ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅರೋಮಾಥೆರಪಿ ಮಾರುಕಟ್ಟೆಗೆ ಪ್ರವೇಶಿಸಿದ ಐರಿಸ್ ಹೋಮ್ ಫ್ರಾಗ್ರೆನ್ಸಸ್ ದೈನಂದಿನ ಬಳಕೆಗೆ ಸೂಕ್ತವಾದ ನೈಸರ್ಗಿಕ ಅರೋಮಾಥೆರಪಿ ಉತ್ಪನ್ನಗಳ ಬಿಡುಗಡೆ

ಅರೋಮಾಥೆರಪಿ ಶ್ರೇಣಿಯು ಏಳು ವಿಶಿಷ್ಟ ಪರಿಮಳಗಳಲ್ಲಿ ಲಭ್ಯವಿದ್ದು, ಇವುಗಳನ್ನು ಅವುಗಳ ಚಿಕಿತ್ಸಕ ಗುಣಗಳಿಗಾಗಿ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಲ್ಯಾವೆಂಡರ್ ಉತ್ಪನ್ನವು ವಿಶ್ರಾಂತಿಗೆ ಮತ್ತು ಶಾಂತವಾಗಿ ನಿದ್ರೆ ಮಾಡಲು ನೆರವಾಗುತ್ತದೆ. ಯಲಂಗ್-ಯಲಂಗ್ ಪರಿಮಳವು ಮನಸ್ಥಿತಿ ಉತ್ತಮಗೊಳಿಸಿ ಹುಮ್ಮಸ್ಸು ತುಂಬಿಸುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಬೆಂಗಳೂರು: ಸೈಕಲ್ ಪ್ಯೂರ್ ಅಗರಬತ್ತಿ ಅಧೀನದ ಪ್ರೀಮಿಯಂ ಹೋಮ್ ಫ್ರಾಗ್ರೆನ್ಸ್ ಬ್ರಾಂಡ್ ಆಗಿರುವ ಐರಿಸ್ ಹೋಮ್ ಫ್ರಾಗ್ರೆನ್ಸಸ್ ಸಂಸ್ಥೆಯು ಅರೋಮಾಥೆರಪಿ ವಿಭಾಗಕ್ಕೆ ಪ್ರವೇಶಿಸಿದ್ದು, ತನ್ನ ಹೊಸ ಅರೋಮಾಥೆರಪಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಈ ಉತ್ಪನ್ನಗಳು ಏಳು ವಿಶೇಷ ಪರಿಮಳಗಳಲ್ಲಿ ಲಭ್ಯವಿದ್ದು, ಈ ಶ್ರೇಣಿಯು ಮೂರು ಸ್ವರೂಪಗಳಲ್ಲಿ ಒಟ್ಟು ಹದಿನೆಂಟು ಉತ್ಪನ್ನಗಳನ್ನು ಒಳಗೊಂಡಿದೆ.

78 ವರ್ಷಗಳ ಕೌಟುಂಬಿಕ ಪರಂಪರೆ ಹೊಂದಿರುವ ಈ ಸಂಸ್ಥೆಯ ಉತ್ಪನ್ನ ಸಂಗ್ರಹವು ಶ್ವಾಸ ಕೋಶದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ, ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹುಮ್ಮಸ್ಸನ್ನು ಹೆಚ್ಚಿಸಲಿದೆ. ಪರಿಮಳವು ಮಾನವನ ನಡವಳಿಕೆ ಮತ್ತು ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ವೈಜ್ಞಾನಿಕ ಅಧ್ಯಯನವಾಗಿರುವ ಅರೋಮಾಕಾಲಜಿ ತತ್ವಗಳ ಆಧಾರದ ಮೇಲೆ ಈ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿರುವುದು ವಿಶೇಷ. ಈ ಕಾಲದ ಆರೋಗ್ಯ ಅಗತ್ಯಗಳಿಗೆ ತಕ್ಕಂತೆ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳನ್ನು ಬಳಸಿಕೊಂಡು ಈ ಉತ್ಪನ್ನಗಳನ್ನು ರಚಿಸಲಾಗಿದ್ದು, ಈ ಉತ್ಪನ್ನಗಳು ಗ್ರಾಹಕರಿಗೆ ಸುರಕ್ಷಿತ, ಪರಿಣಾಮಕಾರಿ ಮತ್ತು ಸುಲಭ ಬಳಕೆಗೆ ಒದಗಿ ಬರುತ್ತವೆ. ದೈನಂದಿನ ಜೀವನಕ್ಕೆ ಶಕ್ತಿ ಮತ್ತು ನೆಮ್ಮದಿ ಒದಗಿಸುತ್ತದೆ.

ಇದನ್ನೂ ಓದಿ: Bangalore News: ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ವತಿಯಿಂದ ಗ್ರಾಹಕರಿಗಾಗಿ "ಕ್ವಿಕ್‌ ಇಂಡಿಯಾ ಮೂವ್‌ಮೆಂಟ್‌ ಘೋಷಣೆ

ಅರೋಮಾಥೆರಪಿ ಶ್ರೇಣಿಯು ಏಳು ವಿಶಿಷ್ಟ ಪರಿಮಳಗಳಲ್ಲಿ ಲಭ್ಯವಿದ್ದು, ಇವುಗಳನ್ನು ಅವುಗಳ ಚಿಕಿತ್ಸಕ ಗುಣಗಳಿಗಾಗಿ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಲ್ಯಾವೆಂಡರ್ ಉತ್ಪನ್ನವು ವಿಶ್ರಾಂತಿಗೆ ಮತ್ತು ಶಾಂತವಾಗಿ ನಿದ್ರೆ ಮಾಡಲು ನೆರವಾಗುತ್ತದೆ. ಯಲಂಗ್-ಯಲಂಗ್ ಪರಿಮಳವು ಮನಸ್ಥಿತಿ ಉತ್ತಮಗೊಳಿಸಿ ಹುಮ್ಮಸ್ಸು ತುಂಬಿಸುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಯೂಕಲಿಪ್ಟಸ್ ಪರಿಮಳ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಲು ನೆರವಾಗು ತ್ತದೆ. ಪೆಪ್ಪರ್‌ಮಿಂಟ್ ಪರಿಮಳ ಚೈತನ್ಯವನ್ನು ತುಂಬುತ್ತದೆ. ಫ್ರಾಂಕಿನ್‌ಸೆನ್ಸ್ ಪರಿಮಳವು ಮನ ಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಧ್ಯಾನಕ್ಕೆ ಸಹಾಯ ಮಾಡುತ್ತದೆ. ಆರೆಂಜ್ ಪರಿಮಳ ಉಲ್ಲಾಸ ಗೊಳಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಲೆಮನ್‌ಗ್ರಾಸ್ ಪರಿಮಳವು ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ಚೈತನ್ಯ ಹೆಚ್ಚಿಸುತ್ತದೆ.

ಈ ಕುರಿತು ಮಾತನಾಡಿದ ಐರಿಸ್ ಹೋಮ್ ಫ್ರಾಗ್ರೆನ್ಸಸ್‌ ನ ವ್ಯವಸ್ಥಾಪಕ ನಿರ್ದೇಶಕ ಕಿರಣ್ ರಂಗಾ ಅವರು, “ಆರೋಗ್ಯ ಪಾಲನೆಯನ್ನು ದೈನಂದಿನ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡು ವುದು ಐರಿಸ್ ಹೋಮ್ ಫ್ರಾಗ್ರೆನ್ಸಸ್‌ ಸಂಸ್ಥೆಯ ಉದ್ದೇಶವಾಗಿದೆ. ಇದೀಗ ನಾವು ಅಪೂರ್ವ ತೈಲಗಳ ಚಿಕಿತ್ಸಕ ಗುಣಗಳನ್ನು ಆಧುನಿಕ ಕ್ರಮಗಳೊಂದಿಗೆ ಸಂಯೋಜಿಸಿ ಅರೋಮಾಥೆರಪಿ ಉತ್ಪನ್ನ ಶ್ರೇಣಿ ಬಿಡುಗಡೆ ಮಾಡಿದ್ದೇವೆ. ಈ ಮೂಲಕ ಆರೋಗ್ಯ ಪಾಲನೆಗೆ ನೆರವಾಗುವ ಸರಳ, ಸುರಕ್ಷಿತ ಮತ್ತು ಪರಿಣಾಮಕಾರಿ ಉತ್ಪನ್ನ ಒದಗಿಸುತ್ತಿದ್ದೇವೆ. ಈ ಪ್ರತಿಯೊಂದು ಉತ್ಪನ್ನವನ್ನು ಸುರಕ್ಷತೆ, ಶುದ್ಧತೆ ಮತ್ತು ಪರಿಣಾಮಕಾರಿತ್ವದ ಆಧಾರದ ಮೇಲೆ ತಯಾರಿಸಲಾಗಿದೆ. ನೈಸರ್ಗಿಕ ಸೂತ್ರೀಕರಣಗಳನ್ನು ಬಳಸಲಾಗಿದ್ದು, ಚರ್ಮಕ್ಕೆ ಸುರಕ್ಷಿತವಾಗಿವೆ ಮತ್ತು ದೈನಂದಿನ ಬಳಕೆಗೆ ಸೂಕ್ತವಾಗಿದೆ” ಎಂದು ಹೇಳಿದರು.

ಈ ಶ್ರೇಣಿಯು ಮೂರು ಸ್ವರೂಪಗಳಲ್ಲಿ ಒಟ್ಟು ಹದಿನೆಂಟು ಉತ್ಪನ್ನಗಳನ್ನು ಒಳಗೊಂಡಿದೆ. ಇದರಲ್ಲಿ 200 ಎಂಎಲ್ ಪ್ಯಾಕೇಜಿಂಗ್‌ನಲ್ಲಿ ಬಳಸಲು ಸಿದ್ಧವಾದ ನಾಲ್ಕು ಮಸಾಜ್ ತೈಲಗಳು, 10 ಎಂಎಲ್ ಪ್ಯಾಕ್‌ಗಳಲ್ಲಿ ನಾಲ್ಕು ರೋಲ್-ಆನ್ ತೈಲಗಳು ಮತ್ತು 15 ಎಂಎಲ್ ಬಾಟಲಿಗಳಲ್ಲಿ ಹತ್ತು ತೈಲಗಳು ಲಭ್ಯವಿವೆ. ಮಸಾಜ್ ತೈಲಗಳು ದೇಹಕ್ಕೆ ವಿಶ್ರಾಂತಿ, ನೆಮ್ಮದಿ ಮತ್ತು ಚಿಕಿತ್ಸಕ ಪ್ರಯೋಜನಗಳನ್ನು ಒದಗಿಸುತ್ತವೆ. ರೋಲ್-ಆನ್ ತೈಲಗಳನ್ನು ಮಣಿಕಟ್ಟು, ತಲೆಗೂದಲು ಮತ್ತು ಕಿವಿಗಳ ಹಿಂಭಾಗ ಸೇರಿದಂತೆ ನಾಡಿಮಿಡಿತದ ಸ್ಥಳಗಳಲ್ಲಿ ನೇರವಾಗಿ ಬಳಸಬಹುದಾಗಿದ್ದು, ಇವು ಒತ್ತಡದಿಂದ ಮುಕ್ತಗೊಳಿಸುತ್ತವೆ, ಉತ್ತಮ ನಿದ್ರೆ ಸಾಧ್ಯವಾಗಿಸುತ್ತವೆ. ವಿಶೇಷವಾಗಿ ಸ್ನಾಯು ಒತ್ತಡ ವನ್ನು ಕಡಿಮೆ ಮಾಡುತ್ತದೆ ಮತ್ತು ಶಾಂತ ಉಸಿರಾಟ ಕ್ರಿಯೆ ನಡೆಯುವಂತೆ ಅನುವು ಮಾಡಿಕೊಡು ತ್ತದೆ. ಇದು ಆಧುನಿಕ ಒತ್ತಡದ ಜೀವನಶೈಲಿಗೆ ಅನುಕೂಲಕರವಾಗಿವೆ. 100% ಶುದ್ಧ, ಸಾಂದ್ರಿತ ಸಸ್ಯ ಸಾರಗಳಿಂದ ತಯಾರಾದ ಎಸೆನ್ಷಿಯಲ್ ಆಯಿಲ್ ಗಳನ್ನು ಡಿಫ್ಯೂಷನ್, ಮಸಾಜ್ (ಕ್ಯಾರಿಯರ್ ತೈಲಗಳೊಂದಿಗೆ ಮಿಶ್ರಣ ಮಾಡಿದಾಗ), ಇನ್ಹಲೇಷನ್ ಅಥವಾ ಸ್ನಾನಕ್ಕೆ ಬಳಸ ಬಹುದು. ಇದು ಹುಮ್ಮಸ್ಸು ಹೆಚ್ಚಿಸಲು, ಶ್ವಾಸಕೋಶಕ್ಕೆ ನೆಮ್ಮದಿ ಒದಗಿಸಲು, ಶಾಂತವಾಗಿರಲು ಮತ್ತು ವಿಶ್ರಾಂತ ವಾಗಿರಲು ನೆರವಾಗುತ್ತದೆ.

₹199 ರಿಂದ ಆರಂಭವಾಗುವ ಕೈಗೆಟುಕುವ ಬೆಲೆಯಲ್ಲಿ ಅರೋಮಾಥೆರಪಿ ಶ್ರೇಣಿ ಲಭ್ಯವಿದೆ. ಐರಿಸ್ ಅರೋಮಾ ಬುಟೀಕ್‌ಗಳು, ರಿಟೇಲ್ ಮಳಿಗೆಗಳು, ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಪ್ಲಾಟ್‌ ಫಾರ್ಮ್‌ಗಳಲ್ಲಿ, ಜೊತೆಗೆ ಸಂಸ್ಥೆಯ ವೆಬ್‌ಸೈಟ್ www.irishomefragrances.com ನಲ್ಲಿ ಈ ಉತ್ಪನ್ನ ಗಳು ದೊರೆಯುತ್ತದೆ.