ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ಕೆಟ್ಟು ನಿಂತ ಕಾರಿಗೆ ಬಂದು ಬಡಿದ ಕ್ಯಾಂಟರ್‌, ಡ್ಯಾನ್ಸರ್‌ ಸುಧೀಂದ್ರ ಸಾವು

Dancer Sudhindra: ರಸ್ತೆಯ ಮಧ್ಯೆ ಡ್ಯಾನ್ಸರ್ ಸುಧೀಂದ್ರ ಅವರ ಕಾರು ಕೆಟ್ಟು ನಿಂತಿತ್ತು. ಕಾರು ಪರಿಶೀಲನೆಯ ವೇಳೆ ವೇಗವಾಗಿ ಬಂದಂತಹ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಕ್ಯಾಂಟರ್ ಗುದ್ದಿದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಡ್ಯಾನ್ಸರ್‌ ಸುಧೀಂದ್ರ ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲದಲ್ಲಿ ರಸ್ತೆ ಅಪಘಾತ, ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಪಘಾತ (Road Accident) ಸಂಭವಿಸಿದ್ದು, ಕೆಟ್ಟು ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿಯಾಗಿ ಡ್ಯಾನ್ಸರ್ ಸುಧೀಂದ್ರ (Dancer Sudhindra) ಎಂಬವರು ಸಾವಿಗೀಡಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (nelamangala) ತಾಲೂಕಿನ ಪೆಮ್ಮನಹಳ್ಳಿ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತ (Death) ಸುಧೀಂದ್ರ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು.

ರಸ್ತೆಯ ಮಧ್ಯೆ ಡ್ಯಾನ್ಸರ್ ಸುಧೀಂದ್ರ ಅವರ ಕಾರು ಕೆಟ್ಟು ನಿಂತಿತ್ತು. ಕಾರು ಪರಿಶೀಲನೆಯ ವೇಳೆ ವೇಗವಾಗಿ ಬಂದಂತಹ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಕ್ಯಾಂಟರ್ ಗುದ್ದಿದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಡ್ಯಾನ್ಸರ್‌ ಸುಧೀಂದ್ರ ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಸಾವಿನ ಸುದ್ದಿ ತಿಳಿದು ಅಸುನೀಗಿದ ಪತ್ನಿ

ಬಾಗಲಕೋಟೆ : ಬಾಗಲಕೋಟೆಯಲ್ಲಿ ಸಾವಿನಲ್ಲೂ ದಂಪತಿ ಒಂದಾಗಿರುವ ಘಟನೆ ವರದಿಯಾಗಿದೆ. ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಶಶಿಧರ್ ಪತ್ತಾರ್ (40) ಸಾವನ್ನಪ್ಪಿದ್ದಾರೆ. ಪತಿಯ ಸಾವಿನ ಸುದ್ದಿ ತಿಳಿದು ಶಶಿಧರ್ ಅವರ ಪತ್ನಿ ಸರೋಜಾ ಅವರು ಕೂಡ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಿಳಗಿಯ ನಿವಾಸಿ ಆಗಿರುವ ಇವರು ಸಾವಿನಲ್ಲೂ ಕೂಡ ಒಂದಾಗಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಇಬ್ಬರ ಮದುವೆ ಆಗಿತ್ತು.

ಇದನ್ನೂ ಓದಿ: Road Accident: ಕುಡಿದ ಮತ್ತಿನಲ್ಲಿ ಟ್ರಕ್ ಚಾಲನೆ; 5 ಕಿ.ಮೀ ರಸ್ತೆಯುದ್ದಕ್ಕೂ ಸರಣಿ ಅಪಘಾತ, 19 ಮಂದಿ ಸಾವು

ಆ್ಯಂಬುಲೆನ್ಸ್‌ ಡಿಕ್ಕಿಯಾಗಿ ದಂಪತಿ ಸಾವು

ಬೆಂಗಳೂರು: ಆ್ಯಂಬುಲೆನ್ಸ್‌ (Road Accident) ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ರೆಡ್‌ ಸಿಗ್ನಲ್‌ ಇದ್ದರಿಂದ ಬೈಕ್‌ ಸವಾರ ಬೈಕ್‌ ನಿಲ್ಲಿಸಿದ್ದ. ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಆ್ಯಂಬುಲೆನ್ಸ್‌ ನಿಯಂತ್ರಣ ತಪ್ಪಿ ಬೈಕ್‌ ಸವಾರನಿಗೆ ಗುದ್ದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬೈಕ್‌ನ್ನು ಆ್ಯಂಬುಲೆನ್ಸ್‌ 50 ಮೀಟರ್ ದೂರು ಎಳೆದೊಯ್ದಿದೆ. ಅಪಘಾತದ ಬಳಿಕ ಆ್ಯಂಬುಲೆನ್ಸ್‌ ಚಾಲಕ ತಲೆಮರಿಸಿಕೊಂಡಿದ್ದಾನೆ.

ಇಸ್ಮಾಯಿಲ್(40), ಸಮೀನಾಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಸಿದ್ದಿಖಿ ಸೇರಿ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿವೇಗ, ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ್ಯಂಬುಲೆನ್ಸ್‌ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: Telangana Road Accident: ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ; ಬಸ್‌ಗೆ ಟ್ರಕ್‌ ಡಿಕ್ಕಿಯಾಗಿ 20 ಮಂದಿ ಸಾವು

ಬೆಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಟಿನ್ ಟೌನ್ ಬಳಿ ನೀಲಸಂದ್ರದಿಂದ ಮದರ್ ತೆರೇಸಾ ರಸ್ತೆಯ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದಾಗ ಕಾರು ಡಿಕ್ಕಿಯಾಗಿ 50 ವರ್ಷದ ಆಟೋರಿಕ್ಷಾ ಚಾಲಕನೊಬ್ಬ ಸಾವನ್ನಪ್ಪಿದ್ದಾನೆ. ಮೃತ ಚಾಲಕನನ್ನು ನೀಲಸಂದ್ರ ನಿವಾಸಿ ಸೈಯದ್ ಅಕ್ರಮ್ ಪಾಷಾ (50) ಎಂದು ಗುರ್ತಿಸಲಾಗಿದೆ. ಅಕ್ರಮ್ ಪಾಷಾ ಶನಿವಾರ ರಾತ್ರಿ ಪ್ರಯಾಣಿಕರನ್ನು ಕೂರಿಸಿಕೊಂಡು ಒಆರ್‌ಸಿ ರಸ್ತೆಯ ಚೌಟರಿ ಹಾಲ್ ಬಳಿ ಏಕಮುಖ ಸಂಚಾರದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಆಟೋ ಚಲಾಯಿಸಿದ್ದಾನೆ.

ಈ ವೇಳೆ ನಿಯಂತ್ರಣ ಕಳೆದುಕೊಂಡ ಆಟೋ, ರಸ್ತೆ ಬದಿ ನಿಲುಗಡೆ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದು, ನಂತರ ಎದುರಿನಿಂದ ಬರುತ್ತಿದ್ದ ಕ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೊ ರಸ್ತೆಗೆ ಉರುಳಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪಾಷಾ ಅವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರಯಾಣಿಕರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಅಶೋಕ ನಗರ ಸಂಚಾರ ಪೊಲೀಸರು ತೆರಳಿ ಪರಿಶೀಲಿನೆ ನಡೆಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸರಸ್ವತಿಪುರಂ ನಿವಾಸಿ 62 ವರ್ಷದ ಆಟೋರಿಕ್ಷಾ ಚಾಲಕ ವೆಂಕಟರಾಮಯ್ಯ ಎಂಬುವವರು ಅಪಘಾತದಿಂದ ಮೃತಪಟ್ಟಿದ್ದಾರೆ.

ಹರೀಶ್‌ ಕೇರ

View all posts by this author