ಬೆಂಗಳೂರು, ಜೂ. 6: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ (KSP Recruitment 2026). ಕಲ್ಯಾಣ ಕರ್ನಾಟಕ ವೃಂದ ಮತ್ತು ಮಿಕ್ಕುಳಿದ ವೃಂದ (RPC) ಸೇರಿ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ (Job Guide). ಈ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಜೂನ್ 8ರಂದು ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಜುಲೈ 3.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಮಿಕ್ಕುಳಿದ ವೃಂದ: 3,395 ಹುದ್ದೆಗಳಿವೆ (ಪುರುಷರು 2,266, ಮಹಿಳೆಯರು 755, ಸೇವಾನಿರತ ಪುರುಷರು 257, ಸೇವಾನಿರತ ಮಹಿಳೆಯರು 82, ತೃತೀಯ ಲಿಂಗ ಅಭ್ಯರ್ಥಿಗಳು 35).
ಕಲ್ಯಾಣ ಕರ್ನಾಟಕ ವೃಂದ: 596 ಹುದ್ದೆಗಳಿವೆ (ಪುರುಷರು 398, ಮಹಿಳೆಯರು 1335, ಸೇವಾನಿರತ ಪುರುಷರು 46, ಸೇವಾನಿರತ ಮಹಿಳೆಯರು 14, ತೃತೀಯ ಲಿಂಗಿ ಅಭ್ಯರ್ಥಿಗಳು 5). ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 33 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 2 ವರ್ಷ, ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 5 ವರ್ಷ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಇತರ ಪ್ರವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರುಪಾಯಿ ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರುಪಾಯಿ ಪೇ ಮಾಡಬೇಕು. ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿವೆ.
ಪದವೀಧರರಿಗೆ ಗುಡ್‌ನ್ಯೂಸ್; SSCಯಿಂದ 12,256 ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ, ಎಂಡುರೆನ್ಸ್ ಟೆಸ್ಟ್, ದೇಹದಾರ್ಢ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಫ್‌ಲೈನ್ ಲಿಖಿತ ಪರೀಕ್ಷೆಯು 100 ಅಂಕಗಳಿಗೆ ನಡೆಯಲಿದ್ದು, ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ್ಯ ಮತ್ತು ನೈತಿಕ ಶಿಕ್ಷಣ ಒಳಗೊಂಡ ಸಾಮಾನ್ಯ ಅಧ್ಯಯನ ಪ್ರಶ್ನೆಗಳನ್ನು ಒಳಗೊಂಡಿದೆ. ಗಮನಿಸಿ: ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕವಿದ್ದು, ಯೋಚಿಸಿ ಉತ್ತರಿಸಿ.ಲಿಖಿತ ಪರೀಕ್ಷೆಯು ಆಗಸ್ಟ್ 2ರಂದು ನಡೆಯಲಿದೆ. ಕಡ್ಡಾಯ ಕನ್ನಡ ಪರೀಕ್ಷೆಯ ದಿನಾಂಕ ನಂತರ ನಿಗದಿಯಾಗಲಿದೆ. ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕ ಪಡೆಯುವುದು ಕಡ್ಡಾಯ.
ಮಾಸಿಕ ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ 37,500 ರುಪಾಯಿ-76,100 ರುಪಾಯಿ ಮಾಸಿಕ ವೇತನ ದೊರೆಯಲಿದೆ.
ಮಿಕ್ಕುಳಿದ ವೃಂದದ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಕಲ್ಯಾಣ ಕರ್ನಾಟಕ ವೃಂದದ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080-23460460.
ಇನ್ನಷ್ಟು ಉದ್ಯೋಗದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.