ಐಎಎಸ್ ಅಧಿಕಾರಿ ವಾಸಂತಿ ವಿರುದ್ಧ ಎಫ್ ಐಆರ್
ನೈಸ್ ರಸ್ತೆ ಪಕ್ಕ 350 ಕೋಟಿ ರೂ.ಮೌಲ್ಯದ ಜಮೀನು
ಬೆಂಗಳೂರು : ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿದ್ದ ನಾಲ್ವರು ಖಾಸಗಿ ವ್ಯಕ್ತಿಗಳಿಗೆ, ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಬಿ.ವಿ.ವಾಸಂತಿ ಅಮರ್ ಅವರು ೧೪ ಎಕರೆ ಸರಕಾರಿ ಜಮೀನನ್ನು ಪರಭಾರೆ ಮಾಡಿದ ಪ್ರಕರಣವೊಂದು ಪತ್ತೆಯಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಕೊಡಿಗೆಹಳ್ಳಿಯ ಸರ್ವೆ ನಂಬರ್ 86ರ ಈ ಜಮೀನಿನ ಮಾರುಕಟ್ಟೆ ಮೌಲ್ಯ ೩೫೦ ಕೋಟಿ ರು. ಎಂದು ಅಂದಾಜಿಸಲಾಗಿದೆ. ಅರ್ಜಿದಾರರ ಮನವಿಯನ್ನು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯು ಈ ಹಿಂದೆಯೇ ಎರಡು ಬಾರಿ ತಿರಸ್ಕರಿಸಿದ್ದರೂ, ಅದನ್ನು ಗಣನೆಗೆ ತೆಗೆದುಕೊಳ್ಳದೆ ಪರಭಾರೆ ಮಾಡಲಾಗಿದೆ. ನೈಸ್ ರಸ್ತೆಗೆ ಹೊಂದಿಕೊಂಡಂತೆಯೇ ಇರುವ ಈ ಜಮೀನಿಗೆ ಸಂಬಂಧಿಸಿದಂತೆ, ೨೦೦೭ರಲ್ಲಿ ಹೈಕೋರ್ಟ್‌ನಲ್ಲಿ ಪುಟ್ಟಮ್ಮ, ಎಚ್.ಬಿ.ಶ್ರೀಧರ್, ಕೆ.ವಿ.ಚಂದ್ರನ್ ಮತ್ತು ಪುಟ್ಟಗೌರಮ್ಮ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಸರ್ವೆ ಸಂಖ್ಯೆ: ೮೬ರ (ಹೊಸ ಸರ್ವೆ ಸಂಖ್ಯೆ ೧೪೩, ೧೪೪, ೧೪೫ ಮತ್ತು ೧೪೭) ಸುಮಾರು ೧೪ ಎಕರೆ ಜಮೀನು ತಮಗೆ ೧೯೫೪ರ ಸರಕಾರದಿಂದ ಮಂಜೂರಾಗಿದೆ. ಅಂದಿನಿಂದ ೧೯೯೫ರವರೆಗೂ ಪಹಣಿಯಲ್ಲಿ ತಮ್ಮ ಹೆಸರು ಇದ್ದು, ೧೯೯೫ರ ನಂತರ ಪಹಣಿಯಿಂದ ತಮ್ಮ ಹೆಸರು ಕೈಬಿಡ ಲಾಗಿದೆ.
ಕಂದಾಯ ದಾಖಲೆಗಳಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು ತಹಸೀಲ್ದಾರರಿಗೆ ನಿರ್ದೇಶನ ನೀಡಿ ಎಂದು ಹೈಕೋರ್ಟ್ ಅನ್ನು ಕೋರಿದ್ದರು.
ಇದನ್ನೂ ಓದಿ: Bangalore News: ಐಬಿಎಸ್ ಬ್ಯುಸಿನೆಸ್ ಸ್ಕೂಲ್ ನ 2ನೇ ಘಟಿಕೋತ್ಸವ: 451 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ದಾಖಲೆಗಳನ್ನು ಪರಿಶೀಲಿಸಿ ಮೂರು ತಿಂಗಳಲ್ಲಿ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿತ್ತು. ಆದರೆ, ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಯು ಕ್ರಮ ತೆಗೆದುಕೊಂಡಿಲ್ಲ, ತಮ್ಮ ಹೆಸರನ್ನು ಕಂದಾಯ ದಾಖಲೆಗೆ ಸೇರಿಸಿಲ್ಲ ಎಂದು ನಾಲ್ವರು ಅರ್ಜಿದಾರರು ನ್ಯಾಯಾಂಗ ನಿಂದನೆ ದಾವೆ ಹೂಡಿದ್ದರು. ಆ ಅರ್ಜಿಯ ವಿಚಾರಣೆ ವೇಳೆ ಬೆಂಗಳೂರು ಜಿಲ್ಲಾಧಿಕಾರಿ ಅವರಿಂದ ಹೈಕೋರ್ಟ್ ವಿವರಣೆ ಕೇಳಿತ್ತು.
ಜಿಲ್ಲಾಧಿಕಾರಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗಿದೆ. ಅರ್ಜಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಿzರೆ ಎಂದು ಜಿಲ್ಲಾಧಿಕಾರಿ ನ್ಯಾಯಾಲಯದಿಂದ ಆದೇಶ ನೀಡಲಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು.
ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸ ಲಾಗಿದೆ. ನಾಲ್ವರು ಅರ್ಜಿದಾರರಿಗೂ ೧೯೫೪ರಲ್ಲಿ ಜಮೀನು ಮಂಜೂರಾದ ಮೂಲ ದಾಖಲೆಗಳು ಲಭ್ಯವಿಲ್ಲ. ಬದಲಿಗೆ ದರಾಖಾಸ್ತು ಭೂಮಿ ಪಡೆದವರ ಪಟ್ಟಿಯಲ್ಲಿ ಈ ನಾಲ್ವರ ಹೆಸರನ್ನು ನಂತರದ ದಿನಗಳಲ್ಲಿ ಸೇರಿಸಲಾಗಿದೆ. ಸರಕಾರಿ ದಾಖಲೆಗಳನ್ನು ತಿದ್ದಲಾಗಿದೆ ಎಂದು ವಿವರಿಸಿದ್ದರು.
ವಾಸಂತಿ ವಿರುದ್ಧ ಎಫ್ಐಆರ್: ಸರಕಾರಿ ಜಮೀನಿಗೆ ನಿಯಮ ಬಾಹಿರವಾಗಿ ಆದೇಶ ಹೊರಡಿಸಿದ ಆರೋಪದ ಅಡಿ ಐಎಎಸ್ ಅಧಿಕಾರಿ ವಾಸಂತಿ ಅಮರ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಇದೇ ಜುಲೈ ೧೫ ರಂದು ಎಫ್ ಐಆರ್ ದಾಖಲಾಗಿತ್ತು. ಬೆಂಗಳೂರಿನ ಹಿಂದಿನ ವಿಶೇಷ ಜಿಲ್ಲಾಧಿಕಾರಿ-೩ ವಾಸಂತಿ ಅಮರ್ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಹುಚ್ಚನಪಾಳ್ಯ ಗ್ರಾಮದ ಸರ್ವೆ ನಂಬರ್ ೮ರಲ್ಲಿ ೧೦ ಎಕರೆ ೨೦ ಗುಂಟೆ ಸರಕಾರಿ ಜಮೀನಿಗೆ ಸಂಬಂಧಿಸಿದಂತೆ ನಿಯಮಬಾಹಿರ ಆದೇಶ ಹೊರಡಿಸಿದ್ದಾರೆ ಎಂದು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಸಹಾಯಕ ಪ್ರಶಾಂತ್ ಖಾನಗೌಡ ಪಾಟೀಲ್ ಅವರು ಹಲಸೂರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಆ ದೂರು ಆಧರಿಸಿ ಪೊಲೀಸರು ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದರು. ೪೮ನೇ ಎಸಿಎಂಎಂ ನ್ಯಾಯಾಲಯದ ಎದುರು ದೂರುದಾರರು ಹಾಜರಾಗಿ ಎನ್‌ಸಿಆರ್ ಪ್ರಕರಣದ ತನಿಖೆಗೆ ಮನವಿ ಮಾಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ೨೫೭ರ ಅಡಿ ಮಂಗಳವಾರ ಎಫ್ಐಆರ್ ದಾಖಲು
ಮಾಡಿಕೊಳ್ಳಲಾಗಿದೆ.
ನಾಲ್ಕು ಜನರ ಹೆಸರನ್ನು ಉಲ್ಲೇಖಿಸದ ಪೊಲೀಸರು
ಜಮೀನು ಪರಭಾರೆ ಕುರಿತು ಜಿಲ್ಲಾಧಿಕಾರಿಯವರ ಆದೇಶ ಆಧರಿಸಿ ವಿವಾದಿತ ಜಮೀನನ್ನು ಖಾಸಗಿ ಬಿಲ್ಡರ್ ಟ್ರಿಂಕೋ ಕಂಪನಿಗೆ ಮಾರಾಟ ಮಾಡಲು ಕೆ.ವಿ. ಚಂದ್ರನ್ ಸೇರಿದಂತೆ ಇನ್ನಿತರರು ಕರಾರು ಒಪ್ಪಂದ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಟ್ರಿಂಕೋ ಕಂಪನಿಯ ಪ್ರಸಾದ್, ದೇವರಾಜ, ದಿವ್ಯಾ ಹಾಗೂ ಕೃಷ್ಣೇಗೌಡ ಎಂಬುವರು ಆ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿದ್ದಾರೆ. ಈ ಕುರಿತು ಕೆ.ವಿ. ಚಂದ್ರನ್ ಹಾಗೂ ಟ್ರಿಂಕೋ ಕಂಪನಿಯ ನಾಲ್ವರ ವಿರುದ್ಧ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದೇವು. ಆದರೆ, ಕೆ.ವಿ ಚಂದ್ರನ್ ಹೆಸರು ಮಾತ್ರ ಎಫ್ಐಆರ್‌ನಲ್ಲಿ ನಮೂದಿಸಿರುವ ಪೊಲೀಸರು, ಉಳಿದ ನಾಲ್ವರು ಹೆಸರನ್ನು ಸೇರಿಸಿಲ್ಲ ಎಂದು ನೈಸ್ ಸಂಸ್ಥೆಯ ಪ್ರತಿನಿಧಿ ಆರೋಪಿಸಿದ್ದಾರೆ.