ನೆಲಮಂಗಲ, ಮಾ.26: ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ಒಬ್ಬ (Professor) ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿ ಹಾಗೂ ಬಳಿಕ ಏಟು ತಿಂದ ಘಟನೆ ನೆಲಮಂಗಲ (Nelamangala) ತಾಲೂಕಿನ ಮೆಡಿಕಲ್ ಕಾಲೇಜಿನಲ್ಲಿ (Medical College) ನಡೆದಿದೆ. ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬದಿಗಿಟ್ಟು ಈತ ಎಸಗಿದ ಕೃತ್ಯ ವಿದ್ಯಾರ್ಥಿಗಳಿಗೆ ನಗು ಹಾಗೂ ಸಿಟ್ಟನ್ನು ಏಕಕಾಲದಲ್ಲಿ ತರಿಸಿದೆ.
ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ (Girl Student) ಚಾಕೊಲೇಟ್ ಕೊಟ್ಟು ಪ್ರೊಫೆಸರ್ ಅಬ್ದುಲ್ ಪ್ರಪೋಸ್ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಾರೆ. ಬಳಿಕ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಾರೆ.
ಅಲ್ಲದೇ ಪ್ರೊಫೆಸರ್ ಅಬ್ದುಲ್ ವರ್ತನೆಯಿಂದ ರೊಚ್ಚಿಗೆದ್ದ ಇತರ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೇ ಅಟ್ಟಾಡಿಸಿ ಹೊಡೆದಿದ್ದಾರೆ. ಕಾರಿನ ಬಳಿ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಕಂಗಾಲಾದ ಅಬ್ದುಲ್ ಹೇಗೋ ವಿದ್ಯಾರ್ಥಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ (Nelamangala Rural Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಮೆರಿಕದ ಎಫ್-18 ಫೈಟರ್ ಜೆಟ್ ಹೊಡೆದುರುಳಿಸಿತಾ ಇರಾನ್? ವೈರಲ್ ಆಗುತ್ತಿರುವ ವಿಡಿಯೋದಲ್ಲೇನಿದೆ?
ಪ್ರೊಫೆಸರ್ ಹೇಳಿದ್ದೇನು?
ಪ್ರೊಫೆಸರ್ : ನಿಮ್ಮ ಬ್ಯಾಚ್ ಹುಡುಗಿಯ ಪ್ರೀತಿ ವಿರೋಧಿಸಲು ಸಾಧ್ಯವಾಗುತ್ತಿಲ್ಲ… ನಾನು ಪ್ರಪೋಸ್ ಮಾಡ್ತಿದ್ದೀನಿ, ನಿಮ್ಮ ಬ್ಯಾಚ್‌ನ ಬಹಳ ಪ್ರಮುಖವಾದ ಹುಡುಗಿಗೆ, ನಿಮ್ಮ ಬ್ಯಾಚ್‌ನ ಎಲ್ಲರಿಗೂ ಚಾಕೋಲೇಟ್ ಹಂಚುತ್ತಿದ್ದೇನೆ. ಐ ಲವ್ ಯು ….,
ವಿದ್ಯಾರ್ಥಿನಿ : ಎಕ್ಸ್‌ಕ್ಯೂಸ್‌ಮಿ… ನೀವು ಏನಾದ್ರು ಮಾತಾಡಬೇಕು ಅಂತಾ ಇದ್ರೆ ಪ್ರಿನ್ಸಿಪಾಲ್ ಬಳಿ ಹೋಗಿ, ಇಡೀ ಬ್ಯಾಚ್ ನಿಮ್ಮ ಜೊತೆ ಬರುತ್ತೆ.
ಪ್ರೊಫೆಸರ್ : ಆಯ್ತು ಬನ್ನಿ, ಹಾಗಾದ್ರೆ ನೀನು ಹೇಗೆ ನನಗೆ ಪ್ರಪೋಸ್ ಮಾಡಿದೆ?
ವಿದ್ಯಾರ್ಥಿನಿ : ಯಾವಾಗ ಪ್ರಪೋಸ್ ಮಾಡಿದೆ..?
ಪ್ರೊಫೆಸರ್ : ಸಿಸಿಟಿವಿ ಇದೆ
ವಿದ್ಯಾರ್ಥಿನಿ : ನನಗೆ ಅದನ್ನ ತೋರಿಸು
ಪ್ರೊಫೆಸರ್ : ನಾನು ನಾಳೆ ನಿನ್ನೆ ಜೊತೆ ಮಾತಾಡ್ತೀನಿ
ವಿದ್ಯಾರ್ಥಿನಿ : ಮಾತನಾಡೋಕೆ ನನಗೆ ಇಷ್ಟ ಇಲ್ಲ
ಪ್ರೊಫೆಸರ್ : ಎಲ್ಲರೂ ಚಾಕೋಲೇಟ್ ತಗೊಳ್ಳಿ.