ಬೆಂಗಳೂರು: ಗ್ಯಾಜೆಟ್ಸ್, ಗೃಹಉಪಯೋಗಿ ಹಾಗೂ ಎಲೆಕ್ಟ್ರಿಕ್ ಉಕರಣಗಳ ಖರೀದಿಗೆ ಆಸಕ್ತಿ ಹೊಂದಿದ್ದರೆ ಇದು ಸೂಕ್ತ ಸಮಯ.
ಹೌದು, ಇನ್‌ಸ್ಟಾಮಾರ್ಟ್ ತನ್ನ "ಕ್ವಿಕ್ ಇಂಡಿಯಾ ಮೂವ್‌ಮೆಂಟ್" ಮೆಗಾ ಸೇಲ್ ಘೋಷಿಸಿದ್ದು, ಈ ಅವಧಿಯಲ್ಲಿ ಗ್ರಾಹಕರಿಗೆ ಗ್ಯಾಜೆಟ್ಸ್, ಗೃಹಉಪಯೋಗಿ ಸಾಮಾಗ್ರಿಗಳು. ಎಲೆಕ್ಟ್ರಿಕ್ ಉಪಕರಣ ಗಳ ಮೇಲೆ ಭಾರಿ ಹೆಚ್ಚು ರಿಯಾಯಿತಿ ನೀಡುತ್ತಿದೆ.
ಇದೇ ಸೆಪ್ಟೆಂಬರ್ 19ರಿಂದ ಪ್ರಾರಂಭವಾಗುವ "ಕ್ವಿಕ್ ಇಂಡಿಯಾ ಮೂವ್‌ಮೆಂಟ್" ಮೆಗಾ ಸೇಲ್ ನಲ್ಲಿ ಬರೋಬ್ಬರಿ 50,000 ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಶೇ.50 ರಿಂದ ಶೇ.90ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಕೇವಲ 10 ನಿಮಿಷಗಳಲ್ಲಿ ನಿಮ್ಮನ್ನು ತಲುಪಲಿದೆ.
ಅದರಲ್ಲೂ ಜನಪ್ರಿಯ ಸ್ಮಾರ್ಟ್‌ಫೋನ್, ಪ್ರೀಮಿಯಂ ಆಡಿಯೊ ಸಾಧನಗಳು, ಗ್ರೂಮಿಂಗ್ ಕಿಟ್‌ಗಳು ಮತ್ತು ದೈನಂದಿನ ಅಗತ್ಯ ವಸ್ತುಗಳ ಮೇಲೆ ಖರೀದಿದಾರರು ಭಾರೀ ರಿಯಾಯಿತಿಗಳನ್ನು ನಿರೀಕ್ಷಿಸಬಹುದು, ಇನ್ನಷ್ಟು ರಿಯಾಯಿತಿಗಾಗಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರು ವವರಿಗೆ ಶೇ.10 ರಿಯಾಯಿತಿ ದೊರೆಯಲಿದೆ.
ಇದನ್ನೂ ಓದಿ: Bangalore News: ಸ್ವಿಗ್ಗಿ ಇನ್‌ಸ್ಟಾಮಾರ್ಟ್ ವತಿಯಿಂದ ಗ್ರಾಹಕರಿಗಾಗಿ "ಕ್ವಿಕ್ ಇಂಡಿಯಾ ಮೂವ್‌ಮೆಂಟ್ ಘೋಷಣೆ
*ಎಲೆಕ್ಟ್ರಾನಿಕ್ಸ್‌ಗಳ ಮೇಲೆ ರಿಯಾಯಿತಿ: ಒನ್‌ಪ್ಲಸ್ ನೋರ್ಡ್ CE4 Lite ₹16,999 (MRP ₹18,999), ಒಪ್ಪೋ K13x 5G ₹12,499 (MRP ₹16,999) ಹಾಗೂ ರಿಯಲ್‌ಮಿ Narzo 70 Turbo ₹13,999 (MRP ₹19,999)ಗೆ ದೊರೆಯಲಿದೆ. ಇನ್ನು, ಲ್ಯಾಪ್‌ಟಾಪ್‌ಗಳಾದ ಲೆನೊವೊ IdeaPad Slim3 ₹48,999 (MRP ₹70,790) ಹಾಗೂ ASUS Vivobook (Ryzen 3, 512 GB SSD) ₹29,999 (MRP ₹44,990)ಗೆ ದೊರೆಯಲಿದೆ. ವೈರ್‌ಲೆಸ್ ಇಯರ್‌ಬಡ್‌ಗಳಾದ boAt Airdopes 311 Pro — 50H ಬ್ಯಾಟರಿ, ವೇಗ ಚಾರ್ಜ್, ENx ತಂತ್ರಜ್ಞಾನ | ₹799 (MRP ₹4,990)
ಸಂಜೆ 5 ರಿಂದ 7ರವರೆಗೆ ದೈನಂದಿನ ಪದಾರ್ಥಗಳ ಮೇಲೆ ವಿಶೇಷ ಡೀಲ್
ಈ ಮೆಗಾಸೇಲ್‌ನಲ್ಲಿ ಸಂಜೆ 5 ರಿಂದ 7 ರಿಂದ ದೈನಂದಿನ ವಿಶೇಷ ಡೀಲ್ ತೆರೆಯಲಿದೆ. ಪ್ರೀಮಿಯಂ ಉತ್ಪನ್ನಗಳಾದ್ಯಂತ ವಿಶೇಷ ಬೆಲೆಯಲ್ಲಿ ಸಿಗಲಿದೆ.