ಬೆಂಗಳೂರು: ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ಮೈಸೂರು ಸ್ಯಾಂಡಲ್ ಸೋಪ್‌ನ (Mysore Sandal Soap) ಅಧಿಕೃತ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್‌ನಿಂದ (KSDL) ಈ ಪ್ರಕಟಣೆ ಹೊರಬಿದ್ದಿದ್ದು, ಮೈಸೂರು ಸ್ಯಾಂಡಲ್ ಮತ್ತು ಇತರ ಉತ್ಪನ್ನಗಳಿಗೆ 2 ವರ್ಷಗಳ ಅವಧಿಗೆ ತಮನ್ನಾ ಭಾಟಿಯಾ ರಾಯಭಾರಿಯಾಗಿರಲಿದ್ದಾರೆ.
ಮೈಸೂರು ಸ್ಯಾಂಡ್ ಸೋಪ್‌ಗೆ ತನ್ನದೇ ಆದ ಇತಿಹಾಸವಿದೆ. ಈ ಸೋಪ್ ಆರಂಭದಿಂದಲೂ ತನ್ನ ಗುಣಮಟ್ಟ ಹಾಗೂ ಸುವಾಸನೆಯನ್ನು ಉಳಿಸಿಕೊಂಡಿದೆ. ಗ್ರಾಹಕರ ಮೆಚ್ಚಿನ ಸೋಪುಗಳಲ್ಲಿ ಒಂದಾಗಿದ್ದು, ಬಹುಬೇಡಿಕೆಯ ಸೋಪ್ ಆಗಿದೆ. ಇದೀಗ ಹೊಸ ಗ್ರಾಹಕರು ಹಾಗೂ ಯುವ ಸಮೂಹವನ್ನು ಸೆಳೆಯು ಉದ್ದೇಶದಿಂದ ಮೈಸೂರು ಸ್ಯಾಂಡಲ್ ಸೋಪ್‌ಗೆ ಹೊಸ ರಾಯಭಾರಿಯನ್ನಾಗಿ ತಮನ್ನಾ ಅವರನ್ನು ನೇಮಿಸಿಕೊಳ್ಳಲಾಗಿದೆ.
ಸಂಭಾವನೆ ಎಷ್ಟು?
ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಲಿಮಿಟೆಡ್ ಉತ್ಪನ್ನಗಳ ನೂತನ ರಾಯಭಾರಿ ತಮನ್ನಾ ಭಾಟಿಯಾ ಅವರಿಗೆ 6.2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದ್ದು, ಇಷ್ಟೊಂದು ದೊಡ್ಡ ಮೊತ್ತ ನೀಡಿ ನೇಮಕ ಮಾಡಿಕೊಳ್ಳುವ ಅಗತ್ಯವಿತ್ತೇ ಎಂಬ ಪ್ರಶ್ನೆ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ತಮನ್ನಾ ಭಾಟಿಯಾ ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್‌ನಲ್ಲಿ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಜತೆಗೆ ಗ್ಲಾಮರಸ್ ಕೂಡ ಆಗಿ ಕಾಣುತ್ತಾರೆ, ಇದನ್ನು ನೋಡಿ ಮಾರುಕಟ್ಟೆ ಲೆಕ್ಕಾಚಾರ ಹಾಕಿ ಅವರನ್ನು ರಾಯಭಾರಿ ಮಾಡಿಕೊಂಡಿರಬಹುದು. ಆದರೆ ಕನ್ನಡದ ಕಲಾವಿದರು ಯಾರೂ ಸಿಗಲಿಲ್ಲವಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | Shankar Mahadevan: ಎಐ ಮೂಲಕ ಗೀತೆ ರಚನೆ; ಸಂಗೀತ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದ ಶಂಕರ್ ಮಹಾದೇವನ್