ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Electricity Meter: ಕೈಗೆಟಕುವ ಸ್ಥಳದಲ್ಲಿ ವಿದ್ಯುತ್‌ ಮೀಟರ್‌ ಅಳವಡಿಸಲು ಬೆಸ್ಕಾಂ ಮನವಿ

Bescom News: ಬೆಸ್ಕಾಂ ವ್ಯಾಪ್ತಿಯಲ್ಲಿ ಆಪ್ಟಿಕಲ್ ಪೋರ್ಟ್ ಪ್ರೋಬ್ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಲಾಗುತ್ತಿದ್ದು, ಮಾಪಕ ಓದುಗರು ಮೀಟರ್‌ ರೀಡಿಂಗ್‌ ಮಾಡಲು ಅನುಕೂಲವಾಗುವಂತೆ ಗ್ರಾಹಕರು ತಮ್ಮ ಸ್ಥಾವರಗಳ ವಿದ್ಯುತ್ ಮೀಟರ್‌ಗಳನ್ನು ಕೈಗೆಟಕುವ ಸ್ಥಳಗಳಲ್ಲಿ ಅಳವಡಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಕೈಗೆಟಕುವ ಸ್ಥಳದಲ್ಲಿ ವಿದ್ಯುತ್‌ ಮೀಟರ್‌ ಅಳವಡಿಸಲು ಬೆಸ್ಕಾಂ ಮನವಿ

-

Profile Siddalinga Swamy Oct 27, 2025 6:14 PM

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ (BESCOM) ಆಪ್ಟಿಕಲ್ ಪೋರ್ಟ್ ಪ್ರೋಬ್ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಲಾಗುತ್ತಿದ್ದು, ಮಾಪಕ ಓದುಗರು ಮೀಟರ್‌ ರೀಡಿಂಗ್‌ ಮಾಡಲು ಅನುಕೂಲವಾಗುವಂತೆ ಗ್ರಾಹಕರು ತಮ್ಮ ಸ್ಥಾವರಗಳ ವಿದ್ಯುತ್ ಮೀಟರ್‌ಗಳನ್ನು ಕೈಗೆಟಕುವ ಸ್ಥಳಗಳಲ್ಲಿ ಅಳವಡಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಕೆಲವು ವಿದ್ಯುತ್‌ ಸ್ಥಾವರಗಳ ಮೀಟರ್‌ಗಳನ್ನು ಎತ್ತರದ ಪ್ರದೇಶದಲ್ಲಿ ಅಳವಡಿಸಿರುವುದರಿಂದ ಅಪ್ಟಿಕಲ್‌ ಪೋರ್ಟ್‌ ಪ್ರೋಬ್‌ ಮೂಲಕ ಮೀಟರ್‌ ರೀಡಿಂಗ್‌ ಮಾಡಲು ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್‌ ಮೀಟರ್‌ಗಳನ್ನು ನೆಲಮಟ್ಟದಿಂದ 5.0 ರಿಂದ 5.5 ಅಡಿ ಎತ್ತರದಲ್ಲಿ ಅಳವಡಿಸಿಕೊಳ್ಳುವಂತೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ (KPTCL) ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆವಿ ಪುಟ್ಟೇನಹಳ್ಳಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಅ.28ರಂದು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಈ ಸುದ್ದಿಯನ್ನೂ ಓದಿ | Karnataka Escoms: ಐಟಿ ವ್ಯವಸ್ಥೆಯ ತುರ್ತು ನಿರ್ವಹಣೆ ; ಅ.27, 28ರಂದು ಎಸ್ಕಾಂಗಳ ಆನ್‌ಲೈನ್‌ ಸೇವೆ ಅಲಭ್ಯ

ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು

ವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಸೆಂಚುರಿ ಲೇಔಟ್, ಅನಂತಪುರ ಗೇಟ್, ಏರ್‌ಫೋರ್ಸ್, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರ್ಲಾಪುರವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಮಾರುತಿ ನಗರ, ಪ್ರೆಸ್ಟೀಜ್ ನಗರ, ಮಾರುತಿ ನಗರ, ಮಾರುತಿ ರಾಯಲ್ ಗಾರ್. ಕಟ್ಟಿಗೇನಹಳ್ಳಿ, ಮಾರುತಿ ನಗರ, ಕೋಗಿಲು, ಪೂಜಾ ಮಹಾಲಕ್ಷ್ಮಿ ಲೇಔಟ್‌, ಸಪ್ತಗಿರಿ ಲೇಔಟ್‌, ಪ್ರಕೃತಿ ನಗರ, ಶ್ರೀನಿವಾಸಪುರ, ಅಯ್ಯಪ್ಪ ಎನ್‌ಕ್ಲೇವ್, ಎಸ್‌.ಎನ್‌. ಹಳ್ಳಿ, ಮೈಲಪನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.