ಬಳ್ಳಾರಿ, ಡಿ.10: ರಾಜ್ಯದಲ್ಲಿ ಮತ್ತೊಂದು ಬೃಹತ್ ಭೂಹಗರಣ ಬೆಳಕಿಗೆ ಬಂದಿದ್ದು ಗಂಗಾವತಿ (Gangavathi) ಶಾಸಕ ಜನಾರ್ದನ ರೆಡ್ಡಿ (Janardhan Reddy) ಪುತ್ರನ ಮೇಲೂ ಇದೀಗ ಭೂ ಕಬಳಿಕೆ (Land grabbing) ಆರೋಪ ಕೇಳಿ ಬಂದಿದೆ. ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಿದ್ದು, 100 ಕೋಟಿ ರೂ. ಮೌಲ್ಯದ ಸುಮಾರು 9 ಎಕರೆ ಭೂಮಿ ಕಬಳಿಸಿದ ಆರೋಪ ಕೇಳಿ ಬಂದಿದೆ.
ಕಿರೀಟಿ ರೆಡ್ಡಿ ಹಾಗೂ ಸಹವರ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಸಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಹ ಸಲ್ಲಿಕೆಯಾಗಿದೆ. ಬಳ್ಳಾರಿಯ ಗೋವರ್ಧನ ಎಂಬವರು ಧಾರವಾಡ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಸಿಐಡಿ ಅಥವಾ ಎಸ್ಐಟಿ ತನಿಖೆಗೆ ವಹಿಸುವಂತೆ ಗೋವರ್ಧನ್ ಮನವಿ ಮಾಡಿದ್ದಾರೆ.
ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಧಾರವಾಡ ಹೈಕೋರ್ಟ್ ಪೀಠ ನೋಟಿಸ್ ನೀಡಿದೆ. 2005ರಲ್ಲಿ ಕಿರಿಟಿ ಸಹವರ್ತಿಗಳಾದ ಮಂಜುನಾಥ್ ಹಾಗೂ ಬಿ ಸೀನ ಎಂಬವರು ಭೂಮಿ ಪಡೆದಿದ್ದಾರೆ. ಗೋವರ್ಧನ ಬಳಿ ಜಿಪಿಎಸ್ ಹಾಗೂ ಕರಾರು ಪತ್ರ ಮಾಡಿಸಿಕೊಂಡಿದ್ದ ಆರೋಪ ಕೇಳಿಬಂದಿದ್ದು ಕರಾರು ಪತ್ರ ಮಾಡಿಸಿಕೊಂಡು ಅದನ್ನು ತಿರುಚಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳ ಪ್ರಕರಣ; ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸೆಂಥಿಲ್
2022ರಲ್ಲಿ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಸಂಬಂಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ FIR ಸಹ ದಾಖಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಲಾಗಿದೆ. ಕಿರೀಟಿ ರೆಡ್ಡಿ ಪ್ರಭಾವಿಯಾಗಿದ್ದು ನನಗೆ ಜೀವ ಭಯ ಇದೆ. ಹೀಗಾಗಿ ಕೋರ್ಟ್‌ಗೆ ಅರ್ಜಿ ಹಾಕಿದ್ದೇನೆ ಎಂದು ಗೋವರ್ಧನ್ ಮಾಹಿತಿ ನೀಡಿದ್ದಾರೆ.