ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RRB Recruitment 2026: ರೈಲ್ವೆ ನೇಮಕಾತಿ ಮಂಡಳಿಯಿಂದ 4,029 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಅರ್ಹತೆ, ವಯೋಮಿತಿ, ಅಪ್ಲೈ ಮಾಡುವ ವಿವರ ಇಲ್ಲಿದೆ

Railway Recruitment Board: ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ ಖಾಲಿ ಇರುವ ಬರೋಬ್ಬರಿ 4,029 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜೂನಿಯರ್‌ ಎಂಜಿನಿಯರ್‌, ಡಿಪೋಟ್‌ ಮೆಟೀರಿಯಲ್‌ ಸೂಪರಿಟೆಂಡೆಂಟ್‌ ಹುದ್ದೆಗಳಿವೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 13.

ಸಾಂದರ್ಭಿಕ ಚಿತ್ರ

ದೆಹಲಿ, ಆ. 29: ಕೇಂದ್ರ ಸರ್ಕಾರದ ಉದ್ಯೋಗ ಪಡೆದುಕೊಳ್ಳಬೇಕು ಎಂದು ಗುರಿ ಇಟ್ಟುಕೊಂಡವರಿಗೆ ಇಲ್ಲಿದೆ ಸಿಹಿ ಸುದ್ದಿ. ಖಾಲಿ ಇರುವ ಬರೋಬ್ಬರಿ 4,029 ಹುದ್ದೆಗಳ ಭರ್ತಿಗೆ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ (Railway Recruitment Board) ಅರ್ಜಿ ಆಹ್ವಾನಿಸಿದೆ (Latest Railway Jobs). ಜೂನಿಯರ್‌ ಎಂಜಿನಿಯರ್‌ (JE), ಡಿಪೋಟ್‌ ಮೆಟೀರಿಯಲ್‌ ಸೂಪರಿಟೆಂಡೆಂಟ್‌ (DMS) ಹುದ್ದೆಗಳಿವೆ (RRB Recruitment 2026). ಆರ್‌ಆರ್‌ಬಿ ಬೆಂಗಳೂರು ವಲಯದಲ್ಲಿ 299 ಹುದ್ದೆಗಳಿವೆ (Job Guide). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಸೆಪ್ಟೆಂಬರ್‌ 13.

ವಿದ್ಯಾರ್ಹತೆ ಮತ್ತು ವಯೋಮಿತಿ

ದೇಶದ ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ 3 ವರ್ಷಗಳ ಡಿಪ್ಲೋಮಾ ಮತ್ತು ಎಂಜಿನಿಯರಿಂಗ್‌ ಪೂರೈಸಿದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 33 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಯೋಧರಿಗೆ 3ರಿಂದ 8 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವಾಗಿ ಎಸ್‌ಸಿ, ಎಸ್‌ಟಿ, ಇಬಿಸಿ ಅಭ್ಯರ್ಥಿಗಳು, ಮಾಜಿ ಯೋಧರು, ಮಹಿಳೆಯರು ಮತ್ತು ತೃತೀಯ ಲಿಂಗಿಗಳು 250 ರುಪಾಯಿ ಮತ್ತು ಉಳಿದೆಲ್ಲ ಅಭ್ಯರ್ಥಿಗಳು 500 ರುಪಾಯಿ ಪಾವತಿಸಬೇಕು.

ಅಂಚೆ ಇಲಾಖೆಯಲ್ಲಿ 25,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಕರ್ನಾಟಕದ ವಿಭಾಗವಾರು ಖಾಲಿ ಹುದ್ದೆಗಳ ವಿವರ ಇಲ್ಲಿದೆ

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಮೊದಲ ಮತ್ತು 2ನೇ ಹಂತದ ಸಿಬಿಟಿ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 35,400 ರುಪಾಯಿ ಮಾಸಿಕ ವೇತನ ದೊರೆಯಲಿದೆ. ಮೊದಲ ಹಂತದ ಸಿಬಿಟಿಯಲ್ಲಿ 100 ಪ್ರಶ್ನೆಗಳಿರಲಿದ್ದು, ಪ್ರತಿ ಪ್ರಶ್ನೆಗೆ 1 ಅಂಕಗಳಿವೆ. ಗಣಿತ-30, ಜನರಲ್‌ ಇಂಟೆಲಿಜೆನ್ಸ್‌ ಮತ್ತು ರೀಸನಿಂಗ್‌-25, ಜನರಲ್‌ ಅವರ್ನೆಸ್‌-15 ಮತ್ತು ಜನರಲ್‌ ಸೈನ್ಸ್‌-30 ಪ್ರಶ್ನೆಗಳಿವೆ. ಪರೀಕ್ಷೆಯ ಅವಧಿ: 90 ನಿಮಿಷ. ದ್ವಿತೀಯ ಹಂತದ ಸಿಬಿಟಿಯಲ್ಲಿ 150 ಅಂಗಳಿವೆ. ಒಟ್ಟು 120 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಜನರಲ್‌ ಅವರ್ನೆಸ್‌-15, ಫಿಸಿಕ್ಸ್‌ ಮತ್ತು ಕೆಮಿಸ್ಟ್ರಿ-15, ಬೇಸಿಕ್‌ ಆಫ್‌ ಕಂಪ್ಯೂಟರ್ಸ್‌ ಮತ್ತು ಅಪ್ಲಿಕೇಷನ್ಸ್‌-10, ಬೇಸಿಕ್ಸ್‌ ಆಫ್‌ ಎನ್ವೋರ್‌ಮೆಂಟ್‌ ಮತ್ತು ಪೊಲ್ಯುಷನ್‌ ಕಂಟ್ರೋಲ್‌-10, ಟೆಕ್ನಿಕಲ್‌ ಎಬಿಲಿಟಿ-100 ಪ್ರಶ್ನೆಗಳು ಸೇರಿ ಒಟ್ಟು 150 ಪ್ರಶ್ನೆಗಳಿರುತ್ತವೆ. ಗಮನಿಸಿ ಎರಡೂ ಹಂತಗಳಲ್ಲಿ ಪ್ರತಿ ತಪ್ಪು ಉತ್ತರಕ್ಕೆ ನೆಗೆಟಿವ್‌ ಅಂಕಗಳಿವೆ. ಹೀಗಾಗಿ ಸರಿಯಾಗಿ ಯೋಚಿಸಿ ಉತ್ತರಿಸಿ.

ರಾಜ್ಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕಹಿ ಸುದ್ದಿ; ಇನ್ನುಮುಂದೆ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗೂ ನೆಗೆಟಿವ್ ಅಂಕ!

RRB Recruitment 2026 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (
    https://www.rrbapply.gov.in/#/auth/home)
  • 'Create An Account' ಆಯ್ಕೆ ಮಾಡಿ ಕ್ಲಿಕ್ ಮಾಡಿ.
  • ಹೆಸರು ರಿಜಿಸ್ಟರ್ ಮಾಡಿಕೊಳ್ಳಿ. ಲಾಗಿನ್‌ ಆಗಿ.
  • ಈಗ ಕಂಡುಬರುವ ಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅರ್ಜಿ ಶುಲ್ಕ ಭರ್ತಿ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

Ramesh Ballamoole

View all posts by this author