ಬೆಂಗಳೂರು: ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ ಸಿಕ್ಕಿದೆ. ಕರ್ನಾಟಕ ರಾಜ್ಯದ ಕೃಷಿ ಇಲಾಖೆಯ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲವೃಂದದಲ್ಲಿ ಖಾಲಿಯಿರುವ ಒಟ್ಟು 890 ಕೃಷಿ ಅಧಿಕಾರಿ (ಎಒ), ಸಹಾಯಕ ಕೃಷಿ ಅಧಿಕಾರಿ (ಎಎಒ) ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ನೇಮಕಾತಿ ವಿವರ
ಹುದ್ದೆ ಹೆಸರು: ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ
ಒಟ್ಟು ಹುದ್ದೆಗಳ ಸಂಖ್ಯೆ-890: ಕಲ್ಯಾಣ ಕರ್ನಾಟಕ-258, ಉಳಿಕೆ ಮೂಲವೃಂದ-632
ವೇತನ ಶ್ರೇಣಿ: ಕೃಷಿ ಅಧಿಕಾರಿ: 69,250-1,34,200 ರೂ., ಸಹಾಯಕ ಕೃಷಿ: 65,950- 1,24,900 ರೂ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 19-04-2026
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 10-05-2026
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 12-05-2026
ವಿದ್ಯಾರ್ಹತೆ:
ಅಭ್ಯರ್ಥಿಗಳು ಭಾರತದ ಕಾನೂನು ರೀತ್ಯಾ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಥವಾ AICTE ಯಿಂದ ಮಾನ್ಯತೆ ಪಡೆದು ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ಐ.ಸಿ.ಎ.ಆರ್. / ಎ.ಐ.ಸಿ.ಟಿ.ಇ ಮಾನ್ಯತೆ ಇಲ್ಲದೆ ನಡೆಸುತ್ತಿರುವ ಅಂಚೆ ಮತ್ತು ದೂರ ಶಿಕ್ಷಣದ ಕೋರ್ಸುಗಳನ್ನು ಹಾಗೂ ಅಂಚೆ ಮತ್ತು ದೂರ ಶಿಕ್ಷಣದ ಮುಖಾಂತರ ಪಡೆದ ತಾಂತ್ರಿಕ ಪದವಿಗಳನ್ನು ನೇಮಕಾತಿಗೆ ಪರಿಗಣಿಸುವುದಿಲ್ಲ.
- ಶೇ.85ರಷ್ಟು ಕೃಷಿ ಅಧಿಕಾರಿ ಹುದ್ದೆಗಳಿಗೆ: ಬಿಎಸ್‌ಸಿ (ಕೃಷಿ) / ಬಿಎಸ್‌ಸಿ (ಆನರ್ಸ್) ಕೃಷಿ
- ಶೇ.15 ರಷ್ಟು ಕೃಷಿ ಅಧಿಕಾರಿ ಹುದ್ದೆಗಳಿಗೆ: ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) /ಬಿ.ಟೆಕ್(ಆಹಾರ ತಂತ್ರಜ್ಞಾನ) / ಬಿಎಸ್‌ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) / ಬಿಎಸ್‌ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ / ಬಿಎಸಿ (ಆನರ್ಸ್) ಅಗ್ರಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ /ಬಿಎಸ್‌ಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ) / ಬಿ.ಟೆಕ್(ಜೈವಿಕ ತಂತ್ರಜ್ಞಾನ) / ಬಿಎಸ್‌ಸಿ (ಅಗ್ರಿಕಲ್ಚರಲ್ ಎಂಜಿನಿಯರಿಂಗ್)/ಬಿ.ಟೆಕ್(ಅಗ್ರಿಕಲ್ಪರಲ್ ಎಂಜಿನಿಯರಿಂಗ್)
- ಶೇ.85 ರಷ್ಟು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ: ಬಿಎಸ್‌ಸ್ಸಿ (ಕೃಷಿ) / ಬಿಎಸ್‌ಸ್ಸಿ (ಆನರ್ಸ್) ಕೃಷಿ
- ಶೇ.15 ರಷ್ಟು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ: ಬಿ.ಟೆಕ್(ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) /ಬಿ.ಟೆಕ್(ಆಹಾರ ತಂತ್ರಜ್ಞಾನ) / ಬಿಎಸ್‌ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) / ಬಿಎಸ್‌ಸಿ (ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ / ಬಿಎಸ್‌ಸಿ (ಆನರ್ಸ್) ಅಗ್ರಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ /ಬಿಎಸ್‌ಸಿ (ಕೃಷಿ ಜೈವಿಕ ತಂತ್ರಜ್ಞಾನ) /ಬಿ.ಟೆಕ್(ಜೈವಿಕ ತಂತ್ರಜ್ಞಾನ) / ಬಿಎಸ್‌ಸಿ (ಅಗ್ರಿಕಲ್ಬರಲ್ ಇಂಜಿನಿಯರಿಂಗ್/ಬಿ.ಟೆಕ್(ಅಗ್ರಿಕಲ್ಚರಲ್ ಎಂಜಿನಿಯರಿಂಗ್)
DCC Bank Recruitment: ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ; 10th, PU ಆದವರಿಗೆ ಉದ್ಯೋಗ, ಆಸಕ್ತರು ಅರ್ಜಿ ಹಾಕಿ
ವಯೋಮಿತಿ:
ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ನಿರ್ದಿಷ್ಟ ಪಡಿಸಿರುವಂತೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷಗಳು ತುಂಬಿರಬೇಕು ಹಾಗೂ 29.01.2026ರಂದು ಸರ್ಕಾರ ಆದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಅಳವಡಿಸಿಕೊಂಡ ನಂತರ ಅಭ್ಯರ್ಥಿಗಳು ಈ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು;
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: 40 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: 43 ವರ್ಷಗಳು
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ: 45 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಬೇಕು. ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ, ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
ಅರ್ಜಿ ಶುಲ್ಕ
- ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (2ಎ, 2ಬಿ, 3ಎ, 3ಬಿ): 750 ರೂ.
- ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ, ತೃತೀಯ ಲಿಂಗಿ ಅಭ್ಯರ್ಥಿಗಳು: 500 ರೂ.
- ವಿಶೇಷ ಚೇತನ ಅಭ್ಯರ್ಥಿಗಳಿಗೆ: 250 ರೂ.
ಪರೀಕ್ಷಾ ವಿಧಾನ ಹಾಗೂ ಪಠ್ಯಕ್ರಮ ಸೇರಿ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಕಂಡ ಲಿಂಕ್ ಮೂಲಕ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಳ್ಳಿ.