ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Murder Case: ಬೆಂಗಳೂರಿನಲ್ಲಿ ಗರ್ಭಿಣಿ ಪತ್ನಿಯ ಕೊಂದು, ಶವದ ಮುಂದೆ 2 ದಿನ ಕಳೆದಿದ್ದ ಪತಿ ಅರೆಸ್ಟ್!

Bengaluru Murder Case: ಉತ್ತರ ಪ್ರದೇಶ ಮೂಲದ ಶಿವಂ ಸಹಾನೆ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ಗರ್ಭಿಣಿಯ ಕೊಲೆ ನಡೆದಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ.

ಗರ್ಭಿಣಿ ಪತ್ನಿಯ ಕೊಂದು, ಶವದ ಮುಂದೆ 2 ದಿನ ಕಳೆದಿದ್ದ ಪತಿ ಅರೆಸ್ಟ್!

Prabhakara R Prabhakara R Jul 25, 2025 4:26 PM

ಬೆಂಗಳೂರು: ಗರ್ಭಿಣಿ ಪತ್ನಿಯ ಕೊಂದು, ಶವದ ಮುಂದೆ 2 ದಿನ ಕಳೆದಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಶಿವಂ ಸಹಾನೆ ಎಂಬಾತನನ್ನು ಅರೆಸ್ಟ್‌ ಮಾಡಲಾಗಿದೆ. ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ಗರ್ಭಿಣಿಯ ಕೊಲೆ (Bengaluru Murder Case) ನಡೆದಿತ್ತು. ಮೃತ ಮಹಿಳೆಯನ್ನು ಸುಮನ್ ಎಂದು ಗುರುತಿಸಲಾಗಿದೆ.

ಆರೋಪಿ ಶಿವಂ ಉತ್ತರ ಪ್ರದೇಶದ ಕುಶಿನಗರದ ಮೂಲದವನರಾಗಿದ್ದು, ಆರು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ. ಮದ್ಯವ್ಯಸನಿಯಾಗಿದ್ದ ಶಿವಂ ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಸೋಮವಾರ ಜಗಳ ನಡೆದಾಗ ಪತಿ ಶಿವಂ, ಪತ್ನಿ ಸುಮನ್‌ಗೆ ಕಪಾಳಕ್ಕೆ ಹೊಡೆದಿದ್ದಾನೆ. ಇದರಿಂದ ಗರ್ಭಿಣಿ ಪತ್ನಿ ಮೃತಪಟ್ಟಿದ್ದು, ಇದರ ಅರಿವಿಲ್ಲದೇ ಪತಿ ಮಲಗಿದ್ದಾನೆ.

ಶಿವಂ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾನೆ. ಮನೆಗೆ ಹಿಂದಿರುಗಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಗಿದೆ. ಆದರೆ, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡುವ ಬದಲು ಶವದೊಂದಿಗೆ 2 ದಿನ ಕಾಲ ಕಳೆದಿದ್ದಾನೆ. ಬಳಿಕ ಮೃತದೇಹವನ್ನು ವಿಲೇವಾರಿ ಮಾಡಲು ಯೋಚಿಸಿದ್ದಾನೆ. ಆದರೆ, ಸಿಕ್ಕಿಬೀಳುವ ಭಯದಿಂದ ಆ ಆಲೋಚನೆ ಕೈಬಿಟ್ಟಿದ್ದಾನೆ. ಬುಧವಾರ ಬೆಳಗ್ಗೆ ಮನೆಯಿಂದ ದುರ್ವಾಸನೆ ಬರುವುದನ್ನು ಕಂಡ ಮನೆ ಮಾಲೀಕ ಮಹೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Murder case convict escapes: ಶಾಕಿಂಗ್‌ ಘಟನೆ! ಅತ್ಯಾಚಾರ, ಕೊಲೆ ಕೇಸ್‌ ಅಪರಾಧಿ ಸೆಂಟ್ರಲ್‌ ಜೈಲಿನಿಂದ ಎಸ್ಕೇಪ್‌

ಮಹಿಳೆ ಮೂರು ದಿನಗಳ ಹಿಂದೆ ಮೃತಪಟ್ಟಿದ್ದು, ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ. ಆದರೆ, ಮೂಗಿನಿಂದ ರಕ್ತಸ್ರಾವವಾಗಿದ್ದು, ಬಲವಾದ ಹೊಡೆತದಿಂದಾಗಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.ಈ ಸಂಬಂಧ ಶಿವಂ ವಿರುದ್ಧ ಬಿಎನ್ಎಸ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.