ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೃತ್ಯ ಮತ್ತು ಕಲಾ ಕ್ಷೇತ್ರದ 25 ಕಲಾವಿದರಿಗೆ ಪ್ರಶಸ್ತಿ ಪ್ರದಾನ

ನೃತ್ಯ ಮತ್ತು ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಅಮೂಲ್ಯ ಸಾಧನೆ ಮಾಡಿರುವ 25 ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಶ್ರೀ ಲಲಿತ ಕಲಾ ನಿಕೇತನ ಗುರು ವಿದುಷಿ ಶ್ರೀಮತಿ ರೇಖಾ ಜಗದೀಶ್ ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಭರತನಾಟ್ಯ ಪ್ರತಿಪಾದಕರು ಮತ್ತು ಗುರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗುರು ಡಾ. ರಾಧಾ ಶ್ರೀಧರ್, ಭಾರತೀಯ ಕನ್ಸರ್ವೇಟರಿ ಆಫ್ ಪ್ಯಾರಿಸ್ ಕರ್ನಾಟಕ ಗಾಯಕ ಸಂಸ್ಥಾಪಕ-ಅಧ್ಯಕ್ಷರಾದ ವಿದುಷಿ ಭಾವನ ಪ್ರದ್ಯುಮ್ನ ಉದ್ಘಾಟನೆ ಮಾಡಿದ್ದಾರೆ.

ಬೆಂಗಳೂರು: ನೃತ್ಯ ಪರಂಪರೆಯಲ್ಲಿ ತನ್ನದೇ ಆದ ಹೆಸರು ಮಾಡಿರುವ ಶ್ರೀ ಲಲಿತಾ ಕಲಾ ನಿಕೇತನ ಸಂಸ್ಥೆಗೆ ಈಗ 25 ರ ವಸಂತದ ಸಂಭ್ರಮ. ಇದೇ ಆ.31 ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಸ್ಥೆಯ ರಜತ ಮಹೋತ್ಸವ ಸಮಾರಂಭ ನಡೆಯಲಿದೆ.

ನೃತ್ಯ ಮತ್ತು ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಅಮೂಲ್ಯ ಸಾಧನೆ ಮಾಡಿರುವ 25 ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಶ್ರೀ ಲಲಿತ ಕಲಾ ನಿಕೇತನ ಗುರು ವಿದುಷಿ ಶ್ರೀಮತಿ ರೇಖಾ ಜಗದೀಶ್ ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಭರತನಾಟ್ಯ ಪ್ರತಿಪಾದಕರು ಮತ್ತು ಗುರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಗುರು ಡಾ. ರಾಧಾ ಶ್ರೀಧರ್, ಭಾರತೀಯ ಕನ್ಸರ್ವೇಟರಿ ಆಫ್ ಪ್ಯಾರಿಸ್ ಕರ್ನಾಟಕ ಗಾಯಕ ಸಂಸ್ಥಾಪಕ-ಅಧ್ಯಕ್ಷರಾದ ವಿದುಷಿ ಭಾವನ ಪ್ರದ್ಯುಮ್ನ ಉದ್ಘಾಟನೆ ಮಾಡಿದ್ದಾರೆ.

ಇದನ್ನೂ ಓದಿ: Bengaluru Power Cut: ಆಗಸ್ಟ್‌ 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ನೃತ್ಯ ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ನೃತ್ಯ ಗುರುಗಳಾದ ಗುರು ಉಷಾ ದಾತಾರ್ , ಖ್ಯಾತ ಮೋಹಿನಿಯಾಟ್ಟಂ ಗುರುಗಳಾದ ಗುರು ಗೋಪಿಕಾ ವರ್ಮ ಅವರಿಗೆ ಲಲಿತಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ನೃತ್ಯ ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಗೈದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಖ್ಯಾತ ಭರತನಾಟ್ಯ ನಿಪುಣ ಮತ್ತು ಗುರುಗಳಾದ ಗುರು ಶ್ರೀ ಡಾ ಸತ್ಯನಾರಾಯಣ ರಾಜು ಅವರಿಗೆ ಕಲಾ ತಪಸ್ವಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ನೃತ್ಯ ಮತ್ತು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 14 ಕಲಾವಿದರುಗಳಾದ ವಿದ್ವಾನ್ ಎಸ್ ಆರ್ ಶಿವಪ್ರಕಾಶ್ , ಡಾ ನಂದಿನಿ ಶಿವಪ್ರಕಾಶ್, ವಿದ್ವಾನ್ ಜಿ ಎಸ್ ನಾಗೇಶ್, ಡಾ.ಶ್ರೀರಂಜಿತಾ ನಾಗೇಶ್, ವಿದುಷಿ ನಿರ್ಮಲಾ ಜಗದೀಶ, ಡಾ. ಶೇಷಾದ್ರಿ ಅಯ್ಯಂಗಾರ್, ಡಾ ವಸಂತ ಕಿರಣ್, ಶ್ರೀಮತಿ ಉಷಾ ಬಸಪ್ಪ, ಶ್ರೀಮತಿ. ಶಾಮ ಕೃಷ್ಣ, ಶ್ರೀ ಮಿಥುನ್ ಶ್ಯಾಮ್, ವಿದ್ವಾನ್ ಸೂರ್ಯ ಎನ್ ರಾವ್, ವಿದುಷಿ ಪ್ರಥಮ ಪ್ರಸಾದ್, ವಿದುಷಿ ಸ್ಮಿತಾ ಪ್ರಕಾಶ್ ಸಿರ್ಸಿ, ವಿದುಷಿ. ಐಶ್ವರ್ಯ ನಿತ್ಯಾನಂದ ಅವರುಗಳಿಗೆ ನೃತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

artist

ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿದ್ದು, ಪರಂಪರ ಕಲಾ ಕುಸುಮ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಕಲಾವಿದರಾದ ಎಂ.ಡಿ.ಗಣೇಶ್, ಭಾವನಾ ಗಣೇಶ್ ಮತ್ತು ಬೇಬಿ ಅಮೂಲ್ಯ , ಶ್ರೀಹರಿ ಮತ್ತು ಚೇತನ ಕು. ಜಾನವಿ, ಆಚಾರ್ಯ ಪುಲಿಕೇಶಿ ಕಸ್ತೂರಿ, ಕು. ಸಮೃದ್ಧಿ ಪುಲಿಕೇಶಿ ಕಸ್ತೂರಿ ಮತ್ತು ಆರ್ ಎಸ್ ಕೇಶವ ಕಸ್ತೂರಿ, ಪಂಡಿತ್ ಶ್ರೀಮತಿ ಪ್ರಮೀಳಾ ಪುರುಷೋತ್ತಮ , ಪಂಡಿತ್ ಪುನೀತ್ ಭಾರದ್ವಾಜ್ ಮತ್ತು ಪಂಡಿತ್ ಲಲಿತ್ ಭಾರದ್ವಾಜ್ , ವಿದುಷಿ ಡಾ. ಬಿ ತನುಜಾ ರಾಜ್ ಮತ್ತು ಕು. ಸಂಜೀವಿನಿ. ಬಿ, ಸೋಮಶೇಖರ್ ಮತ್ತು ಸೌಮ್ಯ ಸೋಮಶೇಖರ್, ಡಾ. ಚೇತನ್ ಗಂಗಾತ್ಕರ್, ವಿದುಷಿ. ಚಂದ್ರಪ್ರಭ ಚೇತನ್ & ಕು. ಶ್ರೀ ಚರಿತಾ ಚೇತನ್ , ಡಾ ಮಾಲಿನಿ ರವಿಶಂಕರ್, ಚೈತ್ರ ಪ್ರವರ್ಧನ್ ಮತ್ತು ಕು. ಲಾಸ್ಯ ಪ್ರಿಯಾ, ಡಾ. ಅನುರಾಧಾ ವಿಕ್ರಾಂತ್ ಮತ್ತು ಕು. ರಿಯಾ ವಿಕ್ರಾಂತ್, ಡಾಕ್ಟರ್ ವೀಣಾ ಮೂರ್ತಿ ವಿಜಯ್ & ಗೌರಿ ಮೂರ್ತಿ ಶ್ರೀವಿದ್ಯಾ ಮೂರ್ತಿ ಮತ್ತು ವಿದುಲ ವೇಣುಗೋಪಾಲ್ ಅವರುಗಳಿಗೆ ಪರಂಪರ ಕಲಾ ಕುಸುಮ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಇತಿಹಾಸದಲ್ಲಿ ಅಜರಾಮರ ಎನಿಸುವಂತೆ ಹೊಸ ಕಲಾ ಪ್ರಬೇಧವನ್ನು ಸೃಷ್ಟಿಸಿ, ಕಲಾ ಪ್ರಪಂಚ ದಲ್ಲಿ ತನ್ನದೇ ಛಾಪು ಮೂಡಿಸಿ ಕಲಾ ವೈಭವಕ್ಕೆ 300 ಕ್ಕೂ ಹೆಚ್ಚು ವಿಧ್ಯಾರ್ಥಿ ಬಳಗದೊಂದಿಗೆ ಶ್ರೀ ವಿಷ್ಣುವಿನ ದಶಾವತಾರ ಪ್ರಸ್ತುತ ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಪರಂಪರ ಕಲಾ ಕುಸುಮ ಆಚರಣೆಯ ಭಾಗವಾಗಿ, ಶ್ರೀ ಲಲಿತ ಕಲಾ ನಿಕೇತನ ಸಂಸ್ಥೆಯ ಅಧ್ಯಕ್ಷರು ಗೊಂಬೆಮನೆ ಲಲಿತಮ್ಮ ಮತ್ತು ಗುರು ವಿದುಷಿ ರೇಖಾ ಜಗದೀಶ್ ಮತ್ತು ಅವರ ಪುತ್ರ ಜೆ. ಮನು ಅವರು ಮೇಲಿನ ಗಣ್ಯ ಕಲಾವಿದರು ಮತ್ತು ಕುಟುಂಬಗಳೊಂದಿಗೆ ಒಟ್ಟಾಗಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಶ್ರೀ ಲಲಿತ ಕಲಾ ನಿಕೇತನದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯೊಂದಿಗಿನ ಅವರ ಅಮೂಲ್ಯ ಸಂಬಂಧವನ್ನು ಗುರುತಿಸಿ "ಬೆಳ್ಳಿ ತಾರೆ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.