ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Toll hike: ಬೆಂಗಳೂರು- ನೆಲಮಂಗಲ ಟೋಲ್‌ಗೂ ದರ ಏರಿಕೆ, ನೈಸ್‌ ರಸ್ತೆಯೂ ದುಬಾರಿ

Toll hike: ರಾಜಧಾನಿಯನ್ನು ಸುತ್ತುವರಿದಿರುವ ನೈಸ್‌ ರಸ್ತೆಯಲ್ಲಿ, ಅತ್ತಿಬೆಲೆ- ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್‌ ಕಾರಿಡಾರ್‌ಗಳಲ್ಲಿ ನಿನ್ನೆ ಟೋಲ್‌ ದರ ಏರಿಕೆ ಮಾಡಲಾಗಿತ್ತು. ಇದೀಗ ನೆಲಮಂಗಲ ಫ್ಲೈಓವರ್‌ನಲ್ಲೂ ಟೋಲ್‌ ಏರಿಕೆಯಾಗಿದೆ. ಜುಲೈ 1ರಿಂದ ಜಾರಿಗೆ ಬಂದಿರುವ ಒಟ್ಟಾರೆ ಎಲ್ಲ ಎಲಿವೇಟೆಡ್‌ ರಸ್ತೆ ಹಾಗೂ ನೈಸ್‌ ರಸ್ತೆಗಳ ದರ ವಿವರ ಇಲ್ಲಿದೆ.

ಬೆಂಗಳೂರು: ರಾಜಧಾನಿಯ (Bengaluru) ವಾಹನ ಸವಾರರಿಗೆ ಇನ್ನೊಂದು ಶಾಕ್ ನೀಡಲಾಗಿದೆ. ಹೊಸೂರು ರಸ್ತೆಯ ಎಲಿವೇಟೆಡ್ ರಸ್ತೆ ಹಾಗೂ ನೈಸ್ ರೋಡ್‌ನಲ್ಲಿ (NICE road) ಟೋಲ್ ದರ ಹೆಚ್ಚಳದ (toll hike) ಬೆನ್ನಲ್ಲೇ ಬೆಂಗಳೂರು-ನೆಲಮಂಗಲ ಮಾರ್ಗದಲ್ಲೂ ಹೊಸ ಟೋಲ್ ಶುಲ್ಕ ವಸೂಲಿಗೆ ಎನ್‌ಎಚ್‌ಎಐ (NHAI) ಅನುಮತಿ ನೀಡಿದೆ. ಈ ಹೊಸ ದರ ಮಂಗಳವಾರ ಜಾರಿಗೆ ಬಂದಿದ್ದು, ತುಮಕೂರು ಮಾರ್ಗದಲ್ಲಿನ 19.5 ಕಿ.ಮೀ. ಉದ್ದದ ಹೆದ್ದಾರಿಗೆ ಟೋಲ್ ದರ ಹೆಚ್ಚಳ ಅನ್ವಯವಾಗಲಿದೆ. ಶುಲ್ಕ ಹೆಚ್ಚಳದ ಜತೆಗೆ ಸಾರ್ವಜನಿಕರು ಬಳಸುತ್ತಿರುವ ವಿವಿಧ ರಿಯಾಯಿತಿ ದರದ ಪಾಸ್‌ಗಳ ದರದಲ್ಲಿ ಸ್ವಲ್ಪಮಟ್ಟಿಗೆ ರಿಯಾಯಿತಿ ಘೋಷಿಸಲಾಗಿದೆ.

ಕಾರು/ಜೀಪ್ ಏಕ ಪ್ರಯಾಣ 30 ರೂ.

ದ್ವಿಮುಖ ಪ್ರಯಾಣಕ್ಕೆ 45 ರೂ.

ಮಾಸಿಕ ಪಾಸ್ 865 ರೂ.

ಮಿನಿ ಬಸ್ ಗಳಿಗೆ 50 ರೂ

ಲಘು ವಾಣಿಜ್ಯ ವಾಹನಗಳಿಗೆ, 75 ರೂ. ಹಾಗೂ 1,440 ರೂ.ಹೆಚ್ಚಳ

ಬಸ್/ಲಾರಿಗೆ ಕ್ರಮವಾಗಿ 100 ರೂ., 150 ರೂ. ಹಾಗೂ 2,955 ರೂ.

ಜೆಸಿಬಿಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳಿಗೆ ಕ್ರಮವಾಗಿ 160 ರೂ., 240 ರೂ. ಹಾಗೂ 4,760 ರೂ. ಶುಲ್ಕ ನಿಗದಿಪಡಿಸಲಾಗಿದೆ.

ನೈಸ್‌ ರಸ್ತೆಯಲ್ಲೂ ಟೋಲ್‌ ದರ ಏರಿಕೆಯಾಗಿದೆ. ಜುಲೈ 1ರಿಂದ ಜಾರಿಗೆ ಬಂದಿರುವ ಒಟ್ಟಾರೆ ಎಲ್ಲ ಎಲಿವೇಟೆಡ್‌ ರಸ್ತೆ ಹಾಗೂ ನೈಸ್‌ ರಸ್ತೆಗಳ ದರ ವಿವರ ಇಲ್ಲಿದೆ:

ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಬಳಸುವ ದ್ವಿಚಕ್ರ ಸವಾರರಿಗೆ ಟೋಲ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅವರು ಒಂದೇ ಟ್ರಿಪ್‌ಗೆ 25 ರೂ ಮತ್ತು ಬಹು ಟ್ರಿಪ್‌ಗಳಿಗೆ 40 ರೂ. ಪಾವತಿಸಬೇಕಾಗುತ್ತದೆ. ಇನ್ನು ಕಾಲುಗ ಶುಲ್ಕವನ್ನು 5 ರೂ. ಹೆಚ್ಚಿಸಲಾಗಿದೆ.

ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಒಂದೇ ಟ್ರಿಪ್‌ಗೆ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ 65 ರೂ ಮತ್ತು ಬಹು ಟ್ರಿಪ್‌ಗಳಿಗೆ 95 ರೂ. ನಿಗದಿಪಡಿಸಲಾಗಿದೆ. ಮಾಸಿಕ ಪಾಸ್ ಶುಲ್ಕವನ್ನು 1,885 ರೂ.ಗೆ ಹೆಚ್ಚಿಸಲಾಗಿದೆ.

ಅತ್ತಿಬೆಲೆ ರಸ್ತೆ ಬಳಸುವ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಿಗೆ ಒಂದು ಟ್ರಿಪ್‌ಗೆ 40 ರೂ ಮತ್ತು ಬಹು ಟ್ರಿಪ್‌ಗಳಿಗೆ 55 ರೂ. ಮಾಸಿಕ ಪಾಸ್ ಶುಲ್ಕವನ್ನು 1,130 ರೂ. ನಿಗದಿುಪಡಿಸಲಾಗಿದೆ.

ನೈಸ್ ರಸ್ತೆಯನ್ನು ಬಳಸುವ ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಪ್ರಯಾಣಿಸುವ ದೂರವನ್ನು ಆಧಾರಿಸಿ, ಪ್ರತಿ ಪ್ರಯಾಣಕ್ಕೆ 5 ರೂಪಾಯಿಗಳಷ್ಟು ಹೆಚ್ಚುವರಿ ಶುಲ್ಕವನ್ನು ವಾಹನ ಸವಾರರು ಪಾವತಿ ಮಾಡಬೇಕಾಗುತ್ತದೆ. ಇನ್ನು ಬಸ್‌ಗಳ ಟೋಲ್ ದರವು 10 ರಿಂದ 25 ರೂಪಾಯಿಗಳವರೆಗೆ ಹೆಚ್ಚಳವಾಗಿದೆ.

ಹೂಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಹೋಗುವ ವಾಹನಗಳಿಗೆ ಕಾರು 65 ರೂ. ಬಸ್ 195 ರೂ, ಟ್ರಕ್ 128 ರೂ ದ್ವಿಚಕ್ರ ವಾಹನಗಳಿಗೆ 30 ರೂ ಶುಲ್ಕಗಳು ಇವೆ.

ಕನಕಪುರ ರಸ್ತೆಯಿಂದ ಕ್ಲೋವರ್‌ಲೀಫ್ ಜಂಕ್ಷನ್‌ಗೆ ಕಾರು 35 ರೂ, ಬಸ್ 95 ರೂ. ಟ್ರಕ್ 60 ರೂ. ದ್ವಿಚಕ್ರ ವಾಹನಗಳಿಗೆ 10 ರೂ ಶುಲ್ಕಗಳು ಇವೆ.

ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಕಾರು 48 ರೂ. ಬಸ್ 155 ರೂ, ಟ್ರಕ್ 98 ರೂ ದ್ವಿಚಕ್ರ ವಾಹನಗಳಿಗೆ 98 ರೂ ಶುಲ್ಕಗಳು ಇವೆಯ

ಕ್ಲೋವರ್‌ಲೀಫ್ ಜಂಕ್ಷನ್‌ನಿಂದ ಮೈಸೂರು ಕಡಗೆ ಸಂಚಾರ ಮಾಡುವ ವಾಹನಗಳಿಗೆ ಕಾರು 33 ರೂ. ಬಸ್ 85 ರೂ, ಟ್ರಕ್ 50 ರೂ ದ್ವಿಚಕ್ರ ವಾಹನಗಳಿಗೆ 10 ರೂ ಶುಲ್ಕಗಳು ಇವೆ.

ಇದನ್ನೂ ಓದಿ: Toll price hike: ಇಂದಿನಿಂದ ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ ಎಲಿವೇಟೆಡ್‌ ರಸ್ತೆ ಟೋಲ್‌ ದರ ಹೆಚ್ಚಳ

ಹರೀಶ್‌ ಕೇರ

View all posts by this author