BBK 12: ಸ್ಪಂದನಾರಿಂದ ಮಾಸ್ಟರ್ ಸ್ಟ್ರೋಕ್: ಎಲ್ಲ ಟಾಸ್ಕ್ನಿಂದ ಧ್ರುವಂತ್ ಬ್ಲಾಕ್
ಈ ಟಾಸ್ಕ್ನಲ್ಲಿ ಧ್ರುವಂತ್ ಉತ್ತಮ ಪ್ರದರ್ಶನ ನೀಡಿರುವಂತೆ ಕಂಡುಬರುತ್ತಿದೆ. ಆದರೆ, ಸ್ಪಂದನಾ ತೆಗೆದುಕೊಂಡು ಒಂದು ನಿರ್ಧಾರ ಧ್ರುವಂತ್ ಈ ವಾರದ ಎಲ್ಲ ಟಾಸ್ಕ್ನಿಂದ ಹೊರಗುಳಿಯುವಂತಾಗಿದೆ. ಫಿನಾಲೆ ಕಂಟೆಂಡರ್ ಆಗಿರುವ ಸ್ಪಂದನಾಗೆ ವಿಶೇಷ ಅಧಿಕಾರವಿದ್ದು ಇದನ್ನು ಬಳಸಿ, ನಾನು ಧ್ರುವಂತ್ ಅವರನ್ನು ಬ್ಲಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.

Dhruvanth and Spandana -

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada 12) ಈ ವಾರ ಮೊದಲ ಫಿನಾಲೆ ನಡೆಯಲಿದೆ. ಹೀಗಾಗಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಸ್ಪರ್ಧಿಗಳು ಮೈಚಳಿ ಬಿಟ್ಟು ಆಡುತ್ತಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಹಾಗೂ ಮಾಲು ಫಿನಾಲೆ ಕಂಟೆಂಡರ್ ಆಗಿದ್ದಾರೆ. ಇನ್ನೋರ್ವ ಸ್ಪರ್ಧಿ ಯಾರು ಎಂಬುದು ನೋಡಬೇಕಿದೆ. ಸದ್ಯ ಈ ವಾರದ ಅಂತ್ಯದಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿರುವ ಕಾರಣ ಈ ವಾರ ನೀಡಲಿರುವ ಟಾಸ್ಕ್ ಸ್ಪರ್ಧಿಗಳು ಮುಖ್ಯವಾಗಿದೆ. ಆದರೆ, ಶಾಕಿಂಗ್ ಎಂಬಂತೆ ಈ ವಾರದ ಎಲ್ಲ ಟಾಸ್ಕ್ನಿಂದ ಧ್ರುವಂತ್ ಅವರನ್ನು ಸ್ಪಂದನಾ ಹೊರಗಿಟ್ಟಿದ್ದಾರೆ.
ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಫಿನಾಲೆ ಕಂಟೆಂಡರ್ ಅಲ್ಲದ ಸ್ಪರ್ಧಿಗಳು ಒಂದು ದೊಡ್ಡ ಬಲೂನ್ ಅನ್ನು ಒಂದು ತುದಿಯಿಂದ ಮತ್ತೊಂದು ತುದಿಯಲ್ಲಿರುವ ಮೇಜಿನ ಮೇಲೆ ಇಡಬೇಕು. ಹೀಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಸಾಗುವಾಗ ಮಧ್ಯದಲ್ಲಿ ಬಳ್ಳಿಯಿಂದ ಪರದೆಯ ರೀತಿ ಹಾಕಲಾಗಿದೆ. ಅದನ್ನು ತಪ್ಪಿಸಿಕೊಂಡು ಗುರಿ ಮುಟ್ಟಬೇಕು.
ಈ ಟಾಸ್ಕ್ನಲ್ಲಿ ಧ್ರುವಂತ್ ಉತ್ತಮ ಪ್ರದರ್ಶನ ನೀಡಿರುವಂತೆ ಕಂಡುಬರುತ್ತಿದೆ. ಆದರೆ, ಸ್ಪಂದನಾ ತೆಗೆದುಕೊಂಡು ಒಂದು ನಿರ್ಧಾರ ಧ್ರುವಂತ್ ಈ ವಾರದ ಎಲ್ಲ ಟಾಸ್ಕ್ನಿಂದ ಹೊರಗುಳಿಯುವಂತಾಗಿದೆ. ಫಿನಾಲೆ ಕಂಟೆಂಡರ್ ಆಗಿರುವ ಸ್ಪಂದನಾಗೆ ವಿಶೇಷ ಅಧಿಕಾರವಿದ್ದು ಇದನ್ನು ಬಳಸಿ, ನಾನು ಧ್ರುವಂತ್ ಅವರನ್ನು ಬ್ಲಾಕ್ ಮಾಡುತ್ತೇನೆ.. ಅವರಿಗೆ ಸ್ಪೋರ್ಟ್ಮೆನ್ ಶಿಪ್ ಇಲ್ಲ.. ನಾನು ಆಡಬೇಕು ಎಂಬುದು ಇಲ್ಲ ಎಂದಿದ್ದಾರೆ. ಬಳಿಕ ಬಿಗ್ ಬಾಸ್, ಧ್ರುವಂತ್ ಈ ವಾರದ ಎಲ್ಲ ಟಾಸ್ಕ್ನಿಂದ ಬ್ಲಾಕ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಹಿಂದಿನ ದಿನ ಧ್ರುವಂತ್-ಸ್ಪಂದನಾ ನಡುವೆ ಜಗಳ:
ಧ್ರುವಂತ್ ಅವರನ್ನು ಸ್ಪಂದನಾ ಟಾಸ್ಕ್ನಿಂದ ಬ್ಲಾಕ್ ಮಾಡಿದ್ದು ಬೇಕಂತಲೇ ಎಂಬ ಮಾತು ಕೇಳಿಬರುತ್ತಿದೆ. ಕಲರ್ಸ್ ಕೂಡ ‘ಮಾತಿಗೆ ಸ್ಪಂದಿಸಿದ್ದೇ ತಪ್ಪಾಯ್ತಾ?’ ಎಂಬ ಕ್ಯಾಪ್ಶನ್ನೊಂದಿಗೆ ಇಂದಿನ ಪ್ರೋಮೋ ಹಂಚಿಕೊಂಡಿದೆ. ಅಸಲಿಗೆ ಆಗಿದ್ದೇನೆಂದರೆ, ನಿನ್ನೆ ಧ್ರುವ್ ಒಂಟಿ ತಂಡದಲ್ಲಿದ್ದರೆ ಸ್ಪಂದನಾ ಸೋಮಣ್ಣ ಅವರು ಮಾಲು ಅವರೊಂದಿಗೆ ಜಂಟಿಯಾಗಿದ್ದರು. ಧ್ರುವ್ ಅವರು ಮಾಲು ಹಾಗೂ ಸ್ಪಂದನಾ ಬಳಿ ಆ ಚೇರ್ ಅನ್ನು ಅಲ್ಲಿ ಇಡಿ ಎಂದು ಹೇಳಿದ್ದಾರೆ. ಇಲ್ಲಿ ಅದು ಯಾವ ಚೇರ್ ಎಂಬ ವಿಷಯಕ್ಕೆ ಜಗಳ ಶುರುವಾಯಿತು. ಸ್ಪಂದನಾ ಅವರು ನನ್ಗೆ ಗೊತ್ತಾಗಿಲ್ಲ ಯಾವ ಚೇರ್ ಅಂತ ಹೇಳಿ ಎಂದು ಧ್ರುವ್ ಬಳಿ ಪುನಃ ಕೇಳಿದ್ದಾರೆ. ಅದಕ್ಕೆ ಅವರು ಮಾಲು ಅವರಿಗೆ ಗೊತ್ತು.. ಬೇಕಿದ್ರೆ ಅವರತ್ರನೇ ಕೇಳಿ ಎಂದಿದ್ದಾರೆ. ನೀವು ನನ್ಗೆ ಯಾಕೆ ಇನ್ನೊಂದು ಸಲ ಹೇಳಲ್ಲ ಎಂದು ಜಗಳ ನಡೆದಿದೆ. ನನ್ಗೆ ನೀವಿಬ್ರು ಒಂದೆ ಕೇಳ್ಕೊಳ್ಳಿ ಅವರತ್ರ ಎಂದು ರೇಗಾಡಿದ್ದಾರೆ.
BBK 12: ಬಿಗ್ ಬಾಸ್ನಲ್ಲಿ ಧೂಳೆಬ್ಬಿಸುತ್ತಿರುವ ರಕ್ಷಿತಾ ಶೆಟ್ಟಿಗೆ ವಾರಕ್ಕೆ ಎಷ್ಟು ಸಂಭಾವನೆ ಸಿಗುತ್ತೆ?
ಇಲ್ಲಿಗೆ ನಿಲ್ಲದ ಜಗಳ, ನನ್ನ ಹತ್ರ ಕರೆಕ್ಟ್ ಆಗಿ ಮಾತಾಡಿ ಎಂದು ಹೇಳಿದ ಸ್ಪಂದನಾಗೆ, ಅಷ್ಟೊತ್ತು ಕೂತು ಮಾತನಾಡುತ್ತಿದ್ದ ಧ್ರುವ್ ಎದ್ದು ನಿಂತು ನಾ ಕರೆಕ್ಟ್ ಆಗಿ ಮಾತಾಡಲ್ಲ ಎಂದಿದ್ದಾರೆ. ಮೇಕಪ್ ಮಾಡ್ಕೊಂಡು ಸುಮ್ನೆ ಓಡಾಡೋದು ಅಲ್ಲ ಎಂದು ಹೇಳಿದ್ದಾರೆ. ಸ್ಪಂದನಾ ಅವರಿಗೆ ಇದು ಬೇಸರ ತರಿಸಿದೆ.. ಮರ್ಯಾದೆ ಕೊಡಿ ಎಂದು ಹೇಳಿದ್ದಾರೆ. ಆದರೆ, ಇದಕ್ಕೂ ಜಗ್ಗದ ಧ್ರುವ್ ಮತ್ತಷ್ಟು ಏರು ಧ್ವನಿಯಲ್ಲಿ ಮಾತನಾಡಿದ್ದರು. ಈ ಸಿಟ್ಟನ್ನು ಸ್ಪಂದನಾ ಅವರು ಧ್ರುವ್ ಅವರನ್ನು ಟಾಸ್ಕ್ನಿಂದ ಹೊರಗಿಡುವ ಮೂಲಕ ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.