Ahaan Panday: ಪುಟ್ಟ ಮಗುವಿನ ಜೊತೆ ಕ್ಯೂಟ್ ಫೋಟೋಸ್ ಶೇರ್ ಮಾಡಿದ ನಟ ಅಹಾನ್ ಪಾಂಡೆ!
ಅಹಾನ್ ಪಾಂಡೆ ಅವರ ರೊಮ್ಯಾಂಟಿಕ್ ಸಿನಿಮಾ ಸೈಯಾರಾ (Saiyaara) ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಿ ಯಶಸ್ಸು ಕಂಡಿದೆ. ಅಹಾನ್ ಪಾಂಡೆ ಸಾಕಷ್ಟು ಫ್ಯಾನ್ ಫಾಲೋವರ್ಸ್ ಕೂಡ ಹೊಂದಿದ್ದು ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಸದ್ಯ ತಮ್ಮ ಪುಟ್ಟ ಅಭಿಮಾನಿ ಅಕ್ಕನ ಮಗ ರಿವರ್ ಜೊತೆಗಿನ ಮುದ್ದಾದ ಫೋಟೋಗಳಿಂದಲೂ ಜನರ ಮನ ಗೆಲ್ಲುತ್ತಿದ್ದಾರೆ.



ಯುವ ನಟ ಆಹಾನ್ ಪಾಂಡೆ ತಮ್ಮ ಅತ್ಯಂತ ಕಿರಿಯ ಅಭಿಮಾನಿಯ ಜೊತೆಗೆ ಪೋಸ್ ಕೊಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಈ ಪುಟ್ಟ ಅಭಿಮಾನಿ ಬೇರೆ ಯಾರೂ ಅಲ್ಲ..ಆಹಾನ್ ಪಾಂಡೆ ಅವರ ಅಕ್ಕನ ಮಗ ರಿವರ್ ಜೊತೆ ಫೋಟೋ ಕ್ಲಿಕ್ಕಿಸಿ ಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಈ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದೆ. ಅಲಾನಾ ಪಾಂಡೆ ಅವರ ಮಗನಾದ ರಿವರ್, ತನ್ನ ಕ್ಯೂಟ್ ಲುಕ್ ಮತ್ತು ಅಹಾನ್ ಜೊತೆಗಿನ ವಿಶೇಷ ಬಾಂಧವ್ಯದಿಂದ ಎಲ್ಲರ ಗಮನ ಸೆಳೆದಿದ್ದಾನೆ.

ಅಲಾನಾ ಅವರು ಅಹಾನ್ ಮತ್ತು ರಿವರ್ ಒಟ್ಟಿಗೆ ಇರುವ ಹಲವಾರು ಹೃದಯಸ್ಪರ್ಶಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಅತ್ಯಂತ ಆಕರ್ಷಕವಾದ ಅಂಶವೆಂದರೆ, ಇಬ್ಬರೂ ಒಂದೇ ರೀತಿ ಬಿಳಿ ಟಿ-ಶರ್ಟ್ಗಳನ್ನು ಧರಿಸಿದ್ದರು. ಆದರೆ ರಿವರ್ನ ಟಿ-ಶರ್ಟ್ನಲ್ಲಿ ಒಂದು ವಿಶೇಷ ವಾದ ಬರಹ ಕೂಡ ಬರೆಯಲಾಗಿದೆ

''ಕೃಷ್ಣ ಕಪೂರ್ ನನ್ನ ಬೆಸ್ಟ್ ಫ್ರೆಂಡ್" ಎಂದು ಬರೆಯಲಾಗಿದ್ದು, ಇದು 'ಸೈಯಾರಾ' ಚಿತ್ರದಲ್ಲಿ ಅಹಾನ್ ನಿರ್ವಹಿಸಿದ ಪಾತ್ರಕ್ಕೆ ಒಂದು ಮುದ್ದಾದ ಸ್ಮರಣಿಕೆ ಯಾಗಿದೆ..ಈ ಫೋಟೋಗಳು ತಕ್ಷಣವೇ ವೈರಲ್ ಆಗಿದ್ದು ಅಭಿಮಾನಿಗಳು ಲೈಕ್ , ಕಾಮೆಂಟ್, ಫೈರ್ ಎಮೋಜಿ ನೀಡಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಫೋಟೋಗಳು ನೆಟ್ಟಿಗರ ಗಮನ ಸೆಳೆದಿದ್ದು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಅಭಿ ಮಾನಿಯೊಬ್ಬರು ವೆರಿ ಕ್ಯೂಟ್ ಫೋಟೋ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಇಬ್ಬರು ಬಹಳಷ್ಟು ಮುದ್ದಾಗಿ ಇದ್ದೀರಾ ಎಂದು ಬರೆದುಕೊಂಡಿದ್ದಾರೆ.

ಸಯ್ಯಾರಾ ಸಿನಿಮಾದಲ್ಲಿ ಆಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯಿಸಿದ ಚಿತ್ರವು ದೇಶಾ ದ್ಯಾಂತ ಮೆಚ್ಚುಗೆ ಗಳಿಸಿದೆ. ಮೋಹಿತ್ ಸೂರಿ ನಿರ್ದೇಶನದ ಸೈಯಾರಾ 2025 ರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.