ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ಬೆಂಗಳೂರು ನಗರಕ್ಕೆ ವಿಶ್ವದರ್ಜೆಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ ತರಲು ಬೆಂಗಳೂರು ವಿಮಾನ ನಿಲ್ದಾಣ ಸಿಟಿ ಲಿಮಿಟೆಡ್ ಮತ್ತು ಪ್ರೆಸ್ಟೀಜ್ ಗ್ರೂಪ್ ಸಹಯೋಗ

ಏರ್‌ಪೋರ್ಟ್‌ ಸಿಟಿಯಲ್ಲಿ ನಿರ್ಮಾಣವಾಗಲಿರುವ ಬೃಹತ್‌ ಸಭಾಂಗಣವನ್ನು ಬಹು-ಸ್ವರೂಪದ, ಹೆಚ್ಚಿನ ಪ್ರಭಾವ ಬೀರುವ ಸ್ಥಳವನ್ನಾಗಿ ರೂಪಿಸಲಾಗುತ್ತದೆ. ಜಾಗತಿಕ ಶೃಂಗಸಭೆಗಳು, ವ್ಯಾಪಾರ ಪ್ರದರ್ಶನಗಳು, ನಾವೀನ್ಯತೆ ವೇದಿಕೆ ಮತ್ತು ಬೃಹತ್ ಸ್ವರೂಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಒಳಗೊಂಡಿರಲಿದೆ.

ಬೆಂಗಳೂರನ್ನು ವಿಶ್ವದ ಪ್ರಮುಖ ತಾಣವನ್ನಾಗಿ ರೂಪಿಸಲು ಸಿದ್ಧತೆ

Ashok Nayak Ashok Nayak Jul 30, 2025 8:50 PM

ಬೆಂಗಳೂರು: ಜಾಗತಿಕ ಸಮ್ಮೇಳನ ಮತ್ತು ವ್ಯಾಪಾರ ಕಾರ್ಯಕ್ರಮಗಳಿಗೆ ಬೆಂಗಳೂರನ್ನು ವಿಶ್ವದ ಪ್ರಮುಖ ತಾಣವನ್ನಾಗಿ ರೂಪಿಸಲು ಬೆಂಗಳೂರು ವಿಮಾನ ನಿಲ್ದಾಣ ನಗರ ನಿಯಮಿತವು (ಬಿಎಸಿಎಲ್)ಬೆಂಗಳೂರು ಏರ್‌ಪೋರ್ಟ್ ಸಿಟಿ ಆವರಣದಲ್ಲಿ ಮುಂದಿನ ಪೀಳಿಗೆಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ (ಸಿಇಸಿ) ಅಭಿವೃದ್ಧಿಪಡಿಸಲು ಪ್ರೆಸ್ಟೀಜ್ ಗ್ರೂಪ್‌ನೊಂದಿಗೆ ಸಹಯೋಗ ವನ್ನು ಘೋಷಿಸಿದೆ.

ಅತ್ಯುತ್ತಮ ದರ್ಜೆಯ 8,000 ಆಸನಗಳ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ ಇದಾಗಿರಲಿದೆ. ಜೊತೆಗೆ, ಐಷಾರಾಮಿ ಹೋಟೆಲ್‌ನೊಂದಿಗೆ ಸಂಯೋಜಿತ ಅತ್ಯಾಧುನಿಕ ಪ್ರದರ್ಶನ ಕಲಾ ರಂಗಮಂದಿರವನ್ನು ಸಹ ಒಳಗೊಂಡಿರಲಿದೆ. ಅನನ್ಯವಾಗಿ ರೂಪಿಸಲಾದ ಆಹಾರ ಮತ್ತು ಪಾನೀಯ ಮಳಿಗೆಗಳು, ಜಾಗತಿಕ ನಗರ ಔತಣದ ಅನುಭವ ನೀಡುವ ಅತ್ಯುನ್ನತ ದರ್ಜೆಯ ಕಚೇರಿ ಕಟ್ಟಡಗಳು, ವ್ಯಾಪಾರ, ಆತಿಥ್ಯ ಮತ್ತು ಸಾಂಸ್ಕೃತಿಕ ವಿನಿಮಯಕ್ಕಾಗಿ ಸೂಕ್ತ ವಾತಾವರಣ ವನ್ನೊಳಗೊಂಡ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತದೆ.

ಇದನ್ನೂ ಓದಿ: Bengaluru stampede: ಕಾಲ್ತುಳಿತ ಪ್ರಕರಣ; ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದ ರಾಜ್ಯ ಸರ್ಕಾರ

ಏರ್‌ಪೋರ್ಟ್‌ ಸಿಟಿಯಲ್ಲಿ ನಿರ್ಮಾಣವಾಗಲಿರುವ ಬೃಹತ್‌ ಸಭಾಂಗಣವನ್ನು ಬಹು-ಸ್ವರೂಪದ, ಹೆಚ್ಚಿನ ಪ್ರಭಾವ ಬೀರುವ ಸ್ಥಳವನ್ನಾಗಿ ರೂಪಿಸಲಾಗುತ್ತದೆ. ಜಾಗತಿಕ ಶೃಂಗಸಭೆಗಳು, ವ್ಯಾಪಾರ ಪ್ರದರ್ಶನಗಳು, ನಾವೀನ್ಯತೆ ವೇದಿಕೆ ಮತ್ತು ಬೃಹತ್ ಸ್ವರೂಪದ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಒಳಗೊಂಡಿರಲಿದೆ.

ಬೆಂಗಳೂರು ವಿಮಾನ ನಿಲ್ದಾಣ ನಗರ ನಿಯಮಿತದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ ಅವರು ಮಾತನಾಡಿ, “ಪ್ರೆಸ್ಟೀಜ್ ಗ್ರೂಪ್‌ನೊಂದಿಗಿನ ಈ ಪಾಲುದಾರಿಕೆಯು ವಿಶ್ವ ದರ್ಜೆಯ ಸಾಮಾಜಿಕ ಮೂಲಸೌಕರ್ಯವನ್ನು ರಚಿಸುವ ನಮ್ಮ ಬದ್ಧತೆಯನ್ನು ಪ್ರದರ್ಶಿಸು ತ್ತದೆ. ಈ ಕೇಂದ್ರವು ನಮ್ಮ ಆರ್ಥಿಕ ಕಾರ್ಯಸೂಚಿಯನ್ನು ಬೆಂಬಲಿಸುವುದಲ್ಲದೇ, ಜಾಗತಿಕ 'ಎಂಐಸಿಇ'ನಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುತ್ತದೆ. ಅಂತಾರಾಷ್ಟ್ರೀಯ ಕಾರ್ಯಕ್ರಮ ಗಳು, ನಾವೀನ್ಯತೆ ವಿನಿಮಯ ಮತ್ತು ವಾಣಿಜ್ಯ ಅವಕಾಶದ ಪ್ರಬಲ ವೇದಿಕೆಯಾಗಿ ಈ ಕೇಂದ್ರ ಹೊರಹೊಮ್ಮಲಿದೆ. ಜಾಗತಿಕ ಸಭೆಗಳನ್ನು ನಡೆಸಲು ಬೆಂಗಳೂರನ್ನು ಆದ್ಯತೆಯ ತಾಣವಾಗಿ ಸ್ಥಾಪಿಸುತ್ತದೆ" ಎಂದರು.

ಬೆಂಗಳೂರು ವಿಮಾನ ನಿಲ್ದಾಣ ನಗರದೊಳಗೆ ನೆಲೆಗೊಂಡಿರುವ ಈ ಪ್ರದೇಶವು ರಾಷ್ಟ್ರೀಯ ಹೆದ್ದಾರಿ 44, ರಾಜ್ಯ ಹೆದ್ದಾರಿ104, ಮುಂಬರುವ ಕೆಐಎಬಿ ಪಶ್ಚಿಮ ಮೆಟ್ರೋ ನಿಲ್ದಾಣ, ಉಪನಗರ ರೈಲು ಮತ್ತು ತಡೆರಹಿತ ವಿಮಾನ ನಿಲ್ದಾಣ ಪ್ರವೇಶದ ಮೂಲಕ ಸಂಪರ್ಕದ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ಮೂಲಸೌಕರ್ಯ, ಹೋಟೆಲ್‌, ಚಿಲ್ಲರೆ ವ್ಯಾಪಾರ, ಮನರಂಜನೆ ಮತ್ತು ವ್ಯಾಪಾರ ಉದ್ಯಾನವನಗಳು ಸೇರಿದಂತೆ ಶ್ರೀಮಂತ ಸೌಲಭ್ಯಗಳಿಂದ ಬೆಂಬಲಿತವಾದ ಈ ಯೋಜನೆ ಯು ಸುಸ್ಥಿರ, ಸಾರಿಗೆ-ಆಧಾರಿತ ನಗರ ಅಭಿವೃದ್ಧಿಯಲ್ಲಿ ಮಾನದಂಡವಾಗಿ ರೂಪುಗೊಳ್ಳಲು ಸಜ್ಜಾಗಿದೆ.

"ಬೆಂಗಳೂರು ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರೆಸ್ಟೀಜ್ ಗ್ರೂಪ್‌ನ ಪ್ರಯಾಣದಲ್ಲಿ ಅವಿಭಾಜ್ಯ ಅಂಗವಾಗಿದ್ದು, ಪ್ರಮುಖವಾಗಿ ಸೇಂಟ್ ರೆಗಿಸ್ ಹೋಟೆಲ್, ಮ್ಯಾರಿಯಟ್ ಮಾರ್ಕ್ಯೂ ಹೋಟೆಲ್, ಸಮಾವೇಶ ಕೇಂದ್ರಗಳು, ಪ್ರದರ್ಶನ ಕಲೆಗಳ ಕೇಂದ್ರ ವೇದಿಕೆ, ಸಮಾವೇಶ ಮತ್ತು ಪ್ರದರ್ಶನ ಕೇಂದ್ರ - ರಂಗಭೂಮಿ ಅಖಾಡ ಸೇರಿದಂತೆ ನಗರದ ಹಲವು ರೀತಿಯ ಬೆಳವಣಿಗೆಗೆ ನಿರಂತರ ಬೆಂಬಲ ನೀಡುತ್ತಿದೆ. ಜಾಗತಿಕ ಗಮನ, ಆರ್ಥಿಕ ಅವಕಾಶ ಮತ್ತು ಬೆಂಗಳೂರಿಗೆ ಸಾಂಸ್ಕೃತಿಕ ಚೈತನ್ಯವನ್ನು ತರುವ ಮೂಲಸೌಕರ್ಯವನ್ನು ರಚಿಸುವ ಮೂಲಕ ಸಾಕಷ್ಟು ಸೇವೆಗಳನ್ನು ಸಲ್ಲಿಸಿದ್ದೇವೆ" ಎಂದು ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ಹೇಳಿದರು.