ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಶಿಕ್ಷಣ ಮೇಳಕ್ಕೆ ಐರ್ಲೆಂಡ್‌ನಿಂದ 21 ಶಿಕ್ಷಣ ಸಂಸ್ಥೆಗಳು ಮತ್ತು ವೀಸಾ ಪರಿಣಿತರು ಭಾಗಿ

ಸಮಗ್ರ ಮಾರ್ಗದರ್ಶನ ಪ್ಲಾಟ್‌ಫಾರಂ ಆಗಿ ರೂಪಿಸಲಾದ ಈ ಮೇಳದಲ್ಲಿ, ತಂತ್ರಜ್ಞಾನ, ಆರೋಗ್ಯ ಸೇವೆ, ಸುಸ್ಥಿರತೆ, ಉದ್ಯಮ ಮತ್ತು ಹಣಕಾಸು, ಕಲೆ ಮತ್ತು ಮಾನವಶಾಸ್ತ್ರ ಮತ್ತು ಹೊಸ ಉದ್ಯಮ ಗಳ ವಿಭಾಗದಲ್ಲಿ ಐರ್ಲೆಂಡ್‌ನಲ್ಲಿ ಒದಗಿಸಲಾಗುವ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ಮಾಡಲಿದೆ.

ಬೆಂಗಳೂರು: ಐರ್ಲೆಂಡ್‌ನ ಉನ್ನತ ಶಿಕ್ಷಣ ವಲಯವನ್ನು ಪ್ರತಿನಿಧಿಸುವ ರಾಷ್ಟ್ರೀಯ ಬ್ರ್ಯಾಂಡ್ ಎಜುಕೇಶನ್ ಇನ್ ಐರ್ಲೆಂಡ್ 2025 ಅಕ್ಟೋಬರ್ 5 ರಂದು ಎಜುಕೇಶನ್ ಇನ್ ಐರ್ಲೆಂಡ್ ಫೇರ್ ಅನ್ನು ಮಧ್ಯಾಹ್ನ 12:00 – ಸಂಜೆ 4:00 | ತಾಜ್ ಎಂ.ಜಿ.ರೋಡ್, ಬೆಂಗಳೂರಿನಲ್ಲಿ ನಡೆಸಲಿದೆ. ಐರ್ಲೆಂಡ್‌ನ 21 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರು ಈ ಮೇಳದಲ್ಲಿ ಭಾಗವಹಿಸಲಿದ್ದು, ಐರ್ಲೆಂಡ್ ವೀಸಾ ಕಚೇರಿಯ ಅಧಿಕಾರಿಗಳೂ ಇರಲಿದ್ದಾರೆ. ಇವರು ಶಿಕ್ಷಣ ಸಂಸ್ಥೆಗಳ ಜೊತೆಗೆ ನೇರವಾಗಿ ಸಂವಾದ ನಡೆಸಲು ಮತ್ತು ಐರ್ಲೆಂಡ್‌ನಲ್ಲಿ ವ್ಯಾಸಂಗ ಕೈಗೊಳ್ಳುವ ವಿಷಯದಲ್ಲಿ ಒಳನೋಟಗಳನ್ನು ಪಡೆಯಲು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅವಕಾಶ ಮಾಡಿಕೊಡುತ್ತದೆ.

ಸಮಗ್ರ ಮಾರ್ಗದರ್ಶನ ಪ್ಲಾಟ್‌ಫಾರಂ ಆಗಿ ರೂಪಿಸಲಾದ ಈ ಮೇಳದಲ್ಲಿ, ತಂತ್ರಜ್ಞಾನ, ಆರೋಗ್ಯ ಸೇವೆ, ಸುಸ್ಥಿರತೆ, ಉದ್ಯಮ ಮತ್ತು ಹಣಕಾಸು, ಕಲೆ ಮತ್ತು ಮಾನವಶಾಸ್ತ್ರ ಮತ್ತು ಹೊಸ ಉದ್ಯಮ ಗಳ ವಿಭಾಗದಲ್ಲಿ ಐರ್ಲೆಂಡ್‌ನಲ್ಲಿ ಒದಗಿಸಲಾಗುವ ಪದವಿಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ಮಾಡಲಿದೆ. ವಿದ್ಯಾರ್ಥಿವೇತನ, ಸಂಶೋಧನೆ ಅವಕಾಶಗಳು ಮತ್ತು ಐರ್ಲೆಂಡ್‌ನ ಅಧ್ಯಯನ ನಂತರದ ಕೆಲಸದ ಅವಕಾಶಗಳ ಬಗ್ಗೆಯೂ ಭಾಗವಹಿಸಿದವರಿಗೆ ಇಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಭಾರತೀಯ ವಿದ್ಯಾರ್ಥಿಗಳಿಗೆ ಮೆಚ್ಚಿನ ಜಾಗತಿಕ ತಾಣವಾಗಿ ದೇಶ ಬೆಳೆಯುವುದಕ್ಕೆ ಇವು ಮೂಲ ಕಾರಣವಾಗಿವೆ ಎಂಬುದನ್ನು ಸ್ಮರಿಸಬಹುದು.

ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್‌ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ

ವೈಯಕ್ತಿಕಗೊಳಿಸಿದ ಮಾರ್ಗದರ್ಶನ ಮತ್ತು ಮುಖಾಮುಖಿ ಸಂವಾದಗಳ ಮೂಲಕ, ವಿದೇಶದಲ್ಲಿ ಶೈಕ್ಷಣಿಕ ಪ್ರಯಾಣವನ್ನು ಕೈಗೊಳ್ಳುವುದಕ್ಕೆ ಸಿದ್ಧರಾಗಲು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ಪಷ್ಟತೆ ಮತ್ತು ಆತ್ಮವಿಶ್ವಾಸವನ್ನು ಈ ಕಾರ್ಯಕ್ರಮದಲ್ಲಿ ಒದಗಿಸಲು ಪ್ರಯತ್ನಿಸಲಾಗುತ್ತದೆ.

ಭಾಗವಹಿಸುವ ಸಂಸ್ಥೆಗಳ ಪಟ್ಟಿ

ಅಟ್ಲಾಂಟಿಕ್ ಟೆಕ್ನಾಲಜಿಕಲ್ ಯೂನಿವರ್ಸಿಟಿ

ಡಬ್ಲಿನ್ ಬ್ಯುಸಿನೆಸ್ ಸ್ಕೂಲ್

ಡಬ್ಲಿನ್ ಸಿಟಿ ಯುನಿವರ್ಸಿಟಿ

ಡುಂಡಾಲ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಗ್ರಿಫಿತ್ ಕಾಲೇಜು

ಐಸಿಡಿ ಬ್ಯುಸಿನೆಸ್ ಸ್ಕೂಲ್

ಇಂಡಿಪೆಂಡೆಂಟ್ ಕಾಲೇಜ್

ಮೇನೂತ್ ಯುನಿವರ್ಸಿಟಿ

ಮನ್‌ಸ್ಟರ್ ಟೆಕ್ನಾಲಜಿಕಲ್ ಯುನಿವರ್ಸಿಟಿ

ನ್ಯಾಷನಲ್ ಕಾಲೇಜ್ ಆಫ್ ಐರ್ಲೆಂಡ್

ಆನ್‌ಕ್ಯಾಂಪಸ್ ಐರ್ಲೆಂಡ್

ಟೆಕ್ನಾಲಜಿಕಲ್ ಯುನಿವರ್ಸಿಟಿ ಡಬ್ಲಿನ್

ಸೌಥ್‌ಈಸ್ಟ್ ಟೆಕ್ನಾಲಜಿಕಲ್

ಯೂನಿವರ್ಸಿಟಿ ಆರ್‌ಸಿಎಸ್‌ಐ: ಯುನಿವರ್ಸಿಟಿ ಆಫ್ ಮೆಡಿಸಿನ್‌ & ಹೆಲ್ತ್ ಸೈನ್ಸಸ್‌

ಟೆಕ್ನಾಲಜಿಕಲ್ ಯುನಿವರ್ಸಿಟಿ ಆಫ್ ದಿ ಶನ್ನಾನ್

ಟ್ರಿನಿಟಿ ಕಾಲೇಜ್ ಡಬ್ಲಿನ್‌

ಟ್ರಿನಿಟಿ ಬ್ಯುಸಿನೆಸ್ ಸ್ಕೂಲ್

ಯುನಿವರ್ಸಿಟಿ ಕಾಲೇಜ್ ಕಾರ್ಕ್

ಯೂನಿವರ್ಸಿಟಿ ಕಾಲೇಜ್ ಡಬ್ಲಿನ್‌

ಯುನಿವರ್ಸಿಟಿ ಆಫ್ ಗಾಲ್‌ವೇ

ಯುನಿವರ್ಸಿಟಿ ಆಫ್‌ ಲಿಮೆರಿಕ್

ಎಜುಕೇಶನ್ ಇನ್ ಐರ್ಲೆಂಡ್‌ನ ಏಷ್ಯಾ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಎಲಿಜಬೆತ್ ಮೆಕ್‌ಹೆನ್ರಿ ಮಾತನಾಡಿ “ಈ ವರ್ಷದ ಎಜುಕೇಶನ್ ಇನ್ ಐರ್ಲೆಂಡ್ ಮೇಳದಲ್ಲಿ ಬೆಂಗಳೂರಿಗೆ ಐರ್ಲೆಂಡ್‌ನ 21 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ತರುವುದಕ್ಕೆ ಉತ್ಸಾಹಿತರಾಘಿದ್ದೇವೆ. ನಮ್ಮ ಸಂಸ್ಥೆಗಳ ಬಗ್ಗೆ ನೇರ ಮತ್ತು ಪ್ರಾಯೋಗಿಕ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಒದಗಿಸುವುದಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅವರಿಗೆ ವಿಶ್ವದರ್ಜೆಯ ಶಿಕ್ಷಣ, ಸಂಶೋಧನೆ ಅವಕಾಶಗಳು ಮತ್ತು ವೃತ್ತಿ ಸಾಧ್ಯತೆಗಳ ಬಗ್ಗೆ ತಿಳಿವಳಿಕೆ ನೀಡುತ್ತದೆ. ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಶಿಕ್ಷಣ, ಬಲವಾದ ಉದ್ಯಮ ಸಂಪರ್ಕ ಮತ್ತು ಸ್ವಾಗತಾರ್ಹ ವಾತಾವರಣವನ್ನು ಜಾಗತಿಕ ವಿದ್ಯಾರ್ಥಿಗಳಿಗೆ ಐರ್ಲೆಂಡ್ ಒದಗಿಸುತ್ತದೆ. ಬೆಂಗಳೂರಿನ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಲು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಪ್ರಯಾಣದಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಪಾತ್ರವನ್ನು ಐರ್ಲೆಂಡ್ ವಹಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಸಹಾಯ ಮಾಡುತ್ತೇವೆ” ಎಂದಿದ್ದಾರೆ.

ಈ ಅಕ್ಟೋಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಐದು ನಗರಗಳ ರೋಡ್‌ಶೋ ಪೈಕಿ ಬೆಂಗಳೂರು ಅತ್ಯಂತ ಪ್ರಮುಖವಾಗಿದ್ದು, ನಂತರದಲ್ಲಿ ಚೆನ್ನೈ, ಕೊಚ್ಚಿ, ಪುಣೆ ಮತ್ತು ಮುಂಬೈನಲ್ಲಿ ನಡೆಸಲಾಗುತ್ತದೆ. ಐರ್ಲೆಂಡ್‌ನಲ್ಲಿ ವ್ಯಾಸಂಗ ನಡೆಸಿ, ಜೀವನ ನಡೆಸುವ ವಿಷಯ ದಲ್ಲಿ ವಿಶ್ವಾಸಾರ್ಹ ಮತ್ತು ಪಾರದರ್ಶಕ ಮಾರ್ಗದರ್ಶನವನ್ನು ಈ ಮೇಳವು ಒದಗಿಸುತ್ತದೆ.

ನೋಂದಣಿ ಮಾಡಲು ದಯವಿಟ್ಟು ಭೇಟಿ ನೀಡಿ: ಸ್ಟಡಿ ಇನ್ ಐರ್ಲೆಂಡ್ ರೋಡ್‌ಶೋ ಇನ್ನಷ್ಟು ಅಪ್‌ಡೇಟ್‌ಗಳಿಗಾಗಿ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಎಜುಕೇಶನ್ ಇನ್ ಐರ್ಲೆಂಡ್‌ ಸಾಮಾಜಿಕ ಪುಟಗಳನ್ನು ಫಾಲೋ ಮಾಡಬಹುದು ಎಜುಕೇಶನ್ ಇನ್ ಐರ್ಲೆಂಡ್‌ ಬಗ್ಗೆ: ಎಜುಕೇಶನ್ ಇನ್ ಐರ್ಲೆಂಡ್ ರಾಷ್ಟ್ರೀಯ ಬ್ರ್ಯಾಂಡ್ ಆಗಿದ್ದು, ಶಿಕ್ಷಣ ಮತ್ತು ಕೌಶಲ್ಯಗಳ ಸಚಿವಾಲಯದ ಪ್ರಾಧಿಕಾರಕ್ಕೆ ಒಳಪಟ್ಟಿದೆ.

ಇದು ಐರಿಷ್ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಹೊಂದಿದೆ. ಐರ್ಲೆಂಡ್‌ನ ಉನ್ನತ ಶಿಕ್ಷಣ ಸಂಸ್ಥೆಗಳು 5000 ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಒದಗಿಸುತ್ತವೆ. ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ, ಗುಣಮಟ್ಟದ ಖಾತರಿ ಹೊಂದಿರುವ ವಿವಿಧ ಕೋರ್ಸ್‌ಗಳನ್ನು ಇವು ಒದಗಿಸುತ್ತಿವೆ. ವಿಶ್ವದಲ್ಲೇ ಐರಿಷ್‌ ಉನ್ನತ ಶಿಕ್ಷಣ ಸಂಸ್ಥೆಗಳು ಉತ್ತಮ ರ್‍ಯಾಂಕ್ ಪಡೆದಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ, ಇವು ಮೆರಿಟ್ ಆಧರಿತ ಸ್ಕಾಲರ್‌ಶಿಪ್‌ ಗಳನ್ನೂ ಒದಗಿಸಿ, ಸುಂದರ ದೇಶದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಲು ಆರ್ಥಿಕ ಸಹಾಯ ಮಾಡಲಿದೆ.