ಬೆಂಗಳೂರು: ಸೌತ್ ಇಂಡಿಯನ್ ಬ್ಯಾಂಕ್ ಜಿಎಸ್‌ಟಿ ಪೋರ್ಟಲ್‌ನಲ್ಲಿ ಯುಪಿಐ ಆಧಾರಿತ ಜಿಎಸ್‌ಟಿ ಪಾವತಿ ಸೌಲಭ್ಯವನ್ನು ಆರಂಭಿಸಿದೆ. ಈ ಮೂಲಕ ಭಾರತದಾದ್ಯಂತ ಎಲ್ಲಾ ತೆರಿಗೆ ಪಾವತಿದಾರರಿಗೆ ಜಿಎಸ್‌ಟಿ ಪಾವತಿ ಪ್ರಕ್ರಿಯೆಯನ್ನು ಸುಗಮ ಮತ್ತು ಸರಳಗೊಳಿಸಲಾಗಿದೆ. ಈಗ ಕ್ಯೂಆರ್ ಕೋಡ್ ಮತ್ತು ವಿಪಿಎ ಐಡಿ ಮೂಲಕ ಯುಪಿಐ ಬಳಸಿ ಜಿಎಸ್‌ಟಿ ಪಾವತಿಸಬಹುದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ವಹಿವಾಟುಗಳಿಗೆ ಏಜೆನ್ಸಿ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಲು ಸೌತ್ ಇಂಡಿಯನ್ ಬ್ಯಾಂಕ್‌ಗೆ ಪರವಾನಿಗೆ ನೀಡಿದೆ. ಜೊತೆಗೆ ಪರೋಕ್ಷ ತೆರಿಗೆ ಸಂಗ್ರಹಿಸಲು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಕೂಡ ಪರವಾ ನಿಗೆ ನೀಡಿದೆ.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಈ ಮೊದಲು ಸೌತ್ ಇಂಡಿಯಾ ಬ್ಯಾಂಕ್ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಜಿಎಸ್‌ಟಿ ಪಾವತಿಗೆ SIBerNert ವೇದಿಕೆಯನ್ನು ಹಾಗೂ ಶಾಖೆಗೆ ಭೇಟಿ ನೀಡಿ ಜಿಎಸ್‌ಟಿ ಪಾವತಿಸುವ ಸೌಲಭ್ಯವನ್ನೂ 2023ರಲ್ಲಿ ಆರಂಭಿಸಿತ್ತು. ಈಗ ಯುಪಿಐ ಸೌಲಭ್ಯದ ಮೂಲಕ ಬ್ಯಾಂಕ್‌ನ ಗ್ರಾಹಕರು ಹಾಗೂ ಜನಸಾಮಾನ್ಯರು ತ್ವರಿತವಾಗಿ ಹಾಗೂ ಸುಗಮವಾಗಿ ಜಿಎಸ್‌ಟಿ ಪಾವತಿ ಮಾಡಬಹುದಾಗಿದೆ. ಇದು ವ್ಯವಹಾರಗಳು ಮತ್ತು ಜನಸಾಮಾನ್ಯರಿಗೆ ತೆರಿಗೆ ಪಾವತಿಯಲ್ಲಿ ನೆರವಾಗಲಿದೆ.
ಈ ಹೊಸ ಸೌಲಭ್ಯದ ಬಗ್ಗೆ ಮಾತನಾಡಿದ ಸೌತ್ ಇಂಡಿಯನ್ ಬ್ಯಾಂಕ್‌ನ ಎಸ್‌ಜಿಎಮ್ ಮತ್ತು ಮುಖ್ಯಸ್ಥ ಬಿಜಿ ಎಸ್ ಎಸ್ “ ಈ ಏಕೀಕರಣವು ತೆರಿಗೆದಾರರಿಗೆ GST ಪಾವತಿಗಳನ್ನು ವೇಗವಾಗಿ ಮತ್ತು ಹೆಚ್ಚು ಅನುಕೂಲಕರವಾಗಿಸುತ್ತದೆ. “ ಯುಪಿಐ ಇಂದು ಅತ್ಯಂತ ಆದ್ಯತೆಯ ಪಾವತಿ ವಿಧಾನವಾಗಿದೆ.
ಈ ಏಕೀಕರಣವು ನಮ್ಮ ಗ್ರಾಹಕರು ಮತ್ತು ಗ್ರಾಹಕರಲ್ಲದವರು ಸೇರಿದಂತೆ ತೆರಿಗೆ ದಾರರು ಸೌತ್ ಇಂಡಿಯನ್ ಬ್ಯಾಂಕ್ ಮೂಲಕ ಯುಪಿಐ ಮೂಲಕ ಜಿಎಸ್‌ಟಿ ಪಾವತಿಸಲು ಅನುವು ಮಾಡಿ ಕೊಡುತ್ತದೆ. ಈ ಆಯ್ಕೆಯೊಂದಿಗೆ, ತೆರಿಗೆದಾರರು ತಮ್ಮ ವಹಿವಾಟುಗಳನ್ನು ಎಲ್ಲಿಂದಲಾದರೂ ಸುರಕ್ಷಿತವಾಗಿ ಮತ್ತು ಸಲೀಸಾಗಿ ಪೂರ್ಣಗೊಳಿಸಬಹುದು” ಎಂದಿದ್ದಾರೆ