ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಮೂವರು ಮಕ್ಕಳ ಜೊತೆ ಕೃಷಿ ಹೊಂಡಕ್ಕೆ ಜಿಗಿದು ತಾಯಿ ಆತ್ಮಹತ್ಯೆ

ಸಂಜೆಯಾದರೂ ಕುರಿಗಳು ಮತ್ತು ಪತ್ನಿ ಮಕ್ಕಳು ಹಿಂದಿರುಗದ ಹಿನ್ನೆಲೆಯಲ್ಲಿ ಪತಿ ಕುಮಾರ್ ಹುಡುಕಾಟ ನಡೆಸಿದ್ದಾನೆ. ಕೃಷಿ ಹೊಂಡದ ಬಳಿ ನಿಂತಿದ್ದ ಕುರಿಗಳನ್ನು ನೋಡಿ ಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾನೆ. ಪತ್ನಿ ಮಕ್ಕಳು ಕಾಣದಿದ್ದಾಗ ಕೃಷಿ ಹೊಂಡದಲ್ಲಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

ಮೃತ ಸಿದ್ದಮ್ಮ

ಬಳ್ಳಾರಿ: ರಾಜ್ಯದಲ್ಲಿ ಘೋರ ದುರಂತ ಸಂಭವಿಸಿದ್ದು, ಮೂವರು ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ (Agriculture pond) ಬಿದ್ದು ತಾಯಿ ಆತ್ಮಹತ್ಯೆ (self harming) ಮಾಡಿಕೊಂಡಿರುವ ಘಟನೆ ಬಳ್ಳಾರಿ (Bellary News) ಜಿಲ್ಲೆಯ ಕುರುಗೋಡು ತಾಲೂಕಿನ ಬರದನಹಳ್ಳಿಯ ಎಂಬಲ್ಲಿ ಸಂಭವಿಸಿದೆ.

ಅಭಿಜ್ಞಾ (8) ಅವನಿ (6) ಆರ್ಯ (4) ಎಂಬ ಮಕ್ಕಳ ಜೊತೆಗೆ ತಾಯಿ ಸಿದ್ದಮ್ಮ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಮಕ್ಕಳನ್ನು ಕೃಷಿ ಹೊಂಡಕ್ಕೆ ತಳ್ಳಿದ ಬಳಿಕ ತಾನೂ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ಮೂಲದ ಸಿದ್ದಮ್ಮ ಪತಿಯ ಜೊತೆಗೆ ಕುರಿ ಮೇಯಿಸಲು ಬಂದಿದ್ದರು. ಬಳ್ಳಾರಿ ಜಿಲ್ಲೆಯ ಕುರಗೋಡು ತಾಲೂಕಿನ ಬರದನಹಳ್ಳಿಯ ರಾಘವೇಂದ್ರ ಎಂಬುವವರ ಜಮೀನಿನಲ್ಲಿ ಕುರಿ ಮಂದೆ ಹಾಕಿದ್ದರು. ನಿನ್ನೆ ಸಿದ್ದಮ್ಮ ಪತಿ ಕುಮಾರ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯ ನಂತರ ಸಿದ್ದಮ್ಮ ತನ್ನ ಮೂವರು ಮಕ್ಕಳ ಜೊತೆ ಸೇರಿ ಕುರಿ ಮೇಯಿಸಲು ತೆರಳಿದ್ದಾಳೆ.

ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಸಿದ್ದಮ್ಮ ಹಾರಿದ್ದಾಳೆ. ಸಂಜೆಯಾದರೂ ಕುರಿಗಳು ಮತ್ತು ಪತ್ನಿ ಮಕ್ಕಳು ಹಿಂದಿರುಗದ ಹಿನ್ನೆಲೆಯಲ್ಲಿ ಪತಿ ಕುಮಾರ್ ಹುಡುಕಾಟ ನಡೆಸಿದ್ದಾನೆ. ಕೃಷಿ ಹೊಂಡದ ಬಳಿ ನಿಂತಿದ್ದ ಕುರಿಗಳನ್ನು ನೋಡಿ ಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾನೆ. ಪತ್ನಿ ಮಕ್ಕಳು ಕಾಣದಿದ್ದಾಗ ಕೃಷಿ ಹೊಂಡದಲ್ಲಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ತಕ್ಷಣ ಕುಮಾರ್ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ಸಿದ್ದಮ್ಮ ಸಹೋದರನ ದೂರಿನ ಅನ್ವಯ ಕುರುಗೋಡು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: Self Harming: "ಸ್ವಾರಿ ಪಪ್ಪ" ತಾಯಿ ಹುಟ್ಟು ಹಬ್ಬದಂದೇ ಲೆಟರ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ; ಓದಿದವರ ಮನಕಲಕುತ್ತೆ ಈ ಸ್ಟೋರಿ

ಹರೀಶ್‌ ಕೇರ

View all posts by this author