ಬೆಂಗಳೂರು: ಅಂಗಾಂಗ ದಾನ ದಿನಾಚರಣೆಯ ಅಂಗವಾಗಿ, ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ ಇಂದು ವಿಶಿಷ್ಟ ಜಾಗೃತಿ ಕಾರ್ಯಕ್ರಮ — “Tree of Life” — ನ್ನು ಉದ್ಘಾಟಿಸಿತು. ಮೂರು ದಿನಗಳ ಈ ಕಾರ್ಯಕ್ರಮವು ಜನರನ್ನು ಅಂಗಾಂಗ ದಾನಕ್ಕೆ ಪ್ರೇರೇಪಿಸಲು ಮತ್ತು ಎರಡನೇ ಬದುಕಿನ ಸಂದೇಶ ಹಂಚಲು ಉದ್ದೇಶಿಸಲಾಗಿದೆ.
ಈ ಕಾರ್ಯಕ್ರಮದ ಸೂತ್ರವಾಕ್ಯ: “ಪ್ರತಿ ಪ್ರತಿಜ್ಞೆಯು ಹೊಸ ಎಲೆಯನ್ನು ಸೇರಿಸುತ್ತದೆ, ಬತ್ತಿದ ಕೊಂಬೆಗಳನ್ನು ಭರವಸೆಯ ಮತ್ತು ಬದುಕಿನ ಚಿಹ್ನೆಯಾಗಿ ಪರಿವರ್ತಿಸುತ್ತದೆ.”
ಈ ಕಾರ್ಯಕ್ರಮದಲ್ಲಿ ಡಾ. ಅರುಣ್ ಕುಮಾರ್ ಡಿ.ಪಿ., ಉಪನಿರ್ದೇಶಕ – ಇ-ಹೆಲ್ತ್ ಮತ್ತು ಕಾರ್ಯಕ್ರಮಾಧಿಕಾರಿ, ಜೀವಸಾರ್ಥಕತೆ / SOTTO ಕರ್ನಾಟಕ, ಹಾಗೂ ಶ್ರೀ ರಾಜ ವರ್ಧನ್, ಕನ್ನಡ ಸಿನಿ ಉದ್ಯಮದಲ್ಲಿ ಗಮನಾರ್ಹ ಹೆಜ್ಜೆ ಹಾಕುತ್ತಿರುವ ಪ್ರತಿಭಾವಂತ ನಟ ಮತ್ತು ಚಲನಚಿತ್ರ ನಿರ್ಮಾಪಕರು, ಸೇರಿದಂತೆ ಆಸ್ಪತ್ರೆಯ ನಾಯಕತ್ವ ತಂಡ, ವೈದ್ಯರು ಮತ್ತು ಸಿಬ್ಬಂದಿ ಭಾಗವಹಿಸಿದರು.
ಇದನ್ನೂ ಓದಿ: Bengaluru stampede: ಆರ್‌ಸಿಬಿ ವಿಜಯೋತ್ಸವಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿರಲಿಲ್ಲ: ಸಿಎಂ
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಅರುಣ್ ಕುಮಾರ್ ಡಿ.ಪಿ., “ಅಂಗಾಂಗ ದಾನವು ಕೇವಲ ವೈದ್ಯಕೀಯ ಪ್ರಕ್ರಿಯೆಯಲ್ಲ — ಅದು ಮಾನವೀಯತೆಯ ಕ್ರಿಯೆ. ಭಾರತದ ಜನಸಂಖ್ಯೆ ದೊಡ್ಡದಾ ಗಿದ್ದರೂ ದಾನದ ಪ್ರಮಾಣ ಕಡಿಮೆಯಾಗಿದೆ. Tree of Life ಜಾಗೃತಿ ಕಾರ್ಯಕ್ರಮಗಳು ಜನರನ್ನು ದಾನ ಮಾಡಲು ಪ್ರೇರೇಪಿಸಲು ಅತ್ಯಂತ ಮುಖ್ಯ. ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆಗೆ ಹಾರ್ದಿಕ ಅಭಿನಂದನೆಗಳು.”
“ತೆರೆ ಮೇಲೆ ನಾವು ಹೀರೋಗಳನ್ನು ಆಚರಿಸುತ್ತೇವೆ. ಆದರೆ ನಿಜ ಜೀವನದಲ್ಲಿ, ನಿಜವಾದ ಹೀರೋಗಳು ಅಂಗಾಂಗ ದಾನಿಗಳು — ಅವರು ತಮ್ಮ ಜೀವನದ ನಂತರವೂ ಹಲವಾರು ಜೀವಗಳನ್ನು ಉಳಿಸುತ್ತಾರೆ. ಈ Tree of Life ಒಂದೇ ಪ್ರತಿಜ್ಞೆಯ ಶಕ್ತಿ ಹಾಗು ಸುಂದರ ನೆನಪಾಗಿರುತ್ತದೆ" ಎಂದು ರಾಜವರ್ಧನ್ ಹೇಳಿದರು.
ಡಾ. ಜತೀಂದರ್ ಅರೋರಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ, ಹೇಳಿದರು:
“ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ, ಆರೋಗ್ಯ ಸೇವೆ ಎಂದರೆ ಚಿಕಿತ್ಸೆ ಮಾತ್ರವಲ್ಲ, ಜಾಗೃತಿ ಮೂಡಿಸುವುದು ಮತ್ತು ಸಮುದಾಯಗಳನ್ನು ಪ್ರೇರೇಪಿಸುವುದೂ ಹೌದು. Tree of Life ಭರವಸೆಯ ಸಂಕೇತವಾಗಿದೆ — ಪ್ರತಿಯೊಂದು ಎಲೆ ಒಂದು ಪ್ರತಿಜ್ಞೆಯನ್ನು ಪ್ರತಿನಿಧಿಸುತ್ತದೆ, ಪ್ರತಿಯೊಂದು ಪ್ರತಿಜ್ಞೆ ಹೊಸ ಬದುಕಿನ ಅವಕಾಶವನ್ನು ಪ್ರತಿನಿಧಿಸುತ್ತದೆ.”
ಆಸ್ಪತ್ರೆಯ ಮುಖ್ಯ ಲಾಬಿಯಲ್ಲಿ ಅಳವಡಿಸಿರುವ Tree of Life ಮೂರು ದಿನಗಳ ಕಾಲ ಎಲ್ಲರಿಗೂ ಮುಕ್ತವಾಗಿರಲಿದೆ. ಪ್ರತಿಯೊಬ್ಬರೂ ತಮ್ಮ ಪ್ರತಿಜ್ಞೆಯನ್ನು ಮಾಡಬಹುದು ಮತ್ತು ಆ ಎಲೆಯನ್ನು ಮರದಲ್ಲಿ ಕಟ್ಟಬಹುದು. ಈ ಕಾರ್ಯಕ್ರಮವು ಹೆಚ್ಚಿನ ಜನರನ್ನು ಜೀವಸಾರ್ಥಕತೆ, ಕರ್ನಾಟಕದ ಸರ್ಕಾರಿ ಅಂಗಾಂಗ ದಾನ ವೇದಿಕೆಯ ಮೂಲಕ ದಾನಿಗಳಾಗಿ ನೋಂದಾಯಿಸಲು ಪ್ರೇರೇಪಿಸಲಿದೆ ಎಂಬ ನಿರೀಕ್ಷೆಯಿದೆ.