ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್ ನಿಂದ ಅ.27-30ರವರೆಗೆ ಭಾರತದಲ್ಲಿ ಐ.ಎಸ್.ಎ. ಎಂಟನೇ ಆವೃತ್ತಿಯ ಆಯೋಜನೆ

ಇದು ಉನ್ನತ ಮಟ್ಟದ ಸಚಿವರ ಸಮಾವೇಶವಾಗಿದ್ದು ಬ್ರೆಜಿಲ್ ನಲ್ಲಿ ನಡೆಯಲಿರುವ ಮುಂದಿನ ಸಿಒಪಿ30ರ ಹಿನ್ನೆಲೆಯಲ್ಲಿ ನಡೆಯುತ್ತಿದ್ದು ಸೌರಶಕ್ತಿ,ಪರಿವರ್ತನೀಯ ಹಣಕಾಸು, ತಂತ್ರಜ್ಞಾನ ರೂಪಣೆ ಮತ್ತು ನೀತಿಯ ರೂಪುರೇಷೆಗಳನ್ನು ವಿಸ್ತರಿಸಲು ಮತ್ತು ನ್ಯಾಯಯುತ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಕ್ತಿಯ ಪರಿವರ್ತನೆಗೆ ಕೌಶಲ್ಯದ ಇಕೊಸಿಸ್ಟಂ ನಿರ್ಮಿಸಲು ಶ್ರಮಿಸುತ್ತದೆ.

ಬೆಂಗಳೂರು: ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್(ಐ.ಎಸ್.ಎ) ಅಸೆಂಬ್ಲಿಯ ಎಂಟನೇ ಆವೃತ್ತಿಯು ಅಕ್ಟೋಬರ್ 27ರಿಂದ 30, 2025ರವರೆಗೆ ನವದೆಹಲಿಯ ಭಾರತ ಮಂಟಪಂನಲ್ಲಿ ನಡೆಯಲಿದ್ದು ಸೌರಶಕ್ತಿಯ ಒಂದು ಉದ್ದೇಶ ಮತ್ತು ಒಂದು ಹಂಚಿಕೊಂಡ ಬದ್ಧತೆಗೆ ಎಲ್ಲರನ್ನೂ ಒಂದೇ ಸೂರಿನಡಿ ತರಲಿದೆ.

ಭಾರತ ಮತ್ತು ಫ್ರಾನ್ಸ್ ನಲ್ಲಿ ಸಿಒಪಿ21ರಲ್ಲಿ ಪ್ಯಾರಿಸ್ ನಲ್ಲಿ ಪ್ರಾರಂಭವಾದ ಐ.ಎಸ್.ಎ ಗ್ಲೋಬಲ್ ಸೌಥ್ ನಲ್ಲಿ ಅತ್ಯಂತ ದೊಡ್ಡ ಒಪ್ಪಂದ ಆಧರಿಸಿ ಅಂತರ್ ಸರ್ಕಾರೀ ಸಂಘಟನೆಯಾಗಿದ್ದು 123 ಸದಸ್ಯ ಮತ್ತು ಸಹಿ ಹಾಕಿದ ದೇಶಗಳನ್ನು ಒಗ್ಗೂಡಿಸಿದೆ. ಇದು ಉನ್ನತ ಮಟ್ಟದ ಸಚಿವರ ಸಮಾವೇಶವಾಗಿದ್ದು ಬ್ರೆಜಿಲ್ ನಲ್ಲಿ ನಡೆಯಲಿರುವ ಮುಂದಿನ ಸಿಒಪಿ30ರ ಹಿನ್ನೆಲೆಯಲ್ಲಿ ನಡೆಯುತ್ತಿದ್ದು ಸೌರಶಕ್ತಿ,ಪರಿವರ್ತನೀಯ ಹಣಕಾಸು, ತಂತ್ರಜ್ಞಾನ ರೂಪಣೆ ಮತ್ತು ನೀತಿಯ ರೂಪುರೇಷೆಗಳನ್ನು ವಿಸ್ತರಿಸಲು ಮತ್ತು ನ್ಯಾಯಯುತ ಮತ್ತು ಎಲ್ಲರನ್ನೂ ಒಳಗೊಳ್ಳುವ ಶಕ್ತಿಯ ಪರಿವರ್ತನೆಗೆ ಕೌಶಲ್ಯದ ಇಕೊಸಿಸ್ಟಂ ನಿರ್ಮಿಸಲು ಶ್ರಮಿಸುತ್ತದೆ.

ಈ ಕುರಿತು ಭಾರತ ಸರ್ಕಾರದ ಮಾನ್ಯ ಹೊಸ ಹಾಗೂ ನವೀಕರಿಸಬಲ್ಲ ಇಂಧನ ಸಚಿವ ಹಾಗೂ ಐ.ಎಸ್.ಎ. ಅಸೆಂಬ್ಲಿಯ ಅಧ್ಯಕ್ಷ ಶ್ರೀ ಪ್ರಲ್ಹಾದ್ ಜೋಷಿ, “ತನ್ನ ಸ್ಪಷ್ಟ ಧ್ಯೇಯ ಹಾಗೂ ಸ್ಥಿರವಾದ ನೀತಿಗಳಿಂದ ಭಾರತವು ಅವಧಿಗೆ ಐದು ವರ್ಷಗಳ ಮುನ್ನವೇ ನವೀಕರಿಸಬಲ್ಲ ಶಕ್ತಿಯ ಗುರಿ ಸಾಧಿಸಿದ್ದು ಒಟ್ಟಾರೆ ಅನುಸ್ಥಾಪನೆಯಾದ ವಿದ್ಯಚ್ಛಕ್ತಿ ಸಾಮರ್ಥ್ಯದ ಶೇ.50ರಷ್ಟು ಮೀರಿದೆ.

ಇದನ್ನೂ ಓದಿ: Bangalore News: ಐಬಿಎಸ್‌ ಬ್ಯುಸಿನೆಸ್‌ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಇಂದು ಸುಮಾರಿ 125 ಗಿಗಾವ್ಯಾಟ್ ಸೌರ ಸಾಮರ್ಥ್ಯದಿಂದ ಭಾರತವು ವಿಶ್ವದ ಮೂರನೇ ಅತ್ಯಂತ ದೊಡ್ಡ ಸೌರ ಉತ್ಪಾದಕನಾಗಿದೆ. ಈ ಪ್ರಗತಿಯು ನಮ್ಮ ಯಶೋಗಾಥೆಯು ಬರೀ ಸಂಖ್ಯೆಗಳಲ್ಲ, ಬದಲಿಗೆ ಜನರ ಕುರಿತಾಗಿದೆ. ನಾವ ಸೌರ ಪ್ರಸರಣ ಮಾರ್ಗಗಳನ್ನು ವಿಕೇಂದ್ರೀಕರಣಗೊಳಿಸಿ ಗ್ರಾಮೀಣ ಮನೆಗಳಿಗೆ ಬೆಳಕು, ಆರೋಗ್ಯಕೇಂದ್ರಗಳಿಗೆ ವಿದ್ಯುತ್ ಮತ್ತು ನಮ್ಮ ರೈತರಿಗೆ ಹೊಸ ಸಾಧನಗಳನ್ನು ನೀಡಿದ್ದೇವೆ. ನಮ್ಮ ಪ್ರಧಾನಮಂತ್ರಿಗಳ ಸೂರ್ಯ ಘರ್- ಮುಫ್ತ್ ಬಿಜಲಿ ಯೋಜನಾ ಮೂಲಕ ಸೌರ ಶಕ್ತಿಯಿಂದ 20 ಲಕ್ಷ ಮನೆಗಳಿಗೆ ಪ್ರಯೋಜನ ತಲುಪಿದೆ” ಎಂದರು.

ಅವರು, “ಪಿಎಂ-ಕುಸುಮ್ ಯೋಜನೆಯಡಿಯಲ್ಲಿ ನಾವು ಈ ಪರಿವರ್ತನೆಯನ್ನು ಭಾರತದ ಹೃದಯಭಾಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಯೋಜನೆಯ ಈ ಅಂಶಗಳು 10 ಗಿಗಾವ್ಯಾಟ್ ಗಳಷ್ಟು ಸಣ್ಣ ಸೌರ ಘಟಕಗಳ ಅಳವಡಿಕೆಯ ಗುರಿ ಹೊಂದಿವೆ; 1.4 ಮಿಲಿಯನ್ ಆಫ್-ಗ್ರಿಡ್ ಸೌರ ಪಂಪ್ ಗಳಿಗೆ ಬೆಂಬಲಿಸುತ್ತವೆ; ಮತ್ತು 3.5 ಮಿಲಿಯನ್ ಗ್ರಿಡ್ ಸಂಪರ್ಕಿತ ಕೃಷಿ ಪಂಪ್ ಗಳಿಗೆ ಸೌರ ಶಕ್ತಿ ನೀಡುತ್ತವೆ. ಒಟ್ಟಿಗೆ ಈ ಪ್ರಯತ್ನಗಳು ಸ್ವಚ್ಛ ಶಕ್ತಿಯು ಕೊನೆಯ ಹಂತ ತಲುಪಬೇಕು ಎನ್ನುವುದು. ಇದು ಭಾರತದ ಇಂಧನ ಪರಿವರ್ತನೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆಯ ಸಂಯೋಜನೆ ಯಾಗಿದೆ” ಎಂದರು.

ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಲ್ಲ ಇಂಧನ ಇಲಾಖೆಯ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ, “ಇಂದು ನಾವು ಮೂರನೇ ಅತ್ಯಂತ ದೊಡ್ಡ ಸೌರಶಕ್ತಿ, ನಾಲ್ಕನೇ ದೊಡ್ಡ ಪವನ ಶಕ್ತಿ ಮತ್ತು ಒಟ್ಟಾರೆ ವಿಶ್ವದಲ್ಲಿ ತೃತೀಯ ಅತ್ಯಂತ ದೊಡ್ಡ ನವೀಕರಿಸಬಲ್ಲ ಇಂಧನದ ಅನುಷ್ಠಾನ ಹೊಂದಿದ್ದೇವೆ. ಹೆಚ್ಚುವರಿಯಾಗಿ ಸೌರ ಮಾಡ್ಯೂಲ್ ಗಳ ಉತ್ಪಾದನೆಯಲ್ಲಿ ನಾವು ಚೀನಾ ನಂತರ ಎರಡನಯ ಸ್ಥಾನದಲ್ಲಿದ್ದೇವೆ.

ನಮ್ಮ ಉತ್ಪಾದನೆ ಸೌರ ಮಾಡ್ಯೂಲ್ ಗಳಿಗೆ ಸೀಮಿತವಾಗಿಲ್ಲ ಬದಲಿಗೆ ಅವು ನಮ್ಮ ಇಂಧನ ಭದ್ರತೆಯನ್ನು ನೀಡುವ ಹಸಿರು ಹೈಡ್ರೋಜನ್ ನಂತಹ ಕ್ಷೇತ್ರಗಳಿಗೂ ವಿಸ್ತರಿಸಿದೆ ಮತ್ತು 2031ರ ವೇಳೆಗೆ 5 ಮಿಲಿಯನ್ ಟನ್ನುಗಳಷ್ಟು ಹಸಿರು ಹೈಡ್ರೋಜನ್ ಉತ್ಪಾದನೆಯ ಗುರಿಯತ್ತ ಮುನ್ನಡೆ ದಿದ್ದೇವೆ” ಎಂದರು.