Murder Case: ವಿವಾಹಿತೆಗೆ 9 ಸಲ ಇರಿದು ಕೊಂದು ಬಾಯ್‌ಫ್ರೆಂಡ್ ಆತ್ಮಹತ್ಯೆ
Belagavi: ರೇಷ್ಮಾ ಹಾಗು ಆನಂದ್ ಕಳೆದ 10 ವರ್ಷಗಳಿಂದ ಒಂದೇ ಕಾಲೋನಿಯಲ್ಲಿ ಇದ್ದರು. ಇಬ್ಬರು ಮಧ್ಯ ಹಲವು ವರ್ಷಗಳಿಂದ ಸ್ನೇಹವಿತ್ತು. ಆನಂದ್‌ಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ರೇಷ್ಮಾಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯ ಬಳಿಕವು ಆನಂದ್ ಮತ್ತು ರೇಷ್ಮಾ ನಡುವೆ ಅನೈತಿಕ ಸಂಬಂಧ ಇತ್ತು.

ರೇಷ್ಮಾ, ಆನಂದ್

ಬೆಳಗಾವಿ : ಬೆಳಗಾವಿಯಲ್ಲಿ (Belagavi news) ಅಮಾನುಷವಾದ ಘಟನೆ ಸಂಭವಿಸಿದೆ. ಪ್ರಿಯಕರನೊಬ್ಬ ವಿವಾಹಿತ ಮಹಿಳೆಯ ಹತ್ಯೆಗೈದು (murder case) ಬಳಿಕ ಆತ್ಮಹತ್ಯೆಗೆ (Self harming) ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ಮಹಿಳೆಗೆ 9 ಸಲ ಚಾಕುವಿನಿಂದ ಚುಚ್ಚಿ ಬಳಿಕ ಪ್ರಿಯಕರ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಲೆಯಾದ ಮಹಿಳೆಯನ್ನು ಖಾನಾಪುರ ತಾಲೂಕಿನ ಬೀಡಿ ಗ್ರಾಮದ ರೇಷ್ಮಾ ತೀರವಿರ (29) ಎಂದು ಗುರುತಿಸಲಾಗಿದ್ದು, ಅದೇ ಚಾಕುವಿನಿಂದ ಚುಚ್ಚಿಕೊಂಡು ಆನಂದ ಸುತಾರ್ (31) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೇಷ್ಮಾ ಹಾಗು ಆನಂದ್ ಕಳೆದ 10 ವರ್ಷಗಳಿಂದ ಒಂದೇ ಕಾಲೋನಿಯಲ್ಲಿ ಇದ್ದರು. ಇಬ್ಬರು ಮಧ್ಯ ಹಲವು ವರ್ಷಗಳಿಂದ ಸ್ನೇಹವಿತ್ತು. ಆನಂದ್‌ಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ರೇಷ್ಮಾಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯ ಬಳಿಕವು ಆನಂದ್ ಮತ್ತು ರೇಷ್ಮಾ ನಡುವೆ ಅನೈತಿಕ ಸಂಬಂಧ ಇತ್ತು. ಕಳೆದ ತಿಂಗಳಷ್ಟೇ ರೇಷ್ಮಾ ಪತಿಯ ಕೈಗೆ ಆಕೆ ಹಾಗೂ ಆನಂದ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದರು. ನಂದಗಡ ಪೊಲೀಸರಿಗೆ ಈ ಕುರಿತು ರೇಷ್ಮಾ ಪತಿ ಶಿವು ತಿರವಿರ ಮಾಹಿತಿ ನೀಡಿದ್ದಾರೆ. ಪೊಲೀಸರು ವಾರ್ನಿಂಗ್ ನೀಡಿದ ಬಳಿಕ ಆನಂದನಿಂದ ರೇಷ್ಮಾ ಅಂತರ ಕಾಯ್ದುಕೊಂಡಿದ್ದಾಳೆ. ಇದರಿಂದ ಸಿಟ್ಟಿಗೆದ್ದು ಮನೆಯ ಹಿಂಬಾಗಲಿನಿಂದ ಹೋಗಿ ರೇಷ್ಮಾಳನ್ನು ಆನಂದ ಭೀಕರವಾಗಿ ಕೊಲೆ ಮಾಡಿದ್ದಾನೆ. ರೇಷ್ಮಾ ಪುತ್ರಿಯ ಎದುರೇ ಹತ್ಯೆ ಮಾಡಿದ್ದಾನೆ. ಆನಂದ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಘಟನೆ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ದುರಂತ, ಒಬ್ಬ ಸಾವು
ಬೆಂಗಳೂರು: ಇಂದು ಬೆಂಗಳೂರಲ್ಲಿ ನಸುಕಿನ ಜಾವ 3:30ಕ್ಕೆ ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ಒಬ್ಬ ಸಜೀವ ದಹನಗೊಂಡಿದ್ದಾನೆ. ಬೆಂಗಳೂರಿನ ನಗರತ್ ಪೇಟೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮೂವರು ಅಂಗಡಿಯೊಳಗೆ ಸಿಲುಕಿರುವ ಅಥವಾ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ನಗರತ್ ಪೇಟೆಯ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಈ ಅಗ್ನಿ ಅವಘಡ ತಡರಾತ್ರಿ ಸಂಭವಿಸಿದ್ದು, ಅಂಗಡಿಯೊಳಗೆ ನಿದ್ರಿಸಿದ್ದ ಐದಕ್ಕೂ ಹೆಚ್ಚು ಕೆಲಸಗಾರರು ಇದರಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಪ್ಲಾಸ್ಟಿಕ್ ಅಂಗಡಿಯೊಳಗೆ ರಾತ್ರಿ ಕೆಲಸಗಾರರು ಮಲಗಿ ನಿದ್ರಿಸಿರುವಾಗ ಬೆಂಕಿ ಹೊತ್ತಿಕೊಂಡಿದೆ. ತೀವ್ರ ದಹನಕಾರಿ ವಸ್ತುಗಳು ಅಂಗಡಿಯಲ್ಲಿ ಇದ್ದುದರಿಂದ ಬೆಂಕಿ ಶೀಘ್ರವಾಗಿ ವ್ಯಾಪಿಸಿದೆ. ಮಾಹಿತಿ ದೊರೆತ ಕೂಡಲೆ ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಕಾರ್ಯನಿರತವಾಗಿವೆ. ಮೃತಪಟ್ಟವರ ವಿವರಗಳು ದೊರೆತಿಲ್ಲ. ಅಂಗಡಿ ಮಾಲಿಕರನ್ನು ಪತ್ತೆ ಹಚ್ಚಲಾಗುತ್ತಿದೆ. ಶಾರ್ಟ್ ಸರ್ಕಿಟ್‌ನಿಂದ ಹೀಗಾಗಿರಬಹುದು ಎನ್ನಲಾಗಿದ್ದು, ಸುರಕ್ಷತಾ ಕ್ರಮಗಳ ಗೈರುಹಾಜರಿಯ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ಇದನ್ನೂ ಓದಿ: Biklu Shiva murder case: ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್‌ಗೆ ಕೊಂಚ ರಿಲೀಫ್