ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ದೀಪಾವಳಿಯಂದು ಸಿಬ್ಬಂದಿಗೆ ಸಿಹಿತಿಂಡಿಗಳ ಬಾಕ್ಸ್ ಜತೆಗೆ 10,000 ರೂ. ನೀಡಿದ ಅಮಿತಾಬ್ ಬಚ್ಚನ್; ಇಷ್ಟೆನಾ ಎಂದ ನೆಟ್ಟಿಗರು

Amitabh Bachchan Gifts His Staff: ಬಿಗ್‍ ಬಿ ಅಮಿತಾಬ್ ಬಚ್ಚನ್ ದೀಪಾವಳಿ ಹಬ್ಬದ ಸಮಯದಲ್ಲಿ ತಮ್ಮ ಸಿಬ್ಬಂದಿಗೆ ಸಿಹಿತಿಂಡಿಗಳ ಬಾಕ್ಸ್ ಜತೆಗೆ 10,000 ರೂ. ನಗದನ್ನು ನೀಡಿದ್ದಾರೆ. ಇದರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿರಾಶೆ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿಗೆ ಸಿಹಿತಿಂಡಿ ಜತೆಗೆ 10,000 ರೂ. ನಗದು ನೀಡಿದ ಬಿಗ್‍ ಬಿ

-

Priyanka P Priyanka P Oct 27, 2025 8:35 PM

ಮುಂಬೈ: ಸೆಲೆಬ್ರಿಟಿಗಳು ದೀಪಾವಳಿಯನ್ನು (Deepavali) ಹೇಗೆ ಆಚರಿಸಿದ್ದಾರೆ ಎನ್ನುವ ಕೆಲವು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುತ್ತವೆ. ಬಿಗ್‍ ಬಿ ಅಮಿತಾಬ್ ಬಚ್ಚನ್ (Amitabh Bachchan) ಅವರಿಗೆ ಸಂಬಂಧಿಸಿದ ಇತ್ತೀಚಿನ ವಿಡಿಯೊವೊಂದು ವೈರಲ್ ಆಗಿದ್ದು (Viral Video) ಅವರು ತಮ್ಮ ಸಿಬ್ಬಂದಿಗೆ ನೀಡಿದ ಉದಾರ ಉಡುಗೊರೆಗಳನ್ನು ತೋರಿಸಲಾಗಿದೆ.

ಕಂಟೆಂಟ್ ಕ್ರಿಯೇಟರ್ ಒಬ್ಬರು ಅಮಿತಾಬ್ ಬಚ್ಚನ್ ಅವರ ಸಿಬ್ಬಂದಿ ಸದಸ್ಯರಲ್ಲಿ ಒಬ್ಬರನ್ನು ಭೇಟಿಯಾಗುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಅವರು ಈ ದೀಪಾವಳಿಗೆ ಬಿಗ್ ಬಿ ಅವರ ಸಿಬ್ಬಂದಿ ಪಡೆದ ಉಡುಗೊರೆಗಳನ್ನು ಪ್ರದರ್ಶಿಸಿದ್ದಾರೆ. ಅಮಿತಾಬ್ ಬಚ್ಚನ್ 10,000 ರೂ.ಗಳ ಜತೆಗೆ ಸಿಹಿತಿಂಡಿಗಳ ಬಾಕ್ಸ್ ವಿತರಿಸಿದ್ದಾರೆ. ಆದರೆ ವಿಡಿಯೊದಲ್ಲಿ ಉಲ್ಲೇಖಿಸಲಾದ ನಗದು ಮೊತ್ತದ ಬಗೆಗಿನ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿದೆ.

ಸಿಬ್ಬಂದಿಗೆ ಅಮಿತಾಬ್ ಬಚ್ಚನ್ ದೀಪಾವಳಿ ಉಡುಗೊರೆ

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಕಂಟೆಂಟ್ ಕ್ರಿಯೇಟರ್, ಇದು ಅಮಿತಾಬ್‌ ಬಚ್ಚನ್ ಅವರ ಮನೆ. ಅಲ್ಲಿನ ಸಿಬ್ಬಂದಿಗೆ ಈ ಸಿಹಿತಿಂಡಿಗಳನ್ನು ವಿತರಿಸಲಾಗಿದೆ ಎಂದು ಹೇಳುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಹಣದ ಬಗ್ಗೆ ಕೇಳಿದಾಗ, ಸಿಬ್ಬಂದಿ ಹಣ ಸಹ ಲಭಿಸಿತು ಎಂದು ಉತ್ತರಿಸಿದರು. ಅವರು 10,000 ರೂ.ಗಳನ್ನು ಪಡೆದಿರುವುದಾಗಿ ಹೇಳಿದರು.

ವಿಡಿಯೊ ವೀಕ್ಷಿಸಿ:

ಬಾಲಿವುಡ್‌ ನಟ ಅಮಿತಾಬ್ ಬಚ್ಚನ್ ಮುಂಬೈ ಜುಹುನಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಮನೆಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗೆ 10,000 ರೂ. ನಗದು ಮತ್ತು ಸಿಹಿತಿಂಡಿಗಳ ಬಾಕ್ಸ್ ನೀಡಿದರು ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೊದಲ್ಲಿ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ತಮ್ಮ ಉಡುಗೊರೆಗಳನ್ನು ಪಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ.

ಇದನ್ನೂ ಓದಿ: Viral Video: ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ಪಟಾಪಟಿ ಚಡ್ಡಿ! ಬಹಳ ಟ್ರೆಂಡಿಂಗ್‌ನಲ್ಲಿದೆ ಈ ವಿಡಿಯೊ

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ ಈ ವಿಡಿಯೊ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಕಮೆಂಟ್‌ಗಳ ವಿಭಾಗದಲ್ಲಿ ಅನೇಕರು, ಬಿಗ್‍ ಬಿ ನೀಡಿದ ನಗದು ಮೊತ್ತದ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದರು. ಸಿಬ್ಬಂದಿಯ ಕೆಲಸ ಮತ್ತು ನಟನ ಸಂಪತ್ತನ್ನು ಪರಿಗಣಿಸಿದರೆ ಅದು ಸಾಕಾಗುವುದಿಲ್ಲ ಎಂದು ಅವರು ಹೇಳಿದರು. ಅವರು ಮಾಡುವ ಕೆಲಸಗಳಿಗೆ ಅವರಿಗೆ ಹೆಚ್ಚಿನ ಹಣವನ್ನು ನೀಡಬೇಕು. ಒಬ್ಬ ಸ್ಟಾರ್ ನಟನಾಗಿರುವುದರಿಂದ ಅವರೊಂದಿಗೆ 24X7 ಓಡಾಡುವುದೆಂದರೆ ಸುಲಭದ ಕೆಲಸವಲ್ಲ ಎಂದು ಒಬ್ಬ ಬಳಕೆದಾರರು ಹೇಳಿದರು.

ಅವರು ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಆದರೆ ಅವರಿಗೆ ಸೇವೆ ಸಲ್ಲಿಸುವ ಸಿಬ್ಬಂದಿಗೆ ನಾಣ್ಯಗಳನ್ನು ಪಾವತಿಸುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಟೀಕಿಸಿದರು. ಫ್ಯಾಕ್ಟರಿ ಕೆಲಸಗಾರರು ಇದಕ್ಕಿಂತ ಹೆಚ್ಚಿನದನ್ನು ಪಡೆಯುತ್ತಾರೆ ಎಂದು ಇನ್ನೊಬ್ಬರು ಬರೆದರೆ, ಅವರು 10,000 ರೂ.ಗಳಿಂದ ಏನು ಮಾಡುತ್ತಾರೆ? ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕಂಪನಿಗಳು ಮತ್ತು ವ್ಯವಹಾರ ಮಾಲೀಕರು ತಮ್ಮ ಉದ್ಯೋಗಿಗಳಿಗೆ ಅದ್ಧೂರಿ ದೀಪಾವಳಿ ಉಡುಗೊರೆಗಳನ್ನು ನೀಡಿರುವ ವಿಡಿಯೊಗಳ ಅಲೆಯ ನಡುವೆ ಇದು ಹರಿದಾಡುತ್ತಿದೆ. ನೋಯ್ಡಾ ಮೂಲದ ಇನ್ಫೋ ಎಡ್ಜ್ ಕಂಪನಿಯು ದೀಪಾವಳಿಗೆ ತನ್ನ ಸಿಬ್ಬಂದಿಗೆ ವಿಐಪಿ ಸೂಟ್‌ಕೇಸ್‌ಗಳ ಸೆಟ್, ತಿಂಡಿಗಳ ಬಾಕ್ಸ್ ಮತ್ತು ಸಾಂಪ್ರದಾಯಿಕ ದೀಪವನ್ನು ನೀಡಿತ್ತು. ಇನ್ನು ಚಂಡೀಗಢದಲ್ಲಿ ಔಷಧ ಕಂಪನಿಯೊಂದರ ಮಾಲೀಕರೊಬ್ಬರುಸಿಬ್ಬಂದಿಗೆ ಐಷಾರಾಮಿ ಕಾರು ಗಿಫ್ಟ್ ಮಾಡಿದ್ದರು.