ನವದೆಹಲಿ: ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ (ಗ್ರಾಮೀಣ ಅಂಚೆ ಸೇವಕ) ಜುಲೈ 2026ರ ಎರಡನೇ ಹಂತದ ಅಧಿಕೃತ ನೇಮಕಾತಿ (India Post GDS Recruitment 2026) ಅಧಿಸೂಚನೆಯನ್ನು ಪ್ರಕಟಿಸಿದೆ. ಬ್ರಾಂಚ್ ಪೋಸ್ಟ್‌ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ (ABPM) ಹಾಗೂ ಡಾಕ್ ಸೇವಕ್ ಹುದ್ದೆಗಳು ಸೇರಿದಂತೆ ಒಟ್ಟು 25,000ಕ್ಕೂ ಅಧಿಕ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 2
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 21
ಅರ್ಜಿ ತಿದ್ದುಪಡಿಗೆ ಅವಕಾಶ: ಸೆ. 23 ರಿಂದ 24
ಮೊದಲ ಮೆರಿಟ್ ಪಟ್ಟಿ ಪ್ರಕಟಣೆ: ಅಕ್ಟೋಬರ್ 2026
ಆಯ್ಕೆ ವಿಧಾನ ಹೇಗೆ?
ಈ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಬದಲಿಗೆ, 10ನೇ ತರಗತಿಯಲ್ಲಿ ಪಡೆದ ಗರಿಷ್ಠ ಅಂಕಗಳ (Merit List) ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಮೆರಿಟ್ ಪಟ್ಟಿ ಪ್ರಕಟವಾದ ನಂತರ ಮೂಲ ದಾಖಲಾತಿಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ನಡೆಸಿ ನೇಮಕಾತಿ ಆದೇಶ ನೀಡಲಾಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ
ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ತೇರ್ಗಡೆಯಾಗಿರಬೇಕು. ಗಣಿತ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ ವಿಷಯಗಳನ್ನಾಗಿ ಓದಿರಬೇಕು ಹಾಗೂ ಸ್ಥಳೀಯ ಭಾಷೆಯ ಜ್ಞಾನ ಅತ್ಯಗತ್ಯ.
ವಯೋಮಿತಿ
ಸೆಪ್ಟೆಂಬರ್ 21, 2026ರ ಅನ್ವಯ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ರಾಜ್ಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕಹಿ ಸುದ್ದಿ; ಇನ್ನುಮುಂದೆ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೂ ನೆಗೆಟಿವ್ ಅಂಕ!
ವೇತನ ಶ್ರೇಣಿ:
ಬಿಪಿಎಂ (BPM): ಮಾಸಿಕ 12,000 ರಿಂದ 29,380 ರೂ.
ಎಬಿಪಿಎಂ / ಡಾಕ್ ಸೇವಕ್ (ABPM / Dak Sevak): 10,000 ರಿಂದ ₹24,470
ಕರ್ನಾಟಕ ಅಂಚೆ ವೃತ್ತದ ವಿಭಾಗವಾರು ಖಾಲಿ ಹುದ್ದೆಗಳು
- ಬಾಗಲಕೋಟೆ- 16
- ಬಳ್ಳಾರಿ- 34
- ಬೆಳಗಾವಿ-19
- ಬೆಂಗಳೂರು ಪೂರ್ವ- 53
- ಬೆಂಗಳೂರು ಜಿಪಿಒ- 4
- ಬೆಂಗಳೂರು ಸಾರ್ಟಿಂಗ್ ಡಿವಿಷನ್- 13
- ಬೆಂಗಳೂರು ದಕ್ಷಿಣ- 49
- ಬೆಂಗಳೂರು ಪಶ್ಚಿಮ-27
- ಬೀದರ್-21
- ಚನ್ನಪಟ್ಟಣ- 11
- ಚಿಕ್ಕಮಗಳೂರು-49
- ಚಿಕ್ಕೋಡಿ- 14
- ಚಿತ್ರದುರ್ಗ-16
- ದಾವಣಗೆರೆ-19
- ಧಾರವಾಡ- 17
- ಗದಗ-16
- ಗೋಕಾಕ್-9
- ಹಾಸನ- 47
- ಹಾವೇರಿ-17
- ಕಲಬುರಗಿ-20
- ಕಾರವಾರ-43
- ಕೊಡಗು-46
- ಕೋಲಾರ-51
- ಕೊಪ್ಪಳ-13
- ಮಂಡ್ಯ-42
- ಮಂಗಳೂರು-28
- ಮೈಸೂರು-26
- ನಂಜನಗೂಡು-30
- ಪುತ್ತೂರು-56
- ರಾಯಚೂರು-27
- ಆರ್‌ಎಂಎಸ್ ಎಚ್‌ಬಿ-1
- ಆರ್‌ಎಂಎಸ್ ಕ್ಯೂ-4
- ಶಿವಮೊಗ್ಗ-55
- ಶಿರಸಿ-36
- ತುಮಕೂರು-64
- ಉಡುಪಿ-60
- ವಿಜಯಪುರ- 34
- ಯಾದಗಿರಿ- 29
ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ