ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲೊಂದು ಭಯಾನಕ ಘಟನೆ: ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಉಬರ್ ಕ್ಯಾಬ್ ಡ್ರೈವರ್; ವಿಡಿಯೊ ಇಲ್ಲಿದೆ

ಸಿಲಿಕಾನ್ ಸಿಟಿ ಬೆಂಗಳೂರು ಮಹಿಳೆಯರಿಗೆ, ಯುವತಿಯರಿಗೆ ಎಷ್ಟು ಸೇಫ್ ಎಂಬ ಯಕ್ಷಪ್ರಶ್ನೆ ಆಗಾಗ ಎದುರಾಗುತ್ತಲೇ ಇರುತ್ತದೆ. ಇದೀಗ ನಗರದಲ್ಲಿ ಅಂತಹದ್ದೊಂದು ಭಯಾನಕ ಕೃತ್ಯ ನಡೆದಿದೆ. ಕ್ಯಾಬ್‌ನಲ್ಲಿ ಯುವತಿ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿರುವ ಯುವತಿ ರಾತ್ರಿ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಗಾದ ಅನುಭವವನ್ನು ಅವರನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು ಕ್ಯಾಬ್‌ನಲ್ಲಾದ ಕಹಿ ಅನುಭವ ಹಂಚಿಕೊಂಡ ಇನ್‌ಫ್ಲುಯೆನ್ಸರ್‌

ಇನ್‌ಫ್ಲುಯೆನ್ಸರ್‌ ಅಮ್ಮಿ -

Profile Sushmitha Jain Oct 7, 2025 7:14 PM

ಬೆಂಗಳೂರು: ಸ್ವಾತಂತ್ರ್ಯ ಬಂದೂ ಏಳೂವರೆ ದಶಕಗಳೇ ಕಳೆದರೂ ರಾಮರಾಜ್ಯ ನಿರ್ಮಾಣ ಆಗಬೇಕು ಎಂಬ ಕನಸೂ ಇನ್ನೂ ನನಸಾಗಿಲ್ಲ. ಬಹುಶಃ ಇನ್ನೂ ಹತ್ತು ದಶಕಗಳು ಕಳೆದರೂ ಈ ಕನಸು ಸಾಕಾರಗೊಳ್ಳುವುದಿಲ್ಲ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಾರಣ ಇತ್ತೀಚೆಗೆ ಲೈಂಗಿಕ ದೌರ್ಜನ್ಯ, ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಣ್ಣು ಮಕ್ಕಳಿಗೆ ಸುರಕ್ಷತೆಯೇ ಇಲ್ಲದಂತಾಗಿದೆ ಎಂಬುದಕ್ಕೆ ನಮ್ಮ ಸುತ್ತಮುತ್ತಲಿನಲ್ಲಿ ಪ್ರತಿನಿತ್ಯ ನಡೆಯುವ ಘಟನೆಗಳೇ ಸಾರಿ ಹೇಳುತ್ತಿವೆ. ಅದರಲ್ಲೂ ದೊಡ್ಡ ದೊಡ್ಡ ನಗರಗಳಲ್ಲಿ ಭದ್ರತೆಯೇ ಒಂದು ಸಮಸ್ಯೆಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಇದಕ್ಕೆ ಹೊರತಾಗಿಲ್ಲ. ಇಲ್ಲಿ ಮಹಿಳೆಯರಿಗೆ, ಯುವತಿಯರಿಗೆ ಎಷ್ಟು ಸೇಫ್ ಎಂಬ ಯಕ್ಷಪ್ರಶ್ನೆ ಆಗಾಗ ಉದ್ಭವಿಸುತ್ತಲ್ಲೇ ಇರುತ್ತದೆ. ಇದೀಗ ನಗರದಲ್ಲಿ ಮತ್ತೊಂದು ಭಯಾನಕ ಕೃತ್ಯ ನಡೆದಿದೆ.

ಕ್ಯಾಬ್‌ನಲ್ಲಿ ಯುವತಿ ಮೇಲೆ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿರುವ ಯುವತಿಯೊಬ್ಬರು ರಾತ್ರಿ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಕ್ಯಾಬ್ ಡ್ರೈವರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ಅವರು ಹೇಳಿಕೊಂಡಿದ್ದು, ಬಳಕೆದಾರರು ಈ ಪೋಸ್ಟ್‌ಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಮೀ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌:

ಹೌದು, ರಾಜ್ಯ ರಾಜಧಾನಿಯಲ್ಲಿ ರಾತ್ರಿ ವೇಳೆ ಪ್ರಯಾಣ ದಿಗಿಲು ಹುಟ್ಟಿವಂತಿದೆ. ಕೆಲ ತಿಂಗಳ ಹಿಂದೆ ಅಪರಿಚಿತ ವ್ಯಕ್ತಿ ರಸ್ತೆಯಲ್ಲಿ ಹುಡುಗಿಯನ್ನು ಅಪ್ಪಿ, ಆಕೆಯ ಜತೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿತ್ತು. ಟಾಪ್ ಸಿಟೀಸ್ ಫಾರ್ ವುಮೆನ್ ಇನ್ ಇಂಡಿಯಾ (ಟಿಸಿಡಬ್ಲ್ಯುಐ) ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದಿದ್ದ ಬೆಂಗಳೂರಿನಲ್ಲಿ ಅತ್ಯಾಚಾರ, ದೌರ್ಜನ್ಯ, ಕಿರುಕುಳದಂತಹ ಘಟನೆಗಳು ಹೆಚ್ಚುತ್ತಿದೆ.

ಈ ಸುದ್ದಿಯನ್ನು ಓದಿ: Cough Syrup: ಕೆಮ್ಮಿನ ಸಿರಪ್ ತಯಾರಿಕೆ ಕಾರ್ಖಾನೆಯಲ್ಲಿ ಮೂಲಭೂತ ಸೌಕರ್ಯ ಕೊರತೆ; ಸ್ವಚ್ಛತೆಯೂ ಇಲ್ಲ: ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

ಅಮೀ ಎಂಬ ಬೆಂಗಳೂರು ಮೂಲದ ಇನ್‌ಫ್ಲುಯೆನ್ಸರ್‌ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ರಾತ್ರಿ ಉಬರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಗಾದ ಅನುಭವವನ್ನು ಸವಿವರವಾಗಿ ಹೇಳಿದ್ದಾರೆ. ʼʼನನ್ನ ಜೀವನದ ಅತ್ಯಂತ ಭಯಾನಕ ಅನುಭವಗಳಲ್ಲಿ ಇದು ಒಂದಾಗಿದೆ. ಪ್ರಯಾಣ ಪ್ರಾರಂಭವಾದ ಕೂಡಲೇ ಉಬರ್ ಚಾಲಕ ನನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದ. ಕ್ಯಾಬ್ ಬುಕ್ ಮಾಡುವಾಗ ನಾನು ನಮೂದಿಸಿದ ವಿಳಾಸಕ್ಕೆ ಆತ ನನ್ನನ್ನು ತಲುಪಿಸಲು ನಿರಾಕರಿಸಿದ್ದು, ನನ್ನದೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ. ನಾನು ಕೇಳಿದ ಸ್ಥಳಕ್ಕೆ ನನ್ನನ್ನು ಡ್ರಾಪ್ ಮಾಡದೇ ಕ್ಯಾಬ್ ಹತ್ತಿದ ಸ್ಥಳಕ್ಕೆ ಬಿಡಲು ಯತ್ನಿಸಿದ. ಆತನ ಈ ಕೆಟ್ಟ ನಡವಳಿಕೆಗೆ ವಿರೋಧ ವ್ಯಕ್ತಪಡಿಸಿದರೂ ಕೂಡ ಆತನ ವರ್ತನೆಯೂ ಮಿತಿ ಮೀರಿದ್ದು,ನನ್ನ ಮೇಲೆ ಹಲ್ಲೆ ಮಾಡಿದ. ಆ ಸಮಯದಲ್ಲಿ ನಾನು ಒಂಟಿಯಾಗಿದ್ದೆ, ರಾತ್ರಿ ಬೇರೆಯಾಗಿತ್ತು. ಅಲ್ಲದೇ ಉಬರ್ ಅಪ್ಲಿಕೇಶನ್‌ನಲ್ಲಿ ತೋರಿಸಿದ ವಾಹನದ ನಂಬರ್‌ ಪ್ಲೇಟ್ ಮತ್ತು ಕಾರಿನ ನಂಬರ್‌ ಪ್ಲೇಟ್‌ ಬೇರೆ ಬೇರೆಯಾಗಿದ್ದು, ಇದರಿಂದ ನಾನು ಮತ್ತಷ್ಟು ಅಘಾತಕ್ಕೆ ಒಳಗಾದೆʼʼ ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ʼʼಇಂತಹ ಘಟನೆಗಳು ಆಗಾಗ ಆಗುತ್ತಲ್ಲೇ ಇರುತ್ತದೆ. ಇದು ನನ್ನ ಒಬ್ಬಳ ಸಮಸ್ಯೆ ಅಲ್ಲ, ಅಪಾರವಾದ ನಂಬಿಕೆ ಇಟ್ಟು, ಸುರಕ್ಷತೆ ದೃಷ್ಟಿಯಿಂದ ಉಬರ್ ಬುಕ್ ಮಾಡುತ್ತೇವೆ. ಆದರೆ ಅಲ್ಲಿಯೇ ನಮ್ಮಗೆ ಭದ್ರತೆಯ ಕೊರತೆ ಇದ್ದು, ಅನೇಕರು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆʼʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.