ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

48 ವರ್ಷದ ಎರಡು ಮಕ್ಕಳ ತಾಯಿಯಾದ ಮಹಿಳೆ 8 ತಿಂಗಳಿಂದ ಹೊಟ್ಟೆಯಲ್ಲಿ ಕಾಣಿಸಿಕೊಂಡ ಉಬ್ಬರವನ್ನು ಗ್ಯಾಸ್ಟಿಕ್ ತೊಂದರೆ ಎಂದುಕೊಂಡು ಆಯುರ್ವೇದ ಔಷಧ ಸೇವಿಸುತ್ತಿದ್ದರು. ಕಳೆದ 4-5 ತಿಂಗಳಿಂದ ಹೊಟ್ಟೆ ಉಬ್ಬರ ಅಧಿಕವಾದರೂ ರೋಗಿಯು ಮಾತ್ರೆಯನ್ನೇ ಮುಂದುವರಿಸಿ ದ್ದರು.

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ವೈದ್ಯರು

Ashok Nayak Ashok Nayak Aug 15, 2025 12:34 PM

ಬೆಂಗಳೂರು: ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರ ಚಿಕಿತ್ಸೆ ನಡೆಸಿದ ರಾಜಾಜಿನಗರದ ಇಎಸ್‌ಐಸಿ, ಎಂಸಿ ಪಿಜಿಐಎಂಎಸ್‌ಆರ್ ಮತ್ತು ಎಂಹೆಚ್ ಆಸ್ಪತ್ರೆ ವೈದ್ಯರು 17 ಕೆ.ಜಿ. ಗೆಡ್ಡೆ ತೆಗೆದಿದ್ದಾರೆ. ರೋಗಿ ಇದೀಗ ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

ಇಎಸ್‌ಐಸಿ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ, ಅನಿತಾ. ಎ.ಎಂ ಮತ್ತು ಆಂಕೋಸರ್ಜನ್ ಡಾ. ಹೇಮಂತ್. ಎಸ್. ಗಾಲಿಗೆ ನೇತೃತ್ವದಲ್ಲಿ ಯಶಸ್ವಿಯಾಗಿ ಶಸ್ತ ಚಿಕಿತ್ಸೆ ನಡೆಸಲಾಗಿದೆ.

48 ವರ್ಷದ ಎರಡು ಮಕ್ಕಳ ತಾಯಿಯಾದ ಮಹಿಳೆ 8 ತಿಂಗಳಿಂದ ಹೊಟ್ಟೆಯಲ್ಲಿ ಕಾಣಿಸಿಕೊಂಡ ಉಬ್ಬರವನ್ನು ಗ್ಯಾಸ್ಟಿಕ್ ತೊಂದರೆ ಎಂದುಕೊಂಡು ಆಯುರ್ವೇದ ಔಷಧ ಸೇವಿಸುತ್ತಿದ್ದರು. ಕಳೆದ 4-5 ತಿಂಗಳಿಂದ ಹೊಟ್ಟೆ ಉಬ್ಬರ ಅಧಿಕವಾದರೂ ರೋಗಿಯು ಮಾತ್ರೆಯನ್ನೇ ಮುಂದುವರಿಸಿ ದ್ದರು.

ರೋಗಿಯ ಪ್ರಕಾರ ಕಳೆದ ಒಂದುವರೆ ವರ್ಷದಿಂದ ಸರಿಯಾಗಿ ಋತುಚಕ್ರ ಆಗುತ್ತಿರಲಿಲ್ಲ. ಹೊಟ್ಟೆ ಉಬ್ಬರದ ಒತ್ತಡ ಸಮಸ್ಯೆಗಳು, ಮಲಮೂತ್ರ, ಉಸಿರಾಟದ ತೊಂದರೆಗಳು ಕಾಣಿಸಿರುವುದಿಲ್ಲ. ಆದರೆ ಈಕೆ ಅಧಿಕ ರಕ್ತೊದೊತ್ತಡ ಹೊಂದಿದ್ದು, ಇದ್ಕಕೆ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ: Vishweshwar Bhat Column: ಪೈಲಟ್‌ ಹೀಗೆ ಹೇಳಬಹುದೇ ?

ರೋಗಿಯನ್ನು ತಪಾಸಣೆ ಮಾಡುವಾಗ, ರೋಗಿಯ ಹೊಟ್ಟೆಯು (3 ಮಕ್ಕಳ ಗಾತ್ರದ) ಗರ್ಬಿಣಿ ಹೊಟ್ಟೆಯ ರೀತಿಯಲ್ಲಿದ್ದು, ನೀರು ತುಂಬಿದ ಗಡ್ಡೆಯ ಸ್ಥಿತಿಯಲ್ಲಿರುವುದು ಕಂಡು ಬಂತು. ಯೋನಿ ಹಾಗೂ ಗರ್ಭಕೋಶವನ್ನು ಪರೀಕ್ಷಿಸಿದಾಗ ಗರ್ಭಕೋಶದ ಕಂಠವು ಸಹಜರೀತಿಯಲ್ಲಿದ್ದು ಗಡ್ಡೆಯು ಗರ್ಭಕೋಶವನ್ನು ಎಳೆದಿರುವ ಲಕ್ಷಣಗಳು ಕಂಡು ಬಂತು. ಹೊಟ್ಟೆಯ ಅಲ್ಪಾಸೌಂಡ್ ಇಮೇ ಜಿಂಗ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಿದಾಗ ಗರ್ಭಕೋಶದಲ್ಲಿ ಗಡ್ಡೆ ಇರುವುದು ಪತ್ತೆ ಯಾಯಿತು.

ಜೂನ್‌ 24 ರಂದು ರೋಗಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ ದೊಡ್ಡಗಾತ್ರದ ನೀರು ತುಂಬಿದ ಗಡ್ಡೆ ಕಂಡು ಬಂತು. 17 ಕೆ.ಜಿ. ಗಡ್ಡೆಯು ಗರ್ಭಕೋಶದ ಮುಂದಿನ ಪದರದಲ್ಲಿತ್ತು. ರೋಗಿಯ ಎರಡು ಅಂಡಾಶಯಗಳು ಸಹಜ ಸ್ಥಿತಿಯಲ್ಲಿದ್ದವು. ಗಡ್ಡೆಯ ಸುತ್ತಮುತ್ತಲಿನ ಅಂಗಾಗಳು ಸಹಜ ಸ್ಥಿತಿಯಲ್ಲಿತ್ತು. ಗಡ್ಡೆಯನ್ನು ಹಿಸ್ಟೋಪಾಥಾಲಜಿಯ ಪರೀಕ್ಷೆಗೆ ಒಳಪಡಿಸಿದಾಗ ಗಡ್ಡೆಯು ಸಿಸ್ಟಿಕ್‌ ಡಿಜನೆರೇಷನ್‌ ಫೈಬ್ರಾಯ್ಡ್ ಎಂದು ದೃಢೀಕರಿಸಲಾಗಿದೆ.

ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಸಹಜ ಸ್ಥಿತಿಯಲ್ಲಿದ್ದು ಚಿಕಿತ್ಸೆಗೆ ಸ್ವಂದಿಸುತ್ತಿದ್ಧಾರೆ. ಫೈಬ್ರಾಯ್ಡ್ ಗಡ್ಡೆಯು ಸಾಮಾನ್ಯ ವಾಗಿ 20-30% ಮಹಿಳೆಯರಲ್ಲಿಕಂಡುಬರು ತ್ತದೆ. 40 ರಿಂದ 80ರಷ್ಟು ಮಹಿಳೆ ಯರಲ್ಲಿ ಈ ಫೈಬ್ರಾಯ್ಡ್‌ ಗಡ್ಡೆಯ ಬೆಳವಣಿಗೆ ಸಾಮಾನ್ಯ. ಕೆಲವರು ಏನೂ ರೋಗ ಲಕ್ಷಣಗಳನ್ನು ಹೊಂದಿರುವುದೇ ಇಲ್ಲ. ಆದರೆ ಫೈಬ್ರಾಯ್ಡ್‌ ಗಡ್ಡೆ ದೊಡ್ಡದಾಗಿ ಬೆಳೆಯುತ್ತಿದ್ದರೆ ಕೆಲವೊಂದು ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸಿಸ್ಟಿಕ್‌ ಡಿಜನೆರೇಷನ್‌ ಫೈಬ್ರಾಯ್ಡ್ ತೊಡಕು 4% ಮಹಿಳೆಯರಲ್ಲಿಕಂಡುಬರು ತ್ತದೆ

ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೋನಿಯ, ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ ಪಿಜಿ ವಿದ್ಯಾರ್ಥಿನಿ ಡಾ. ಅಹಲ್ಯಾ, ಅರವಳಿಕೆ ತಜ್ಞರಾದ ಡಾ. ಲಕ್ಷ್ಮಿ ಮತ್ತು ತಂಡ. ದಾದಿಯರಾದ ವಂದನಾ ಅವರು ಶಸ್ತ್ತ ಚಿಕಿತ್ಸೆಯಲ್ಲಿ ಭಾಗವಹಿಸಿದ್ದರು. ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಲತಾ ಮತ್ತು ಡಾ. ಅಶೋಕ್ ಕುಮಾರ್, ಡೀನ್: ಡಾ. ಸಂಧ್ಯಾ. ಆರ್ ಮತ್ತು ಚಿಕಿತ್ಸಾ ಅಧೀಕ್ಷಕರಾದ ಡಾ. ಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯಿತು