Dharmasthala case: ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ಬೃಹತ್ ಸಂತ ಸಂಗಮ ಆಗಲಿದೆ: ವಸಂತ್ ಗಿಳಿಯಾರ್
Vasanth Giliyar: ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಲು ಶೀಘ್ರದಲ್ಲೇ ಉತ್ತರದ ಯೋಗಿಗಳು, ಮಹಾಂತರು, ದಕ್ಷಿಣದ ಸಂತರು ಧರ್ಮಕ್ಷೇತ್ರಕ್ಕೆ ಬರಲಿದ್ದಾರೆ. ದೊಡ್ಡ ಸಂತ ಸಂಗಮ ಆಗಬೇಕು. ಜಗತ್ತಿನೆಲ್ಲೆಡೆಯಿಂದ ಧರ್ಮ ಬಂಧುಗಳು ಆಗಮಿಸಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್ ತಿಳಿಸಿದ್ದಾರೆ.


ಬೆಂಗಳೂರು: ಧರ್ಮಸ್ಥಳ ಕ್ಷೇತ್ರ ದಿನದಿಂದ ದಿನಕ್ಕೆ ಹೆಚ್ಚು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಹೆಗ್ಗಡೆಯವರ ಮೇಲೆ ಸಾವಿರಾರು ಆರೋಪ ಮಾಡಿದರೂ ಅವರು ಯಾರ ವಿರುದ್ಧವೂ ಮಾತನಾಡಿಲ್ಲ. ಇವತ್ತು ಧರ್ಮಸ್ಥಳ ಪರ (Dharmasthala case) ಸಂಘಟಿತ ಹೋರಾಟ ಬೇಕಿಲ್ಲ, ಜನರೇ ಸ್ವಯಂಪ್ರೇರಿತವಾಗಿ ಹೋರಾಟಕ್ಕೆ ಮುಂದಾಗಿದ್ದಾರೆ. ಧರ್ಮಕ್ಷೇತ್ರದಲ್ಲಿ ಶೀಘ್ರದಲ್ಲೇ ಬೃಹತ್ ಸಂತ ಸಂಗಮ ಆಗಲಿದೆ ಎಂದು ಸಾಮಾಜಿಕ ಹೋರಾಟಗಾರ, ಪತ್ರಕರ್ತ ವಸಂತ್ ಗಿಳಿಯಾರ್ ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ವಿಶ್ವಾಸವಿದೆ. ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಲು ಶೀಘ್ರದಲ್ಲೇ ಉತ್ತರದ ಯೋಗಿಗಳು, ಮಹಾಂತರು, ದಕ್ಷಿಣದ ಸಂತರು ಧರ್ಮಕ್ಷೇತ್ರಕ್ಕೆ ಬರಲಿದ್ದಾರೆ. ದೊಡ್ಡ ಸಂತ ಸಂಗಮ ಆಗಬೇಕು. ಜಗತ್ತಿನೆಲ್ಲೆಡೆಯಿಂದ ಧರ್ಮ ಬಂಧುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಇನ್ನು ಕ್ಷೇತ್ರದ ಕುರಿತು ಅಪಪ್ರಚಾರದ ಬಗ್ಗೆ ಎನ್‌ಐಎ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ರಾಜ್ಯಪಾಲರು ಹಾಗೂ ಗೃಹಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Dharmasthala case: ಮಟ್ಟಣ್ಣನವರ್ ಬಳಿ ಇರುವ ಸಾಕ್ಷ್ಯಗಳೆಲ್ಲಾ ಸುಜಾತಾ ಭಟ್ ರೀತಿಯದ್ದು: ಚಕ್ರವರ್ತಿ ಸೂಲಿಬೆಲೆ
ಗಾಳಿ ಜನಾರ್ದನರೆಡ್ಡಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಇದರ ಹಿಂದೆ ಸಸಿಕಾಂತ್ ಸೆಂಥಿಲ್ ಅವರ ನೇರ ಕೈವಾಡ ಇದೆ. ಸುಜಾತಾ, ಚಿನ್ನಯ್ಯ ದೆಹಲಿ ಪ್ರವಾಸ ಮಾಡಿದ್ದಾರೆ. ಅವರಿಗೆ ಅಲ್ಲಿ ಟ್ರೈನಿಂಗ್ ನೀಡಲಾಗಿದೆ ಎಂದು ಆರೋಪಿಸಿದರು.