ಬಳ್ಳಾರಿ, ಮಾ.3: ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಕುರುಗೋಡು ದೊಡ್ಡ ಬಸವೇಶ್ವರ ಜಾತ್ರೆಯೂ ಗ್ರಹಣದ ಸಮಯಕ್ಕೂ ಮುನ್ನವೇ ರಥೋತ್ಸವ (Kurugodu Rathotsava) ನಡೆಯಿತು. ಹೋಳಿ ಹುಣ್ಣಿಮೆಯಂದು ನಡೆಯಲಿರೋ ಜಾತ್ರೆಯಲ್ಲಿ ಪ್ರತಿವರ್ಷ ಸಂಜೆ 5.30 ರಥೋತ್ಸವ ನಡೆಯುತ್ತದೆ. ಆದರೆ ಈ ಬಾರಿ ಕೇತುಗ್ರಸ್ಥ ಚಂದ್ರ ಗ್ರಹಣ ಹಿನ್ನೆಲೆ ರಥೋತ್ಸವ ಸಮಯ ಬದಲಾವಣೆಯೊಂದಿಗೆ ಮಂಗಳವಾರ ಮಧ್ಯಾಹ್ನ 1 ಗಂಟೆ 40 ನಿಮಿಷಕ್ಕೆ ಭಕ್ತಿ ಭಾವದಿಂದ ರಥೋತ್ಸವ ನೆರವೇರಿಸಲಾಯಿತು.
ದೇವಸ್ಥಾನದ ಜಾತ್ರಾ ಸಮಿತಿಯ ನಿರ್ಧಾರಕ್ಕೆ ಅನುಗುಣವಾಗಿ ಪೂಜೆ, ಧಾರ್ಮಿಕ ವಿಧಿವಿಧಾನಗಳ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಬಸವೇಶ್ವರನ ರಥವನ್ನು ಎಳೆಯುವ ಮೂಲಕ ಭಕ್ತಿ ಪ್ರದರ್ಶಿಸಿದರು.
Astro Tips: ದೇವರ ಪೂಜೆಯಲ್ಲಿ ಹೂವಿನ ಮಹತ್ವ: ಯಾವ ದೇವರಿಗೆ ಯಾವ ಹೂವು ಪ್ರಿಯ?; ಇಲ್ಲಿದೆ ಉತ್ತರ
ಭಜನೆ, ಘೋಷಣೆಗಳ ನಡುವೆ ಜಾತ್ರೆ ಸಂಭ್ರಮದಿಂದ ನಡೆಯಿತು. ಗ್ರಹಣದ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಯಾವುದೇ ವ್ಯತ್ಯಾಸವಾಗದಂತೆ. ಕ್ರಮ ಕೈಗೊಳ್ಳಲಾಗಿತ್ತು.