ಬೆಂಗಳೂರು: 66/11 ಕೆ.ವಿ ‘ಸಿʼ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಏ.13 ರಂದು ಭಾನುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ವಿಧಾನಸೌಧ, ಗಣೇಶ ದೇವಸ್ಥಾನ ಆರ್.ಎಂ.ಯು., ಮಿಲ್ಲರ್ ರಸ್ತೆ, ಜಯಮಹಲ್, ಎಂ.ಕೆ. ಬೀದಿ, ಕನ್ನಿಂಗ್ಹ್ಯಾಮ್ ರಸ್ತೆ, ಕೆಂಪ್ ರಸ್ತೆ, ಬೆನ್ಸನ್ ಟೌನ್, ಸ್ಪೆನ್ಸರ್ ರಸ್ತೆ, ಎಸ್.ಜಿ. ರಸ್ತೆ, ಆರ್.ಎಂ.ಝಡ್. ಮಿಲೇನಿಯಾ, ಬಿ & ಎಲ್ಸಿ ಆಸ್ಪತ್ರೆ, ಚಿಕ್ಕಬಜಾರ್ ರಸ್ತೆ, ಜಿನೀವಾ ಹೌಸ್, ತಿಮ್ಮಯ್ಯ ರಸ್ತೆ, ಟಾಸ್ಕರ್ ಪಟ್ಟಣ, ಪಿ.ಜಿ. ಹಳ್ಳಿ, ಹೈನ್ಸ್ ರಸ್ತೆ, ಚಂದ್ರಯ್ಯ, ಮುನೇಶ್ವರ ನಗರ, ಶಿವಾಜಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!
BESCOM: ಗ್ರಾಹಕರ ವಿದ್ಯುತ್ ಸಂಬಂಧಿತ ದೂರುಗಳಿಗೆ 8 ಜಿಲ್ಲೆಗೆ ವಾಟ್ಸಾಪ್ ಸಂಖ್ಯೆ ನೀಡಿದ ಬೆಸ್ಕಾಂ
ಬೆಂಗಳೂರು: ಗ್ರಾಹಕರ ವಿದ್ಯುತ್ ಸಂಬಂಧಿತ ದೂರುಗಳ ಶೀಘ್ರ ಪರಿಹಾರ ಹಾಗೂ ವಿಲೇವಾರಿಗೆ ಬೆಸ್ಕಾಂ (BESCOM) ವ್ಯಾಪ್ತಿಯ 8 ಜಿಲ್ಲೆಗಳಿಗೆ ಸಂಬಂಧಿಸಿದಂತೆ 11 ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಲು ಬೆಸ್ಕಾಂ ಕೋರಿದೆ. ಬೆಸ್ಕಾಂನ 1912 ಸಹಾಯವಾಣಿ ಸಂಖ್ಯೆಯು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ. ಮಳೆಗಾಲ ಸಂದರ್ಭದಲ್ಲಿ ಸಹಾಯವಾಣಿಗೆ ಕರೆಗಳ ಮಹಾಪೂರವೇ ಹರಿದು ಬರುತ್ತಿರುವುದರಿಂದ ಗ್ರಾಹಕರಿಗೆ ಸಹಾಯವಾಣಿ ಸಂಪರ್ಕಿಸಲು ಇಂತಹ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಗ್ರಾಹಕರುಗಳು ಬೆಸ್ಕಾಂನ 11 ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗಳಿಗೆ ಸಂದೇಶ ಕಳುಹಿಸುವ ಮೂಲಕ ವಿದ್ಯುತ್ ಸಂಬಂಧಿತ ದೂರುಗಳಿಗೆ ಪರಿಹಾರ ಪಡೆಯಬಹುದಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವಾಟ್ಸಾಪ್ ಸಹಾಯವಾಣಿ ವಿವರ
ಬೆಂಗಳೂರು ನಗರ ಜಿಲ್ಲೆ: ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ: 8277884014, ಕೋಲಾರ ಜಿಲ್ಲೆ: 8277884015, ಚಿಕ್ಕಬಳ್ಳಾಪುರ ಜಿಲ್ಲೆ: 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ: 8277884017, ರಾಮನಗರ ಜಿಲ್ಲೆ: 8277884018, ತುಮಕೂರು ಜಿಲ್ಲೆ: 8277884019, ಚಿತ್ರದುರ್ಗ ಜಿಲ್ಲೆ: 8277884020 ಮತ್ತು ದಾವಣಗೆರೆ ಜಿಲ್ಲೆ: 8277884021
ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912ಗೆ ಬರುವ ವಿದ್ಯುತ್ ಸಂಬಂಧಿತ ದೂರುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದ್ದು, ಕರೆಗಳ ಒತ್ತಡದಿಂದಾಗಿ 1912 ಸಂಪರ್ಕ ಸಾಧ್ಯವಾಗುವುದಿಲ್ಲ. ಹೀಗಾಗಿ ಗ್ರಾಹಕರು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿಗೆ ಸಂದೇಶದ ಜತೆಗೆ ವಿದ್ಯುತ್ ಸಂಬಂಧಿತ ದೂರುಗಳ ಪೋಟೋ ಹಾಗೂ ವಿಡಿಯೋಗಳನ್ನು ಸಹ ಕಳುಹಿಸಬಹುದಾಗಿದೆ. ಗ್ರಾಹಕರು ತಮ್ಮ ಪ್ರದೇಶದ ವ್ಯಾಪ್ತಿಗೆ ಸಂಬಂಧಿತ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿಗೆ ದೂರುಗಳನ್ನು ನೀಡಿದರೆ ಅವುಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Resortwear Fashion: ಸಮ್ಮರ್‌ನಲ್ಲಿ ರೆಸಾರ್ಟ್‌ವೇರ್ ಫ್ಯಾಷನ್ ಹಂಗಾಮ