ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Suresh Gopi: ಉಡುಪಿ ಶ್ರೀಕೃಷ್ಣ ಮಠಕ್ಕೆ ನಟ, ಸಚಿವ ಸುರೇಶ್‌ ಗೋಪಿ ಭೇಟಿ

ನಟ ಹಾಗೂ ಸಚಿವರನ್ನು ಕೃಷ್ಣಮಠಕ್ಕೆ ದಿವಾನರು ಆದರದಿಂದ ಬರಮಾಡಿಕೊಂಡರು. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ನಟ ಭೇಟಿಯಾದರು. ಶ್ರೀ ಸುಗುಣೇಂದ್ರ ತೀರ್ಥರ ಪರ್ಯಾಯ ಸಮಾಪ್ತಿ ವೇಳೆ ಭೇಟಿ ಮಾಡಲಾಯಿತು. ಕೇಂದ್ರ ಸಚಿವರಿಗೆ ಮಠದ ವತಿಯಿಂದ ಶ್ರೀ ಸುಗುಣೇಂದ್ರ ತೀರ್ಥರು ವಿಶೇಷ ಗೌರವ ಸಲ್ಲಿಸಿದರು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುರೇಶ್‌ ಗೋಪಿ

ಉಡುಪಿ, ಜ.17: ಉಡುಪಿ ಶ್ರೀಕೃಷ್ಣ ಮಠಕ್ಕೆ (Udupi Sri Krishna Matha) ಮಲೆಯಾಳಂ ನಟ ಹಾಗೂ ಕೇಂದ್ರ ಸಚಿವ ಸುರೇಶ್‌ ಗೋಪಿ (Suresh Gopi) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಮಠಕ್ಕೆ ಭೇಟಿ ನೀಡಿದ್ದ ಸುರೇಶ್‌ ಗೋಪಿ ಅವರು ಶ್ರೀಕೃಷ್ಣನ ದರ್ಶನ ಪಡೆದರು.

ನಟ ಹಾಗೂ ಸಚಿವರನ್ನು ಕೃಷ್ಣಮಠಕ್ಕೆ ದಿವಾನರು ಆದರದಿಂದ ಬರಮಾಡಿಕೊಂಡರು. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ನಟ ಭೇಟಿಯಾದರು. ತೀರ್ಥರ ಪರ್ಯಾಯ ಸಮಾಪ್ತಿ ವೇಳೆ ಭೇಟಿ ಮಾಡಲಾಯಿತು. ಕೇಂದ್ರ ಸಚಿವರಿಗೆ ಮಠದ ವತಿಯಿಂದ ಶ್ರೀ ಸುಗುಣೇಂದ್ರ ತೀರ್ಥರು ವಿಶೇಷ ಗೌರವ ಸಲ್ಲಿಸಿದರು.

ಜ.21ರಂದು ಉಪರಾಷ್ಟ್ರಪತಿ ಸಿದ್ದಗಂಗಾ ಮಠಕ್ಕೆ

ತುಮಕೂರು: ಜ.21ರಂದು ನಡೆಯುವ ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 7 ವರ್ಷದ ಪುಣ್ಯ ಸಂಸ್ಮರಣೋತ್ಸವಕ್ಕೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ (C. P. Radhakrishnan) ಅವರು ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

ಸಿದ್ದಗಂಗಾ ಮಠಕ್ಕೆ (Siddaganga Mutt) ಭೇಟಿ ನೀಡಿ, ಪುಣ್ಯ ಸಂಸ್ಮರಣೊತ್ಸವದ ಬಗ್ಗೆ ಮಾಹಿತಿ ಪಡೆದು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಜ.21ರಂದು ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 7 ವರ್ಷದ ಪುಣ್ಯ ಸಂಸ್ಮರಣೋತ್ಸವದ ಹಿನ್ನೆಲೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ತುಮಕೂರಿಗೆ ಆಗಮಿಸಲಿದ್ದಾರೆ. ಉಪರಾಷ್ಟ್ರಪತಿಗಳು ಎರಡು ಭಾರಿ ಲೋಕಸಭಾ ಸದಸ್ಯರಾಗಿ, ರಾಜ್ಯಪಾಲರಾಗಿ ಅವರದ್ದೇ ಆದ ಅನುಭವ ಹೊಂದಿದ್ದಾರೆ. ದೂರದೃಷ್ಟಿಯ ಚಿಂತನೆ ಮತ್ತು ತುಂಬಾ ಬುದ್ಧಿವಂತರು. ಶ್ರೀಮಠದ ಇತಿಹಾಸ ಅವರಿಗೆ ತಿಳಿಸುವುದರಲ್ಲಿ ಯಾವುದೇ ರೀತಿಯ ಅಪಚಾರ ಆಗಬಾರದೆಂದು ನಾನು ಬಂದು ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.

ಟಿ20 ವಿಶ್ವಕಪ್ ಮಾತುಕತೆಗಾಗಿ ಬಾಂಗ್ಲಾಕ್ಕೆ ಐಸಿಸಿ ನಿಯೋಗ ಭೇಟಿ ಸಾಧ್ಯತೆ

ಹರೀಶ್‌ ಕೇರ

View all posts by this author