ಬೆಂಗಳೂರು, ಸೆ. 27: 207 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿದೆ (Bank Jobs). ಕರ್ನಾಟಕ ಸೇರಿ ದೇಶಾದ್ಯಂತ ಈ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಅಕ್ಟೋಬರ್ 5 (SBI Recruitment 2026). ಈ ಹಿಂದೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಸೆಪ್ಟೆಂಬರ್ 25 ಎಂದಾಗಿತ್ತು (Job Guide). ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರು.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಝೋನಲ್ ಹೆಡ್-1, ರೀಜನಲ್ ಹೆಡ್-5, ರಿಲೇಷನ್‌ಶಿಪ್ ಮ್ಯಾನೇಜರ್ (ಟೀಂ ಲೀಡ್)-24 ಹುದ್ದೆ-ವಿದ್ಯಾರ್ಹತೆ: ಪದವಿ, ಇನ್‌ವೆಸ್ಟ್‌ಮೆಂಟ್ ಸ್ಪೆಷಲಿಸ್ಟ್-9, ಇನ್‌ವೆಸ್ಟ್‌ಮೆಂಟ್ ಆಫೀಸರ್-4 ಹುದ್ದೆ-ವಿದ್ಯಾರ್ಹತೆ: ಸಿಎ/ಸಿಎಫ್‌ಎ/ಸಿಎಫ್‌ಪಿ/ಸ್ನಾತಕೋತ್ತರ ಪದವಿ,
ವಿಪಿ ವೆಲ್ತ್-91 ಹುದ್ದೆ-ವಿದ್ಯಾರ್ಹತೆ: ಪದವಿ, ಎಂಬಿಎ, ಎವಿಪಿ ವೆಲ್ತ್-73 ಹುದ್ದೆ-ವಿದ್ಯಾರ್ಹತೆ: ಪದವಿ. ಹುದ್ದೆಗಳಿಗೆ ಅನುಗುಣವಾಗಿ ಕಾರ್ಯಾನುಭವ ಕಡ್ಡಾಯ. ಕರ್ನಾಟಕದಲ್ಲಿ ಒಟ್ಟು 51 ಹುದ್ದೆಗಳಿವೆ.
ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಗುಡ್‌ನ್ಯೂಸ್; 869 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ಕಾರಾಗೃಹ ಇಲಾಖೆ
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 23 ವರ್ಷ ಮತ್ತು ಗರಿಷ್ಠ ವಯಸ್ಸು 50 ವರ್ಷ. ಅರ್ಜಿ ಶುಲ್ಕವಾಗಿ ಸಾಮಾನ್ಯ/ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳು 750 ರೂಪಾಯಿ ಸಲ್ಲಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
SBI Recruitment 2026 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
(ಗಮನಿಸಿ: ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಬದಲಾಗಿದ್ದು ಬಿಟ್ಟರೆ ಉಳಿದೆಲ್ಲ ಷರತ್ತು ಮೊದಲಿನ ಅಧಿಸೂಚನೆಯಂತೆಯೇ ಇರಲಿದೆ).
ಆಯ್ಕೆ ವಿಧಾನ ಮತ್ತು ವಾರ್ಷಿಕ ಆದಾಯ
ವೈಯಕ್ತಿಕ ನೇರ/ವಿಡಿಯೊ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಝೋನಲ್ ಹೆಡ್-97 ಲಕ್ಷ ರೂಪಾಯಿ, ರೀಜನಲ್ ಹೆಡ್-66.40 ಲಕ್ಷ ರೂಪಾಯಿ, ರಿಲೇಷನ್‌ಶಿಪ್ ಮ್ಯಾನೇಜರ್-51.80 ಲಕ್ಷ ರೂಪಾಯಿ, ಇನ್‌ವೆಸ್ಟ್ ಸ್ಪೆಷಲಿಸ್ಟ್-44.50 ಲಕ್ಷ ರೂಪಾಯಿ, ಇನ್‌ವೆಸ್ಟ್ ಆಫೀಸರ್-27.10 ಲಕ್ಷ ರೂಪಾಯಿ, ವಿಪಿ ವೆಲ್ತ್-44.70 ಲಕ್ಷ ರೂಪಾಯಿ, ಎವಿಪಿ ವೆಲ್ತ್-30.20 ಲಕ್ಷ ರೂಪಾಯಿ ವಾರ್ಷಿಕ ವೇತನ ದೊರೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(https://recruitment.sbi.bank.in/crpd-sco-2026-27-23/apply) - ಹೆಸರು ನೋಂದಾಯಿಸಿ.
- ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
- ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ)
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಸ್ಟೇಟ್ ಬ್ಯಾಂಕ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ವಿಳಾಸ: sbi.co.inಗೆ ಭೇಟಿ ನೀಡಿ.
ಇನ್ನಷ್ಟು ಉದ್ಯೋಗದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.