರೆ ತಾಂತ್ರಿಕೇತರ ಹುದ್ದೆಗಳಿಗೆ ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯಲ್ಲಿ ಗಣಕಯಂತ್ರ ವ್ಯಾಸಂಗವನ್ನು ಒಂದು ವಿಷಯವನ್ನಾಗಿ ಅಭ್ಯಸಿಸಿದ್ದಲ್ಲಿ ಅದನ್ನು ಗಣಕಯಂತ್ರ ವ್ಯಾಸಂಗವಾಗಿ ಪರಿಗಣಿಸಲಾಗುವುದು.
- ಮೇಲ್ಕಂಡ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಹೊರತುಪಡಿಸಿ, ಇತರೆ ವಿದ್ಯಾರ್ಹತೆಯಲ್ಲಿ ಅರ್ಜಿ ಸಲ್ಲಿಸಿ, ಮುಂದಿನ ಪ್ರಕ್ರಿಯೆಯಲ್ಲಿ ಅನರ್ಹಗೊಂಡಲ್ಲಿ ನಾವು ಜವಾಬ್ದಾರಿಯಾಗಿರುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ವಯೋಮಿತಿ:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ತುಂಬಿರತಕ್ಕದ್ದು ಹಾಗೂ ಈ ಕೆಳಕಂಡ ಗರಿಷ್ಟ ವಯೋಮಿತಿಯನ್ನು ಮೀರಿರಬಾರದು. ಹಾಗೆಯೇ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.
ಗರಿಷ್ಠ ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು: 38 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ: 41 ವರ್ಷ
ಎಸ್‌ಸಿ, ಎಸ್‌ಟಿ, ಪ್ರವರ್ಗ-1: 43 ವರ್ಷ
ಶುಲ್ಕ ಎಷ್ಟು?
ಸಾಮಾನ್ಯ, ಇತರೆ ಪ್ರವರ್ಗ (ಪ್ರವರ್ಗ 2ಎ, 2ಬಿ, 3ಎ, 3ಬಿ): 750 ರೂ.
ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ, ತೃತೀಯ ಲಿಂಗ: 500 ರೂ.
ವಿಶೇಷ ಚೇತನರು: 250 ರೂ.
(ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಬೇಕಾಗಿರುತ್ತದೆ. ವಿಶೇಷ ಚೇತನ ಅಭ್ಯರ್ಥಿ ಎಂದರೆ ಶೇ.40 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರು ಮತ್ತು ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಹೊಂದಿರುವವರು).
ಇದನ್ನೂ ಓದಿ : KEA Recruitment 2025: ವಿವಿಧ ಇಲಾಖೆಗಳ 708 ಹುದ್ದೆ ನೇಮಕಾತಿ; ಅರ್ಜಿ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ
ಅರ್ಜಿ ಸಲ್ಲಿಸುವ ವಿಧಾನ:
ಕೆಇಎ ವೆಬ್ ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿ ಭರ್ತಿ ಮಾಡಬೇಕು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ / ತಿದ್ದುಪಡಿ ಮಾಡಲು ಅವಕಾಶವಿಲ್ಲ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ, ಒಂದೇ ಅರ್ಜಿಯಲ್ಲಿ ಹುದ್ದೆಗಳನ್ನು ಆಯ್ಕೆ ಮಾಡಿ ಸಲ್ಲಿಸಬೇಕು. (ಕೆಇಎ ಮುಖಪುಟದಲ್ಲಿ ನೇಮಕಾತಿ ಕೆಟಗರಿ ಮೇಲೆ ಕ್ಲಿಕ್ ಮಾಡಿದರೆ ವಿವಿಧ ಇಲಾಖೆಗಳ ನೇಮಕಾತಿ-2025ರ ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್, ಅಧಿಸೂಚನೆ ಸೇರಿ ಇನ್ನಿತರ ಮಾಹಿತಿ ಸಿಗುತ್ತದೆ)
ಬಿಡಬ್ಲ್ಯುಎಸ್‌ಎಸ್‌ಬಿ ನೇಮಕಾತಿಯ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ