ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್‌ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ

ಎಚ್ಎಲ್ಎಲ್ನ ವಜ್ರ ಮಹೋತ್ಸವ ವಿಸ್ತರಣೆ ಮತ್ತು ವೈವಿಧ್ಯೀಕರಣ ಪ್ರಯತ್ನಗಳ ಭಾಗವಾಗಿ ಈ ಸಹಯೋಗ ಕೈಗೊಳ್ಳಲಾಗಿದೆ. ದೇಶವ್ಯಾಪಿ ಆರೋಗ್ಯ ಸೇವಾ ಜಾಲವನ್ನು ಹೊಂದಿರುವ ಎಚ್ಎಲ್ಎಲ್ ತನ್ನ ತಲುಪುವಿಕೆಯನ್ನು ಬಳಸಿಕೊಳ್ಳಲಿದ್ದು, ನಿಮ್ಹಾನ್ಸ್ ತನ್ನ ಸಂಶೋಧನೆ, ತರಬೇತಿ ಮತ್ತು ಚಿಕಿತ್ಸಾ ಸೇವೆಗಳ ಪರಿಣತಿಯನ್ನು ಹಂಚಿಕೊಳ್ಳಲಿದೆ.

ಎಚ್ಎಲ್ಎಲ್‌ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ

-

Ashok Nayak Ashok Nayak Sep 12, 2025 10:09 PM

ಬೆಂಗಳೂರು: ಭಾರತ ಸರ್ಕಾರದ ಉಪಕ್ರಮವಾದ ಎಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ (HLL), ಮಾನಸಿಕ ಆರೋಗ್ಯವನ್ನು ಬಲಪಡಿಸುವ ಉದ್ದೇಶದಿಂದ, ವಿಶೇಷವಾಗಿ ಕಾರ್ಯಸ್ಥಳಲ್ಲಿನ ಮಾನ ಸಿಕ ಆರೋಗ್ಯ ಮತ್ತು ಸಾಮರ್ಥ್ಯ ನಿರ್ಮಾಣ ಕ್ಷೇತ್ರಗಳಿಗೆ ಕೇಂದ್ರೀಕರಿಸಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಜೊತೆ ಒಪ್ಪಂದ ಮಾಡಿಕೊಂಡಿದೆ.

ಆರು ದಶಕಗಳ ಕಾಲ ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಅಗ್ಗದ, ಸುಲಭವಾಗಿ ಲಭ್ಯವಿರುವ ಆರೋಗ್ಯ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತಿರುವ ಎಚ್ಎಲ್ಎಲ್, ಇದೀಗ ಮಾನಸಿಕ ಆರೋಗ್ಯ ಕ್ಷೇತ್ರದಲ್ಲೂ ಪಾದಾರ್ಪಣೆ ಮಾಡುತ್ತಿದೆ.

ಇದನ್ನೂ ಓದಿ: Bangaluru Weather: ಬೆಂಗಳೂರಿನ ವೆದರ್‌ ಫುಲ್‌ ಕೂಲ್‌, ಕೂಲ್‌; ರೋಗಕ್ಕೆ ತುತ್ತಾಗುತ್ತಿರುವ ಜನ

ಈ ಪ್ರಯತ್ನದ ಉದ್ದೇಶವೆಂದರೆ ಗೌರವಪೂರ್ಣ, ಅಗ್ಗದ, ಸುಲಭವಾಗಿ ಲಭ್ಯವಾಗುವ ಹಾಗೂ ತಂತ್ರಜ್ಞಾನ ಆಧಾರಿತ ಮಾನಸಿಕ ಆರೋಗ್ಯ ಸೇವೆಗಳನ್ನು ಎಲ್ಲ ವಯೋಮಾನದ ಜನರಿಗೆ ಭಾರತದಲ್ಲೂ ಹಾಗೂ ವಿದೇಶದಲ್ಲೂ ಒದಗಿಸುವುದು.

Hea 2

ಒಪ್ಪಂದದ ಪ್ರಮುಖ ಅಂಶಗಳು:

ಮಾನಸಿಕ ಆರೋಗ್ಯ ಜಾಗೃತಿ ಮತ್ತು ಪ್ರಚಾರ

ಆರೋಗ್ಯ ವೃತ್ತಿಪರರಿಗೆ ಸಾಮರ್ಥ್ಯ ನಿರ್ಮಾಣ

ಮಾನಸಿಕ ಆರೋಗ್ಯ ಸಂಶೋಧನೆ ಮತ್ತು ಅಭಿವೃದ್ಧಿ

ಮಾನಸಿಕ ಆರೋಗ್ಯ ನೀತಿಗಳಿಗೆ ವಕಾಲತ್ತು

ಕಾರ್ಯಸ್ಥಳ ಹಸ್ತಕ್ಷೇಪ – ದೇಶಾದ್ಯಂತದ ಕೇಂದ್ರ ಪಿಎಸ್ಇಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಶಾಶ್ವತ ಸಮಗ್ರೀಕರಣ

ಎಚ್ಎಲ್ಎಲ್ನ ವಜ್ರ ಮಹೋತ್ಸವ ವಿಸ್ತರಣೆ ಮತ್ತು ವೈವಿಧ್ಯೀಕರಣ ಪ್ರಯತ್ನಗಳ ಭಾಗವಾಗಿ ಈ ಸಹಯೋಗ ಕೈಗೊಳ್ಳಲಾಗಿದೆ. ದೇಶವ್ಯಾಪಿ ಆರೋಗ್ಯ ಸೇವಾ ಜಾಲವನ್ನು ಹೊಂದಿರುವ ಎಚ್ಎಲ್ಎಲ್ ತನ್ನ ತಲುಪುವಿಕೆಯನ್ನು ಬಳಸಿಕೊಳ್ಳಲಿದ್ದು, ನಿಮ್ಹಾನ್ಸ್ ತನ್ನ ಸಂಶೋಧನೆ, ತರಬೇತಿ ಮತ್ತು ಚಿಕಿತ್ಸಾ ಸೇವೆಗಳ ಪರಿಣತಿಯನ್ನು ಹಂಚಿಕೊಳ್ಳಲಿದೆ. ಒಟ್ಟಾಗಿ, ಇವು ಸಂಸ್ಥೆಗಳಿಗೆ ಸಂಘಟಿತ, ಶಾಶ್ವತ ಮತ್ತು ಉದ್ಯೋಗಿ ಸ್ನೇಹಿ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ನಿರ್ಮಿಸಲು ನೆರವಾಗಲಿವೆ.

ಈ ಸಹಯೋಗವು ಎಚ್ಎಲ್ಎಲ್ ಮತ್ತು ನಿಮ್ಹಾನ್ಸ್ ನಡುವೆ ನಡೆದಿದ್ದ ಹಳೆಯ ಸಹಕಾರದ ಮುಂದುವರಿಕೆಯಾಗಿದೆ. ಇದರಲ್ಲಿ ಅಮೃತ್ ಫಾರ್ಮಸಿಗಳು ಹಾಗೂ ಸಂಸ್ಥೆಯ ಮೂಲಸೌಕರ್ಯ ಅಭಿವೃದ್ಧಿಗೆ ನೀಡಿದ ಬೆಂಬಲವನ್ನು ಒಳಗೊಂಡಿದೆ.

ಫೋಟೋ ಶೀರ್ಷಿಕೆ: ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರಥಿಮಾ ಮೂರ್ತಿ ಹಾಗೂ ಎಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ನ ಉಪಾಧ್ಯಕ್ಷ (ಮಾರ್ಕೆಟಿಂಗ್) ಡಾ. ಉನ್ನಿಕೃಷ್ಣನ್ ಎಸ್.ಎಂ. ಅವರು ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಒಪ್ಪಂದ ಪತ್ರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಾ. ಸಿ.ನವೀನ್ ಕುಮಾರ್, ಪ್ರೊಫೆಸರ್ ಆಫ್ ಸೈಕಿಯಾಟ್ರಿ ಮತ್ತು ಮುಖ್ಯಸ್ಥ – ಸಮುದಾಯ ಮನೋ ವಿಜ್ಞಾನ ವಿಭಾಗ, ನಿಂಹಾನ್ಸ್; ಶ್ರೀ ಜಗದೀಶ್, ಮ್ಯಾನೇಜರ್, ಎಚ್ಎಲ್ಎಲ್; ಹಾಗೂ ಶ್ರೀಮತಿ ರೀಜಾ ಜೋಸ್, ಕೇಂದ್ರ ಮುಖ್ಯಸ್ಥೆ – ಅಮೃತ್, ನಿಂಹಾನ್ಸ್ ಉಪಸ್ಥಿತರಿದ್ದರು.