ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯಕ್ಷಗಾನದಲ್ಲಿ ʼರಾಮಾಯಣʼಕ್ಕೆ ಅವಮಾನ; ರಾವಣ ಸೀತೆಯನ್ನು ಅಪಹರಿಸಿದರೆ, ರಾಮ ರಾವಣನ ಪತ್ನಿಯನ್ನು ಕರೆತರಬೇಕಿತ್ತು ಎಂದ ಹಾಸ್ಯ ಕಲಾವಿದ

Viral Video: ತುಳು ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದ ಮಹಾಕಾವ್ಯ ʼರಾಮಾಯಣʼ ಕಥೆಯನ್ನು ತಿರುಚಿ ಹೇಳಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಇದೇ ವೇಷಧಾರಿ ʼರಾಮಾಯಣʼ ಕೃರ್ತ ವಾಲ್ಮೀಕಿ ಮಹರ್ಷಿಯನ್ನೂ ಅವಮಾನಿಸಿದ್ದಾನೆ. ಈ ಹಳೆಯ ವಿಡಿಯೊ ಸದ್ಯ ವಿಡಿಯೊ ವೈರಲ್‌ ಆಗಿದೆ.

ಯಕ್ಷಗಾನದ ದೃಶ್ಯ

ಮಂಗಳೂರು, ಏ. 21: ಇತ್ತೀಚೆಗೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ʼರಾಮಾಯಣʼವನ್ನು ತಿರುಚಿ ಹೇಳುವ ವಿವಾದ ಬಿರುಗಾಳಿ ಎಬ್ಬಿಸಿದ್ದರು. ಈ ವಿವಾದ ತಣ್ಣಗಾಗುವ ಮೊದಲೇ ಯಕ್ಷಗಾನದಲ್ಲಿ ʼರಾಮಾಯಣʼವನ್ನು ಅವಮಾನಿಸಿರುವ ಹಳೆಯ ವಿಡಿಯೊ ಮುನ್ನೆಲೆಗೆ ಬಂದಿದೆ. ಬಪ್ಪನಾಡು ಮೇಳದ ತುಳು ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದ ಮಹಾಕಾವ್ಯ ʼರಾಮಾಯಣʼ ಕಥೆಯನ್ನು ತಿರುಚಿ ಹೇಳಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಇದೇ ವೇಷಧಾರಿ ʼರಾಮಾಯಣʼ ಕೃರ್ತ ವಾಲ್ಮೀಕಿ ಮಹರ್ಷಿಯನ್ನೂ ಅವಮಾನಿಸಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು (Viral Video) ಯಕ್ಷಗಾನ ಪ್ರೇಮಿಗಳು, ಹಿಂದೂ ಸಂಘಟನೆಯ ಮುಖಂಡರು ಕಿಡಿ ಕಾರಿದ್ದಾರೆ. ಕೆಲವು ವರ್ಷಗಳ ಹಿಂದಿನ ಈ ವಿಡಿಯೊ ಇದೀಗ ಚರ್ಚೆಗೆ ಗ್ರಾಸವಾಗಿದೆ.

ರಾವಣ ಸೀತೆಯನ್ನು ಅಪಹರಿಸಿದ್ದರೆ, ರಾಮನೂ ರಾವಣನ ಪತ್ನಿಯನ್ನು ಕರೆದುಕೊಂಡು ಬರಬೇಕಿತ್ತು ಎಂದು ಕಲಾವಿದ ಹೇಳಿದ್ದು ಆತ ಡೈಲಾಗ್‌ ಕೇಳಿ ಕರ್ನಾಟಕವೇ ಬೆಚ್ಚಿ ಬಿದ್ದಿದೆ. ಮರ್ಯಾದಾ ಪುರುಷೋತ್ತಮ ರಾಮನನ್ನು ಕಲಾವಿದ ಈ ರೀತಿ ಅವಮಾನಿಸಿದ್ದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಕುಡ್ಲ ರ‍್ಯಾಂಪೇಜ್‌ನ ಫೇಸ್‌ಬುಕ್‌ ಪೋಸ್ಟ್‌:



ಕಲಾವಿದ ಹೇಳಿದ್ದೇನು?

ಕಲಾವಿದ ಯಕ್ಷಗಾನದ ಮಧ್ಯದಲ್ಲಿ ಹಾಸ್ಯ ಮಾಡುವ ಬದಲು ಬಾಯಿಗೆ ಬಂದಂತೆ ಒದರಿದ್ದಾನೆ. ವೈರಲ್‌ ಆದ ವಿಡಿಯೊದಲ್ಲಿ ಆತ ರಾಮಾಯಣವನ್ನು ಅವಮಾನಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಈ ವೇಳೆ ಆತ ʼರಾಮಾಯಣʼವನ್ನೂ ತಿರುಚಿದ್ದಾನೆ. ʼʼರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಗ ಕಾಗೆ ಅಡ್ಡ ಬಂತು. ಆಗ ರಾವಣ ಅದರ ಬಾಲವನ್ನು ಕತ್ತರಿಸಿದʼʼ ಎಂದು ಹೇಳುವ ಮೂಲಕ ಮಹಾಕಾವ್ಯವನ್ನು ಅವಮಾನಿಸಿದ್ದಾನೆ.

ರಾಮ ವಲಸೆ ಕಾರ್ಮಿಕ, ರಾವಣನ ತೋಟದ ಹಣ್ಣು ಕಿತ್ತು ತಿಂದ: ಪ್ರಕಾಶ್‌ ರಾಜ್‌ ಹೊಸ ರಾಮಾಯಣ

ಮುಂದುವರಿದು, ʼʼರಾಮನ ಪತ್ನಿ ಯಾರು ಹೇಳಿʼʼ ಎಂದು ಭಾಗತವರನ್ನು ಪ್ರಶ್ನಿಸಿದ್ದಾನೆ. ಅದಕ್ಕೆ ಭಾಗವತರು, ʼʼಸೀತೆʼʼ ಎಂದು ಹೇಳಿದ್ದಾರೆ. ಮತ್ತೆ, ʼʼರಾವಣನ ಪತ್ನಿ ಯಾರೆಂದು ಹೇಳಿದಿರಿʼʼ ಎಂದು ಕೇಳಿದ್ದಾನೆ. ಆಗ ಭಾವತರು ʼʼಮಂಡೋದರಿʼʼ ಎಂದು ಉತ್ತರಿಸಿದ್ದಾರೆ. ಈ ವೇಳೆ ಸಂಭಾಷಣೆ ಮುಂದುವರಿಸಿದ ಕಲಾವಿದ, ʼʼರಾವಣ ಸೀತೆಯನ್ನು ಅಪಹರಿಸಿದ. ಹಾಗಾದರೆ ರಾವಣನ ಪತ್ನಿ ರಾಮನಿಗೆ ಆಗುದಿಲ್ಲವೆ?ʼʼ ಎಂದು ಕೇಳಿದ್ದಾನೆ. ಅಚ್ಚರಿ ಎಂದರೆ ಆತ ಹೀಗೆ ಹೇಳುತ್ತಿದ್ದಂತೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ. ಅಲ್ಲದೆ ಕಲಾವಿದ ವಾಲ್ಮೀಕಿಯನ್ನು ವಾಲ್‌ ಮಿಕಿ ಎಂದು ಉಚ್ಚರಿಸುವ ಮೂಲಕ ಉದ್ಧಟತನ ಮೆರೆದಿದ್ದಾನೆ.

ವ್ಯಾಪಕ ವಿರೋಧ

ಸದ್ಯ ಕಲಾವಿದನ ಈ ಮಾತಿಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ನಟ ಪ್ರಕಾಶ್‌ ರಾಜ್‌ ʼರಾಮಾಯಣʼವನ್ನು ತಿರುಚಿ ವ್ಯಾಖ್ಯಾನಿಸಿದ್ದು, ಈ ಯಕ್ಷಗಾನ ತುಣುಕು ಇದೀಗ ಮತ್ತೆ ಕಾಣಿಸಿಕೊಂಡಿದೆ. ಕಲೆಯ ಹೆಸರಲ್ಲಿ ಹಿಂದೂ ದೇವರನ್ನು, ನಂಬಿಕೆಯನ್ನು ಅವಮಾನಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮೂಡಿದೆ. ಯಕ್ಷಗಾನ ಎಂದರೆ ಅದು ಕೇವಲ ಕಲೆ ಮಾತ್ರವಲ್ಲ. ಧಾರ್ಮಿಕತೆಯೊಂದಿಗೂ ನೇರ ಸಂಬಂಧ ಹೊಂದಿದೆ. ಭಕ್ತಿಯಿಂದ, ಪೂಜೆ ನೆರವೇರಿಸುವ ಮೂಲಕ ಯಕ್ಷಗಾನ ಪ್ರದರ್ಶನಕ್ಕೆ ನಾಂದಿ ಹಾಡಲಾಗುತ್ತದೆ. ಅಂತಹ ಕಲೆಯ ವೇಳೆ ಹಿಂದೂಗಳ ಆರಾಧ್ಯ ದೈವ, ರಾಮನನ್ನು, ʼರಾಮಾಯಣʼ ಮಹಾಕಾವ್ಯವನ್ನು ಅವಮಾನಿಸುವುದನ್ನು ಕ್ಷಮಿಸಲು ಸಾಧ್ಯವೇ ಇಲ್ಲ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author