ಬೆಂಗಳೂರು: 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-'ಎ' ಮತ್ತು ಗ್ರೂಪ್- 'ಬಿ' ವೃಂದದ 384 ಹುದ್ದೆಗಳ ನೇಮಕಾತಿಗೆ 2024ರ ಡಿ.29ರಂದು ನಡೆದಿದ್ದ ಪೂರ್ವಭಾವಿ ಮರುಪರೀಕ್ಷೆ ಫಲಿತಾಂಶವನ್ನು (KAS Prelims Result) ಕರ್ನಾಟಕ ಲೋಕಸೇವಾ ಆಯೋಗ (KPSC) ಬಿಡುಗಡೆ ಮಾಡಿದೆ. ಪ್ರಿಲಿಮ್ಸ್ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:15ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಕಳಪೆ ಭಾಷಾಂತರ ಕಾರಣಕ್ಕೆ ಮೊದಲ ಬಾರಿ ನಡೆದಿದ್ದ ಪೂರ್ವಭಾವಿ ಪರೀಕ್ಷೆ ರದ್ದಾಗಿದ್ದು, ಬಳಿಕ 2024ರ ಡಿ.29ರಂದು ನಡೆದಿದ್ದು ಪ್ರಿಲಿಮ್ಸ್ ಮರು ಪರೀಕ್ಷೆಯ ಫಲಿತಾಂಶ ಇದೀಗ ಬಿಡುಗಡೆಯಾಗಿದೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್-'ಎ' ಮತ್ತು ಗ್ರೂಪ್- 'ಬಿ' ವೃಂದದ 384 ಹುದ್ದೆಗಳ ನೇಮಕಾತಿಗೆ 2024ರ ಫೆ. 26ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಮೊದಲಿಗೆ ಕಳೆದ ವರ್ಷ ಆಗಸ್ಟ್ 29ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆದಿತ್ತು. ಆದರೆ, ಪ್ರಶ್ನೆ ಪತ್ರಿಕೆಯನ್ನು ಕಳಪೆಯಾಗಿ ಭಾಷಾಂತರ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರಿಂದ ಮರು ಪರೀಕ್ಷೆಗೆ ಸಿಎಂ ಸೂಚಿಸಿದ್ದರು. ಅದರಂತೆ 2024ರ ಡಿ.29ರಂದು ನಡೆದ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯ ಫಲಿತಾಂಶ ಇದೀಗ ಬಿಡುಗಡೆಯಾಗಿದೆ. ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ಪಡೆಯಬಹುದಾಗಿದೆ.
ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಕೆಎಎಸ್ ಹುದ್ದೆಗೆ ಮುಖ್ಯ ಪರೀಕ್ಷೆ ಯಾವಾಗ?
ಕೆಪಿಎಸ್‌ಸಿ ಈಗಾಗಲೇ 384 ಗೆಜೆಟೆಡ್ ಪ್ರೊಬೇಷನರ್ ಮುಖ್ಯ ಪರೀಕ್ಷೆಗಳಿಗೆ ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್ ಎ, ಗ್ರೂಪ್ ಬಿ) ಹುದ್ದೆಗಳ ಮುಖ್ಯ ಪರೀಕ್ಷೆ ದಿನಾಂಕ 28-03-2025 / 29-03-2025 / 01-04-2025 / 02-04-2025 ರಂದು ನಡೆಸಲಾಗುವುದು ಎಂದು ಸಂಭಾವ್ಯ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ. ಆದರೆ ಅದಕ್ಕೂ ಮೊದಲು ಮುಖ್ಯ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿ, ಅರ್ಜಿ ಸ್ವೀಕಾರ ಮಾಡಲಿದೆ. ಅರ್ಹರಾದ ಅಭ್ಯರ್ಥಿಗಳು ಡೀಟೇಲ್ಡ್ ಅಪ್ಲಿಕೇಶನ್ ತುಂಬುವ ಮೂಲಕ, ಮುಖ್ಯ ಪರೀಕ್ಷೆಗೆ ನೋಂದಣಿ ಮಾಡಿಸಬೇಕು.
ಮುಖ್ಯ ಪರೀಕ್ಷೆಯ ಅರ್ಹತಾ ಪತ್ರಿಕೆಗಳು
- ಕನ್ನಡ : 150 ಅಂಕಗಳು (2 ಗಂಟೆ ಪರೀಕ್ಷೆ ಅವಧಿ)
- ಇಂಗ್ಲಿಷ್ : 150 ಅಂಕಗಳು (2 ಗಂಟೆ ಪರೀಕ್ಷೆ ಅವಧಿ)
ಕೆಎಎಸ್ ಮುಖ್ಯ ಪರೀಕ್ಷೆ ಇತರೆ ಪತ್ರಿಕೆಗಳು
- ಪತ್ರಿಕೆ-1: ಪ್ರಬಂಧಗಳು - 250 ಅಂಕಗಳು
- ಪತ್ರಿಕೆ-2: ಸಾಮಾನ್ಯ ಅಧ್ಯಯನ-1 (250 ಅಂಕಗಳು)
- ಪತ್ರಿಕೆ-3: ಸಾಮಾನ್ಯ ಅಧ್ಯಯನ-2 (250 ಅಂಕಗಳು)
- ಪತ್ರಿಕೆ-4: ಸಾಮಾನ್ಯ ಅಧ್ಯಯನ-3 (250 ಅಂಕಗಳು)
- ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (250 ಅಂಕಗಳು)
ಈ ಸುದ್ದಿಯನ್ನೂ ಓದಿ | Job Guide: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿದೆ 246 ಹುದ್ದೆ; ಹೀಗೆ ಅಪ್ಲೈ ಮಾಡಿ