ಬೆಂಗಳೂರು ಭಾರತದ ಆರೋಗ್ಯ ಸೇವೆ ರಾಜಧಾನಿ: ಡಾ. ಶರಣ್ ಪಾಟೀಲ್
ಸ್ಪಶ್೯ ಆಸ್ಪತ್ರೆ ಸಮೂಹವು ಇದೀಗ 9 ಆಸ್ಪತ್ರೆಗಳೊಂದಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. 1400 ಕ್ಕೂ ಹೆಚ್ಚು ಹಾಸಿಗೆ ಸಾಮರ್ಥ್ಯದೊಂದಿಗೆ ಬೆಂಗಳೂರಿನ ಜನತೆಗೆ ಉತ್ಕೃಷ್ಡ ಚಿಕಿತ್ಸೆ ಜೊತೆಗೆ ಆರೈಕೆ ಒದಗಿಸು ತ್ತಿದೆ. ಸ್ಪರ್ಶ ಅನುಭವ ಆ್ಯಪ್ ರೋಗಿಗಳ ಅಗತ್ಯತೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದು ತುರ್ತು ಸ್ಥಿತಿಗಳಲ್ಲಿ ತಕ್ಷಣ ಸ್ಪಂದಿಸುತ್ತಿದೆ.

-

ಬೆಂಗಳೂರು: ಬೆಂಗಳೂರು ದೇಶದ ಐಟಿ ರಾಜಧಾನಿ ಆದಂತೆ ಕೆಲವೇ ವರ್ಷಗಳಲ್ಲಿ ದೇಶದ ಆರೋಗ್ಯ ಸೇವೆಯ ರಾಜಧಾನಿಯೂ ಆಗಲಿದೆ ಎಂದು ಡಾಶರಣ್ ಶಿವರಾಜ್ ಪಾಟೀಲ್ ಹೇಳಿದರು.
ಬೆಂಗಳೂರು ಹೊರವಲಯದ ಸರ್ಜಾಪುರದಲ್ಲಿ ನೂತನವಾಗಿ ಆರಂಭಗೊಂಡ 250 ಹಾಸಿಗೆ ಸಾಮರ್ಥ್ಯ ದ ಸ್ಪಶ್೯ ಸಮೂಹದ 9ನೇ ಆಸ್ಪತ್ರೆ ಉದ್ಘಾಟನೆ ಬಳಿಕ ಅವರು ಈ ಭರವಸೆ ವ್ಯಕ್ತಪಡಿಸಿ ದರು.
ಬೆಂಗಳೂರು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.ದೇಶದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಬೆಂಗಳೂರು ಐಟಿ ರಾಜಧಾನಿ ಆಗುವಲ್ಲಿ ನೀಡಿದ ಕೊಡುಗೆಯಂತೆ ಆರೋಗ್ಯ ಸೇವೆಯಲ್ಲೂ ಬೆಂಗಳೂರು ದೇಶದ ರಾಜಧಾನಿ ಆಗಲಿದೆ ಮತ್ತು ಭಾರತ ವಿಶ್ವದಲ್ಲೇ ಆರೋಗ್ಯ ಕ್ಷೇತ್ರದ ನಾಯಕತ್ವ ಹೊಂದಲಿದ್ದು ಇದನ್ನು ಸಾಧ್ಯವಾಗಿಸುವ ಎಲ್ಲ ಸಾಮಥ್ರ್ಯ ಬೆಂಗಳೂರಿಗಿದೆ ಎಂದರು.
ಸ್ಪಶ್೯ ಆಸ್ಪತ್ರೆ ಕರ್ನಾಟಕದಲ್ಲೇ ಹುಟ್ಡಿ ಬೆಳೆದಿದ್ದು ಇನ್ನಷ್ಟು ಜನರಿಗೆ ಆರೋಗ್ಯ ಸೇವೆ ನೀಡುವ ಬದ್ಧತೆಯೊಂದಿಗೆ ವಿಸ್ತರಣೆ ಮಾಡುತ್ತಿದೆ. ಸಂಕೀರ್ಣವಾದ ಆರೋಗ್ಯ ಸಮಸ್ಯೆಗಳನ್ನು ವಿವಿಧ ವಿಭಾಗಗಳ ತಜ್ಞ ವೈದ್ಯರ ಸಮನ್ವಯದೊಂದಿಗೆ ಉತ್ಕೃಷ್ಟ ಸೇವೆ ಒದಗಿಸುವುದು ನಮ್ಮ ಗುರಿಯಾ ಗಿದೆ. ಬೆಂಗಳೂರಿನ ಅಗಾಧ ಬೆಳವಣಿಗೆಯ ಜೊತೆಗೆ ಇಲ್ಲಿನ ಜನರಿಗೆ ಹತ್ತಿರದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಆರೋಗ್ಯ ಸೇವೆಗಳು ಲಭ್ಯವಾಗಿಸುವ ನಿಟ್ಟಿನಲ್ಲಿ ನಗರದಲ್ಲಿ ಸ್ಪಶ್೯ ಆಸ್ಪತ್ರೆಗಳನ್ನು ವಿಸ್ತರಿಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ರಾಜ್ಯದ ಇತರ ಭಾಗಗಳಿಗೂ ಅಗತ್ಯತೆ ಅನುಸಾರ ವಿಸ್ತರಿಸಲಾಗುವುದು ಎಂದರು.
ಕಳೆದ ಹತ್ತೊಂಬತ್ತು ವರ್ಷಗಳಿಂದ ಆರೋಗ್ಯಸೇವೆಯಲ್ಲಿ ತೊಡಗಿಕೊಂಡಿರುವ ಸ್ಪಶ್೯ ಸಮೂಹ ಆಸ್ಪತ್ರೆಗಳು ಇದೀಗ ಸರ್ಜಾಪುರದ ಐಟಿ ಕಾರಿಡಾರ್ ಅಗತ್ಯತೆಗಳಿಗೆ ಸ್ಪಂದಿಸಲಿದೆ. ಪರಿಣಿತ ವೈದ್ಯ ರು, ಸೇವಾ ಮನೋಭಾವದ ಚಿಕಿತ್ಸೆ, ಆರೈಕೆ ತಂಡವು ವಿಶಿಷ್ಟವಾದ ಸ್ಪಶ್೯ ಅನುಭವವನ್ನು ನೀಡಲಿದೆ ಎಂದು ಡಾ.ಶರಣ್ ಪಾಟೀಲ್ ತಿಳಿಸಿದರು.
ಸ್ಪಶ್೯ ಆಸ್ಪತ್ರೆ ಪ್ರತಿ ವರ್ಷವೂ ನೂರಕ್ಕೂ ಹೆಚ್ಚು ಶಿಕ್ಷಕರು ಮತ್ತು ಮಕ್ಕಳಿಗೆ ಉಚಿತವಾಗಿ ದೈಹಿಕ ಊನಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆಗಳನ್ನು ಮಾಡುವುದರೊಂದಿಗೆ ಸಾಮಾಜಿಕ ಜವಾಬ್ದಾರಿ ಯನ್ನು ಮೆರೆಯುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಯ ಜೀವ ಉಳಿಸುವುದೇ ಸ್ಪಶ್೯ ಮೊದಲ ಆದ್ಯತೆ ಎಂದರು.ಚಿಕಿತ್ಸೆ ಮತ್ತು ಆರೈಕೆಯಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನ ಅಳವಡಿಸಿ ಕೊಂಡಿದ್ದು ಎಲ್ಲಿಯೂ ಅಸಾಧ್ಯ ಎಂಬಂತಹ ಚಿಕಿತ್ಸೆಯನ್ನು ಇಲ್ಲಿ ಸಾಧ್ಯವಾಗುವಂತಹ ತಜ್ಞ ವೈದ್ಯರ ತಂಡ ಹೊಂದಿರುವುದಾಗಿ ಡಾ.ಶರಣ್ ಪಾಟೀಲ್ ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಮಾತನಾಡಿ ಆಸ್ಪತ್ರೆಗಳಿಗೆ ನರಳುತ್ತಾ ಬರುವವರು ನಗುತ್ತಾ ಹೋಗುವಂತಾಗಬೇಕು ಎಂದರು.
ಸ್ಪಶ್೯ ಆಸ್ಪತ್ರೆ ಸರ್ಜಾಪುರ ಉದ್ಘಾಟಿಸಿ ಆಶೀರ್ವದಿಸಿದ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ರೋಗಿಗಳಿಗೆ ವೈದ್ಯರ ಚಿಕಿತ್ಸೆ ಜೊತೆಗೆ ಗುಣಮುಖರಾಗುವ ಭರವಸೆ ಒದಗಿಸುವುದು ಅತ್ಯಂತ ಮುಖ್ಯವಾಗಿದೆ. ವೈದ್ಯರ ಸಾಂತ್ವನದ ಮಾತುಗಳು ರೋಗ ಗುಣಪಡಿಸುವ ನಿಟ್ಟಿನಲ್ಲಿ ನಿರ್ಣಾಯಕ ಎಂದರು.
ಸ್ಪಶ್೯ ಆಸ್ಪತ್ರೆ ಸಮೂಹದ ಸಿಇಒ ಜಸ್ದೀಪ್ ಸಿಂಗ್ ಮಾತನಾಡಿ ಬೆಂಗಳೂರಿನ ಜನದಟ್ಟಣೆಯ ಪ್ರದೇಶಕ್ಕೆ ಅತ್ಯುನ್ನತ ದರ್ಜೆಯ ಆಸ್ಪತ್ರೆಯ ಅಗತ್ಯತೆಯನ್ನು ಸ್ಪಶ್೯ ಪೂರೈಸಿದೆ. ಚಿಕಿತ್ಸೆಗಾಗಿ ಗಂಟೆ ಗಟ್ಟಲೆ ಮೈಲುಗಟ್ಟಲೆ ಪ್ರಯಾಣದ ಅಗತ್ಯತೆಯನ್ನು ತಪ್ಪಿಸಿದೆ. ಈ ಭಾಗದ ಜನತೆಯ ಆರೋಗ್ಯ, ಚಿಕಿತ್ಸೆ, ಆರೈಕೆಗಳಿಗೆ ಸ್ಪಶ್೯ ಸ್ಪಂದಿಸಲಿದೆ ಎಂದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಿಕ್ಕಿಂ ರಾಜ್ಯದ ಅಡ್ವೊಕೇಟ್ ಜನರಲ್ ಬಸವಪ್ರಭು ಎಸ್.ಪಾಟೀಲ್ ಉಪಸ್ಥಿತರಿದ್ದರು.